ETV Bharat / city

ಸಾಲು ಸಾಲು ಹತ್ಯೆಗಳಾದಾಗ ಆ ರಕ್ತ ಮೈಗೆ ಅಂಟಿಸಿಕೊಂಡಿದ್ದ ಸಿದ್ದರಾಮಯ್ಯ ಸುಮ್ಮನೇ ಇದ್ದರು.. ಸಿ ಟಿ ರವಿ - c t ravi on harsha murder case

ಅಖಂಡ ಮನೆಯನ್ನು ಅವರ ಪಕ್ಷದವರೇ ಸುಟ್ಟು ಹಾಕಿದ್ದರು. ಆಗ ಯಾರ ಮೇಲೆ ಕ್ರಮ ತೆಗೆದುಕೊಂಡಿದ್ದರು. ಓರ್ವ ತುಂಡು ತುಂಡಾಗಿ ಕತ್ತರಿಸ್ತೀನಿ ಅಂದಿದ್ದ. ಇನ್ನೋರ್ವ ಪಾಕಿಸ್ತಾನದವರನ್ನು ಬಿಡುಗಡೆ ಮಾಡ್ತೀವಿ ಅಂದಿದ್ದ. ಈಗ ಹಿಜಾಬ್ ಪರವಾಗಿ ಹೇಳಿಕೆ ಕೊಡ್ತಾರೆ ಎಂದು ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದರು..

c t ravi reacts on flag issue
ಭಗವಾಧ್ವಜ, ತ್ರಿವರ್ಣ ಧ್ವಜ ಕುರಿತು ಸಿ ಟಿ ರವಿ ಹೇಳಿಕೆ
author img

By

Published : Feb 22, 2022, 1:03 PM IST

ಬೆಂಗಳೂರು : ಭಗವಾಧ್ವಜ ನಮ್ಮ ಹೃದಯದಲ್ಲಿ ಇರುತ್ತದೆ. ತ್ರಿವರ್ಣ ಧ್ವಜ ಅಲ್ಟಿಮೇಟ್ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ ತಿಳಿಸಿದರು.

ವಿಧಾನಸೌಧದಲ್ಲಿ ಮಾತನಾಡಿದ ಅವರು, ತ್ರಿವರ್ಣ ಧ್ವಜ ನಮ್ಮ ರಾಷ್ಟ್ರಧ್ವಜ. ಭಗವಾಧ್ವಜ ನಮ್ಮಗೆಲ್ಲಾ ಸ್ಫೂರ್ತಿ. ಅದು ನಮ್ಮ ಹೃದಯದಲ್ಲಿರುತ್ತದೆ ಎಂದರು.

ಕಾಂಗ್ರೆಸ್ ಹೋರಾಟ ಬೂಟಾಟಿಕೆ: ಕಾಂಗ್ರೆಸ್ ಹೋರಾಟ ಬೂಟಾಟಿಕೆ ಅಷ್ಟೇ.. ರಾಷ್ಟ್ರಧ್ವಜ ಹಿಡಿದು ಹೋದವರಿಗೆ ಗುಂಡು ಹಾರಿಸಿದವರು ಈಗ ರಾಷ್ಟ್ರಧ್ವಜದ ಬಗ್ಗೆ ಮಾತನಾಡುತ್ತಿದ್ದಾರೆ. ಅವರಿಗೆ ಯಾವ ನೈತಿಕತೆ ಇದೆ ಎಂದು ಪ್ರಶ್ನಿಸಿದರು.

ಭಗವಾಧ್ವಜ, ತ್ರಿವರ್ಣ ಧ್ವಜ ಕುರಿತು ಸಿ ಟಿ ರವಿ ಹೇಳಿಕೆ ನೀಡಿರುವುದು..

ಶಿವಮೊಗ್ಗ ಹತ್ಯೆ ಪ್ರಕರಣವನ್ನು ಗಮನಿಸಿದರೆ ಮೇಲ್ನೋಟಕ್ಕೆ ಒಂದು ಕೋಮಿನವರು ಹತ್ಯೆ ಮಾಡಿರುವುದು ಎಂದು ಕಂಡು ಬಂದಿದೆ. ಬೆಂಗಳೂರಿನಿಂದ ಕರೆಸಿಕೊಂಡು ಪ್ರೀ ಪ್ಲ್ಯಾನ್ ಆಗಿ ಹತ್ಯೆ ಮಾಡಿಸಿದ್ದಾರೆ ಎಂದು ಮೇಲ್ನೋಟಕ್ಕೆ ಕಂಡು ಬರುತ್ತಿದೆ.

ಸಿದ್ದರಾಮಯ್ಯನವರ ಸರ್ಕಾರ ಇದ್ದಾಗ ಸಾಲು ಸಾಲು ಹತ್ಯೆಗಳಾಗಿದ್ದವು. ರುದ್ರೇಶ್, ಪ್ರಶಾಂತ್ ಪೂಜಾರಿ, ಶರತ್ ಮಡಿವಾಳ ಸೇರಿದಂತೆ ಹಲವರ ಹತ್ಯೆಯಾಗಿತ್ತು. ಆ ರಕ್ತವನ್ನು ಮೈಗೆ ಅಂಟಿಸಿಕೊಂಡು ಸಿದ್ದರಾಮಯ್ಯ ಸುಮ್ಮನೆ ಇದ್ದರು. ನಾವು 24 ಗಂಟೆಗಳಲ್ಲಿ ಮೂರು ಜನರನ್ನು ಅರೆಸ್ಟ್ ಮಾಡಿದ್ದೇವೆ ಎಂದರು.

ಇದನ್ನೂ ಓದಿ: ಶಿವಮೊಗ್ಗ ನಗರಾದ್ಯಂತ ಪೊಲೀಸ್ ಬಿಗಿ ಬಂದೋಬಸ್ತ್!

ಅಖಂಡ ಮನೆಯನ್ನು ಅವರ ಪಕ್ಷದವರೇ ಸುಟ್ಟು ಹಾಕಿದ್ದರು. ಆಗ ಯಾರ ಮೇಲೆ ಕ್ರಮ ತೆಗೆದುಕೊಂಡಿದ್ದರು. ಓರ್ವ ತುಂಡು ತುಂಡಾಗಿ ಕತ್ತರಿಸ್ತೀನಿ ಅಂದಿದ್ದ. ಇನ್ನೋರ್ವ ಪಾಕಿಸ್ತಾನದವರನ್ನು ಬಿಡುಗಡೆ ಮಾಡ್ತೀವಿ ಅಂದಿದ್ದ. ಈಗ ಹಿಜಾಬ್ ಪರವಾಗಿ ಹೇಳಿಕೆ ಕೊಡ್ತಾರೆ ಎಂದು ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.