ಬೆಂಗಳೂರು: 2018ನೇ ಸಾಲಿನಲ್ಲಿ ಐದು ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಗಳಿಸಿರುವ ಕನ್ನಡದ 'ನಾತಿಚರಾಮಿ' ಚಲನಚಿತ್ರಕ್ಕೆ ಪ್ರಶಸ್ತಿ ಪ್ರದಾನ ಮಾಡಬಾರದು ಎಂದು ಸಿವಿಲ್ ನ್ಯಾಯಾಲಯ ಮಹತ್ವದ ಮಧ್ಯಂತರ ಆದೇಶ ನೀಡಿದೆ.
5ನೇ ಸಿಟಿ ಸಿವಿಲ್ ನ್ಯಾಯಾಲಯದಲ್ಲಿ ಈ ಸಿನಿಮಾಗೆ ಪ್ರಶಸ್ತಿ ಘೋಷಿಸಿದ್ದನ್ನು ಪ್ರಶ್ನಿಸಿ ಸಿನಿಮಾ ನಿರ್ದೇಶಕ ದಯಾಳ್ ಪದ್ಮನಾಭನ್ ಅರ್ಜಿ ಸಲ್ಲಿಸಿದ್ದರು. ನ್ಯಾಯಾಧೀಶ ಸಿ.ಡಿ.ಕರೋಷಿ ವಿಚಾರಣೆ ನಡೆಸಿ ಈ ಆದೇಶ ನೀಡಿದ್ದಾರೆ.
ಮೊದಲನೇ ಪ್ರತಿವಾದಿ 'ನಾತಿಚರಾಮಿ' ಚಿತ್ರ ನಿರ್ಮಿಸಿರುವ ತೇಜಸ್ವಿನಿ ಎಂಟರ್ಪ್ರೈಸಸ್ಗೆ ಪ್ರಶಸ್ತಿ ನೀಡಬಾರದು ಎಂದು ಆದೇಶಿಸಿರುವ ನ್ಯಾಯಾಧೀಶರು ವಿಚಾರಣೆಯನ್ನು 2020ರ ಜನವರಿ 10ಕ್ಕೆ ಮುಂದೂಡಿದ್ದಾರೆ. ಪ್ರಶಸ್ತಿಗಳನ್ನು ಇದೇ 23ರಂದು ನೀಡಬೇಕಾಗಿತ್ತು. ಅರ್ಜಿದಾರರ ಪರ ವಕೀಲ ಜಿ.ಆರ್.ಮೋಹನ್ ವಾದ ಮಂಡಿಸಿದರು.