ಬೆಂಗಳೂರು: ಕಬ್ಬನ್ ಪಾರ್ಕಿನಲ್ಲಿ 7 ಅಂತಸ್ತಿನ ಕಟ್ಟಡ ನಿರ್ಮಾಣಕ್ಕೆ ಹೈಕೋರ್ಟ್ ಒಪ್ಪಿಗೆ ವಿರೋಧಿಸಿ ಪರಿಸರ ಪ್ರೇಮಿಗಳು ಪ್ರತಿಭಟನೆ ನಡೆಸಿದರು.
ಕಬ್ಬನ್ ಪಾರ್ಕಿನ ಒಳಗಡೆ ಯಾವುದೇ ಕಟ್ಟಡ ಕಟ್ಟುವಂತಿಲ್ಲ ಎಂಬ ಕಾನೂನು ಜಾರಿಯಲ್ಲಿದೆ. ಆದರೆ ಈಗ ಹೈಕೋರ್ಟ್ 7 ಅಂತಸ್ತಿನ ಕಟ್ಟಡವನ್ನು ಪಾರ್ಕ್ನಲ್ಲಿ ನಿರ್ಮಾಣ ಮಾಡುವುದಕ್ಕೆ ಒಪ್ಪಿಗೆ ಸೂಚಿಸಿದೆ. ಇದನ್ನು ವಿರೋಧಿಸಿ ಕಬ್ಬನ್ ಪಾರ್ಕ್ ನಡಿಗೆದಾರರ ಸಂಘಟನೆ ನೇತೃತ್ವದಲ್ಲಿ ನಡೆದ ಈ ಪ್ರತಿಭಟನೆಯಲ್ಲಿ ಸುಮಾರು 300ಕ್ಕೂ ಹೆಚ್ಚು ಪರಿಸರ ಪ್ರೇಮಿಗಳು ಭಾಗಿಯಾಗಿದ್ದರು. ಕಬ್ಬನ್ ಪಾರ್ಕ್ ಉದ್ಯಾನವನದ ವಾತಾವರಣವನ್ನು ಹಾಳು ಮಾಡಬೇಡಿ. ಕಟ್ಟಡ ನಿರ್ಮಾಣವನ್ನು ನಿಲ್ಲಿಸಿ, ಕಬ್ಬನ್ ಪಾರ್ಕ್ ಉಳಿಸಿ ಎಂದು ಘೋಷಣೆ ಕೂಗಿದರು.