ETV Bharat / city

ರಾಜ್ಯದಲ್ಲಿ ಹೆಚ್ಚಾಗುತ್ತಿದ್ದಾರೆ ಬಾಲ ಕಾರ್ಮಿಕರು: ಪೊಲೀಸರ ದಾಳಿಯಿಂದ ಅಚ್ಚರಿ ಮಾಹಿತಿ ಬಯಲು!

ಮಕ್ಕಳು ತಮ್ಮೊಂದಿಗೆ ದುಡಿದರೆ ನಾಲ್ಕು ಕಾಸು ಸಂಪಾದಿಸಬಹುದು ಎಂಬ ಪೋಷಕರ ಮನಸ್ಥಿತಿ ಬಾಲ ಕಾರ್ಮಿಕರ ಸಂಖ್ಯೆ ಏರಲು ಪ್ರಮುಖ ಕಾರಣವಾಗಿದೆ. ಹೀಗಾಗಿ ತಮ್ಮೊಂದಿಗೆ ಮಕ್ಕಳನ್ನೂ ಕೆಲಸಕ್ಕೆ ಕರೆದೊಯ್ಯುತ್ತಿದ್ದಾರೆ.

Child labour's increase in Karnataka state
ಬಾಲ ಕಾರ್ಮಿಕರು
author img

By

Published : Sep 8, 2020, 7:02 PM IST

ಬೆಂಗಳೂರು: ರಾಜ್ಯದಲ್ಲಿ ಬಾಲ ಕಾರ್ಮಿಕರ ಸಂಖ್ಯೆ ಗಣನೀಯವಾಗಿ ಏರಿಕೆಯಾಗಿದ್ದು, ಬಾಲ ಕಾರ್ಮಿಕರನ್ನು ರಕ್ಷಿಸಲು ರಾಜ್ಯಾದ್ಯಂತ ನಿರಂತರವಾಗಿ ಕಾರ್ಯಾಚರಣೆ ನಡೆಸುತ್ತಿವೆ. ಆದರೆ ಈ ವೇಳೆ ಕುತೂಹಲಕಾರಿ ಮಾಹಿತಿಗಳು ಹೊರಬಿದ್ದಿವೆ.

ರಾಜ್ಯದಲ್ಲಿ ಬಾಲ ಕಾರ್ಮಿಕರ ಸಂಖ್ಯೆ ಹೆಚ್ಚಾಗಲು ಕೊರೊನಾ ಪ್ರಮುಖ ಕಾರಣವಾಗಿದ್ದು, ಲಾಕ್​​ಡೌನ್ ಜಾರಿ ಮಾಡಿದ ಬಳಿಕ ಕಾರ್ಮಿಕರು ಬಹುದೊಡ್ಡ ಸಂಖ್ಯೆಯಲ್ಲಿ ತಮ್ಮ ಸ್ವಗ್ರಾಮಗಳಿಗೆ ವಾಪಸಾಗಿದ್ದಾರೆ. ಅಲ್ಲಿಯೇ ನೆಲೆ ಕಂಡುಕೊಳ್ಳಲು ಮುಂದಾಗಿರುವ ಕಾರ್ಮಿಕರು, ತಮ್ಮ ಮಕ್ಕಳ ಶಿಕ್ಷಣಕ್ಕಿಂತ ದುಡಿಮೆಗೆ ಪ್ರಾಮುಖ್ಯತೆ ನೀಡುತ್ತಿದ್ದಾರೆ. ಹೀಗಾಗಿ ತಮ್ಮೊಂದಿಗೆ ಮಕ್ಕಳನ್ನೂ ಕೆಲಸಕ್ಕೆ ಕರೆದೊಯ್ಯುತ್ತಿದ್ದಾರೆ.

ಪೋಷಕರ ಬಡತನ, ಶಿಕ್ಷಣದ ಬಗ್ಗೆ ಇರುವ ನಿರ್ಲಕ್ಷ್ಯ, ಅಜ್ಞಾನ ಮಕ್ಕಳ ಶೈಕ್ಷಣಿಕ ಪ್ರಗತಿಗೆ ಬಹುದೊಡ್ಡ ಅಡ್ಡಿಯಾಗಿದೆ. ಮತ್ತೊಂದೆಡೆ ಮಕ್ಕಳು ತಮ್ಮೊಂದಿಗೆ ದುಡಿದರೆ ನಾಲ್ಕು ಕಾಸು ಸಂಪಾದಿಸಬಹುದು ಎಂಬ ಪೋಷಕರ ಮನಸ್ಥಿತಿಯೂ ಬಾಲ ಕಾರ್ಮಿಕರ ಸಂಖ್ಯೆ ಏರಲು ಪ್ರಮುಖ ಕಾರಣವಾಗಿದೆ. ಕಟ್ಟಡ ಕಾಮಗಾರಿ, ಸಣ್ಣ ಕೈಗಾರಿಕೆಗಳು ಹಾಗೂ ಕೃಷಿ ಚಟುವಟಿಗೆಕಗಳಲ್ಲಿ ಕೆಲಸ ಮಾಡಲು ಬಾಲ ಕಾರ್ಮಿಕರು ಬಳಕೆಯಾಗುತ್ತಿದ್ದಾರೆ.

