ETV Bharat / city

ಬಜೆಟ್​ಗೆ ಸಿದ್ಧತೆ: ಆರ್ಥಿಕ‌ ಸಂಕಷ್ಟದ ಮಧ್ಯೆ ಸಂಪನ್ಮೂಲ ಕ್ರೋಢೀಕರಣಕ್ಕೆ ಹರಸಾಹಸ!

ಸಿಎಂ ಯಡಿಯೂರಪ್ಪ ಈಗಾಗಲೇ ಬಜೆಟ್ ಮಂಡನೆಗೆ ತಯಾರಿ ಪ್ರಾರಂಭಿಸಿದ್ದಾರೆ. ಆದರೆ, ಇತ್ತ ಸೊರಗಿದ ತೆರಿಗೆ ಸಂಗ್ರಹ, ಆರ್ಥಿಕ ಬಿಕ್ಕಟ್ಟಿನಿಂದ ಆರ್ಥಿಕ ಇಲಾಖೆ ಅಧಿಕಾರಿಗಳು ಸಂಪನ್ಮೂಲ ಕ್ರೋಢೀಕರಣದ ಸವಾಲು ಎದುರಿಸುತ್ತಿದ್ದಾರೆ.

b s yadiyurappa
ಬಿ ಎಸ್ ಯಡಿಯೂರಪ್ಪ
author img

By

Published : Dec 15, 2019, 5:10 PM IST

ಬೆಂಗಳೂರು: ಸಿಎಂ ಯಡಿಯೂರಪ್ಪ ಪೂರ್ಣ ಪ್ರಮಾಣದ ಬಜೆಟ್ ಮಂಡನೆಗೆ ಈಗಾಗಲೇ ಪೂರ್ವ ಸಿದ್ಧತಾ ಕಾರ್ಯ ಶುರು ಮಾಡಿದ್ದಾರೆ‌. ಮುಂದಿನ ವರ್ಷ ಫೆಬ್ರವರಿ ಮಧ್ಯದಲ್ಲಿ ಬಜೆಟ್ ಮಂಡಿಸುವ ಸಾಧ್ಯತೆ ಇದೆ.

ಈ ನಿಟ್ಟಿನಲ್ಲಿ ಆರ್ಥಿಕ ಇಲಾಖೆ ಅಧಿಕಾರಿಗಳು ಸಂಪನ್ಮೂಲ ಕ್ರೋಢೀಕರಣದ ಲೆಕ್ಕಾಚಾರದಲ್ಲಿ ತೊಡಗಿದ್ದಾರೆ. ಸಿಎಂ ಈ ಸಂಬಂಧ ಅಧಿಕಾರಿಗಳ ಜೊತೆ ಸಭೆಯನ್ನೂ ನಡೆಸಿದ್ದಾರೆ. ಇತ್ತ ಎಲ್ಲ ಇಲಾಖೆ ಅಧಿಕಾರಿಗಳು ಖರ್ಚು, ವೆಚ್ಚ, ಹೊಸ ಯೋಜನೆ, ಅನುದಾನ ಅಗತ್ಯತೆಯ ಪಟ್ಟಿ ಸಿದ್ಧಪಡಿಸುತ್ತಿದೆ. ಆದರೆ, ಈ ಬಾರಿ ಬಿಜೆಪಿ ಸರ್ಕಾರಕ್ಕೆ ಆರ್ಥಿಕ ಸಂಕಷ್ಟ, ಭೀಕರ ಪ್ರವಾಹ ಪರಿಹಾರ, ನಿರೀಕ್ಷಿತ ಮಟ್ಟ ತಲುಪುದ ತೆರಿಗೆ ಸಂಗ್ರಹ, ದೊಡ್ಡ ತಲೆನೋವಾಗಿ ಪರಿಣಮಿಸಿದೆ. ಬಜೆಟ್​ಗೆ ಹಣ ಹೊಂದಿಸಲು ಆರ್ಥಿಕ ಇಲಾಖೆ ಅಧಿಕಾರಿಗಳು ಹರಸಾಹಸ ಪಡುತ್ತಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ‌.

budget-preparation
ಪೂರ್ಣ ಪ್ರಮಾಣದ ಬಜೆಟ್​ ಮಂಡನೆಗೆ ಸಿದ್ಧತೆ

ಜಿಎಸ್​ಟಿ ಪರಿಹಾರ ವಿಳಂಬದ ಕಂಟಕ:

