ETV Bharat / city

ಕಾಂಗ್ರೆಸ್‌ನಿಂದ ಸಿಡಿ ಕೇಸ್‌ ರಿವೈಂಡ್.. ಧರಣಿ ಮುಂದುವರೆಸಿದ್ದರಿಂದ ನಾಳೆಗೆ ಕಲಾಪ ಮುಂದೂಡಿಕೆ - ವಿಧಾನಸಭೆ ಕಲಾಪ ಮುಂದೂಡಿಕೆ

ಕಾಂಗ್ರೆಸ್ ಸದಸ್ಯರು ಸಿಡಿ ಹಿಡಿದು ಘೋಷಣೆ ಕೂಗಿದರು. ಸರ್ಕಾರ ಮೊಂಡುತನಕ್ಕೆ ಬಿದ್ದಿದೆ. ಅತ್ಯಾಚಾರ ಮಾಡಿದವರನ್ನು ರಕ್ಷಣೆ ಮಾಡಲು ಹೊರಟಿದೆ. ಸಂತ್ರಸ್ತೆಗೆ ರಕ್ಷಣೆ ಕೊಡಬೇಕು. ರಮೇಶ್ ಜಾರಕಿಹೊಳಿ ವಿರುದ್ಧ ಅತ್ಯಾಚಾರ ಪ್ರಕರಣ ದಾಖಲಿಸಬೇಕು. ಆರು ಮಂತ್ರಿಗಳು ರಾಜೀನಾಮೆ ನೀಡಬೇಕು ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಆಗ್ರಹ..

cd-discussion-continued-in-vidhanasabhe
ವಿಧಾನಸಭೆ ಕಲಾಪ
author img

By

Published : Mar 23, 2021, 5:14 PM IST

Updated : Mar 23, 2021, 7:52 PM IST

ಬೆಂಗಳೂರು : ಭೋಜನ ವಿರಾಮದ ಬಳಿಕ ವಿಧಾನಸಭೆ ಕಲಾಪ ಪುನಾರಂಭಗೊಳ್ಳುತ್ತಿದ್ದಂತೆ ಕಾಂಗ್ರೆಸ್ ಸದಸ್ಯರು ಸದನದ ಬಾವಿಗಿಳಿದು ಸಿಡಿ ಪ್ರಕರಣವನ್ನೇ ಮುಂದಿಟ್ಕೊಂಡು ಧರಣಿ ಆರಂಭಿಸಿದರು.

ಇತ್ತ ಕಾಂಗ್ರೆಸ್ ಸದಸ್ಯರು ಧರಣಿ ನಡೆಸುತ್ತಿದ್ದರೆ, ಅತ್ತ ಜೆಡಿಎಸ್ ಶಾಸಕ ಹೆಚ್ ಡಿ ರೇವಣ್ಣ ಎರಡು ರಾಷ್ಟ್ರೀಯ ಪಕ್ಷಗಳು ಪ್ರತಿಭಟನೆ ಮಾಡಿದರೆ, ನಾವೇನು ಮಾಡಬೇಕು ಎಂದು ಆಕ್ರೋಶ ವ್ಯಕ್ತಪಡಿಸಿದರು. ಅನೇಕ ವಿಚಾರಗಳ ಬಗ್ಗೆ ಮಾತನಾಡುವುದಿದೆ. ಚರ್ಚೆಗೆ ನಮಗೆ ಅವಕಾಶ ನೀಡಬೇಕು ಎಂದು ಆಗ್ರಹಿಸಿದರು. ಬಳಿಕ ಜೆಡಿಎಸ್ ಸದಸ್ಯರು ಸಭಾತ್ಯಾಗ ಮಾಡಿದರು.

ಕಾಂಗ್ರೆಸ್​​ ಧರಣಿ ಮುಂದುವರೆಸಿದ್ದರಿಂದ ಕಲಾಪ ನಾಳೆಗೆ ಮುಂದೂಡಿಕೆ

ಕಾಂಗ್ರೆಸ್​​ ಸಿಡಿ ರಾಜಕಾರಣ ಮಾಡುತ್ತಿದೆ : ಧರಣಿ ಮಧ್ಯೆ ಮಾತನಾಡಿದ ಗೃಹ ಸಚಿವ ಬೊಮ್ಮಾಯಿ, ಸಿಡಿ ಸಂಬಂಧ ಎಸ್​ಐಟಿ ತನಿಖೆ ನಡೆಸುತ್ತಿದ್ದಾರೆ. ಕಾಂಗ್ರೆಸ್​ಗೆ ಸತ್ಯ ಹೊರ ಬರುವುದು ಬೇಕಿಲ್ಲ. ಕಾಂಗ್ರೆಸ್ ಸಿಡಿ ವಿಚಾರದಲ್ಲಿ ರಾಜಕಾರಣ ಮಾಡುತ್ತಿದೆ. ಇವರ ಕಾಲದಲ್ಲಿ ಆಗಿರುವುದು ಗೊತ್ತು. ಇವರು ಸತ್ಯ ಹರಿಶ್ಚಂದ್ರರು ಅಲ್ಲ ಎಂದು ವಾಗ್ದಾಳಿ ನಡೆಸಿದರು.

