ETV Bharat / city

ದಾವೋಸ್​ನಲ್ಲಿ ಯಡಿಯೂರಪ್ಪ ಏನೇನ್‌ ಮಾಡಿದರು.. ಅವರೇ ಹೇಳ್ತಾರೆ ಕೇಳಿ..

ಉದ್ಯಮಿಗಳಿಗೆ ವ್ಯವಹಾರ ಮಾಡಲು ಅನುಕೂಲವಾಗುವಂತೆ ಮತ್ತು ಔದ್ಯೋಗಿಕ ನೀತಿಯಲ್ಲಿ ಸಮಗ್ರ ಬದಲಾವಣೆ ತರುವಂತಹ ನೀತಿ ನಿರೂಪಿಸಲು ಚಿಂತನೆ ಮಾಡುತ್ತಿದ್ದೇವೆ. ಮುಂದಿನ ಮೂರು ವರ್ಷದಲ್ಲಿ ರಾಜ್ಯವು ಔದ್ಯೋಗಿಕ ಬೆಳವಣಿಗೆಯಲ್ಲಿ ದೇಶದಲ್ಲಿಯೇ ಅಗ್ರ ಸ್ಥಾನದಲ್ಲಿರುವಂತೆ ಮಾಡುತ್ತೇನೆ. ರಾಜ್ಯ ಔದ್ಯೋಗಿಕವಾಗಿ ಬೆಳೆದು ಸಾವಿರಾರು ಯುವಕರಿಗೆ ಉದ್ಯೋಗ ನೀಡವುದರ ಜೊತೆಗೆ ಔದ್ಯೋಗಿಕರಣ ಮುಖಾಂತರ ರೈತರಿಗೆ ಕೂಡ ಲಾಭವಾಗಬೇಕೆಂಬುದು ನಮ್ಮ ಉದ್ದೇಶ ಎಂದರು.

BS Yediyurappa news conference in benglore
ಬಿ.ಎಸ್ ಯಡಿಯೂರಪ್ಪ ಸುದ್ದಿಗೋಷ್ಠಿ
author img

By

Published : Jan 25, 2020, 1:47 PM IST

ಬೆಂಗಳೂರು: ದಾವೋಸ್ ಪ್ರವಾಸ ಫಲಪ್ರದವಾಗಿದೆ. ಕೈಗಾರಿಕೋದ್ಯಮಿಗಳ ಬೇಡಿಕೆಯಂತೆ ಕೈಗಾರಿಕಾ ಸ್ಥಾಪನೆ ಉದ್ದೇಶಕ್ಕೆ ಅನುಗುಣವಾಗಿ ಭೂಮಿ ಖರೀದಿ ಹಾಗು ಭೂ ಪರಿವರ್ತನೆ ನಿಯಮದಲ್ಲಿ‌ ಸರಳೀಕರಣ ಮಾಡಲಾಗುತ್ತದೆ. ಸೆಕ್ಷನ್ 109 ಬದಲಿಸಿ, ಮುಂದಿನ ಅಧಿವೇಶನದಲ್ಲಿಯೇ ಕಾನೂನಾತ್ಮಕ ಬದಲಾವಣೆ ಮಾಡಿ, ಹೂಡಿಕೆದಾರರಿಗೆ ಪೂರಕ ವಾತಾವರಣ ಸೃಷ್ಟಿಸಲಾಗುತ್ತದೆ ಎಂದು ಮುಖ್ಯಮಂತ್ರಿ ಯಡಿಯೂರಪ್ಪ ತಿಳಿಸಿದ್ದಾರೆ.