ಇತ್ತ ರಾಜ್ಯ ಸರ್ಕಾರ ಜಿಎಸ್​ಟಿ ತೆರಿಗೆ ಸಂಗ್ರಹದಲ್ಲಿ ಉತ್ತಮ ಪ್ರಗತಿ ಕಾಣುತ್ತಿದೆ. ಆದರೆ, ಕೇಂದ್ರ ಸರ್ಕಾರ ರಾಜ್ಯಕ್ಕೆ ನೀಡಬೇಕಾದ ಜಿಎಸ್​ಟಿ ಪರಿಹಾರ ಮೊತ್ತ ಬಾಕಿ ಉಳಿಸಿಕೊಂಡಿರುವುದು ಆರ್ಥಿಕ ಇಲಾಖೆಗೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ.

ಆಗಸ್ಟ್ ಹಾಗೂ ಸೆಪ್ಟೆಂಬರ್ ತಿಂಗಳ ಸುಮಾರು 2,800 ಕೋಟಿ ರೂ. ಜಿಎಸ್​ಟಿ ಪರಿಹಾರ ಮೊತ್ತವನ್ನು ಇನ್ನೂ ಕೇಂದ್ರ ಸರ್ಕಾರ ಪಾವತಿಸಿಲ್ಲ. ಜಿಎಸ್​ಟಿ ಪ್ರಾರಂಭವಾದ ಬಳಿಕ ಇದೇ ಮೊದಲ ಬಾರಿಗೆ ಕೇಂದ್ರ ಸರ್ಕಾರ ಜಿಎಸ್​ಟಿ ಪರಿಹಾರ ಮೊತ್ತ ಬಿಡುಗಡೆ ವಿಳಂಬ ಮಾಡಿದೆ. ಇನ್ನು ಅಕ್ಟೋಬರ್ ಹಾಗೂ ನವಂಬರ್ ತಿಂಗಳ ಜಿಎಸ್​ಟಿ ಪರಿಹಾರ ಮೊತ್ತ ಪಾವತಿಯೂ ವಿಳಂಬವಾಗಿದೆ. ಇದರಿಂದ ನಾಲ್ಕು ತಿಂಗಳಲ್ಲಿ ಸುಮಾರು 7,000 ಕೋಟಿ ರೂ. ಆದಾಯ ಕೊರತೆಯಾಗಿದೆ‌. ಇದರಿಂದ ಆರ್ಥಿಕ ಇಲಾಖೆಗೆ ಬಜೆಟ್​ಗಾಗಿ ಸಂಪನ್ಮೂಲ ಕ್ರೋಢೀಕರಣಕ್ಕೆ ದೊಡ್ಡ ಸವಾಲಾಗಿ ಪರಿಣಮಿಸಿದೆ.

budget-preparation-economic-affairs-offficers-struglling-to-mobilization-of-resources
ಪೂರ್ಣ ಪ್ರಮಾಣದ ಬಜೆಟ್​ ಮಂಡನೆಗೆ ಸಿದ್ಧತೆ

ಜಿಎಸ್​ಟಿ ಪರಿಹಾರ ಬಿಡುಗಡೆ ಮಾಡಲು ಮನವಿ:

ಈಗಾಗಲೇ ಸಿಎಂ ಕೇಂದ್ರಕ್ಕೆ ಪತ್ರ ಬರೆದು ಆದಷ್ಟು ಬೇಗ ಜಿಎಸ್​ಟಿ ಪರಿಹಾರ ಬಿಡುಗಡೆ ಮಾಡುವಂತೆ ಮನವಿ ಮಾಡಿದ್ದಾರೆ. ಇತ್ತ ನಿನ್ನೆ ಪ್ರಧಾನಿ ಮೋದಿ ಅವರು ಸಿಎಂ ಯಡಿಯೂರಪ್ಪಗೆ ಕರೆ ಮಾಡಿ, ಉಪಸಮರದ ಗೆಲುವಿನ ಬಗ್ಗೆ ಅಭಿನಂದನೆ ಸಲ್ಲಿಸಿದ ವೇಳೆಯೂ ಸಿಎಂ ಜಿಎಸ್​ಟಿ ಪರಿಹಾರ ಮೊತ್ತ ಬೇಗ ಬಿಡುಗಡೆಗೊಳಿಸುವಂತೆ ಮನವಿ ಮಾಡಿದ್ದಾರೆ. ಇದಕ್ಕೆ ಪ್ರಧಾನಿ ಸಕಾರಾತ್ಮಕವಾಗಿ ಪ್ರತಿಕ್ರಿಯಿಸಿದ್ದಾರೆ ಎನ್ನಲಾಗಿದೆ.

