ETV Bharat / city

ಯುವತಿ ಕಡೆಯವರಿಗೆ ಹಣ ನೀಡಿದ್ರಾ ರಮೇಶ್ ಜಾರಕಿಹೊಳಿ..? ಹೈಕೋರ್ಟ್​ಗೆ ತನಿಖಾ ಪ್ರಗತಿ ವರದಿ‌ ಸಲ್ಲಿಸಲು ಎಸ್ಐಟಿ ಸಿದ್ಧತೆ - ರಮೇಶ್ ಜಾರಕಿಹೊಳಿ ಹೇಳಿಕೆ

ನನ್ನ ಮನೆಗೂ ಯುವತಿ ಆಗಮಿಸಿದ್ದರು, ನಾನಾಗಿಯೇ ಎಲ್ಲಿಯೂ ಆಕೆಯನ್ನ ಕರೆಸಿಕೊಂಡಿಲ್ಲ. ನಮ್ಮ ಭಾಗದ ಯುವತಿ ಎಂದು ಹೆಚ್ಚಾಗಿ ಮಾತನಾಡಿದ್ದೆ, ಹೊರತು ನಾನು ಎಲ್ಲಿಯೂ ಆಕೆಯನ್ನು ಬಲವಂತವಾಗಿ ಬಳಸಿಕೊಂಡಿಲ್ಲ.‌ ಕೊನೆಗೆ ಯುವತಿಯ ಒಪ್ಪಿಗೆ ನಂತರ ಲೈಂಗಿಕ ಹಂತದವರೆಗೂ ಮುಂದುವರೆಸಿದ್ದೆವು..

cd-case-ramesh-jarakiholi
ಸಿಡಿ ಪ್ರಕರಣ
author img

By

Published : May 26, 2021, 6:57 PM IST

ಬೆಂಗಳೂರು : ತೀವ್ರ ಚರ್ಚೆಗೆ ಗ್ರಾಸವಾಗಿದ್ದ ಸಿಡಿ ಪ್ರಕರಣ ಸಂಬಂಧ ಆರೋಪಿ ಸ್ಥಾನದಲ್ಲಿರುವ ಮಾಜಿ ಸಚಿವ ರಮೇಶ್ ಜಾರಕಿಹೊಳಿ ಸಿಡಿಯಲ್ಲಿರುವುದು ನಾನೇ‌‌ ಎಂದು ತನಿಖಾಧಿಕಾರಿಗಳ‌ ಮುಂದೆ ಹೇಳಿಕೆ ನೀಡಿದ್ದಾರೆ.

ಈ ಬೆಳವಣಿಗೆ ಬೆನ್ನಲೇ ಯುವತಿ ಕಡೆಯವರಿಗೆ ಆರೇಳು ಬಾರಿ ಹಣ ಕೊಟ್ಟಿರುವ ವಿಚಾರ ಬಗ್ಗೆ ಬಾಯ್ಬಿಟ್ಟಿದ್ದಾರೆ ಎಂಬ ಮಾಹಿತಿ‌ ಲಭ್ಯವಾಗಿದೆ‌.

ಓದಿ: ಮೊದಲು ನಾನವನಲ್ಲವೆಂದು ಈಗ ನಾನೇ ಎಂದರಂತೆ.. ರಮೇಶ್‌ ಜಾರಕಿಹೊಳಿ ವಿರುದ್ಧದ ಸಿಡಿ ಪ್ರಕರಣಕ್ಕೆ ಬಿಗ್‌ ಟ್ವಿಸ್ಟ್!?

ಸಮ್ಮತಿ ಮೇರೆಗೆ ಸೆಕ್ಸ್ ನಡೆದಿದೆ ಹೊರತು ಬಲವಂತದಿಂದಲ್ಲ ಎಂದು ಎಸ್ಐಟಿ ಮುಂದೆ ಹೇಳಿಕೆ ನೀಡುವ ಮೂಲಕ ಪ್ರಕರಣದ ತನಿಖೆಗೆ ತಿರುವು ನೀಡಿದ್ದ ಜಾರಕಿಹೊಳಿ, ಮೂರನೇ ವ್ಯಕ್ತಿಯಿಂದ ವಿಡಿಯೋ ಬಿಡುಗಡೆಯಾಗಿದೆ.

ವಿಡಿಯೋ ಬಹಿರಂಗವಾಗುವ ಮುನ್ನ, ನಾಲ್ಕು ತಿಂಗಳ ಹಿಂದೆ ವಿಡಿಯೋ ತೋರಿಸಿ ಹಣ ನೀಡುವಂತೆ ಯುವತಿ ಕಡೆಯವರು ತಾಕೀತು ಮಾಡಿದ್ದರು.

