ETV Bharat / city

High command ಸದ್ಯಕ್ಕೆ ನಾಯಕತ್ವ ಬದಲಾವಣೆ ಬಗ್ಗೆ ಸೂಚಿಸಿಲ್ಲ: 26ಕ್ಕೆ ಶಾಸಕಾಂಗ ಪಕ್ಷದ ಸಭೆ ಎಂದ ಸಿಎಂ - cm bsy in bengaluru

ಸಾಕಷ್ಟು ನಾಯಕರು ಬಿಜೆಪಿಯಲ್ಲಿದ್ದು, ಹೈಕಮಾಂಡ್​ ಸದ್ಯಕ್ಕೆ ನಾಯಕತ್ವ ಬದಲಾವಣೆ ಬಗ್ಗೆ ಸೂಚಿಸಿಲ್ಲ. ಜುಲೈ 26ಕ್ಕೆ ಶಾಸಕಾಂಗ ಪಕ್ಷದ ಸಭೆ ಕರೆಯಲಾಗಿದೆ ಎಂದು ಸಿಎಂ ಬಿಎಸ್​ವೈ ಸ್ಪಷ್ಟನೆ ನೀಡಿದ್ದಾರೆ.

bsy statement in bengaluru on recent politics
ಹೈಕಮಾಂಡ್​ ಸದ್ಯಕ್ಕೆ ನಾಯಕತ್ವ ಬದಲಾವಣೆ ಬಗ್ಗೆ ಸೂಚಿಸಿಲ್ಲ: ಸಿಎಂ
author img

By

Published : Jul 17, 2021, 6:11 PM IST

Updated : Jul 17, 2021, 7:17 PM IST

ಬೆಂಗಳೂರು: ಜುಲೈ 26ಕ್ಕೆ ಸರ್ಕಾರ ಎರಡು ವರ್ಷ ಪೂರೈಸಲಿದ್ದು, ಈ ಹಿನ್ನೆಲೆಯಲ್ಲಿ ಶಾಸಕಾಂಗ ಸಭೆ ಕರೆಯಲಾಗುತ್ತದೆ. ನಾಯಕತ್ವ ಬದಲಾವಣೆಯಲ್ಲಿ ಯಾವುದೇ ಗೊಂದಲ ಇಲ್ಲ ಎಂದು ಸಿಎಂ ಬಿಎಸ್​ವೈ ಸ್ಪಷ್ಟನೆ ನೀಡಿದ್ದಾರೆ.

ನವದೆಹಲಿಯಿಂದ ಬೆಂಗಳೂರಿಗೆ ಆಗಮಿಸಿರುವ ಸಿಎಂ ಬಿಎಸ್​ವೈ ಕಾವೇರಿ ನಿವಾಸದ ಬಳಿ ಮಾಧ್ಯಮಗಳೊಂದಿಗೆ ಮಾತನಾಡಿ, ಮುಂದಿನ ಎರಡು ವರ್ಷವೂ ನಾನೇ ಸಿಎಂ ಆಗಿ ಮುಂದುವರಿಯುತ್ತೇನೆ. ದೆಹಲಿಯಲ್ಲಿ ಪರ್ಯಾಯ ನಾಯಕತ್ವ ಬದಲಾವಣೆ ಬಗ್ಗೆ ಚರ್ಚೆ ನಡೆದಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.

ಬಿಜೆಪಿಯಲ್ಲಿ ನಾಯಕತ್ವ ಕುರಿತು ಕೊರತೆ ಇಲ್ಲ. ಸಾಕಷ್ಟು ನಾಯಕರು ಬಿಜೆಪಿಯಲ್ಲಿದ್ದು, ಹೈಕಮಾಂಡ್​ ಸದ್ಯಕ್ಕೆ ನಾಯಕತ್ವ ಬದಲಾವಣೆ ಬಗ್ಗೆ ಸೂಚಿಸಿಲ್ಲ. ಜುಲೈ 26ಕ್ಕೆ ಶಾಸಕಾಂಗ ಪಕ್ಷದ ಸಭೆ ಕರೆಯಲಾಗಿದೆ ಎಂದಿದ್ದಾರೆ.

ತಮ್ಮ ವಿರುದ್ಧ ಕೆಲವರು ಹೈಕಮಾಂಡ್​ಗೆ ದೂರು ಸಲ್ಲಿಸಿದ್ದ ವಿಚಾರಕ್ಕೆ ಮಾತನಾಡಿದ ಸಿಎಂ ಕೆಲವು ವಿಚಾರಗಳನ್ನು ಸರಿಪಡಿಸಿಕೊಳ್ಳುತ್ತೇವೆ ಎಂದು ಸ್ಪಷ್ಟನೆ ನೀಡಿದ್ದಾರೆ.

ಇದನ್ನೂ ಓದಿ: ಈಗಲೂ ಒನ್‌ ಅಂಡ್‌ ಒನ್ಲಿ ಯಡಿಯೂರಪ್ಪ.. ದಿಲ್ಲಿಯೊಳಗೆ 'ಬಾಹುಬಲಿ'ಯಂತಾದ ಬಿಎಸ್‌ವೈ.. ಆದರೂ ನಿಲ್ಲದ 'ಭಿನ್ನ'ರಾಗ!

Last Updated : Jul 17, 2021, 7:17 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.