ಗೃಹ ಕಚೇರಿ ಕೃಷ್ಣಾದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಸಿಎಂ, ನವೆಂಬರ್‌ನಲ್ಲಿ ನಡೆಯುವ ಜಾಗತಿಕ ಹೂಡಿಕೆದಾರರ ಸಮ್ಮೇಳನದಲ್ಲಿ ಬಂಡವಾಳ ಹರಿದು ಬರುವ ಕನಸು ನನಸಾಗುವುದರಲ್ಲಿ ಯಾವುದೇ ಸಂದೇಹವಿಲ್ಲ. ಜಗತ್ತಿನಲ್ಲಿ ಮೊದಲ ಬಾರಿಗೆ ಸೆಂಟರ್ ಫಾರ್ ಇಂಟರ್​ನೆಟ್ ಆಫ್ ಎಥಿಕಲ್ ಥಿಂಗ್ಸ್ ಒಪ್ಪಂದಕ್ಕೆ ಅನೌಪಚಾರಿಕವಾಗಿ ಸಹಿ ಮಾಡಲಾಗಿದೆ. ಈ ಅನೌಪಚಾರಿಕ ಒಪ್ಪಂದದ ಬಗ್ಗೆ ವಿಶ್ವ ಆರ್ಥಿಕ ವೇದಿಕೆ ವ್ಯವಸ್ಥಾಪಕ ನಿರ್ದೇಶಕ ಮುರತ್ ಸೋನಮೇಜು ಅವರೇ ಸಹಿ ಮಾಡಿ, ನಮ್ಮ ಈ ಒಡಂಬಡಿಕೆಗೆ ಮೆಚ್ಚುಗೆ ಸೂಚಿಸಿ, ಯಾರು ಮಾಡದ ಕೆಲಸ ನೀವು ಮಾಡಿದ್ದೀರಿ, ಇದು ಕರ್ನಾಟಕಕ್ಕೆ ಬಂಡವಾಳ ಹೂಡಿಕೆಗೆ ದೊಡ್ಡ ಲಾಭ ತಂದು ಕೊಡುತ್ತದೆ ಎಂದು ಹೇಳಿದರು.

ಮುಖ್ಯಮಂತ್ರಿ ಬಿ ಎಸ್‌ ಯಡಿಯೂರಪ್ಪ.. ದಾವೋಸ್‌ ಪ್ರವಾಸದ ಕುರಿತಂತೆ ಮಾಹಿತಿ!

ನೋವಾ ನೊಸ್ಟೆಕ್ ರಾಜ್ಯದ ಮಧುಮೇಹಿ ರೋಗಿಗಳ ಆರೋಗ್ಯ ಸುಧಾರಿಸುವ ನಿಟ್ಟಿನಲ್ಲಿ ಕಾರ್ಯಕ್ರಮ ರೂಪಿಸಿ, ನಿರ್ವಹಿಸಲು ಒಪ್ಪಿದ್ದಾರೆ. ಇದು ರಾಜ್ಯದ ಸಾವಿರಾರು ಮಧುಮೇಹಿಗಳ ರೋಗ ನಿರ್ವಹಣೆ ಜೊತೆಗೆ ಕಡಿಮೆ ದರದಲ್ಲಿ ಔಷಧಿ ವಿತರಿಸುವಲ್ಲಿ ಸಹಾಯವಾಗಲಿದೆ. ನಾನು ಮತ್ತು ಕೈಗಾರಿಕಾ ಮಂತ್ರಿ ಜಗದೀಶ್ ಶೆಟ್ಟರ್ ಮತ್ತು ನಮ್ಮ ಅಧಿಕಾರಿಗಳು ರಾಜ್ಯದಲ್ಲಿ ಇರುವ ಔದ್ಯೋಗಿಕ ಸ್ನೇಹಿ ವಾತಾವರಣ ಬಗ್ಗೆ ಉದ್ಯಮಿಗಳಿಗೆ ಮತ್ತು ಹೂಡಿಕೆದಾರರಿಗೆ ತಿಳಿಸಿ ಹೇಳಿದ್ದೇವೆ. ಜಗತ್ತಿನ ದೊಡ್ಡ ಉದ್ಯಮಿಗಳಾದ ಲಕ್ಷ್ಮಿ ಮಿತ್ತಲ್, ಅರವಿಂದ್ ಕಿರ್ಲೋಸ್ಕರ್, ಮಹೇಂದ್ರ, ಜನರಲ್ ಎಲೆಕ್ಟ್ರಿಕಲ್ಸ್, ಡಸೋ ಸಿಸ್ಟಮ್ ಲಾಕೀಡ್ ಮಾರ್ಟಿನ್, ಲೋಲು ಗ್ರೂಪ್, ಟೊಮೆಕ್, ನೆಸ್ಥೆ, ದಾಲಿಯಾ, ನೋವು ನಾಸಿಕ್ ಮತ್ತು ಪೋಲೋ ಅಂತಹ ದೊಡ್ಡ ಕಂಪನಿಗಳ ಮುಖ್ಯಸ್ಥರನ್ನು ಭೇಟಿಯಾಗಿ ಚರ್ಚಿಸಿದ್ದೇವೆ. ಸಕಾರಾತ್ಮಕವಾಗಿ ಅವರೆಲ್ಲ ಸ್ಪಂದಿಸಿದ್ದಾರೆ ಎಂದರು.

