ETV Bharat / city

ಮೇಕೆದಾಟು ವಿವಾದ ಆದಷ್ಟು ಬೇಗ ಬಗೆಹರಿಯುತ್ತದೆ: ಬೊಮ್ಮಾಯಿ ವಿಶ್ವಾಸ

author img

By

Published : Nov 15, 2021, 2:37 PM IST

ಕೇಂದ್ರ ಜಲಶಕ್ತಿ ಮಂತ್ರಾಲಯದ ಜತೆ ನಾವು ಸಂಪರ್ಕದಲ್ಲಿದ್ದೇವೆ. ದೆಹಲಿಯಲ್ಲಿ ವಕೀಲರ ಜತೆಗೂ ಚರ್ಚಿಸಿದ್ದೇನೆ. ಆದಷ್ಟು ಬೇಗ ಮೇಕೆದಾಟು ವಿಚಾರ ಬಗೆಹರಿಯುತ್ತದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ವಿಶ್ವಾಸ ವ್ಯಕ್ತಪಡಿಸಿದರು.

ಬೊಮ್ಮಾಯಿ
Chief Minister Basavaraj Bommai

ಬೆಂಗಳೂರು: ಅಂತಾರಾಜ್ಯ ನದಿ ಜೋಡಣೆ (Inter state river linking) ವಿಚಾರ ಸಂಬಂಧ ಕರ್ನಾಟಕದ ಅಹವಾಲು ಆಲಿಸಿ ಮುಂದುವರೆಯುವಂತೆ ಜಲಶಕ್ತಿ ಮಂತ್ರಾಲಯಕ್ಕೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಸೂಚಿಸಿದ್ದಾರೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (Chief Minister Basavaraj Bommai) ತಿಳಿಸಿದರು.

ತಿರುಪತಿ ಪ್ರವಾಸ ಮುಗಿಸಿ ವಾಪಸ್ ಬಂದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ತಿರುಪತಿಯಲ್ಲಿ ಅಂತಾರಾಜ್ಯ ಸಿಎಂಗಳ ಸಭೆ ನಡೆಯಿತು. ಅಮಿತ್ ಶಾ (Amit Shah) ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಹಲವು ಸಮಸ್ಯೆಗಳು ಇತ್ಯರ್ಥವಾಗಿದೆ. ಕೃಷ್ಣ ನದಿ ನೀರಿನ ಹಂಚಿಕೆ ವಿಚಾರ ಚರ್ಚೆ ಆಯಿತು. ಕೃಷ್ಣ ನ್ಯಾಯಾಧೀಕರಣದ ತೀರ್ಪಿನ ನೋಟಿಫಿಕೇಷನ್ ಆಗಬೇಕು. ಆದಷ್ಟು ಬೇಗ ಕೇಂದ್ರ ಸರ್ಕಾರ ನೋಟಿಫಿಕೇಷನ್ ಹೊರಡಿಸುವಂತೆ ಒತ್ತಾಯ ಮಾಡಿದ್ದೇನೆ ಎಂದರು.