budget-preparation
ಬಜೆಟ್​ಗೆ ಸಿದ್ಧತೆ

ಹೇಗಿದೆ ತೆರಿಗೆ ಸಂಗ್ರಹ?:

ಈ ಬಾರಿಯೂ ಮೋಟಾರು ವಾಹನ ತೆರಿಗೆ ಹಾಗೂ ಮುದ್ರಾಂಕ ಮತ್ತು ನೋಂದಣಿ ತೆರಿಗೆ ಸಂಗ್ರಹದಲ್ಲಿ ಹಿನ್ನಡೆಯಾಗಿದೆ. ನವಂಬರ್​ವರೆಗೆ 47,692 ಕೋಟಿ ರೂ‌. ತೆರಿಗೆ ಸಂಗ್ರಹಿಸಲಾಗಿದೆ‌. ಹಣಕಾಸು ವರ್ಷ 2020 ಮಾರ್ಚ್ ಅಂತ್ಯಕ್ಕೆ ಒಟ್ಟು 76,046 ಕೋಟಿ ರೂ. ಆದಾಯ ಸಂಗ್ರಹದ ಗುರಿ ಹೊಂದಲಾಗಿದೆ. ಒಟ್ಟಾರೆ ಬೆಳವಣಿಗೆ ದರ ಶೇ. 10.3 ರಷ್ಟಿದ್ದು, ವಾರ್ಷಿಕ ಗುರಿಯು ಶೇ. 56.3 ರಷ್ಟು ತೆರಿಗೆ ಸಂಗ್ರಹವಾಗಿದೆ. ಇದರಲ್ಲಿ ಜಿಎಸ್​​ಟಿ. 33,060 ಕೋಟಿ ರೂ. ಗಳಷ್ಟಿದ್ದು, ಜಿಎಸ್‍ಟಿ ಬೆಳವಣಿಗೆ ದರ ಶೇ. 12.2 ರಷ್ಟಿದೆ. ಆದರೆ ಆರ್ಥಿಕ ಸಂಕಷ್ಟದ ಹಿನ್ನೆಲೆ ತೆರಿಗೆ ಸಂಗ್ರಹ ನಿರೀಕ್ಷಿತ ಗುರಿ ಮುಟ್ಟುವುದು ಅನುಮಾನ ಎಂಬುದು ಅಧಿಕಾರಿಗಳ ಆತಂಕ.

Intro:Body:KN_BNG_01_BUDGETPREPARATION_FUNDCRUNCH_SCRIPT_7201951

ಬಜೆಟ್ ಪೂರ್ವ ಸಿದ್ಧತೆ: ಆರ್ಥಿಕ‌ ಸಂಕಷ್ಟದ ಮಧ್ಯೆ ಸಂಪನ್ಮೂಲ ಕ್ರೋಢೀಕರಣಕ್ಕಾಗಿ ಅಧಿಕಾರಿಗಳ ಹರಸಾಹಸ!

ಬೆಂಗಳೂರು: ಸಿಎಂ ಯಡಿಯೂರಪ್ಪ ಈಗಾಗಲೇ ಬಜೆಟ್ ಮಂಡನೆಗೆ ತಯಾರಿ ಪ್ರಾರಂಭಿಸಿದ್ದಾರೆ. ಆದರೆ, ಇತ್ತ ಸೊರಗಿದ ತೆರಿಗೆ ಸಂಗ್ರಹ, ಆರ್ಥಿಕ ಬಿಕ್ಕಟ್ಟಿನಿಂದ ಆರ್ಥಿಕ ಇಲಾಖೆ ಅಧಿಕಾರಿಗಳು ಸಂಪನ್ಮೂಲ ಕ್ರೋಢೀಕರಣದ ಸವಾಲು ಎದುರಿಸುತ್ತಿದ್ದಾರೆ.

