ETV Bharat / city

ವ್ಯಾಕ್ಸಿನೇಷನ್ ಕುರಿತ ಸಾಫ್ಟ್​​ವೇರ್‌ನಲ್ಲಿ ಬದಲಾವಣೆ.. ಬರಬೇಕಿದ್ದವರು ಬಾರದಿದ್ರೇ ಬೇರೆಯವರಿಗೆ ಲಸಿಕೆ.. - ಆಯುಕ್ತ ಮಂಜುನಾಥ್ ಪ್ರಸಾದ್

ವ್ಯಾಕ್ಸಿನ್ ಬಗ್ಗೆ ಹೆಚ್ಚೆಚ್ಚು ಪ್ರಚಾರ ಆಗಬೇಕಿದೆ. ಲಸಿಕೆ ಬಗ್ಗೆ ಯಾವುದೇ ಚಿಂತೆ ಬೇಡ, ಈ‌ ಲಸಿಕೆ ಸುರಕ್ಷಿತವಾಗಿದೆ. ಲಸಿಕೆ ಸುರಕ್ಷಿತತೆ ಬಗ್ಗೆ ಪ್ರಚಾರ ಮಾಡಲು ನಿರ್ಧಾರಿಸಲಾಗಿದೆ. ಪಾಲಿಕೆಯ ಎಲ್ಲಾ ಹೋರ್ಡಿಂಗ್ಸ್, ಕಟೌಟ್ಸ್ ಹಾಗೂ ಬಸ್ ಶೆಲ್ಟರ್‌ಗಳಲ್ಲಿ, ಎಫ್​​ಎಮ್ ರೇಡಿಯೋಗಳಲ್ಲಿ ಜಾಹೀರಾತು ನೀಡಲು ನಿರ್ಧರಿಸಲಾಗಿದೆ..

changes-in-covid-vaccination-software-news
ವ್ಯಾಕ್ಸಿನೇಷನ್ ಕುರಿತ ಸಾಫ್ಟ್​​ವೇರ್ ನಲ್ಲಿ ಬದಲಾವಣೆ
author img

By

Published : Jan 23, 2021, 4:53 PM IST

ಬೆಂಗಳೂರು : ಬಿಬಿಎಂಪಿಯಲ್ಲಿ ಇಂದು ಕೋವಿಡ್ ವಾಕ್ಸಿನೇಷನ್ ನೋಡಲ್ ಅಧಿಕಾರಿಗಳ ವರ್ಚುವಲ್ ಸಭೆ ನಡೆಸಲಾಯಿತು. ಖಾಸಗಿ, ಸರ್ಕಾರಿ ಆಸ್ಪತ್ರೆ, ಮೆಡಿಕಲ್, ನರ್ಸಿಂಗ್ ಕಾಲೇಜುಗಳ 128 ನೋಡಲ್ ಅಧಿಕಾರಿಗಳು ಭಾಗಿಯಾಗಿದ್ದರು.

ವ್ಯಾಕ್ಸಿನೇಷನ್ ಕುರಿತ ಸಾಫ್ಟ್​​ವೇರ್‌ನಲ್ಲಿ ಬದಲಾವಣೆ..

ಓದಿ: ಕಲಬುರಗಿಯಲ್ಲಿ ಮೂರು ಮಕ್ಕಳಿಗೆ ಜನ್ಮ ನೀಡಿದ ಮಹಾನ್​ ತಾಯಿ

ಕಳೆದ ಆರು ದಿನಗಳಲ್ಲಿ ಪಾಲಿಕೆ ವ್ಯಾಪ್ತಿಯಲ್ಲಿ 33,800 ಲಸಿಕೆ ಈವರೆಗೆ ಹಂಚಿಕೆಯಾಗಿವೆ. ಇನ್ನೂ ಮೊದಲ ಹಂತದ 1 ಲಕ್ಷ 45 ಸಾವಿರ ಜನರಿಗೆ ಬಾಕಿ ಇದೆ. ಈವರೆಗೂ ಯಾರಿಗೂ ಗಂಭೀರ ಅಡ್ಡಪರಿಣಾಮಗಳಾಗಿಲ್ಲ.

