ETV Bharat / city

ರಾಜ್ಯಕ್ಕೆ ಮತ್ತೆ ನೆರೆ ಪರಿಹಾರ ಹಣ ನೀಡಿದ ಕೇಂದ್ರ ಸರ್ಕಾರ: ಈಗ ಮಂಜೂರಾಗಿದ್ದು ಎಷ್ಟು ಗೊತ್ತಾ? - flood relief and rehabilitation in north Karnataka

ನೈಸರ್ಗಿಕ ಪ್ರಕೃತಿ ವಿಕೋಪ ಪರಿಹಾರ ಯೋಜನೆಯಡಿ ರಾಜ್ಯಕ್ಕೆ ಮತ್ತೆ 1,869 ಕೋಟಿ ರೂಪಾಯಿಯನ್ನು ಕೇಂದ್ರ ಸರ್ಕಾರ ಮಂಜೂರು ಮಾಡಿದೆ.

Centre announces Rs 1869 crore flood relief for Karnataka
ನೆರೆ ಪರಿಹಾರ ಬಿಡುಗಡೆ ಮಾಡಿದ ಕೇಂದ್ರ ಸರ್ಕಾರ
author img

By

Published : Jan 6, 2020, 8:21 PM IST

ಬೆಂಗಳೂರು: ಕಳೆದ ವರ್ಷ ಆಗಷ್ಟ್​ನಲ್ಲಿ ಉಂಟಾಗಿದ್ದ ಪ್ರವಾಹ ಹಾನಿgಎ ಸಂಬಂಧಿಸಿದ ಕಾಮಗಾರಿಗಳಿಗಾಗಿ ಕೇಂದ್ರ ಸರ್ಕಾರ ನೈಸರ್ಗಿಕ ಪ್ರಕೃತಿ ವಿಕೋಪ ಪರಿಹಾರ ಯೋಜನೆಯಡಿ ರಾಜ್ಯಕ್ಕೆ ಮತ್ತೆ 1,869 ಕೋಟಿ ರೂಪಾಯಿ ಮಂಜೂರು ಮಾಡಿದೆ.

ನವದೆಹಲಿಯಲ್ಲಿ ಇಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಅಧ್ಯಕ್ಷತೆಯಲ್ಲಿ ನಡೆದ ಎನ್​​ಡಿಆರ್​ಎಫ್​ನ ಉನ್ನತ ಮಟ್ಟದ ಸಮಿತಿ ಸಭೆಯಲ್ಲಿ ದೇಶದ 7 ರಾಜ್ಯಗಳಿಗೆ ಹೆಚ್ಚುವರಿಯಾಗಿ 5,905 ಕೋಟಿ ರೂಪಾಯಿ ಅನುದಾನ ನೀಡಲು ಅನುಮೋದನೆ ನೀಡಿದೆ.

ಮುಖ್ಯಮಂತ್ರಿ ಬಿ.ಎಸ್​. ಯಡಿಯೂರಪ್ಪ ಅವರು ರಾಜ್ಯಕ್ಕೆ ಮೊನ್ನೆ ಪ್ರಧಾನಿ ಭೇಟಿ ನೀಡಿದ್ದ ವೇಳೆ ತುಮಕೂರಿನ ಕಾರ್ಯಕ್ರಮದಲ್ಲಿ ರಾಜ್ಯಕ್ಕೆ ನೆರೆ ಪರಿಹಾರ ಯೋಜನೆಗಳಿಗೆ ₹50 ಸಾವಿರ ಕೋಟಿ ರೂಪಾಯಿ ಅನುದಾನ ಬಿಡುಗಡೆ ಮಾಡುವಂತೆ ಬಹಿರಂಗ ವೇದಿಕೆಯಲ್ಲೇ ಪ್ರಧಾನಿ ಸಮ್ಮುಖದಲ್ಲಿ ಮನವಿ ಮಾಡಿದ್ದರು. ಆದರೂ ಅಂದು ಪ್ರಧಾನಿ ಇದಕ್ಕೆ ಸ್ಪಂದಿಸಿರಲಿಲ್ಲ.

