ಬೆಂಗಳೂರು: ಭಾರತದ ಮಹತ್ವಾಕಾಂಕ್ಷೆಯ ಚಂದ್ರಯಾನ-2ರ ಕುರಿತು ಇಸ್ರೋ ವಿಜ್ಞಾನಿಗಳು ಮಹತ್ವದ ಸಂದೇಶವನ್ನು ದೇಶದ ಜನರೊಂದಿಗೆ ಹಂಚಿಕೊಂಡಿದ್ದಾರೆ.
ಜುಲೈ 22ರಂದು ಆಂಧ್ರ ಪ್ರದೇಶದ ಶ್ರೀಹರಿಕೋಟಾ ನೆಲೆಯಿಂದ ಯಶಸ್ವಿಯಾಗಿ ನಭಕ್ಕೆ ಜಿಗಿದಿದ್ದ ಇಸ್ರೋದ ಚಂದ್ರಯಾನ- 2 ನೌಕೆಯು ಇನ್ನು ಎರಡೇ ದಿನಗಳಲ್ಲಿ ಚಂದ್ರನ ಕಡೆಗೆ ತನ್ನ ಪ್ರಯಾಣ ಆರಂಭಿಸಲಿದೆ. ಉಡ್ಡಯನದ ಬಳಿಕ 6 ಬಾರಿ ವಿವಿಧ ಕಕ್ಷೆಗಳಲ್ಲಿ ಭೂಮಿಯ ಸುತ್ತ ಸುತ್ತುತ್ತಿರುವ ನೌಕೆ ಭೂ ಕಕ್ಷೆ ಮೀರಿ ಚಂದ್ರನ ಕಡೆಗೆ ಮುಖ ಮಾಡಿ ಇಂದು ನಸುಕಿನ 2.21ರ ಬಳಿಕ ಆರಂಭಿಸಿದೆ.
-
#ISRO
— ISRO (@isro) August 13, 2019 " class="align-text-top noRightClick twitterSection" data="
Trans Lunar Insertion (TLI) maneuver was performed today (August 14, 2019) at 0221 hrs IST as planned.
For details please see https://t.co/3TUN7onz6z
Here's the view of Control Centre at ISTRAC, Bengaluru pic.twitter.com/dp5oNZiLoL
">#ISRO
— ISRO (@isro) August 13, 2019
Trans Lunar Insertion (TLI) maneuver was performed today (August 14, 2019) at 0221 hrs IST as planned.
For details please see https://t.co/3TUN7onz6z
Here's the view of Control Centre at ISTRAC, Bengaluru pic.twitter.com/dp5oNZiLoL#ISRO
— ISRO (@isro) August 13, 2019
Trans Lunar Insertion (TLI) maneuver was performed today (August 14, 2019) at 0221 hrs IST as planned.
For details please see https://t.co/3TUN7onz6z
Here's the view of Control Centre at ISTRAC, Bengaluru pic.twitter.com/dp5oNZiLoL
ಉಡ್ಡಯನದ ಬಳಿಕ ಇದುವರೆಗೆ 6 ಬಾರಿ ಚಂದ್ರಯಾನ 2 ನೌಕೆಯ ಕಕ್ಷೆ ಎತ್ತರಿಸುವ ಪ್ರಕ್ರಿಯೆಯನ್ನು ಯಶಸ್ವಿಯಾಗಿ ಪೂರೈಸಲಾಗಿದೆ. ಅತ್ಯಂತ ಮಹತ್ವವಾದ ಕಕ್ಷೆ ಏರಿಕೆಯ ಪ್ರಕ್ರಿಯೆ ಬುಧವಾರ ಬೆಳಗಿನ ಜಾವ 2.21ಕ್ಕೆ ಯಶಸ್ವಿಯಾಗಿ ನಡೆಯಿತು. ಆಗಸ್ಟ್ 20ರಂದು ನೌಕೆಯು ಚಂದ್ರನ ಕಕ್ಷೆಯನ್ನು ಪ್ರವೇಶಿಸಲಿದೆ.
ಅಂತಿಮವಾಗಿ ಸೆಪ್ಟೆಂಬರ್ 7ರಂದು ನೌಕೆಯಲ್ಲಿರುವ ಲ್ಯಾಂಡರ್ ಮತ್ತು ರೋವರ್ ಚಂದ್ರನ ದಕ್ಷಿಣ ಧ್ರುವದ ನಿಗದಿತ ಪ್ರದೇಶದಲ್ಲಿ ಇಳಿಯಲಿದೆ.