ETV Bharat / city

ದರೋಡೆಗೆ ಸ್ಕೆಚ್ ಹಾಕಿದ್ದ ಖದೀಮರು ಸಿಸಿಬಿ ಬಲೆಗೆ: ಮಾರಕಾಸ್ತ್ರಗಳು ವಶಕ್ಕೆ - ಬೆಂಗಳೂರಲ್ಲಿ ದರೋಡೆ

ದರೋಡೆಗೆ ಸ್ಕೆಚ್ ಹಾಕಿದ್ದ ರೌಡಿಗಳನ್ನು (Bengaluru Rowdies) ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.

ccb police
ccb police
author img

By

Published : Nov 13, 2021, 7:20 PM IST

ಬೆಂಗಳೂರು: ಸಿಸಿಬಿ ಪೊಲೀಸರ ಕಾರ್ಯಾಚರಣೆಯಿಂದ ದರೋಡೆಗೆ ಸಂಚು ಹಾಕುತ್ತಿದ್ದ ನಾಲ್ವರು ರೌಡಿಗಳನ್ನ (Bengaluru Rowdies) ಬಂಧಿಸಲಾಗಿದೆ. ಅಯ್ಯಪ್ಪ, ಅಜಯ್ ಕುಮಾರ್, ಅಕ್ಷಯ್, ನವೀನ್ ಬಂಧಿತ ಆರೋಪಿಗಳು.

ಹೆಚ್​​ಎಎಲ್ ಠಾಣಾ ವ್ಯಾಪ್ತಿಯ ಎಲ್​​ಬಿಎಸ್ ನಗರದ ಬಳಿ ಅಪರಿಚಿತರಿಗೆ ಮಾರಕಾಸ್ತ್ರಗಳನ್ನ ತೋರಿಸಿ ಬೆಲೆ ಬಾಳುವ ವಸ್ತುಗಳನ್ನು ದರೋಡೆ ಮಾಡಲು ಆರೋಪಿಗಳು ಸಂಚು ರೂಪಿಸಿದ್ದರು ಎಂದು ತಿಳಿದುಬಂದಿದೆ.

ಈ ಬಗ್ಗೆ ಖಚಿತ ಮಾಹಿತಿ ಪಡೆದ ಅಧಿಕಾರಿಗಳು, ದಾಳಿ ನಡೆಸಿ ಆರೋಪಿಗಳನ್ನ ಬಂಧಿಸಿದ್ದಾರೆ. ಸದ್ಯ ಬಂಧಿತರಿಂದ ಕೃತ್ಯಕ್ಕೆ ಉಪಯೋಗಿಸುತ್ತಿದ್ದ ಮಾರಕಾಸ್ತ್ರಗಳನ್ನ ವಶಕ್ಕೆ ಪಡೆದಿದ್ದಾರೆ.

ಈ‌ ಸಂಬಂಧ ಹೆಚ್ ಎ ಎಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆರೋಪಿಗಳು ಈ ಹಿಂದೆ‌ ಕೊಲೆ ಹಾಗೂ ಕೊಲೆಯತ್ನ ಪ್ರಕರಣಗಳಲ್ಲಿ ಭಾಗಿಯಾಗಿರುವುದರ ಬಗ್ಗೆ ವಿಚಾರಣೆಯಲ್ಲಿ ತಿಳಿದುಬಂದಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.