ETV Bharat / city

ಮಕ್ಕಳ ಕಳ್ಳಸಾಗಣೆ : ವಿಶೇಷ ತನಿಖಾ ತಂಡ ರಚಿಸಲು ಹೈಕೋರ್ಟ್ ಸೂಚನೆ - ಮಕ್ಕಳ ಸಾಗಾಣಿಕೆ ಮಾಫಿಯ

ನಗರದಲ್ಲಿ 56ಕ್ಕೂ ಹೆಚ್ಚು ಅನಧಿಕೃತ ಮಕ್ಕಳ ಆರೈಕೆ ಕೇಂದ್ರಗಳಿವೆ. ಸಾರ್ವಜನಿಕ ಶಿಕ್ಷಣ ಇಲಾಖೆ ಅಧಿಕಾರಿಯೊಬ್ಬರು ವಿಜಯನಗರದಲ್ಲಿ ನಡೆಸುತ್ತಿರುವ ಕೇಂದ್ರವೂ ಅನಧಿಕೃತವಾಗಿದೆ..

ಹೈಕೋರ್ಟ್
ಹೈಕೋರ್ಟ್
author img

By

Published : Apr 26, 2021, 7:17 PM IST

ಬೆಂಗಳೂರು : ಮಕ್ಕಳ ಕಳ್ಳಸಾಗಾಣಿಕೆ ಗಂಭೀರ ವಿಚಾರವಾಗಿದೆ. ಈ ಸಂಬಂಧ ತನಿಖೆ ನಡೆಸಲು ವಿಶೇಷ ತನಿಖಾ ತಂಡ (ಎಸ್ಐಟಿ) ರಚಿಸಲು ನಿರ್ಧಾರ ಕೈಗೊಳ್ಳುವಂತೆ ಹೈಕೋರ್ಟ್ ರಾಜ್ಯ ಸರ್ಕಾರಕ್ಕೆ ಸೂಚಿಸಿದೆ.

ಬೆಂಗಳೂರು ನಗರದಲ್ಲಿ ರಸ್ತೆ ಬದಿ ಆಟಿಕೆ, ಹೂ ಮಾರಾಟ ಮಾಡಲು ಹಾಗೂ ಭಿಕ್ಷಾಟನೆ ಮಾಡಲು ಮಕ್ಕಳನ್ನು ಬಳಸಿಕೊಳ್ಳಲಾಗುತ್ತಿದೆ.

ಇವರಲ್ಲಿ ಭಿಕ್ಷಾಟನೆಯಲ್ಲಿ ತೊಡಗಿರುವ 27 ಮಕ್ಕಳನ್ನು ಮಾಫಿಯಾ ನಿಯಂತ್ರಣ ಮಾಡುತ್ತಿರುವ ಗುಮಾನಿ ಇದೆ ಎಂದು ಕರ್ನಾಟಕ ರಾಜ್ಯ ಕಾನೂನು ಸೇವಾ ಪ್ರಾಧಿಕಾರ ಇತ್ತೀಚೆಗೆ ಹೈಕೋರ್ಟ್‌ಗೆ ವರದಿ ಮಾಡಿತ್ತು.

ವರದಿಯಲ್ಲಿ ಈ ಬಗ್ಗೆ ತನಿಖೆ ನಡೆಸುವ ಅಗತ್ಯವಿದೆ ಎಂದೂ ಶಿಫಾರಸು ಮಾಡಿತ್ತು. ಈ ಹಿನ್ನೆಲೆ ಎಸ್ಐಟಿ ರಚಿಸುವಂತೆ ಮುಖ್ಯ ನ್ಯಾಯಮೂರ್ತಿ ಎ.ಎಸ್ ಓಕ ನೇತೃತ್ವದ ವಿಭಾಗೀಯ ಪೀಠ ರಾಜ್ಯ ಸರ್ಕಾರಕ್ಕೆ ಸೂಚಿಸಿದೆ.

