ಬೆಂಗಳೂರು: ಕೋವಿಡ್ ಮಹಾಮಾರಿ ಹೆಸರು ಕೇಳಿದರೆ ಸಾಕು ಜಗತ್ತು ಬೆಚ್ಚಿಬೀಳುತ್ತದೆ. ಇದೀಗ ಬೆಂಗಳೂರು ಮೂಲದ ಉದ್ಯಮಿಯ ಹೆಸರು ಕೋವಿಡ್ ಕಪೂರ್ ಎಂದಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಯಲ್ಲಿದೆ.
![Businessman kovid kapoor name trending in twitter](https://etvbharatimages.akamaized.net/etvbharat/prod-images/14122980_covinda.jpg)
![Businessman kovid kapoor name trending in twitter](https://etvbharatimages.akamaized.net/etvbharat/prod-images/14122980_covindaa.jpg)
ಹಾಲಿಡಿಫೈ ಸಂಸ್ಥೆಯ ಸಂಸ್ಥಾಪಕ ಕೋವಿಡ್ ಕಪೂರ್ ತಮ್ಮ ಹೆಸರಿನ ಬಗ್ಗೆ ಸ್ಪಷ್ಟನೆ ಕೂಡ ಕೊಟ್ಟಿದ್ದಾರೆ. ನನ್ನ ಹೆಸರು ಕೋವಿಡ್ ಕಪೂರ್, ಆದರೆ ನಾನು ವೈರಸ್ ಅಲ್ಲ ಎಂದು ತಮಾಷೆಯಾಗಿ ಅವರು ಬರೆದುಕೊಂಡಿದ್ದಾರೆ.
![Businessman kovid kapoor name trending in twitter](https://etvbharatimages.akamaized.net/etvbharat/prod-images/14122980_covindaa.jpg)
ಹನುಮಾನ್ ಚಾಲೀಸ್‍ನಲ್ಲಿರುವ ಪದ:
ವಾಸ್ತವವಾಗಿ ಕೋವಿಡ್ ಎನ್ನುವುದು ಹನುಮಾನ್ ಚಾಲೀಸ್‍ನಲ್ಲಿರುವ ಪದವಾಗಿದೆ. ಕೋವಿಡ್ ಎಂದರೆ ವಿದ್ವಾಂಸ, ಎಲ್ಲವನ್ನೂ ಬಲ್ಲವನು ಎನ್ನುವ ಅರ್ಥ ನೀಡುತ್ತದೆ. ಆದರೆ ಸಾಂಕ್ರಾಮಿಕ ನಂತರ ಅರ್ಥವೇ ಬದಲಾಗಿದೆ ಎಂದು ಕೋವಿಡ್ ಕಪೂರ್ ಹೇಳುತ್ತಾರೆ.
![Businessman kovid kapoor name trending in twitter](https://etvbharatimages.akamaized.net/etvbharat/prod-images/14122980_covindaaaa.jpg)
ಇದನ್ನೂ ಓದಿ: ಅಂತಾರಾಷ್ಟ್ರೀಯ ಪ್ರಯಾಣಿಕರಿಗೆ ಹೊಸ ನಿಯಮ: 7 ದಿನ ಹೋಂ ಕ್ವಾರಂಟೈನ್ ಕಡ್ಡಾಯ