ಕೆ.ಆರ್.ಪುರ: ಸೋಮವಾರದಿಂದ ಚುನಾವಣಾ ನೀತಿ ಸಂಹಿತೆ ಜಾರಿ ಹಿನ್ನೆಲೆಯಲ್ಲಿ ಕೆ. ಆರ್. ಪುರ ಕ್ಷೇತ್ರದ ಹೊರಮಾವು ಹಾಗೂ ರಾಮಮೂರ್ತಿ ನಗರ ವ್ಯಾಪ್ತಿಯಲ್ಲಿ 119 ಕೋಟಿ ವೆಚ್ಚದ ವಿವಿಧ ಕಾಮಗಾರಿಗೆ ಅನರ್ಹ ಶಾಸಕ ಬಿ.ಎ ಬಸವರಾಜ್ ಚಾಲನೆ ನೀಡಿದರು.
ಕಳೆದ ಒಂದು ವಾರದಿಂದ ಕೆ.ಆರ್. ಪುರ ಕ್ಷೇತ್ರದಲ್ಲಿ ಸುಮಾರು 700 ಕೋಟಿ ರೂಪಾಯಿ ವೆಚ್ಚದ ವಿವಿಧ ಕಾಮಗಾರಿಗಳಿಗೆ ಗುದ್ದಲಿ ಪೂಜೆ ನೆರವೇರಿಸಿದ್ದಾರೆ. ಅಲ್ಲದೇ ಮಾರ್ಚ್ ತಿಂಗಳ ಒಳಗೆ ಪೂರ್ಣಗೊಳಿಸುವಂತೆ ಗುತ್ತಿಗೆದಾರರಿಗೆ ಸೂಚಿಸಿದ್ದಾರೆ. ಮುಂದಿನ ಮೂರು ತಿಂಗಳ ನಂತರ ಕ್ಷೇತ್ರದಲ್ಲಿ ಯಾವುದೇ ಒಂದು ಕೆಲಸ ಬಾಕಿ ಉಳಿಯಬಾರದು ಎಂದು ಅಧಿಕಾರಿಗಳಿಗೆ ತಿಳಿಸಿದರು.
ಸಮ್ಮಿಶ್ರ ಸರ್ಕಾರದಲ್ಲಿ ನಮ್ಮ ಕ್ಷೇತ್ರಕ್ಕೆ ಯಾವುದೇ ಪುಡಿಗಾಸು ಬರಲಿಲ್ಲ. ಆದರೆ, ಈಗ ಇರುವ ಸರ್ಕಾರ ನಮಗೆ ತುಂಬಾ ಹೆಚ್ಚು ಅನುದಾನವನ್ನು ನೀಡುತ್ತಿದೆ. ನನಗೆ ಕೆ ಆರ್ ಪುರ ಅಭಿವೃದ್ಧಿಯಾಗಬೇಕು ಅಷ್ಟೇ, ನನ್ನನ್ನು ಗೆಲ್ಲಿಸಿರೋ ಜನರ ಸೇವೆ ಮಾಡಲು ನಾನು ಸಿದ್ಧ ಎಂದರು.