ಸಿಎಂ ಯಡಿಯೂರಪ್ಪ ಪೂರ್ಣ ಪ್ರಮಾಣದ ಬಜೆಟ್ ಮಂಡನೆಗೆ ಈಗಾಗಲೇ ಪೂರ್ವ ಸಿದ್ಧತಾ ಕಾರ್ಯ ಶುರು ಪ್ರಾರಂಭಿಸಿದ್ದಾರೆ‌. ಮುಂದಿನ ವರ್ಷ ಫೆಬ್ರವರಿ ಮಧ್ಯದಲ್ಲಿ ಬಜೆಟ್ ಮಂಡಿಸುವ ಸಾಧ್ಯತೆ ಇದೆ. ಈ ನಿಟ್ಟಿನಲ್ಲಿ ಆರ್ಥಿಕ ಇಲಾಖೆ ಅಧಿಕಾರಿಗಳು ಸಂಪನ್ಮೂಲ ಕ್ರೋಢೀಕರಣದ ಲೆಕ್ಕಾಚಾರದಲ್ಲಿ ತೊಡಗಿದ್ದಾರೆ. ಸಿಎಂ ಈ ಸಂಬಂಧ ಅಧಿಕಾರಿಗಳ ಜೊತೆ ಸಭೆಯನ್ನೂ ನಡೆಸಿದ್ದಾರೆ. ಇತ್ತ ಎಲ್ಲ ಇಲಾಖೆ ಅಧಿಕಾರಿಗಳೂ ಖರ್ಚು,ವೆಚ್ಚ, ಹೊಸ ಯೋಜನೆ, ಅನುದಾನ ಅಗತ್ಯತೆಯ ಪಟ್ಟಿ ಸಿದ್ಧ ಪಡಿಸುತ್ತಿದೆ. ಆದರೆ, ಈ ಬಾರಿ ಬಿಜೆಪಿ ಸರ್ಕಾರಕ್ಕೆ ಆರ್ಥಿಕ ಸಂಕಷ್ಟ, ಭೀಕರ ಪ್ರವಾಹ ಪರಿಹಾರ, ನಿರೀಕ್ಷಿತ ಮಟ್ಟ ತಲುಪುದ ತೆರಿಗೆ ಸಂಗ್ರಹ ದೊಡ್ಡ ತಲೆ ನೋವಾಗಿ ಪರಿಣಮಿಸಿದೆ. ಬಜೆಟ್ ಗೆ ಹಣ ಹೊಂದಿಸಲು ಆರ್ಥಿಕ ಇಲಾಖೆ ಅಧಿಕಾರಿಗಳು ಹರ ಸಾಹಸ ಪಡುತ್ತಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ‌.

ಜಿಎಸ್ ಟಿ ಪರಿಹಾರ ವಿಳಂಬದ ಕಂಟಕ:

ಇತ್ತ ರಾಜ್ಯ ಸರ್ಕಾರ ಜಿಎಸ್ ಟಿ ತೆರಿಗೆ ಸಂಗ್ರಹದಲ್ಲಿ ಉತ್ತಮ ಪ್ರಗತಿ ಕಾಣುತ್ತಿದೆ. ಆದರೆ, ಕೇಂದ್ರ ಸರ್ಕಾರ ರಾಜ್ಯಕ್ಕೆ ನೀಡಬೇಕಾದ ಜಿಎಸ್ ಟಿ ಪರಿಹಾರ ಮೊತ್ತ ಬಾಕಿ ಉಳಿಸಿಕೊಂಡಿರುವುದು ಆರ್ಥಿಕ ಇಲಾಖೆಗೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ.

ಆಗಸ್ಟ್ ಹಾಗು ಸೆಪ್ಟೆಂಬರ್ ತಿಂಗಳ ಸುಮಾರು 2,800 ಕೋಟಿ ರೂ. ಜಿಎಸ್ ಟಿ ಪರಿಹಾರ ಮೊತ್ತವನ್ನು ಇನ್ನೂ ಕೇಂದ್ರ ಸರ್ಕಾರ ಪಾವತಿಸಿಲ್ಲ. ಜಿಎಸ್ ಟಿ ಪ್ರಾರಂಭವಾದ ಬಳಿಕ ಇದೇ ಮೊದಲ ಬಾರಿಗೆ ಕೇಂದ್ರ ಸರ್ಕಾರ ಜಿಎಸ್ ಟಿ ಪರಿಹಾರ ಮೊತ್ತ ವಿಳಂಬ ಮಾಡಿದೆ. ಇನ್ನು ಅಕ್ಟೋಬರ್ ಹಾಗೂ ನವಂಬರ್ ತಿಂಗಳ ಜಿಎಸ್ ಟಿ ಪರಿಹಾರ ಮೊತ್ತ ಪಾವತಿಯೂ ವಿಳಂಬವಾಗಿದೆ. ಇದರಿಂದ ನಾಲ್ಕು ತಿಂಗಳಲ್ಲಿ ಸುಮಾರು 7,000 ಕೋಟಿ ರೂ. ಆದಾಯ ಕೊರತೆಯಗಿದೆ‌. ಇದು ಆರ್ಥಿಕ ಇಲಾಖೆಗೆ ಬಜೆಟ್ ಗಾಗಿ ಸಂಪನ್ಮೂಲ ಕ್ರೋಢೀಕರಣ ದೊಡ್ಡ ಸವಾಲಾಗಿ ಪರಿಣಮಿಸಿದೆ.