ಕರ್ನಾಟಕದಲ್ಲಿ ಕೈಗಾರಿಕಾ ಅಭಿವೃದ್ಧಿಗೆ ಇರುವ ಅವಕಾಶಗಳ ಕುರಿತು ಮನವರಿಕೆ ಮಾಡಿಕೊಟ್ಟಿದ್ದೇನೆ. ರಾಜ್ಯದಲ್ಲಿ ಹೆಚ್ಚು ಉದ್ಯೋಗ ಸೃಷ್ಟಿ ಮಾಡುವ ಮೂಲಕ ಆರ್ಥಿಕ ಬೆಳವಣಿಗೆಗೆ ನಮ್ಮ ಸರ್ಕಾರ ಬದ್ಧ ಎಂಬುದನ್ನು ಒತ್ತಿ ಹೇಳಿದ್ದೇನೆ. ಈಸ್ ಆಫ್ ಡೂಯಿಂಗ್ ಬ್ಯುಸಿನೆಸ್‌ ಸುಧಾರಣೆಗೆ ಕರ್ನಾಟಕ ಸರ್ಕಾರ ಕೈಗೊಂಡ ಕ್ರಮಗಳ ಕುರಿತು ವಿವರಿಸಿದ್ದೇನೆ. ಕೈಗಾರಿಕಾ ಸಚಿವ ಜಗದೀಶ್ ಶೆಟ್ಟರ್ ಅವರು, ಯುನೈಟೆಡ್ ಅರಬ್ ಎಮಿರೇಟ್ಸ್‌ನ ಪ್ರಧಾನಿ ಹಾಗೂ ಎಮಿರೇಟ್ಸ್ ಆಫ್ ದುಬೈನ ದೊರೆ ಶೇಕ್ ಮಹಮ್ಮದ್ ಬಿನ್ ರಶಿದ್ ಅಲ್ ಮಕ್ರೋಮ್ ಅವರನ್ನು ಭೇಟಿಯಾಗಿ ರಾಜ್ಯದ ಏಕರೂಪದ ಬೆಳವಣಿಗೆಗೆ ಸಹಕಾರ ಕೋರಿದರು. ಇದರ ಜೊತೆಗೆ ನಾವು ಉದ್ಯಮಿಗಳ ಅಹವಾಲುಗಳನ್ನು ಕೇಳುವುದರಲ್ಲಿ ಹಿಂಜರಿಯಲಿಲ್ಲ ಎಂದರು.