ಈಗ ಕೇಂದ್ರ ಸರ್ಕಾರ ರಾಜ್ಯಕ್ಕೆ 1,869 ಕೋಟಿ ಅನುದಾನ ನೀಡಲು ಒಪ್ಪಿಗೆ ಸೂಚಿಸಿದೆ. ಈ ಹಿಂದೆ 1200 ಕೋಟಿ ರೂ. ಬಿಡುಗಡೆ ಮಾಡಿತ್ತು. ಈ ಹಿಂದಿನ ಹಣ ಮತ್ತು ಇಂದು ಮಂಜೂರಾತಿಗೆ ಒಪ್ಪಿಗೆ ಸೂಚಿಸಿರುವ ಮೊತ್ತ ಸೇರಿಸಿದರೆ ರಾಜ್ಯಕ್ಕೆ ಒಟ್ಟು 3069 ಕೋಟಿ ರೂಪಾಯಿ ಅನುದಾನ ನೀಡಿದಂತಾಗಿದೆ. ರಾಜ್ಯದಿಂದ 35 ಸಾವಿರ ಕೋಟಿ ರೂ. ಪರಿಹಾರಕ್ಕಾಗಿ ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸಲಾಗಿತ್ತು.

7 ರಾಜ್ಯಗಳಿಗೆ ಬಿಡುಗಡೆ ಮಾಡಿದ ಅನುದಾನದಲ್ಲಿ ಕರ್ನಾಟಕದ ಪಾಲೇ ಹೆಚ್ಚು:

  1. ಅಸ್ಸೋಂ 616.63 ಕೋಟಿ
  2. ಹಿಮಾಚಲ ಪ್ರದೇಶಕ್ಕೆ 284.93 ಕೋಟಿ
  3. ಕರ್ನಾಟಕಕ್ಕೆ 1,869 ಕೋಟಿ
  4. ಮಧ್ಯಪ್ರದೇಶಕ್ಕೆ 1,749 ಕೋಟಿ
  5. ಮಹಾರಾಷ್ಟ್ರ ಕ್ಕೆ 956.93 ಕೋಟಿ
  6. ತ್ರಿಪುರಾಕ್ಕೆ 62.32 ಕೋಟಿ
  7. ಉತ್ತರ ಪ್ರದೇಶಕ್ಕೆ 367.17 ಕೋಟಿ

ನೆರೆ ಪರಿಹಾರ ಮಂಜೂರು ಮಾಡುವ ಕುರಿತ ಇಂದಿನ ಸಭೆಯಲ್ಲಿ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತರಾಮನ್ ಸೇರಿದಂತೆ ಹಣಕಾಸು, ಗೃಹ ಇಲಾಖೆ ಮತ್ತು ನೀತಿ ಆಯೋಗದ ಹಿರಿಯ ಅಧಿಕಾರಿಗಳು ಭಾಗವಹಿಸಿದ್ದರು.

Intro:ನೆರೆ ಪರಿಹಾರ : ರಾಜ್ಯಕ್ಕೆ ೧೮೬೯ ಕೋಟಿ ರೂ ಮಂಜೂರು ಮಾಡಿದ ಕೇಂದ್ರ ಸರಕಾರ

ಬೆಂಗಳೂರು : ನೆರೆಪೀಡಿತ ಹಾಗು ಪ್ರವಾಹ ಹಾನಿ ಪರಿಹಾರ ಕಾಮಗಾರಿಗಳಿಗಾಗಿ ಕೇಂದ್ರ ಸರಕಾರ ನೈಸರ್ಗಿಕ ಪ್ರಕೃತಿ ವಿಕೋಪ ಪರಿಹಾರ ಯೋಜನೆಯಡಿ ರಾಜ್ಯಕ್ಕೆ ೧೮೬೮ ಕೋಟಿ ರೂ ಅನುದಾನವನ್ನ ಮಂಜೂರು ಮಾಡಿದೆ.

ನವದೆಹಲಿಯಲ್ಲಿ ಇಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಅಧ್ಯಕ್ಷತೆಯಲ್ಲಿ ನಡೆದ ಎನ್ ಡಿಆರ್ ಎಫ್ ನ ಉನ್ನತ ಮಟ್ಟದ ಸಮಿತಿ ಸಭೆಯಲ್ಲಿ ದೇಶದ ೭ ರಾಜ್ಯಗಳಿಗೆ ಹೆಚ್ಚುವರಿಯಾಗಿ ೫೯೦೮ ಕೋಟಿ ಅನುದಾನ ನೀಡಲು ಅನುಮೋದನೆ ನೀಡಿದೆ.

ಮುಖ್ಯಮಂತ್ರಿ ಯಡಿಯೂರಪ್ಪನವರು ರಾಜ್ಯಕ್ಕೆ ಮೊನ್ನೆ ಪ್ರಧಾನಿ ಭೇಟಿ ನೀಡಿದಾಗ ತುಮಕೂರಿನ ಕಾರ್ಯಕ್ರಮದಲ್ಲಿ ರಾಜ್ಯಕ್ಕೆ ನೆರೆ ಪರಿಹಾರ ಯೋಜನೆಗಳಿಗೆ ೫೦ ಸಾವಿರ ಕೋಟಿ ರೂ ಅನುದಾನ ಬಿಡುಗಡೆ ಮಾಡಬೇಕೆಂದು ಬಹಿರಙಗ ವೇದಿಕೆಯಲ್ಲೇ ಪ್ರಧಾನಿ ಸಮ್ಮುಖದಲ್ಲಿ ಮನವಿ ಮಾಡಿದ್ದರು.