ಜಿಎಸ್ ಟಿ ಪರಿಹಾರ ಬಿಡುಗಡೆ ಮಾಡಲು ಮನವಿ:

ಈಗಾಗಲೇ ಸಿಎಂ ಕೇಂದ್ರಕ್ಕೆ ಪತ್ರ ಬರೆದು ಆದಷ್ಟು ಬೇಗ ಜಿಎಸ್ ಟಿ ಪರಿಹಾರ ಬಿಡುಗಡೆ ಮಾಡುವಂತೆ ಮನವಿ ಮಾಡಿದ್ದಾರೆ.

ಇತ್ತ ನಿನ್ನೆ ಪ್ರಧಾನಿ ಮೋದಿ ಅವರು ಸಿಎಂ ಯಡಿಯೂರಪ್ಪಗೆ ಕರೆ ಮಾಡಿ, ಉಪಸಮರದ ಗೆಲುವಿನ ಬಗ್ಗೆ ಅಭಿನಂದನೆ ಸಲ್ಲಿಸಿದ ವೇಳೆಯೂ ಸಿಎಂ ಜಿಎಸ್ ಟಿ ಪರಿಹಾರ ಮೊತ್ತ ಬೇಗ ಬಿಡುಗಡೆಗೊಳಿಸುವಂತೆ ಮನವಿ ಮಾಡಿದ್ದಾರೆ. ಇದಕ್ಕೆ ಪ್ರಧಾನಿ ಸಕಾರಾತ್ಮಕವಾಗಿ ಪ್ರತಿಕ್ರಿಯಿಸಿದ್ದಾರೆ ಎನ್ನಲಾಗಿದೆ.

ಹೇಗಿದೆ ತೆರಿಗೆ ಸಂಗ್ರಹ?:

ಈ ಬಾರಿ ಮೋಟಾರು ವಾಹನ ತೆರಿಗೆ ಹಾಗೂ ಮುದ್ರಾಂಕ ಮತ್ತು ನೋಂದಣಿ ತೆರಿಗೆ ಸಂಗ್ರಹದಲ್ಲಿ ಹಿನ್ನಡೆಯಾಗಿದೆ. ನವಂಬರ್ ವರೆಗೆ 47,692 ಕೋಟಿ ರು‌. ತೆರಿಗೆ ಸಂಗ್ರಹಿಸಲಾಗಿದೆ‌.

ಹಣಕಾಸು ವರ್ಷ 2020 ಮಾರ್ಚ್ ಅಂತ್ಯಕ್ಕೆ ಒಟ್ಟು 76,046 ಕೋಟಿ ರೂ. ಆದಾಯ ಸಂಗ್ರಹದ ಗುರಿ ಹೊಂದಲಾಗಿದೆ. ಒಟ್ಟಾರೆ ಬೆಳವಣಿಗೆ ದರ ಶೇ. 10.3 ರಷ್ಟಿದ್ದು, ವಾರ್ಷಿಕ ಗುರಿಯ ಶೇ. 56.3 ರಷ್ಟು ತೆರಿಗೆ ಸಂಗ್ರಹವಾಗಿದೆ. ಇದರಲ್ಲಿ ಜಿ.ಎಸ್.ಟಿ. 33,060 ಕೋಟಿ ರೂ. ಗಳಷ್ಟಿದ್ದು, ಜಿಎಸ್‍ಟಿ ಬೆಳವಣಿಗೆ ದರ ಶೇ. 12.2 ರಷ್ಟಿದೆ. ಆದರೆ ಆರ್ಥಿಕ ಸಂಕಷ್ಟದ ಹಿನ್ನೆಲೆ ತೆರಿಗೆ ಸಂಗ್ರಹ ನಿರೀಕ್ಷಿತ ಗುರಿ ಮುಟ್ಟುವುದು ಅನುಮಾನ ಎಂಬುದು ಅಧಿಕಾರಿಗಳ ಆತಂಕ.Conclusion:

For All Latest Updates

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.