ಬಹಳಷ್ಟು ಉದ್ಯಮಿಗಳ ಒಂದು ಸಾಮಾನ್ಯ ಅಹವಾಲು ಎಂದರೆ ಭೂಮಿ ಖರೀದಿ ಬಗ್ಗೆ ಇರುವ ಅಡಚಣೆಗಳು. ಈ ನಿಟ್ಟಿನಲ್ಲಿ ಕಾನೂನು ಬದಲಾವಣೆ ತರುವುದು. ಉದಾಹರಣೆಗೆ 109 ಭೂ ಖರೀದಿ ಕಾಯ್ದೆಯಿಂದ ಉದ್ಯಮಿಗಳಿಗೆ ಭೂಮಿ ಖರೀದಿಯಲ್ಲಿ ವಿಳಂಬವಾಗುತ್ತಿದೆ. ಅದನ್ನು ಬದಲಾವಣೆ ಮಾಡಲು ನಿರ್ಧರಿಸಿದ್ದೇವೆ. ಯಾವುದನ್ನು ಆಡಳಿತಾತ್ಮಕವಾಗಿ ಮಾಡಬೇಕೋ, ಅದರಲ್ಲಿ ಕಾನೂನಾತ್ಮಕ ಬದಲಾವಣೆಗಳನ್ನು ಮುಂದಿನ ಅಧಿವೇಶನದಲ್ಲಿ ತರುತ್ತೇವೆ. ಉದ್ಯಮಿಗಳಿಗೆ ವ್ಯವಹಾರ ಮಾಡಲು ಅನುಕೂಲವಾಗುವಂತೆ ಮತ್ತು ಔದ್ಯೋಗಿಕ ನೀತಿಯಲ್ಲಿ ಸಮಗ್ರ ಬದಲಾವಣೆ ತರುವಂತಹ ನೀತಿ ನಿರೂಪಿಸಲು ಚಿಂತನೆ ಮಾಡುತ್ತಿದ್ದೇವೆ. ಮುಂದಿನ ಮೂರು ವರ್ಷದಲ್ಲಿ ರಾಜ್ಯವು ಔದ್ಯೋಗಿಕ ಬೆಳವಣಿಗೆಯಲ್ಲಿ ದೇಶದಲ್ಲಿಯೇ ಅಗ್ರ ಸ್ಥಾನದಲ್ಲಿರುವಂತೆ ಮಾಡುತ್ತೇನೆ. ರಾಜ್ಯ ಔದ್ಯೋಗಿಕವಾಗಿ ಬೆಳೆದು ಸಾವಿರಾರು ಯುವಕರಿಗೆ ಉದ್ಯೋಗ ನೀಡವುದರ ಜೊತೆಗೆ ಔದ್ಯೋಗಿಕರಣ ಮುಖಾಂತರ ರೈತರಿಗೆ ಕೂಡ ಲಾಭವಾಗಬೇಕೆಂಬುದು ನಮ್ಮ ಉದ್ದೇಶ ಎಂದರು.

ನವೆಂಬರ್‌ನಲ್ಲಿ ನಡೆಯುವ ಬಂಡವಾಳ ಹೂಡಿಕೆದಾರರ ಸಮಾವೇಶಕ್ಕೆ ಉದ್ಯಮಿಗಳನ್ನು ಆಹ್ವಾನಿಸಲು ವಿಶ್ವ ಆರ್ಥಿಕ ವೇದಿಕೆ ನಮಗೆ ಸಹಕಾರಿಯಾಯಿತು. ಮತ್ತು ಪಿಯೂಷ್ ಗೋಯಲ್ ಅವರು ಕೂಡ ಇದರಲ್ಲಿ ಭಾಗವಹಿಸಿ, ಉದ್ಯಮಿಗಳಿಗೆ ಬಂಡವಾಳ ನೀಡಲು ಭಾರತ ಅದರಲ್ಲೂ ಕರ್ನಾಟಕ ವಿಫುಲ ಅವಕಾಶಗಳನ್ನು ಹೊಂದಿದೆ ಎಂದು ಮನವರಿಕೆ ಮಾಡಿದರು. ಅವರ ಸಹಕಾರಕ್ಕೆ ನನ್ನ ಧನ್ಯವಾದಗಳು. ನಾನು ಈ ಸಮಯದಲ್ಲಿ ವಿಶ್ವ ಆರ್ಥಿಕ ವೇದಿಕೆ ನಮ್ಮನ್ನು ಆಹ್ವಾನಿಸಿ, ಭಾಗವಹಿಸಲು ಅವಕಾಶ ಕೊಟ್ಟಿದ್ದಕ್ಕೆ ರಾಜ್ಯದ ಜನತೆಯ ಪರವಾಗಿ ಅಭಿನಂದಿಸುತ್ತೇನೆ ಎಂದರು.

Intro:

