ಬೆಂಗಳೂರು : ಡಿ.ಜೆ ಹಳ್ಳಿ ಗಲಭೆ ಪ್ರಕರಣ ಸದ್ಯ ಒಂದೊಂದು ತಿರುವು ಪಡೆಯುತ್ತಿದೆ. ಸಿಲಿಕಾನ್ ಸಿಟಿಯಲ್ಲಿ ಅಡಗಿ ಕೂತಿದ್ದ ಆರೋಪಿಗಳನ್ನ ಪೊಲೀಸರು ಮಿಡ್ ನೈಟ್ ಕಾರ್ಯಚರಣೆ ನಡೆಸಿ ಲಾಕ್ ಮಾಡ್ತಿದ್ದಾರೆ. ಆದರೆ ಗಲಭೆ ಸೃಷ್ಟಿಸಿ ಅಂತರ್ ರಾಜ್ಯದಲ್ಲಿ ಅವಿತು ಕೂತಿದ್ದ ಕೆಲವರ ಹೆಡೆಮುರಿ ಕಟ್ಟಲು ಸಿಸಿಬಿ ಡಿಸಿಪಿ ರವಿ ಕುಮಾರ್ ತೆರಳಿದ್ದಾರೆ.
ಸಿಸಿಬಿ ಡಿಸಿಪಿ ರವಿ ಕುಮಾರ್ ಅವರು ಸದ್ಯ ಡಿಜೆ ಹಳ್ಳಿ ಪ್ರಕರಣದ ತನಿಖೆಯಲ್ಲಿ ಮುಂಚೂಣಿಯಲ್ಲಿದ್ದು, ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದ ನವೀನ್ ಹಿಡಿಯುವಲ್ಲಿ ಯಶಸ್ವಿಯಾಗಿದ್ದರು. ಸದ್ಯ ಅಂತರಾಜ್ಯದಲ್ಲಿ ಅವಿತು ಕುಳಿತಿರುವ ಆರೋಪಿಗಳ ಬಂಧನಕ್ಕೆ ಟೀಂ ಸಚ್ಚಾಗಿದೆ.
ಕೆಲ ಪ್ರಮುಖ ಆರೋಪಿಗಳು ಆಂಧ್ರ, ಕೇರಳಕ್ಕೆ ಹೋಗಿ ಅಡಗಿ ಕೂತಿದ್ದಾರೆ. ಹೀಗಾಗಿ ಎರಡು ತಂಡಗಳಾಗಿ ಆಂಧ್ರ, ಕೇರಳ ಬಾರ್ಡರ್ಗೆ ಎಂಟ್ರಿ ಕೊಟ್ಟು ಎಸ್ಕೇಪ್ ಆಗಿದ್ದವರ ಮಾಹಿತಿ ಪಡೆದು ಆರೆಸ್ಟ್ ಮಾಡಿ ನಗರಕ್ಕೆ ಕರೆತರಲಿದ್ದಾರೆ. ಇನ್ನು ಕೆಲವರು ಕಾಡಿನ ಮಧ್ಯೆ ಅಡಗಿದ್ದಾರೆ ಎಂಬ ಮಾಹಿತಿ ತನಿಖಾಧಿಕಾರಿಗಳಿಗೆ ಸಿಕ್ಕಿದೆ. ಇವರೇ ಕೃತ್ಯದ ಮಾಸ್ಟರ್ ಮೈಂಡ್ ಎನ್ನಲಾಗುತ್ತಿದೆ.
ಆರೋಪಿಗಳ ಸುಳಿವು ಹೇಗೆ..?
ಆರೋಪಿಗಳು ಗಲಭೆ ಸೃಷ್ಟಿ ಮಾಡುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿತ್ತು. ಅದಕ್ಕಾಗಿ ಅವರ ಮೊಬೈಲ್ ಲೊಕೇಷನ್ ಡಂಪ್ ಮಾಡಿದಾಗ ಟವರ್ ಲೋಕೆಷನ್ ಸಿಕ್ಕಿದೆ. ಇದರ ಅನ್ವಯ ಪ್ರಮುಖ ಆರೋಪಿಗಳನ್ನ ಸ್ಥಳೀಯ ಪೊಲೀಸರ ಸಹಾಯ ಪಡೆದು ಬಂಧಿಸಿ ಕರೆತರಲಿದ್ದೆವೆ ಎಂದು ಈಟಿವಿ ಭಾರತಕ್ಕೆ ಸಿಸಿಬಿ ಉನ್ನತ ಮೂಲಗಳಿಂದ ಮಾಹಿತಿ ಲಭ್ಯವಾಗಿದೆ.