ಬಾಲ ಕಾರ್ಮಿಕರನ್ನು ರಕ್ಷಿಸಲು ರಾಜ್ಯಾದ್ಯಂತ ಜಿಲ್ಲಾಡಳಿತಗಳು ನಿರಂತರವಾಗಿ ಕಾರ್ಯಾಚರಣೆ ನಡೆಸುತ್ತಿದ್ದು, ಬಾಲ ಕಾರ್ಮಿಕರನ್ನು ಕೆಲಸಕ್ಕೆ ಕರೆದೊಯ್ಯುವ ವೇಳೆ ವಾಹನಗಳ ಸಮೇತ ವಶಕ್ಕೆ ಪಡೆದು ಮಕ್ಕಳನ್ನು ರಕ್ಷಿಸಲಾಗುತ್ತಿದೆ. ಇನ್ನು ಬಾಲ ಕಾರ್ಮಿಕರ ಸಂಖ್ಯೆ ಹೆಚ್ಚಲು ಕಮಿಷನ್ ಆಸೆಯೂ ಕಾರಣವಾಗಿದ್ದು, ರಾಯಚೂರಿನ ಸಿರವಾರ ಠಾಣೆ ಪೊಲೀಸರು ದಾಳಿ ನಡೆಸಿ ಮಕ್ಕಳನ್ನು ರಕ್ಷಣೆ ಮಾಡಿದ ಸಂದರ್ಭದಲ್ಲಿ ಈ ವಿಚಾರ ಪತ್ತೆಯಾಗಿದೆ. ಹೊಲಗಳಲ್ಲಿ ದುಡಿಯಲು ಮಕ್ಕಳನ್ನು ಕರೆದೊಯ್ಯುವ ಮಧ್ಯವರ್ತಿಗಳಿಗೆ, ಪ್ರತಿ ಬಾಲ ಕಾರ್ಮಿಕನಿಗೆ ತಲಾ 30 ರೂಪಾಯಿ ಕಮಿಷನ್ ಕೊಡುತ್ತಿದ್ದ ಸಂಗತಿ ಬೆಳಕಿಗೆ ಬಂದಿದೆ.

ಹೆಚ್ಚುತ್ತಿರುವ ಬಾಲ ಕಾರ್ಮಿಕರ ಸಂಖ್ಯೆ

ಬಾಲ ಕಾರ್ಮಿಕ (ನಿಷೇಧ ಮತ್ತು ನಿಯಂತ್ರಣ) ಕಾಯ್ದೆ-1986 ರ ಪ್ರಕಾರ 14 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳನ್ನು ದುಡಿಮೆಗೆ ಹಚ್ಚುವಂತಿಲ್ಲ. ಹಾಗೆಯೇ 18 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳನ್ನು ಅಪಾಯಕಾರಿ ಕೆಲಸಗಳಿಗೆ ನಿಯೋಜಿಸುವಂತಿಲ್ಲ. ನಿಯಮ ಉಲ್ಲಂಘಿಸಿದರೆ 6 ತಿಂಗಳಿಂದ 2 ವರ್ಷದವರೆಗೆ ಜೈಲು, 20 ಸಾವಿರದಿಂದ 50 ಸಾವಿರದವರೆಗೆ ದಂಡ ವಿಧಿಸಲಾಗುತ್ತದೆ.

ಕಳೆದ 2015ರಿಂದ 2019 ವರೆಗಿನ ಅಂಕಿ-ಅಂಶಗಳನ್ನು ಗಮನಿಸಿದರೆ ಪ್ರಕರಣಗಳು ಏರಿಕೆಯಾಗುತ್ತಿರುವುದು ಸ್ಪಷ್ಟವಾಗಿ ಕಂಡುಬರುತ್ತದೆ. ಬಾಲ ಕಾರ್ಮಿಕ ಕಾಯ್ದೆಯಡಿ ದಾಖಲಾದ ಪ್ರಕರಣಗಳು ಈ ರೀತಿ ಇವೆ.

Child labour's increase in Karnataka state
ಬಾಲ ಕಾರ್ಮಿಕರ ಕುರಿತ ಮಾಹಿತಿ

ಇನ್ನು 2018ರಲ್ಲಿ ನೋಡುವುದಾದರೆ ಒಟ್ಟು ತಪಾಸಣೆಗಳು 21,000, ರಕ್ಷಣೆಯಾದ ಮಕ್ಕಳ ಸಂಖ್ಯೆ 157 ಹಾಗೂ ನಿಯಮ ಉಲ್ಲಂಘನೆ ಪ್ರಕರಣಗಳು 141. ಹಾಗೂ 2019 ರಲ್ಲಿ ಒಟ್ಟು ತಪಾಸಣೆಗಳು 12,569, ರಕ್ಷಣೆಯಾದ ಮಕ್ಕಳ ಸಂಖ್ಯೆ 237 ಹಾಗೂ 162 ನಿಯಮ ಉಲ್ಲಂಘನೆ ಪ್ರಕರಣಗಳು ದಾಖಲಾಗಿವೆ. ಪ್ರಕರಣಗಳು ನಿರಂತರವಾಗಿ ಕಂಡುಬರುತ್ತಿದ್ದು, ಈ ಕುರಿತು ದೂರು ಬಂದಾಗಲೆಲ್ಲಾ ಅಧಿಕಾರಿಗಳು ದಾಳಿ ನಡೆಸಿ ಪ್ರಕರಣಗಳನ್ನು ದಾಖಲಿಸುತ್ತಲೇ ಬಂದಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.