ಈ ಬಗ್ಗೆ ವ್ಯಾಪಕ ಚರ್ಚೆಗಳು ಸಹ ಸಾರ್ವಜನಿಕವಾಗಿ ನಡೆದಿತ್ತು. ಈಗ ಕೇಂದ್ರ ಸರಕಾರ ರಾಜ್ಯಕ್ಕೆ ೧೮೬೯ ಕೋಟಿ ಅನುದಾನ ನೀಡಲು ಒಪ್ಪಿಗೆ ಸೂಚಿಸಿದೆ.

ಈ ಹಿಂದೆ ಕೇಂದ್ರ ಸರಕಾರ ರಾಜ್ಯಕ್ಕೆ ಪ್ರವಾಹ ಪರಿಹಾರಕ್ಕೆ ೧೨೦೦ ಕೋಟಿ ರೂ ಬಿಡುಗಡೆ ಮಾಡಿತ್ತು. ಈ ಹಿಂದಿನ ಹಣ ಮತ್ತು ಇಂದು ಮಂಜೂರಾತಿ ನೀಡಿದ ಅನುದಾನ ಸೇರಿಸಿದರೆ ಕೇಂದ್ರ ಸರಕಾರ ರಾಜ್ಯಕ್ಕೆ ಒಟ್ಟು ೩೦೬೯ ಕೋಟಿ ರೂ ಅನುದಾನ ನೀಡಿದಂತಾಗಿದೆ.

ರಾಜ್ಯದಿಂದ ೩೫ ಸಾವಿರ ಕೋಟಿ ರೂ ಪರಿಹಾರಕ್ಕಾಗಿ ಕೇಂದ್ರ ಸರಕಾರಕ್ಕೆ ಮನವಿ ಸಲ್ಲಿಸಲಾಗಿತ್ತು.
.

Body: ೭ ರಾಜ್ಯಗಳಿಗೆ ಕೇಂದ್ರ ಸರಕಾರ ಬಿಡುಗಡೆ ಮಾಡಿದ ಅನುದಾನದಲ್ಲಿ ಕರ್ನಾಟಕಕ್ಕೇ ಹೆಚ್ಚು ಅನುದಾನ ನೀಡಿದೆ.

ಅಸ್ಸಾಮ್ ಗೆ ೬೧೬.೬೩ ಕೋಟಿ ರೂ.
ಹಿಮಾಚಲ ಪ್ರದೇಶಕ್ಕೆ ೨೮೪.೯೩ ಕೋಟಿ ರೂ
ಕರ್ನಾಟಕಕ್ಕೆ ೧೮೬೯ ಕೋಟಿ ರೂ
ಮಧ್ಯಪ್ರದೇಶಕ್ಕೆ ೧೭೪೯ ಕೋಟಿ ರೂ
ಮಹಾರಾಷ್ಟ್ರ ಕ್ಕೆ ೯೫೬.೯೩ ಕೋಟಿ ರೂ
ತ್ರಿಪುರಾಕ್ಕೆ ೬೩.೩೨ ಕೋಟಿ ರೂ
ಉತ್ತರ ಪ್ರದೇಶಕ್ಕೆ ೩೬೭.೧೭ ಕೋಟಿರೂ

ಅನುದಾನವನ್ನು ನೈಸರ್ಗಿಕ ವಿಕೋಫ ಪರಿಹಾರ ಯೋಜನೆಯಡಿ ಬಿಡುಗಡೆ ಮಾಡಲು ಅಮಿತ್ ಶಾ ನೇತೃತ್ವದ ಉನ್ನತಾಧಿಕಾರ ಸಮಿತಿ ನಿರ್ಣಯ ಕೈಗೊಂಡಿದೆ.

ನೆರೆ ಪರಿಹಾರ ಮಂಜೂರು ಮಾಡುವ ಇಂದಿನ ಸಭೆಯಲ್ಲಿ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತರಾಮನ್ ಸೇರಿದಂತೆ ಹಣಕಾಸು, ಗೃಹ ಇಲಾಖೆ ಮತ್ತು ನೀತಿ ಆಯೋಗದ ಹಿರಿಯ ಅಧಿಕಾರಿಗಳು ಭಾಗವಹಿಸಿದ್ದರು.

Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.