ETV Bharat / city

ಸರ್ಕಾರಿ ನೌಕರಿ ಕೊಡಿಸಿವುದಾಗಿ ವಂಚನೆ : ಮಹಿಳಾ SDA ಅರೆಸ್ಟ್ - ಮಹಿಳಾ ಎಸ್​ಡಿಎ ಅರೆಸ್ಟ್

ಕೆಎಸ್​​ಆರ್​​ಟಿಸಿ ಡ್ರೈವರ್, ಕಂಡಕ್ಟರ್, ಎಫ್​​ಡಿಎ, ಎಸ್​​ಡಿಎ, ಕೆಪಿಎಸ್​​ಇ ಸೇರಿ ರಾಜ್ಯ ಸರ್ಕಾರದ ಎಲ್ಲಾ ವಿಭಾಗದಲ್ಲೂ ಕೆಲಸ ಕೊಡಿಸುವುದಾಗಿ ಹೇಳಿ ವಂಚಿಸುತ್ತಿದ್ದಳು..

ಶ್ರೀಲೇಖಾ
ಶ್ರೀಲೇಖಾ
author img

By

Published : Sep 29, 2021, 4:58 PM IST

ಬೆಂಗಳೂರು : ಗ್ರಾಮಾಂತರ ಎಸ್​ಪಿ ಕಚೇರಿಯಲ್ಲಿ ಕೆಲಸ ನಿರ್ವಹಿಸುತ್ತಾ ರಾಜ್ಯ ಸರ್ಕಾರಿ ಕೆಲಸ ಕೊಡಿಸುವುದಾಗಿ ಜನರಿಗೆ ವಂಚಿಸುತ್ತಿದ್ದ ದ್ವಿತೀಯ ದರ್ಜೆ ಸಹಾಯಕಿ(ಎಸ್​​ಡಿಎ)ಯನ್ನು ವಿಧಾನಸೌಧ ಪೊಲೀಸರು ಬಂಧಿಸಿದ್ದಾರೆ.

ಮಂಜುನಾಥ್ ಎಂಬುವರು ನೀಡಿದ ದೂರಿನನ್ವಯ ವಸಂತನಗರದಲ್ಲಿರುವ ರೂರಲ್ ಎಸ್​ಪಿ ಕಚೇರಿಯಲ್ಲಿ ದ್ವಿತೀಯ ದರ್ಜೆ ಸಹಾಯಕಿ(SDA)ಯಾಗಿ ಕಾರ್ಯ ನಿರ್ವಹಿಸುತ್ತಿದ್ದ ಶ್ರೀಲೇಖಾ ಎಂಬುವರನ್ನು ವಿಧಾನಸೌಧ ಪೊಲೀಸರು ಬಂಧಿಸಿದ್ದಾರೆ.

ಕೆಎಸ್​​ಆರ್​​ಟಿಸಿ ಡ್ರೈವರ್, ಕಂಡಕ್ಟರ್, ಎಫ್​​ಡಿಎ, ಎಸ್​​ಡಿಎ, ಕೆಪಿಎಸ್​​ಇ ಸೇರಿ ರಾಜ್ಯ ಸರ್ಕಾರದ ಎಲ್ಲಾ ವಿಭಾಗದಲ್ಲೂ ಕೆಲಸ ಕೊಡಿಸುವುದಾಗಿ ಹೇಳಿ ವಂಚಿಸುತ್ತಿದ್ದಳು. ಈಕೆಗೆ ರಾಧಾ ಉಮೇಶ್​​ ಮತ್ತು ಸಂಪತ್ ಕುಮಾರ್ ಎಂಬಿಬ್ಬರೂ ಸಾಥ್ ನೀಡುತ್ತಿದ್ದರು. ಮೂವರು ಸರ್ಕಾರಿ ಕೆಲಸ ಕೊಡಿಸುವುದಾಗಿ ಹಲವರಿಗೆ ಸುಮಾರು 1.61 ಕೋಟಿ ರೂಪಾಯಿಗೂ ಹೆಚ್ಚು ವಂಚನೆ ಮಾಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಇದನ್ನೂ ಓದಿ: ವಿಕೃತಕಾಮಿ ಉಮೇಶ್ ರೆಡ್ಡಿಗೆ ಗಲ್ಲು ಖಾಯಂ: ಹೈಕೋರ್ಟ್​ ಮಹತ್ವದ ತೀರ್ಪು

ETV Bharat Logo

Copyright © 2024 Ushodaya Enterprises Pvt. Ltd., All Rights Reserved.