ಧೈರ್ಯದಿಂದ ಲಸಿಕೆ ಪಡೆಯಬಹುದು ಎಂದು ಆಯುಕ್ತರು ತಿಳಿಸಿದರು. ವ್ಯಾಕ್ಸಿನೇಷನ್ ತ್ವರಿತಗೊಳಿಸಲು ಕೇಂದ್ರಗಳನ್ನು ಹೆಚ್ಚು ಮಾಡಬೇಕಿದೆ. ಇಂದೂ ಕೂಡ 10 ಸಾವಿರ ಜನರಿಗೆ 107 ಕಡೆ ಲಸಿಕೆ ಅಭಿಯಾನ ನಡೆಸಲು ವ್ಯವಸ್ಥೆ ಮಾಡಲಾಗಿದೆ. ನಾಳೆ ಭಾನುವಾರ ಕೂಡ ಲಸಿಕೆ ಹಂಚಿಕೆ ಮಾಡಲಾಗುತ್ತದೆ.

ಸಭೆ ಬಳಿಕ ಆಯುಕ್ತ ಮಂಜುನಾಥ್ ಪ್ರಸಾದ್ ಮಾತನಾಡಿ, ಕೋವಿಡ್‌ನ ಕೆಲ ಬದಲಾವಣೆಗಳನ್ನು ಸಾಫ್ಟ್‌ವೇರ್‌ಗಳಲ್ಲಿಯೂ ಮಾಡಲಾಗಿದೆ. ಪ್ರತಿ ಕೇಂದ್ರದಲ್ಲಿ 100 ಫಲಾನುಭವಿಗಳಿಗೆ ಕೊಡಬೇಕಿತ್ತು.

ಆದರೆ, ಇದರಲ್ಲಿ ಬಹಳ ಜನ ತಪ್ಪಿಸಿಕೊಳ್ಳುತ್ತಾರೆ ಅಥವಾ ಅನಿವಾರ್ಯ ಕಾರಣದಿಂದ ಗೈರಾಗುತ್ತಾರೆ. ಹೀಗಾಗಿ ಅಸೈನ್ ಮಾಡಿದವರಲ್ಲದೇ ಇದ್ರೂ, ನೋಂದಣಿ ಮಾಡಿಕೊಂಡಿದ್ದ ಯಾರು ಬೇಕಾದ್ರೂ ಲಸಿಕೆ‌ ಪಡೆಯಬಹುದು. ಇದರಿಂದ ವ್ಯಾಕ್ಸಿನ್ ಪಡೆಯುವವರ ಸಂಖ್ಯೆ ಹೆಚ್ಚಾಗಲಿದೆ ಎಂದರು.

ವ್ಯಾಕ್ಸಿನ್ ಬಗ್ಗೆ ಹೆಚ್ಚೆಚ್ಚು ಪ್ರಚಾರ ಆಗಬೇಕಿದೆ. ಲಸಿಕೆ ಬಗ್ಗೆ ಯಾವುದೇ ಚಿಂತೆ ಬೇಡ, ಈ‌ ಲಸಿಕೆ ಸುರಕ್ಷಿತವಾಗಿದೆ. ಲಸಿಕೆ ಸುರಕ್ಷಿತತೆ ಬಗ್ಗೆ ಪ್ರಚಾರ ಮಾಡಲು ನಿರ್ಧಾರಿಸಲಾಗಿದೆ. ಪಾಲಿಕೆಯ ಎಲ್ಲಾ ಹೋರ್ಡಿಂಗ್ಸ್, ಕಟೌಟ್ಸ್ ಹಾಗೂ ಬಸ್ ಶೆಲ್ಟರ್‌ಗಳಲ್ಲಿ, ಎಫ್​​ಎಮ್ ರೇಡಿಯೋಗಳಲ್ಲಿ ಜಾಹೀರಾತು ನೀಡಲು ನಿರ್ಧರಿಸಲಾಗಿದೆ.

ನೋಂದಣಿ ಮಾಡಿಕೊಳ್ಳದ ಸಿಬ್ಬಂದಿ ಇನ್ನು ಮುಂದೆಯೂ ನೋಂದಣಿ ಮಾಡಿಕೊಳ್ಳಬಹುದು. ಒಂದು ಬಾರಿ ಲಸಿಕೆ ಪಡೆಯಲು ಸಾಧ್ಯವಾಗದವರು, ಮತ್ತೆ 2ನೇ ಬಾರಿ ಪಡೆಯಲು ಅವಕಾಶ ಇದೆ ಎಂದರು. ಮೊದಲ ಹಂತದಲ್ಲಿ 1 ಲಕ್ಷ 85 ಸಾವಿರ ಮಂದಿಗೆ ಲಸಿಕೆ ನೀಡಲಿದ್ದೇವೆ. ಸೈಡ್ ಎಫೆಕ್ಟ್ ಬಗ್ಗೆ ಭಯ ಬೇಡ, ಸಣ್ಣ ಪುಟ್ಟದಾಗಿ ಪರಿಣಾಮ ಬೀರಲಿದೆ. ತಲೆ ನೋವು, ಸುಸ್ತು ಆಗೋದು ಎಲ್ಲಾ ಲಸಿಕೆಗಳಿಂದಲೂ ಆಗುತ್ತೆ. ಹೀಗಾಗಿ ಜನರು ಭಯ ಬೀಳುವ ಅಗತ್ಯ ಇಲ್ಲ ಎಂದರು.