ಬೆಂಗಳೂರು: ದಾವೋಸ್ ಪ್ರವಾಸ ಫಲಪ್ರದವಾಗಿದ್ದು ಕೈಗಾರಿಕೋದ್ಯಮಿಗಳ ಬೇಡಿಕೆಯಂತೆ ಕೈಗಾರಿಕಾ ಸ್ಥಾಪನೆ ಉದ್ದೇಶಕ್ಕೆ ಭೂಮಿ ಖರೀದಿ ಹಾಗು ಭೂ ಪರಿವರ್ತನೆ ನಿಯಮದಲ್ಲಿ‌ ಸರಳೀಕರಣ ಮಾಡಲಾಗುತ್ತದೆ, ಸೆಕ್ಷನ್ 109 ಅನ್ನು ಬದಲಿಸಿ ಮುಂದಿನ ಅಧಿವೇಶನದಲ್ಲಿಯೇ ಕಾನೂನಾತ್ಮಕ ಬದವಾಲಣೆ ಮಾಡಿ ಹೂಡಿಕೆದಸರರಿಗೆ ಪೂರಕ ವಾತಾವರಣ ಸೃಷ್ಟಿಸಲಾಗುತ್ತದೆ ಎಂದು ಮುಖ್ಯಮಂತ್ರಿ ಬಿ.ಎಸ್. ಪ್ರಕಟಿಸಿದ್ದಾರೆ.

ಗೃಹ. ಕಚೇರಿ ಕೃಷ್ಣಾದಲ್ಲಿ ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಸಿಎಂ, ಮೊದಲಿಗೆ ಸಾವಿರಾರು ಕೋಟಿ ಹಣ ಮುಂದಿನ
ದಿನಗಳಲ್ಲಿ ಹರಿದು ಬರಲಿದೆ ಮತ್ತು ನವೆಂಬರ್‌ನಲ್ಲಿ ನಡೆಯುವ ಜಾಗತಿಕ ಹೂಡಿಕೆದಾರರ ಸಮ್ಮೇಳನದಲ್ಲಿ ಬಂಡವಾಳ ಹರಿದು ಬರುವ ಕನಸು ನನಸಾಗುವುದರಲ್ಲಿ ಯಾವುದೇ ಸಂದೇಹವಿಲ್ಲ.ಈ ಡಬ್ಲೂ.ಇ.ಎಫ್. ಇತಿಹಾಸದಲ್ಲಿ ಭಾಗವಹಿಸಿ ರಾಜ್ಯ ಇತಿಹಾಸ ನಿರ್ಮಿಸಿದೆ. ಜಗತ್ತಿನಲ್ಲಿ ಯಾವುದೇ ದೇಶ ಅಥವಾ ರಾಜ್ಯ ಮಾಡಿದ ಒಪ್ಪಂದಕ್ಕೆ ಸಹಿ ಹಾಕಲಾಗಿದೆ. ಜಗತ್ತಿನಲ್ಲ ಮೊದಲ ಬಾರಿಗೆ ಸೆಂಟರ್ ಫಾರ್ ಇಂಟರ್ ನೆಟ್ ಆಫ್ ಎಥಿಕಲ್ ಥಿಂಗ್ಸ್ ಒಪ್ಪಂದಕ್ಕೆ ಅನೌಪಚಾರಿಕ ವಾಗಿ ಸಹಿ ಮಾಡಲಾಗಿದೆ.ಈ ಅನೌಪಚಾರಿಕ ಒಪ್ಪಂದದ ಬಗ್ಗೆ ಡಬ್ಯೂ.ಇ.ಎಫ್. ವ್ಯವಸ್ಥಾಪಕ ನಿರ್ದೇಶಕ ಮುರತ್ ಸೋನಮೇಜು ಅವರೆ ಸಹಿ ಮಾಡಿ ನಮ್ಮ ಈ ಒಡಂಬಡಿಕೆಗೆ ಮೆಚ್ಚುಗೆ ಸೂಚಿಸಿ, "ಯಾರು ಮಾಡದ ಕೆಲಸವನ್ನು ನೀವು ಮಾಡಿದ್ದೀರಿ ಇದು ಕರ್ನಾಟಕಕ್ಕೆ ಬಂಡವಾಳ ಹೂಡಿಕೆಗೆ ದೊಡ್ಡ ಲಾಭ ತಂದು ಕೊಡುತ್ತದೆ.ನಿಮ್ಮ ಈ ಗೆಸ್ಟರ್ ರಾಜ್ಯದ ಔದ್ಯೋಗಿಕ ಬೆಳವಣಿಗೆಯಲ್ಲಿ ದೊಡ್ಡ ಬದಲಾವಣೆ ತರಲಿದೆ ಎಂದು ಹೇಳಿದರು.