ಅಲ್ಲದೇ, ನಗರದಲ್ಲಿ ನೋಂದಣಿ ಮಾಡಿಸದೇ ಅಕ್ರಮವಾಗಿ ನಡೆಸುತ್ತಿರುವ ಮಕ್ಕಳ ಆರೈಕೆ ಕೇಂದ್ರಗಳ ವಿರುದ್ಧ ಕಾನೂನು ರೀತಿ ಕ್ರಮ ಜರುಗಿಸುವಂತೆ ಸರ್ಕಾರಕ್ಕೆ ನಿರ್ದೇಶಿಸಿದೆ.

ನಗರದಲ್ಲಿ 56ಕ್ಕೂ ಹೆಚ್ಚು ಅನಧಿಕೃತ ಮಕ್ಕಳ ಆರೈಕೆ ಕೇಂದ್ರಗಳಿವೆ. ಸಾರ್ವಜನಿಕ ಶಿಕ್ಷಣ ಇಲಾಖೆ ಅಧಿಕಾರಿಯೊಬ್ಬರು ವಿಜಯನಗರದಲ್ಲಿ ನಡೆಸುತ್ತಿರುವ ಕೇಂದ್ರವೂ ಅನಧಿಕೃತವಾಗಿದೆ.

ಇಂತಹ ಆರೈಕೆ ಕೇಂದ್ರಗಳಲ್ಲಿ ಮಕ್ಕಳು ಲೈಂಗಿಕ ಶೋಷಣೆಗೆ ಒಳಗಾಗುತ್ತಿರುವ ಆರೋಪಗಳಿವೆ ಎಂಬ ಹಿನ್ನೆಲೆ ಈ ನಿರ್ದೇಶನ ನೀಡಿದೆ.

ನಗರದ ರಸ್ತೆ ಬದಿ ಹಾಗೂ ಸಿಗ್ನಲ್ ಗಳಲ್ಲಿ ಆಟಿಕೆ, ಹೂ ಮಾರಾಟ ಮಾಡುವ ಹಾಗೂ ಭಿಕ್ಷೆ ಬೇಡುವ ಮಕ್ಕಳನ್ನು ಮುಖ್ಯ ವಾಹಿನಿಗೆ ತರಲು ಮತ್ತು ಅವರಗೆ ಪುನರ್ವಸತಿ ಕಲ್ಪಿಸಲು ಸರ್ಕಾರಕ್ಕೆ ಸೂಕ್ತ ನಿರ್ದೇಶನಗಳನ್ನು ನೀಡುವಂತೆ ಕೋರಿ ಲೆಟ್ಜ್ ಕಿಟ್ ಫೌಂಡೇಶನ್ ಹೈಕೋರ್ಟ್‌ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದೆ.

ಈ ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ನೇತೃತ್ವದ ವಿಭಾಗೀಯ ಪೀಠ, ಇಂತಹ ಮಕ್ಕಳನ್ನು ಸರ್ವೆ ಮಾಡಿ ಗುರುತಿಸಿ ವರದಿ ನೀಡುವಂತೆ ಕಾನೂನು ಸೇವಾ ಪ್ರಾಧಿಕಾರಕ್ಕೆ ನಿರ್ದೇಶಿಸಿತ್ತು.

ಅದರಂತೆ ವರದಿ ನೀಡಿದ್ದ ಕೆಎಸ್ಎಲ್ಎಸ್ಎ ನಗರದ 432 ಸ್ಥಳಗಳಲ್ಲಿ 720 ಮಕ್ಕಳು ಆಟಿಕೆ ಮಾರಾಟ ಹಾಗೂ ಭಿಕ್ಷಾಟನೆಯಲ್ಲಿ ತೊಡಗಿದ್ದಾರೆ.

ಇವರಲ್ಲಿ ಭಿಕ್ಷಾಟನೆಯಲ್ಲಿ ತೊಡಗಿರುವ 27 ಮಕ್ಕಳನ್ನು ಮಾಫಿಯಾ ನಿಯಂತ್ರಿಸುತ್ತಿರುವ ಗುಮಾನಿ ಇದೆ ಎಂದು ಶಂಕೆ ವ್ಯಕ್ತಪಡಿಸಿತ್ತಲ್ಲದೇ, ಈ ಸಂಬಂಧ ತನಿಖೆ ನಡೆಸುವ ಅಗತ್ಯವಿದೆ ಎಂದು ಶಿಫಾರಸು ಮಾಡಿತ್ತು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.