ETV Bharat / city

ವಿಧಾನಸೌಧದ ಮೇಲೆ ಹಾರಿದ ಜೆಟ್: ಆಗಸದಲ್ಲಿ ಮೊದಲ ಬಾರಿಗೆ ಬಜೆಟ್ ಪ್ರಚಾರ! - ಸಿಎಂ ಬೊಮ್ಮಾಯಿ ಬಜೆಟ್​​

Bommai Budget-2022.. ಇದೇ ಮೊದಲ ಬಾರಿಗೆ ಈ ರೀತಿಯಾಗಿ ಬಜೆಟ್ ಪ್ರಚಾರ ನಡೆದಿದ್ದು, ಜೆಟ್ ಮೂಲಕ ವಿಧಾನಸೌಧ ರೌಂಡ್ಸ್ ಹಾಕಿ ಪ್ರಚಾರ ನಡೆಸಲಾಯಿತು.

Budget
ಬಜೆಟ್ ಪ್ರಚಾರ
author img

By

Published : Mar 4, 2022, 1:02 PM IST

Updated : Mar 4, 2022, 2:06 PM IST

ಬೆಂಗಳೂರು: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮಂಡಿಸುತ್ತಿರುವ ಬಜೆಟ್ ಪ್ರಚಾರವನ್ನು ಗಗನದಲ್ಲಿ ನಡೆಸಲಾಗಿದೆ. ಇದೇ ಮೊದಲ ಬಾರಿಗೆ ಈ ರೀತಿಯಾಗಿ ಬಜೆಟ್ ಪ್ರಚಾರ ನಡೆದಿದ್ದು, ಜೆಟ್ ಮೂಲಕ ವಿಧಾನಸೌಧ ರೌಂಡ್ಸ್ ಹಾಕಿ ಪ್ರಚಾರ ನಡೆಸಲಾಯಿತು.

ಸಿಎಂ ಬಸವರಾಜ ಬೊಮ್ಮಾಯಿ ಬಜೆಟ್ ಮಂಡನೆಗೂ ಮೊದಲು ವಿಧಾನಸೌಧವನ್ನು ಸುತ್ತಿದ ಜೆಟ್ ಗಮನ ಸೆಳೆಯಿತು. ಬಜೆಟ್-2022 ಎಂಬ ಬಾವುಟ ಆಗಸದಲ್ಲಿ ಅನಾವರಣಗೊಂಡಿತು. 'Thinking the state newer heights' ಎಂಬ ಬಾವುಟ ಹಾರಿಸಿಕೊಂಡು ಹೋದ ಲಘು ವಿಮಾನ ಬಜೆಟ್​​ನ ಪ್ರಚಾರ ನಡೆಸಿತು.

ಬೊಮ್ಮಾಯಿ ಕುಟುಂಬ ಹಾಜರ್: ಮೊದಲ ಬಾರಿಗೆ ಬಸವರಾಜ ಬೊಮ್ಮಾಯಿ ಬಜೆಟ್ ಮಂಡನೆ ಮಾಡುತ್ತಿರುವ ಹಿನ್ನೆಲೆಯಲ್ಲಿ ಇದರ ವೀಕ್ಷಣೆಗೆ ಕುಟುಂಬದ ‌ಸದಸ್ಯರು ಸಹ ಆಗಮಿಸಿದರು. ಬೊಮ್ಮಾಯಿ ಅವರ ಪತ್ನಿ, ಮಗ, ಮಗಳು ಹಾಗೂ ಸಹ ಕುಟುಂಬದ ಸದಸ್ಯರು ಆಗಮಿಸಿದರು.

ವಿಧಾನಸೌಧದ ಮೇಲೆ ಹಾರಿದ ಜೆಟ್

ಮಾಜಿ ಸಿಎಂ ಯಡಿಯೂರಪ್ಪ ಕೂಡ ತುಂಬಾ ಖುಷಿಯಿಂದ ವಿಧಾನಸೌಧಕ್ಕೆ ಬಂದರು. ತಮ್ಮ ಎಂದಿನ ಶೈಲಿಯಲ್ಲಿ ವಿಕ್ಟರಿ ಸಿಂಬಲ್ ತೋರಿ ನಗೆ ಬೀರಿದರು. ನಗುಮುಖದಲ್ಲೇ ವಿಧಾನಸೌಧದ ಒಳಗಡೆ ಬಿಎಸ್​​​ವೈ ತೆರಳಿದರು.

ಸಿಎಂ ಆಗಮನ: ಬಜೆಟ್ ಸೂಟ್ ಕೇಸ್ ಹಿಡಿದು ವಿಧಾನಸೌಧಕ್ಕೆ ಬಂದ ಸಿಎಂ ಬೊಮ್ಮಾಯಿ ಅವರನ್ನು ತಮ್ಮ ಕ್ಯಾಬಿನೆಟ್ ಸಹೋದ್ಯೋಗಿಗಳು ಬರಮಾಡಿಕೊಂಡರು. ಸೂಟ್ ಕೇಸ್ ತೋರಿಸಿ ಸಿಎಂ ಮತ್ತು ಸಚಿವರು ವಿಧಾನ ಸೌಧ ಪ್ರವೇಶಿಸಿದರು.

Last Updated : Mar 4, 2022, 2:06 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.