ಸಿದ್ದರಾಮಯ್ಯರಿಂದ ನೈತಿಕತೆ ಪಾಠ ಕಲಿಯುವ ಅಗತ್ಯ ಇಲ್ಲ : ಇದೇ ವೇಳೆ ಮೇಟಿ ಪ್ರಕರಣ ಉಲ್ಲೇಖಿಸಿದ ಬಸವರಾಜ ಬೊಮ್ಮಾಯಿ, ಮೇಟಿ ಪ್ರಕರಣದಲ್ಲಿ ತನಿಖಾ ವರದಿಯನ್ನು ಸರ್ಕಾರಕ್ಕೆ ನೀಡಬೇಕು ಎಂದಿದ್ದಾರೆ. ಆದರೆ, ನಾವು ಕೇಳಿದ್ದಕ್ಕೆ ವಿರೋಧ ಮಾಡುತ್ತಾರೆ.

ತನಿಖಾ ವರದಿ ಬರುವ ಮೊದಲೇ ಮೇಟಿಗೆ ಕ್ಲೀನ್‌ಚಿಟ್ ಕೊಟ್ಟಿದ್ದಾರೆ. ಆಗ ಸಂತ್ರಸ್ತೆಯ ವಿರುದ್ಧ ಸಿದ್ದರಾಮಯ್ಯ ನಿಂತಿದ್ದರು. ಇವರಿಂದ ನೈತಿಕತೆ ಪಾಠ ಕಲಿಯುವ ಅಗತ್ಯ ಇಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಸದನದಲ್ಲಿ ಸಿಡಿ ಹಿಡಿದು ಘೋಷಣೆ : ಇತ್ತ ಕಾಂಗ್ರೆಸ್ ಸದಸ್ಯರು ಸಿಡಿ ಹಿಡಿದು ಘೋಷಣೆ ಕೂಗಿದರು. ಸರ್ಕಾರ ಮೊಂಡುತನಕ್ಕೆ ಬಿದ್ದಿದೆ. ಅತ್ಯಾಚಾರ ಮಾಡಿದವರನ್ನು ರಕ್ಷಣೆ ಮಾಡಲು ಹೊರಟಿದೆ. ಸಂತ್ರಸ್ತೆಗೆ ರಕ್ಷಣೆ ಕೊಡಬೇಕು. ರಮೇಶ್ ಜಾರಕಿಹೊಳಿ ವಿರುದ್ಧ ಅತ್ಯಾಚಾರ ಪ್ರಕರಣ ದಾಖಲಿಸಬೇಕು. ಆರು ಮಂತ್ರಿಗಳು ರಾಜೀನಾಮೆ ನೀಡಬೇಕು ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಆಗ್ರಹಿಸಿದರು.

ನಾಳೆ ಬೆಳಗ್ಗೆ 11 ಗಂಟೆಗೆ ಸದನ ಮುಂದೂಡಿಕೆ : ಇದೇ ವೇಳೆ ಸ್ಪೀಕರ್ ಮಾತನಾಡಿ, ಇದು ಪ್ರಜಾಪ್ರಭುತ್ವದ ವ್ಯವಸ್ಥೆಗೆ ಶೋಭೆ ತರಲ್ಲ. ನಿಮಗೆ ಭಿನ್ನಾಭಿಪ್ರಾಯವಿದ್ದರೆ ಸದನದ ಹೊರಗಡೆ ಮಾಡಿ.

ಸದನದ ಕಲಾಪಕ್ಕೆ ಅಡ್ಡಿಪಡಿಸುವ ಅಧಿಕಾರ ನಿಮಗೆ ಇಲ್ಲ. ಕಲಾಪದಲ್ಲಿ ಪಾಲ್ಗೊಳ್ಳಬೇಕು ಎಂದು ಮನವಿ ಮಾಡಿದರು. ಕಾಂಗ್ರೆಸ್ ಸದಸ್ಯರು ಧರಣಿ ಮುಂದುವರಿಸಿದ ಹಿನ್ನೆಲೆ ಕಲಾಪವನ್ನು ನಾಳೆ ಬೆಳಗ್ಗೆ 11ಗಂಟೆಗೆ ಮುಂದೂಡಿದರು.

Last Updated : Mar 23, 2021, 7:52 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.