ಹಣ ನೀಡದಿದ್ದರೆ ಮಾಧ್ಯಮಗಳಿಗೆ ವಿಡಿಯೋ ಬಿಡುಗಡೆ ಮಾಡುವುದಾಗಿ ಬೆದರಿಸಿದ್ದರು. ಮೂರನೇ ವ್ಯಕ್ತಿಯ ಮೂಲಕ ನನ್ನ ಸಂಪರ್ಕ ಮಾಡಿ ಹಣಕ್ಕೆ ಬೇಡಿಕೆ ಇಟ್ಟಿದ್ದರು, ಹಣ ಕೊಡದೆ ಇದ್ದರೆ ವಿಡಿಯೋ ರಿಲೀಸ್ ಮಾಡುವುದಾಗಿ ಹೆದರಿಸಿದ್ದರು ಎನ್ನಲಾಗಿದೆ.

ಆಪ್ತರ ಮೂಲಕ ಒಂದಷ್ಟು ಹಣ ನೀಡಿದ್ದೆ. ಆದರೆ, ಹಣ ಕೊಟ್ಟ ಬಳಿಕ ಮತ್ತೆ ಮತ್ತೆ ಹಣ ಕೇಳಿದ್ದರು.‌ ಹೀಗಾಗಿ, ಬೇಸತ್ತು ಹಣ ನೀಡಲ್ಲವೆಂದಾಗ ವಿಡಿಯೋ ರಿಲೀಸ್ ಮಾಡಿರುವುದಾಗಿ ಹೇಳಿಕೆ ನೀಡಿದ್ದಾರೆ ಎನ್ನಲಾಗಿದೆ‌.

ಆದರೆ, ಈ ಬಗ್ಗೆ ಎಸ್ಐಟಿ ತನಿಖಾಧಿಕಾರಿಗಳು ಜಾರಕಿಹೊಳಿ ಹೇಳಿಕೆ ಬಗ್ಗೆ ಖಚಿತಪಡಿಸಿಲ್ಲ. ತನಿಖೆ ಹಂತದಲ್ಲಿ‌ ಇರುವುದರಿಂದ‌ ಈ ಬಗ್ಗೆ ಹೇಳಲು ಸಾಧ್ಯವಿಲ್ಲ ಎಂದು ಪ್ರತಿಕ್ರಿಯಿಸಿದ್ದಾರೆ.

ಸರ್ಕಾರಿ ಕೆಲಸ ಕೊಡಿಸುವ ಆಮಿಷವೊಡ್ಡಿಲ್ಲ: ಸಲುಗೆ ಬೆಳೆದಿದ್ದರಿಂದ ಆಗಾಗ ನನನ್ನು ಭೇಟಿಯಾಗುತ್ತಿದ್ದ ಯುವತಿಗೆ ಸರ್ಕಾರಿ‌ ಕೆಲಸ‌ ಕೊಡಿಸುವುದಾಗಿ ಆಮಿಷವೊಡ್ಡಿಲ್ಲ. ಐಪಿಸಿ ಸೆಕ್ಷನ್ 376ಸಿ ಪ್ರಕಾರ ತನ್ನ ಪ್ರಭಾವ ಬಳಸಿ ಸರ್ಕಾರಿ ಕೆಲಸ ಕೊಡಿಸುವ ಆಸೆ ತೋರಿಸಿ ಲೈಂಗಿಕವಾಗಿ ಬಳಸಿಕೊಂಡಿದ್ದಾರೆ ಎಂಬ ಆರೋಪಕ್ಕೆ ಪ್ರತಿಯಾಗಿ.

ಈಗ ಯುವತಿ ತನ್ನ ಜೊತೆ ಸರ್ಕಾರಿ ಕೆಲಸ ಕೊಡಿಸುವ ವಿಚಾರ ಪ್ರಸ್ತಾಪ ಮಾಡಿಲ್ಲಾ ಎಂಬ ಮಾತನ್ನು ಮಾಜಿ‌ ಸಚಿವರು ಹೇಳಿದ್ದಾರೆ. ಜೊತೆಗೆ ಯುವತಿಗೆ ನಾನು ಹಲವಾರು ಗಿಫ್ಟ್ ನೀಡಿದ್ದೇನೆ. ಅಷ್ಟೇ ಅಲ್ಲದೆ ಯುವತಿ ತನ್ನ ಕುಟುಂಬದ ಸಮಸ್ಯೆ ಬಗ್ಗೆ ಹೇಳಿಕೊಂಡಿದ್ದರು.

ಮೇ 31ರೊಳಗೆ ಹೈಕೋರ್ಟ್​ಗೆ ತನಿಖಾ ವರದಿ ಸಲ್ಲಿಸಲು ಸಿದ್ದತೆ : ಸಿಡಿ ಪ್ರಕರಣ ಸಂಬಂಧ‌ ಮೇ 31ರಂದು ಹೈಕೋರ್ಟ್‌ನಲ್ಲಿ ವಿಚಾರಣೆ ನಡೆಯಲಿದೆ. ಇನ್ನೊಂದೆಡೆ ಇದುವರೆಗೂ ತನಿಖಾ ಪ್ರಗತಿ ವರದಿ ನೀಡಲು ಎಸ್ಐಟಿ ವರದಿ ನೀಡಲು ತಯಾರಿ ನಡೆಸುತ್ತಿದೆ‌.