ಎರಡನೇ ಹಂತದ ಲಸಿಕೆ ವಿಚಾರ ಫ್ರಂಟ್‌ಲೈನ್ ವರ್ಕರ್ಸ್ ನೋಂದಣಿ ಕೆಲಸ ನಡೆಯುತ್ತಿದೆ. 24ರಂದು‌ ಮಾಹಿತಿ ಅಪ್ಲೋಡ್ ಮಾಡಿಕೊಳ್ಳಲು ಸರ್ಕಾರ ಕೊನೆಯ ದಿನಾಂಕ ಕೊಟ್ಟಿದ್ದಾರೆ. 2ನೇ ಹಂತಕ್ಕೆ ಇನ್ನಷ್ಟೂ ಹಂಚಿಕೆ ಕೇಂದ್ರಗಳೂ ಹೆಚ್ಚಾಗಲಿವೆ. ಇದಕ್ಕಾಗಿ ಕೆಲ ಕೇಂದ್ರಗಳನ್ನೂ ಗುರುತು ಮಾಡಿದ್ದೇವೆ.

ಕೆಲ ಕಾಲೇಜುಗಳನ್ನೂ ಹಂಚಿಕೆ ಕೇಂದ್ರಗಳನ್ನಾಗಿ ಮಾಡುವ ಚಿಂತನೆ ಇದೆ. ಫೆಬ್ರವರಿ ಮೊದಲ ವಾರದಲ್ಲಿ ಎರಡನೇ ಹಂತದ ಲಸಿಕೆ ಆರಂಭ ಆಗುವ ವಿಶ್ವಾಸ ಇದೆ ಎಂದರು. ಮೊದಲನೇ ಹಂತದ ಲಸಿಕೆ ವಿತರಣೆ ಮುಂದಿನ ವಾರ ಪೂರ್ಣವಾಗಲಿದೆ. ಜ. 26, 27 ಯಾವುದೇ ಲಸಿಕೆ ವಿತರಣೆ ಇರುವುದಿಲ್ಲ ಎಂಬ ಮಾಹಿತಿ ಇದೆ. ಫೆಬ್ರವರಿ ಬಳಿಕ ಎರಡನೇ ಹಂತದ ವ್ಯಾಕ್ಸಿನೇಷನ್ ಆರಂಭವಾಗಲಿದೆ ಎಂದರು.

ನಗರದ ಕೋವಿಡ್ ಪ್ರಕರಣ ಇಳಿಕೆ-ಪ್ರತಿನಿತ್ಯ 35 ಸಾವಿರ ಜನರ ಟೆಸ್ಟಿಂಗ್:

ನಗರದಲ್ಲಿ ಕೋವಿಡ್ ಪ್ರಕರಣ ತೀವ್ರಮಟ್ಟದಲ್ಲಿ ಇಳಿಕೆಯಾಗಿದೆ. ನಿನ್ನೆ ಕೇವಲ 93 ಪ್ರಕರಣ ಬಂದಿವೆ, ಒಂದೂ ಸಾವು ಸಂಭವಿಸಿಲ್ಲ. ಆದರೂ ಪ್ರತಿದಿನ 35 ಸಾವಿರ ಟೆಸ್ಟಿಂಗ್ ಮಾಡುತ್ತಿದ್ದೇವೆ. ಟೆಸ್ಟಿಂಗ್ ಯಾವುದೇ ಕಾರಣಕ್ಕೂ ಕಡಿಮೆ ಮಾಡುವುದಿಲ್ಲ. ಇದರಿಂದಲೇ ನಿಯಂತ್ರಣ ಮಾಡಲು ಸಾಧ್ಯ ಎಂದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.