ಬೆಂಗಳೂರು: ವಿದೇಶಿ ಮಹಿಳೆಯರನ್ನಿರಿಸಿಕೊಂಡು ವೇಶ್ಯಾವಾಟಿಕೆ ದಂಧೆ ನಡೆಸುತ್ತಿದ್ದ ಮಹಿಳೆಯನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.
ರಾಮಮೂರ್ತಿ ನಗರ ಠಾಣಾ ವ್ಯಾಪ್ತಿಯ ಕಸ್ತೂರಿನಗರದ ಮನೆಯೊಂದರಲ್ಲಿ ವಾಸವಿದ್ದ ಆರೋಪಿ ಮಹಿಳೆ, ಇಬ್ಬರು ಉಗಾಂಡ ಮೂಲದ ಮಹಿಳೆಯನ್ನಿರಿಸಿಕೊಂಡು ವೆಬ್‌ಸೈಟ್‌ಗಳ ಮೂಲಕ ಗಿರಾಕಿಗಳಿಗೆ ಗಾಳ ಹಾಕುತ್ತಿದ್ದಳು.
ಮಾಹಿತಿ ಮೇರೆಗೆ ದಾಳಿ ನಡೆಸಿದ ಸಿಸಿಬಿ ಪೊಲೀಸರು ಆರೋಪಿತೆಯನ್ನು ಬಂಧಿಸಿದ್ದಾರೆ. ಅಲ್ಲದೇ, ಉಗಾಂಡ ಮೂಲದ ಮಹಿಳೆಯರನ್ನು ಮಹಿಳಾ ಸಂರಕ್ಷಣಾ ದಳದ ಪೊಲೀಸರು ರಕ್ಷಿಸಿದ್ದಾರೆ. ಮತ್ತೋರ್ವ ಆರೋಪಿ ನಾಪತ್ತೆಯಾಗಿದ್ದು, ರಾಮಮೂರ್ತಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ: ಕಲಬುರಗಿ : ಮರಕ್ಕೆ ಡಿಕ್ಕಿ ಹೊಡೆದ ಕಾರು.. ನಾಲ್ವರು ಮಹಿಳೆಯರು ಸೇರಿ ಐವರ ದುರ್ಮರಣ