ETV Bharat / city

1500 ಸಿವಿಲ್ ಪೊಲೀಸ್ ಕಾನ್ಸ್‌ಟೇಬಲ್ ಹುದ್ದೆಗಳಿಗೆ ಅರ್ಜಿ ಆಹ್ವಾನ: ಆನ್‍ಲೈನ್​ನಲ್ಲಿ ಅರ್ಜಿ ಸಲ್ಲಿಸಲು ಅವಕಾಶ - ಕರ್ನಾಟಕ ರಾಜ್ಯ ಪೊಲೀಸ್ ವೆಬ್ ಸೈಟ್

ಮಾರ್ಚ್ 2022ರ ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆಯ ಅಧಿಕೃತ ಅಧಿಸೂಚನೆಯ ಮೂಲಕ ಸಿವಿಲ್ ಪೊಲೀಸ್ ಕಾನ್ಸ್‌ಟೇಬಲ್ ಹುದ್ದೆಗಳನ್ನು ಭರ್ತಿ ಮಾಡಲು ಕರ್ನಾಟಕ ರಾಜ್ಯ ಪೊಲೀಸ್ ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಿದೆ. ಒಟ್ಟು 1500 ಸ್ಥಾನಗಳನ್ನು ಭರ್ತಿ ಮಾಡಲಾಗುತ್ತಿದೆ.

Karnataka state police department
ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆ
author img

By

Published : Mar 15, 2022, 4:02 PM IST

ಬೆಂಗಳೂರು: ಮಾರ್ಚ್ 2022ರ ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆಯ ಅಧಿಕೃತ ಅಧಿಸೂಚನೆಯ ಮೂಲಕ ಸಿವಿಲ್ ಪೊಲೀಸ್ ಕಾನ್ಸ್‌ಟೇಬಲ್ ಹುದ್ದೆಗಳನ್ನು ಭರ್ತಿ ಮಾಡಲು ಕರ್ನಾಟಕ ರಾಜ್ಯ ಪೊಲೀಸ್ ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಿದೆ.

ಒಟ್ಟು 1500 ಸ್ಥಾನಗಳನ್ನು ಭರ್ತಿ ಮಾಡಲಿದ್ದು, ಬೆಂಗಳೂರು ನಗರ 593, ರೈಲ್ವೆ & ಬೆಂಗಳೂರು -35, ಕಲಬುರಗಿ ನಗರ- 20, ಕಲಬುರಗಿ ಜಿಲ್ಲೆ -10, ಬೀದರ್ -79, ಯಾದಗಿರಿ- 25, ಬಳ್ಳಾರಿ/ವಿಜಯನಗರ -107, ರಾಯಚೂರು- 63, ಕೊಪ್ಪಳ -38, ಮೈಸೂರು ನಗರ -25, ಮಂಗಳೂರು ನಗರ- 50, ಹುಬ್ಬಳ್ಳಿ-ಧಾರವಾಡ ನಗರ -45, ಬೆಳಗಾವಿ ನಗರ- 75, ಬೆಂಗಳೂರು ಜಿಲ್ಲೆ -60, ತುಮಕೂರು -45, ರಾಮನಗರ -30, ಮೈಸೂರು- 40, ಹಾಸನ -30, ಮಂಡ್ಯ 30, ಶಿವಮೊಗ್ಗ 25, ದಕ್ಷಿಣ ಕನ್ನಡ, ಮಂಗಳೂರು- 45, ಬೆಳಗಾವಿಗೆ -30 ಸ್ಥಾನಗಳನ್ನ ಮೀಸಲಿರಿಸಲಾಗಿದೆ.

ಅಭ್ಯರ್ಥಿ ಯು.ಜಿ.ಸಿಯಿಂದ ಮಾನ್ಯತೆ ಪಡೆದಿರುವ ಅಂಗೀಕೃತ ಯಾವುದೇ ವಿಶ್ವವಿದ್ಯಾಲಯದಲ್ಲಿ ಪದವಿ ಅಥವಾ ತತ್ಸಮಾನ ಪದವಿಯನ್ನು ಹೊಂದಿರಬೇಕು. ಕನಿಷ್ಠ 21 ವರ್ಷ ವಯೋಮಾನದವರಾಗಿರಬೇಕು. ಪ.ಜಾತಿ, ಪ.ಪಂ, ಇತರೆ ಹಿಂದುಳಿದ ವರ್ಗಗಳ ಅಭ್ಯರ್ಥಿಗಳಿಗೆ ಗರಿಷ್ಠ 28 ವರ್ಷ, ಇತರೆ ಅಭ್ಯರ್ಥಿಗಳಿಗೆ ಗರಿಷ್ಠ 26 ವರ್ಷ ವಯೋಮಾನ ಮೀರಬಾರದು. ಆಸಕ್ತರು ಏ.1ರಿಂದ 30ರವರೆಗೆ ಕರ್ನಾಟಕ ರಾಜ್ಯ ಪೊಲೀಸ್ ವೆಬ್ ಸೈಟ್ ಮೂಲಕ ಆನ್​ಲೈನ್​ನಲ್ಲಿ ಅರ್ಜಿ ಸಲ್ಲಿಸಬಹುದು. ಯಾವುದೇ ಅರ್ಜಿ ಶುಲ್ಕಗಳಿರುವುದಿಲ್ಲ.

ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆ ನೇಮಕಾತಿ ಅಧಿಸೂಚನೆ ಪ್ರಕಾರ ದೇಹದಾರ್ಢ್ಯತೆ ಪರೀಕ್ಷೆ, ಸಹಿಷ್ಣುತೆ ಪರೀಕ್ಷೆ ಮತ್ತು ದೈಹಿಕ ಸಾಮರ್ಥ್ಯ ಪರೀಕ್ಷೆ, ಲಿಖಿತ ಪರೀಕ್ಷೆ ಹಾಗೂ ವೈದ್ಯಕೀಯ ಪರೀಕ್ಷೆ ನಡೆಸಿ ಅಭ್ಯರ್ಥಿಗಳನ್ನು ಹುದ್ದೆಗಳಿಗೆ ಆಯ್ಕೆ ಮಾಡಲಾಗುವುದು. ವೇತನ 37,900 ರಿಂದ ರೂ. 70,850 ಆಗಿರಲಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.