ಮೇಕೆದಾಟು ವಿಚಾರವನ್ನು (Mekedatu Dispute) ನಾನು ಸಭೆಯಲ್ಲಿ ಪ್ರಸ್ತಾಪ ಮಾಡಿದೆ. ಆದರೆ ತಮಿಳುನಾಡು ಸಿಎಂ ಸಭೆಗೆ ಬಂದಿರಲಿಲ್ಲ. ಕೇಂದ್ರ ಜಲಶಕ್ತಿ ಮಂತ್ರಾಲಯದ ಜತೆ ಸಂಪರ್ಕದಲ್ಲಿದ್ದೇವೆ. ದೆಹಲಿಯಲ್ಲಿ ವಕೀಲರ ಜತೆಗೂ ಚರ್ಚಿಸಿದ್ದೇನೆ. ಆದಷ್ಟು ಬೇಗ ಮೇಕೆದಾಟು ವಿಚಾರ ಬಗೆಹರಿಯುತ್ತದೆ. ರಾಜ್ಯದ ಎಲ್ಲಾ ಯೋಜನೆಗಳಿಗೂ ತಮಿಳುನಾಡು ಮೊದಲಿಂದಲೂ ವಿರೋಧಿಸುತ್ತಾ ಬಂದಿದೆ. ಈಗ ತಮಿಳುನಾಡು ಕೆಳ ಹಂತದಲ್ಲಿ ಮಾಡುತ್ತಿರುವ ಯೋಜನೆಗಳಿಗೆ ನಾವು ಆಕ್ಷೇಪ ಮಾಡಿದ್ದೇವೆ. ನಮ್ಮ ಮೇಕೆದಾಟು ಯೋಜನೆಗೆ ತಮಿಳುನಾಡು ಆಕ್ಷೇಪಿಸಿದೆ. ಇದಕ್ಕೆ ಒಂದು ನ್ಯಾಯ ಸಮ್ಮತ ತೀರ್ಮಾನ ಆಗಬೇಕಾಗುತ್ತದೆ. ಆದಷ್ಟು ಬೇಗ ಆ ಕೆಲಸ ಆಗುವ ಭರವಸೆ ಇದೆ ಎಂದರು.

ಬಿಟ್ ಕಾಯಿನ್ (Bitcoin scam) ವಿಚಾರದಲ್ಲಿ ಕಾಂಗ್ರೆಸ್ ಬಳಿ ಏನಾದರೂ ದಾಖಲೆ ಇದ್ದರೆ ಪೊಲೀಸರಿಗೆ ಅಥವಾ ಇಡಿಗೆ (ED) ಕೊಡಲಿ, ಏನೇ ದಾಖಲೆ ಇದ್ದರೂ ತನಿಖೆ ಮಾಡುತ್ತೇವೆ. ಕಾಂಗ್ರೆಸ್‌ನವರು ಇಲ್ಲದ ವಿಷಯವನ್ನು ಜೀವಂತವಾಗಿ ಇಡುವ ಯತ್ನ ಮಾಡುತ್ತಿದ್ದಾರೆ. ಇದು ಅವರ ರಾಜಕೀಯ ಅಷ್ಟೇ ಎಂದು ಟೀಕಿಸಿದರು.

Chief Minister Basavaraj Bommai
ತಿರುಮಲದಲ್ಲಿ ಸಿಎಂ ಬೊಮ್ಮಾಯಿ ಅವರಿಗೆ ಸನ್ಮಾನ

ತಿರುಮಲದಲ್ಲಿ ಸನ್ಮಾನ ಸ್ವೀಕಾರ:

ತಿರುಪತಿಗೆ ಭೇಟಿ ನೀಡಿದ್ದ ಸಿಎಂ ಬಸವರಾಜ ಬೊಮ್ಮಾಯಿ ಇಂದು ಮುಂಜಾನೆ ತಿರುಮಲದಲ್ಲಿ ವೆಂಕಟೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಿ ದರ್ಶನ ಪಡೆದರು. ನಂತರ ಟಿಟಿಡಿ ವತಿಯಿಂದ ಸನ್ಮಾನ ಸ್ವೀಕರಿಸಿದರು.

ಈ ಸಂದರ್ಭದಲ್ಲಿ ಸಚಿವರಾದ ಡಾ. ಸುಧಾಕರ್, ಮುನಿರತ್ನ, ಶಾಸಕ ಎಸ್.ಆರ್.ವಿಶ್ವನಾಥ್ ಮುಖ್ಯಮಂತ್ರಿಗಳ ಪ್ರಧಾನ ಕಾರ್ಯದರ್ಶಿ ಮಂಜುನಾಥ ಪ್ರಸಾದ್ ಮತ್ತು ಇತರರು ಉಪಸ್ಥಿತರಿದ್ದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.