ಬೆಂಗಳೂರು : ಸರಣಿ ಅಪಘಾತ ನಡೆದರೂ ಜನ ಎಚ್ಚೆತ್ತುಕೊಳ್ಳುತ್ತಿಲ್ಲ. ವೀಕೆಂಡ್ನಲ್ಲಿ ಜಾಲಿ ರೈಡ್ ನಿಂತಿಲ್ಲ. ಇತ್ತೀಚೆಗಷ್ಟೆ ಕೋರಮಂಗಲದಲ್ಲಿ ಕಾರು ಅಪಘಾತವಾಗಿ ಅದರಲ್ಲಿದ್ದವರೆಲ್ಲರೂ ಸಾವನ್ನಪ್ಪಿದ್ದರು.. ಹೀಗೆ ನೈಸ್ ರಸ್ತೆಯಲ್ಲಿ ಜಾಲಿ ರೈಡ್ ಮಾಡುವಾಗ ಕಾರೊಂದು ಪಲ್ಟಿಯಾದ ಘಟನೆ ನಡೆದಿದೆ.
ಇದನ್ನೂ ಓದಿ: ಬೆಂಗಳೂರಿನಲ್ಲಿ ಐಷಾರಾಮಿ ಆಡಿ ಕಾರು ಭೀಕರ ಅಪಘಾತ: ಶಾಸಕರ ಪುತ್ರ, ಭಾವಿ ಸೊಸೆ ಸೇರಿ 7 ಮಂದಿ ದುರ್ಮರಣ
ಕಾರು ಪಲ್ಟಿಯಾಗುತ್ತಿದ್ದಂತೆ ಕಾರಿನಲ್ಲಿದ್ದವರು ತಮ್ಮ ಪ್ರಾಣ ಉಳಿಸಿಕೊಳ್ಳಲು ಎಸ್ಕೇಪ್ ಆಗಿದ್ದಾರೆ. KA 05 M 7934 ನಂಬರ್‌ನ ನೆಕ್ಸಾನ್ ಪಲ್ಟಿಯಾದ ಕಾರು. ಪ್ರತ್ಯಕ್ಷದರ್ಶಿಗಳು ಹೇಳುವ ಪ್ರಕಾರ ಕಾರಿನಲ್ಲಿ ಇಬ್ಬರು ಯುವಕರು ಹಾಗೂ ಇಬ್ಬರು ಯುವತಿಯರು ಇದ್ದರು ಎಂದು ವಿಚಾರಣೆ ನಡೆಸಲು ಬಂದ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಈ ಘಟನೆ (ಶನಿವಾರ) ರಾತ್ರಿ ಸರಿ ಸುಮಾರು 1:30ರ ಸಮಯದಲ್ಲಿ ನಡೆದಿದೆ ಎಂದು ತಿಳಿದು ಬಂದಿದೆ.
ಪ್ರಕರಣ ಸಂಬಂಧ ಬ್ಯಾಡರಹಳ್ಳಿ ಠಾಣೆಯಲ್ಲಿ ದೂರು ದಾಖಲಾಗಿದೆ. ಪೊಲೀಸರು ಅಪಘಾತಕ್ಕೊಳಗಾದ ಕಾರು ಹೇಗೆ ಪಲ್ಟಿಯಾಯಿತು?, ಕಾರಿನಲ್ಲಿ ಯಾರಿದ್ದರು? ಎಂದು ತನಿಖೆ ನಡೆಸುತ್ತಿದ್ದಾರೆ. ಜತೆಗೆ ಸುತ್ತಮುತ್ತಲಿನ ಆಸ್ಪತ್ರೆ ಹಾಗೂ ಸಿಸಿ ಕ್ಯಾಮೆರಾಗಳ ಪರಿಶೀಲನೆ ನಡೆಸುತ್ತಿದ್ದು, ಕಾರಿನಲ್ಲಿ ಪ್ರಯಾಣಿಸುತ್ತಿದ್ದ ಸವಾರರಿಗಾಗಿ ಹುಡುಕಾಟ ನಡೆಸಿದ್ದಾರೆ.
ಇದನ್ನೂ ಓದಿ: ಕಾರು ಅಪಘಾತ ಪ್ರಕರಣಕ್ಕೆ ದಿನಕ್ಕೊಂದು ತಿರುವು: ಘಟನೆ ನಡೆದ ಎರಡು ದಿನ ಮುಂಚೆ ಪಿಜಿ ಬಳಿ ಕರುಣಾ ಸಾಗರ್