ETV Bharat / city

ದ್ವೇಷ, ಜಾತಿ-ಧರ್ಮದ ರಾಜಕಾರಣ ಬಹಳ ದಿನ ನಡೆಯಲ್ಲ: ಶೋಭಾ ಕರಂದ್ಲಾಜೆ

ಆರ್​ಎಸ್​ಎಸ್​ ಅಂದರೇನು, ಅದು ಹೇಗೆ ಕೆಲಸ ಮಾಡುತ್ತದೆ, ಅದರ ನಾಯಕರು ಹೇಗೆ ನಡೆದುಕೊಳ್ಳುತ್ತಿದ್ದಾರೆ. ಅದು ಹೇಗೆ ದೇಶ ಹಾಗೂ ಸಮಾಜ ಸೇವೆ ಮಾಡುತ್ತಿದೆ ಎಂಬುದನ್ನು ತಿಳಿದು ಮಾತನಾಡಬೇಕು ಎಂದು ಪರೋಕ್ಷವಾಗಿ ಮಾಜಿ ಉಪಮುಖ್ಯಮಂತ್ರಿ ಎಚ್​.ಡಿ.ಕುಮಾರಸ್ವಾಮಿ ಅವರನ್ನು ಶೋಭಾ ಕರಂದ್ಲಾಜೆ ಟೀಕಿಸಿದರು.

shobha karandalaje bypole reaction
ದ್ವೇಷ, ಜಾತಿ- ಧರ್ಮದ ರಾಜಕಾರಣ ನಡೆಯಲ್ಲ: ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ
author img

By

Published : Nov 2, 2021, 5:57 PM IST

ಚಿಕ್ಕಮಗಳೂರು: ದ್ವೇಷ, ಜಾತಿ-ಧರ್ಮದ ರಾಜಕಾರಣ ಬಹಳ ದಿನ ನಡೆಯಲ್ಲ ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಹೇಳಿದ್ದಾರೆ.

ಚಿಕ್ಕಮಗಳೂರಿನಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಅವರು, ಜನರು ಬುದ್ಧಿವಂತರಾಗಿದ್ದಾರೆ. ನಮ್ಮ ಮಾತು- ನಡೆಯನ್ನು ಅಳತೆ ಮಾಡುತ್ತಾರೆ. ಜೆಡಿಎಸ್ ಇನ್ನಾದರೂ ಜವಾಬ್ದಾರಿಯುತ ಪಕ್ಷವಾಗಿ ನಡೆದುಕೊಳ್ಳಲಿ. ಮತದಾರರ ಬಗ್ಗೆ ಟೇಕನ್​ ಫಾರ್​ ಗ್ರಾಂಟೆಡ್​ ಮನಸ್ಥಿತಿ ಇರಬಾರದು. ಯಾರನ್ನಾದರೂ ಟೀಕೆ ಮಾಡುವಾಗ ಹಿನ್ನೆಲೆ-ಮುನ್ನೆಲೆ ತಿಳಿದಿರಬೇಕು ಎಂದರು.

ವೋಟ್ ಬ್ಯಾಂಕ್ ರಾಜಕಾರಣ, ಜಾತಿ- ಧರ್ಮದ ಓಲೈಕೆಯ ಮಾತಿಗೆ ಜನರು ಉಪಚುನಾವಣೆಯಲ್ಲಿ ಪಾಠ ಕಲಿಸಿದ್ದಾರೆ ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಹೇಳಿದರು.

ಆರ್​ಎಸ್​ಎಸ್​ ಅಂದರೆ ಏನು, ಅದು ಹೇಗೆ ಕೆಲಸ ಮಾಡುತ್ತದೆ, ಅದರ ನಾಯಕರು ಹೇಗೆ ನಡೆದುಕೊಳ್ಳುತ್ತಿದ್ದಾರೆ. ಆರ್​ಎಸ್ಎಸ್ ಹೇಗೆ ದೇಶ ಹಾಗೂ ಸಮಾಜ ಸೇವೆಯನ್ನು ಮಾಡುತ್ತಿದೆ ಎಂಬುದನ್ನು ತಿಳಿದು ಮಾತನಾಡಬೇಕು ಎಂದು ಪರೋಕ್ಷವಾಗಿ ಮಾಜಿ ಉಪಮುಖ್ಯಮಂತ್ರಿ ಎಚ್​.ಡಿ. ಕುಮಾರಸ್ವಾಮಿ ಅವರನ್ನು ಜರಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.