ETV Bharat / city

ವಿವಿಧ ವಲಯದ ಅಧಿಕಾರಿಗಳೊಂದಿಗೆ ಸಿಎಂ ಇಂದು ವಿಡಿಯೋ ಸಂವಾದ! - ವಿಡಿಯೋ ಕಾನ್ಪರೆನ್ಸ್​

ಲಾಕ್​ಡೌನ್​ ಸಿಡಿಲಿಕೆ ಮಾಡಲಾಗಿರುವ ಕಾರಣ ರಾಜ್ಯದಲ್ಲಿನ ಸ್ಥಿತಿಗತಿ ಕುರಿತು ಇಂದು ಮುಖ್ಯಮಂತ್ರಿ ಮಾಹಿತಿ ಪಡೆದುಕೊಳ್ಳಲಿದ್ದು, ಜಿಲ್ಲಾಧಿಕಾರಿಗಳು ಸೇರಿದಂತೆ ವಿವಿಧ ಅಧಿಕಾರಿಗಳೊಂದಿಗೆ ವಿಡಿಯೋ ಕಾನ್ಫರೆನ್ಸ್​​ ನಡೆಸಲಿದ್ದಾರೆ.

Chief Minister
Chief Minister
author img

By

Published : Jun 2, 2020, 6:12 AM IST

ಬೆಂಗಳೂರು: ರಾಜ್ಯದಲ್ಲಿ ಹೇರಿಕೆ ಮಾಡಲಾಗಿರುವ ಲಾಕ್​ಡೌನ್​ ಇದೀಗ ಈ ಹಿಂದಿನಿಗಿಂತಲೂ ಸಡಿಲ ಮಾಡಲಾಗಿದ್ದು, ರಾಜ್ಯದ ಸ್ಥಿತಿಗತಿ ಹಾಗೂ ಆರ್ಥಿಕ ಪರಿಸ್ಥಿತಿ ಕುರಿತು ಮುಖ್ಯಮಂತ್ರಿ ಬಿಎಸ್​ ಯಡಿಯೂರಪ್ಪ ಇಂದು ವಿಡಿಯೋ ಸಂವಾದ ನಡೆಸಲಿದ್ದಾರೆ.

ವಿಡಿಯೋ ಸಂವಾದದಲ್ಲಿ ಎಲ್ಲ ಜಿಲ್ಲೆಯ ಜಿಲ್ಲಾಧಿಕಾರಿಗಳು, ಪೊಲೀಸ್​ ವರಿಷ್ಠಾಧಿಕಾರಿಗಳು ಹಾಗೂ ಸಿಇಒಗಳು ಭಾಗಿಯಾಗಲಿದ್ದಾರೆ. ಮುಖ್ಯಮಂತ್ರಿಗಳ ಅಧಿಕೃತ ಗೃಹ ಕಚೇರಿ ಕೃಷ್ಣಾದಲ್ಲಿ ವಿಡಿಯೋ ಕಾನ್ಫರೆನ್ಸ್​ ನಡೆಯಲಿದ್ದು, ವಿವಿಧ ಜಿಲ್ಲೆಯಗಳಲ್ಲಿ ಹೆಚ್ಚಾಗುತ್ತಿರುವ ಕೋವಿಡ್​ ಪ್ರಕರಣದ ಮಾಹಿತಿ ಹಾಗೂ ರಾಜ್ಯದಲ್ಲಿನ ಆರ್ಥಿಕ ಸ್ಥಿತಿಗತಿ ಕುರಿತು ಮಾಹಿತಿ ಪಡೆದುಕೊಳ್ಳಲಿದ್ದಾರೆ.

ರಾಜ್ಯದಲ್ಲಿ ಲಾಕ್​ಡೌನ್​ ಸಡಿಲಿಕೆ ಮಾಡಿದ ಬಳಿಕ ಆರ್ಥಿಕ ಸ್ಥಿತಿಗತಿ ಹಾಗೂ ಜಿಲ್ಲೆಯಲ್ಲಿ ಸಂಭವಿಸಿರುವ ಹಾನಿಯ ಬಗ್ಗೆ ಮಾಹಿತಿ ಪಡೆದುಕೊಳ್ಳಲಿದ್ದಾರೆ. ಇದೇ ವೇಳೆ ಸೋಂಕಿತರಿಗೆ ಕ್ವಾರಂಟೈನ್​ ಮಾಡಿರುವ ಕುರಿತು ಮಾಹಿತಿ ಪಡೆದುಕೊಳ್ಳುವ ಸಾಧ್ಯತೆ ಇದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.