ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಇತ್ತೀಚೆಗೆ ಉಗ್ರರನ್ನು ಸದೆ ಬಡಿದಿದ್ದ ಸಿಸಿಬಿ ಇದೀಗ ಮತ್ತೆ ಗುರಪ್ಪನ ಪಾಳ್ಯದಲ್ಲಿ ಮತ್ತೊಂದು ನಟೋರಿಯಸ್ ಟೀಂ ಬಂಧಿಸುವಲ್ಲಿ ಯಶಸ್ವಿಯಾಗಿದೆ.
ಮಹಮ್ಮದ್ ತಬ್ರೇಜ್ ಅಹ್ಮದ್, ಮಹ್ಮದ್ ಜುನೈದ್ ಹಾಗೂ ಮಹ್ಮದ್ ಅಜೀತ್, ಬ್ಲಾಕ್ ಫೈರಿಂಗ್ ಕಾಟ್ರೇಜ್ ಪಿಸ್ತೂಲ್ ಹಾಗೂ ಗುಂಡು ರಹಿತ ಬುಲೆಟ್ಗಳನ್ನ ಶೇಖರಣೆ ಮಾಡಿ ಇಟ್ಟುಕೊಂಡಿದ್ದರು. ಮೂವರು ಆರೋಪಿಗಳು ಪರವಾನಗಿ ಇಲ್ಲದೆ ಅಕ್ರಮ ಶಸ್ತ್ರಾಸ್ತ್ರಗಳು ಹಾಗು ಗುಂಡುಗಳನ್ನ ಶೇಖರಿಸಿರುವ ಮಾಹಿತಿ ಬಂದ ಹಿನ್ನಲೆ ಸಿಸಿಬಿ ಪೊಲೀಸರು ದಾಳಿ ನಡೆಸಿ, ಪಿಸ್ತೂಲ್ಗಳನ್ನ ವಶಕ್ಕೆ ಪಡೆದಿದ್ದಾರೆ.
ಇನ್ನು ಆರೋಪಿಗಳನ್ನ ವಿಚಾರಣೆ ನಡೆಸಿದಾಗ ಸಮಾಜದ ಶಾಂತಿ ಕದಡಲು ಹಾಗೂ ಜನಸಾಮಾನ್ಯರಿಗೆ ಹೆದರಿಸಲು, ದರೋಡೆ, ಕಳ್ಳತನ ಕೃತ್ಯಗಳಲ್ಲಿ ಭಾಗಿಯಾಗಲು ಗನ್ಗಳನ್ನ ಶೇಖರಣೆ ಮಾಡಿ ಇಟ್ಟಿರುವುದಾಗಿ ಆರೋಪಿಗಳು ಒಪ್ಪಿಕೊಂಡಿದ್ದಾರೆ. ಸದ್ಯಕ್ಕೆ ಆರೋಪಿಗಳು ಉಗ್ರ ಚಟುವಟಿಕೆಗಳಲ್ಲಿ ಭಾಗಿಯಾಗಿದ್ದಾರ ಅನ್ನೋ ಕುರಿತು ತನಿಖೆ ಮುಂದುವರೆದಿದೆ.