ಈ ವರದಿಯಲ್ಲಿ ಇದುವರೆಗಿನ ತನಿಖಾ ಪ್ರಗತಿಯ ಅಂಶಗಳು, ಯುವತಿ ಮನೆಯಲ್ಲಿ ವಶಕ್ಕೆ ಪಡೆದ ಹಣ, ಪ್ರಕರಣದ ಆರೋಪಿಗಳಾದ ನರೇಶ್ ಹಾಗೂ ಶ್ರವಣ್ ನಿವಾಸದಲ್ಲಿ ಮತ್ತು ಬ್ಯಾಂಕ್ ಅಕೌಂಟ್ ನಲ್ಲಿ ಸಿಕ್ಕಿರುವ ದಾಖಲೆ, ಯುವತಿ ಕುಟುಂಬದ ಜೊತೆ ನಡೆಸಿರುವ ಫೋನ್ ಸಂಭಾಷಣೆ ಹಾಗೂ ಯುವತಿ ಹೇಳಿಕೆ, ರಮೇಶ್ ಜಾರಕಿಹೊಳಿ ಹೇಳಿಕೆ ಹಾಗೂ ಇದುವರೆಗೆ ನಡೆಸಿರುವ ತನಿಖೆ ಅಂಶಗಳು ವರದಿಯಲ್ಲಿ ಉಲ್ಲೇಖವಾಗಿರಲಿದೆ.

ಯುವತಿಯೇ ತನ್ನನ್ನು ಮೊದಲು ಸಂಪರ್ಕ ಮಾಡಿದ್ದು.. ಜಾರಕಿಹೊಳಿ ಹೇಳಿರುವ ರಹಸ್ಯದ ಮೊದಲ ವಿಚಾರ ಅಂದರೆ ಅದು ಯುವತಿಯೇ ತನ್ನನ್ನು ಸಂಪರ್ಕ ಮಾಡಿರುವುದು. ಪ್ರಾಜೆಕ್ಟ್ ವಿಚಾರಕ್ಕೆ ಯುವತಿ ಸಂಪರ್ಕ ಮಾಡಲು ಮುಂದಾಗಿದ್ದರು. ಅದರಲ್ಲಿ ಜಲಾಶಯಗಳ ಬಗ್ಗೆ ವಿಡಿಯೋ ಮಾಡಬೇಕು.

ಅದಕ್ಕೆ ಅನುಮತಿ ನೀಡಿದರೆ ಮಾತ್ರ ನಾವು ಶೂಟ್ ಮಾಡಲು ಸಾಧ್ಯ ಎಂದು ಯುವತಿ ಕೇಳಿದ್ದಳು. ಜೊತೆಗೆ ನನ್ನ ವೈಯಕ್ತಿಕ ಮೊಬೈಲ್ ನಂಬರ್​ಗೆ ಕಾಲ್ ಮಾಡಿ ಮಾತನಾಡುತ್ತಿದ್ದರು. ಆಗ ನಾನು ನಮ್ಮೂರಿನ ಕಡೆಯವರೇ ಆಗಿದ್ದರಿಂದ ಸ್ನೇಹ ಬೆಳಸಿಕೊಂಡಿದ್ದೆ. ನಂತರ ದಿನದಲ್ಲಿ ನನ್ನ ಕಚೇರಿ ಹಾಗೂ ಗೃಹ ಕಚೇರಿಗಳಿಗೆ ಬಂದು ಭೇಟಿ ನೀಡಿದ್ದರು.

ಕೊನೆಗೆ ನನ್ನ ಮನೆಗೂ ಯುವತಿ ಆಗಮಿಸಿದ್ದರು, ನಾನಾಗಿಯೇ ಎಲ್ಲಿಯೂ ಆಕೆಯನ್ನ ಕರೆಸಿಕೊಂಡಿಲ್ಲ. ನಮ್ಮ ಭಾಗದ ಯುವತಿ ಎಂದು ಹೆಚ್ಚಾಗಿ ಮಾತನಾಡಿದ್ದೆ, ಹೊರತು ನಾನು ಎಲ್ಲಿಯೂ ಆಕೆಯನ್ನು ಬಲವಂತವಾಗಿ ಬಳಸಿಕೊಂಡಿಲ್ಲ.‌ ಕೊನೆಗೆ ಯುವತಿಯ ಒಪ್ಪಿಗೆ ನಂತರ ಲೈಂಗಿಕ ಹಂತದವರೆಗೂ ಮುಂದುವರೆಸಿದ್ದೆವು ಎಂದು ಎಸ್ಐಟಿ ಮುಂದೆ‌ ಹೇಳಿಕೆ ನೀಡಿದ್ದಾರೆ ಎನ್ನಲಾಗಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.