ಮೊದಲನೆ ದಿನವೇ ಇದು ಡಬ್ಲೂ.ಇ.ಎಫ್.ನಲ್ಲಿ ರಾಜ್ಯದ ದೊಡ್ಡ ಸಾಧನೆ ಯಾಗಿದೆ. ನಮ್ಮ ಊಹೆಗೂ ಮೀರಿ ಇದನ್ನು ಬಂಡವಾಳ ಹೂಡಿಕೆದಾರರು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ಅದರಲ್ಲೂ ಇಂದಿನ ದಿನಗಳಲ್ಲಿ ಐಟಿ, ಬಿಟಿ ವಲಯದ ಉನ್ನತವಾಗಿ ಬೆಳೆಯುತ್ತಿದ್ದು ಈ ನಮ್ಮ ಒಡಂಬಡಿಕೆ ದೊಡ್ಡ ಸಾಧನೆ ಮಾಡಲಿದೆ.ಈ ಕೇಂದ್ರವು ಕೃತಕ ಬುದ್ಧಿಮತ್ತೆಯ ದುರುಪಯೋಗ ತಡೆಯುವ ನಿಟ್ಟಿನಲ್ಲಿ
ಒಂದು ಪ್ರಮುಖ ಹೆಜ್ಜೆಯಾಗಲಿದೆ ಎಂದರು.

ಇದಲ್ಲದೆ ಬಹರೇನ್ ನ ಎಕನಾಮಿಕ್ ಡೆವಲಪ್ಮೆಂಟ್
ಬೋರ್ಡ್‌ನೊಂದಿಗೆ ಫಿನ್ ಟೆಕ್, ಕೃತಕ ಬುದ್ಧಿಮತ್ತೆ ಮತ್ತು ಸೈಬರ್‌ಸೆಕ್ಯುರಿಟಿ ವಿಷಯಗಳಲ್ಲಿ ಸಹಯೋಗ ಮತ್ತು ಸಹಕಾರ ನೀಡುವ ಕುರಿತು ಒಪ್ಪಂದಕ್ಕೆ ಸಹಿ ಮಾಡಲಾಗಿದೆ ಎಂದರು.

ಇನ್ನೂ ಉದ್ಯಮಿಗಳ ವಿಚಾರದಲ್ಲಿ ಹೇಳಬೇಕಾದರೆ, ಸುಮಾರು 40ಕ್ಕೂ ಹೆಚ್ಚು ಉದ್ಯಮಿಗಳ ಮತ್ತು ಹೂಡಿಕೆದಾರರ ಜೊತೆ, ಜಗತ್ತಿನ ದೊಡ್ಡ‌ ಉದ್ಯಮಿಗಳಾದ ಲಕ್ಷ್ಮೀ ಮಿತ್ತಲ್, ಅರವಿಂದ್ ಕಿರ್ಲೋಸ್ಕರ್, ಮಹೇಂದ್ರ,2000 ವ್ಯಾಟ್, ಜನರಲ್ ಎಲೆಕ್ಟ್ರಿಕಲ್ಸ್, ಡಸೋ ಸಿಸ್ಟಮ್ ಲಾಕೀಡ್ ಮಾರ್ಟಿನ್, ಲೋಲು ಗೂಪ್, ಟೊಮೆಕ್, ನೆಸ್ಥೆ, ದಾಲಿಯಾ, ಪ್ರೊಕ್ಟರ್‌
ಗ್ರಾಂಬೆಲ್, ನೋವು ನಾಸಿಕ್ ಮತ್ತು ಪೋಲೋ ಅಂತ ದೊಡ್ಡ
ಕಂಪನಿಗಳ ಮುಖ್ಯಸ್ಥರು ಭೇಟಿಯಾಗಿ ಚರ್ಚಿಸಿ, ಸಕಾರತ್ಮಕವಾಗಿ ಸ್ಪಂದಿಸಿದ್ದಾರೆ ಎಂದರು.

ನೋವೋ ನೊಸ್ಟೆಕ್ ರಾಜ್ಯದ ಮಧುಮೇಹಿ ರೋಗಿಗಳ ಆರೋಗ್ಯ ಸುಧಾರಿಸುವ ನಿಟ್ಟಿನಲ್ಲಿ ಕಾರ್ಯಕ್ರಮ ರೂಪಿಸಿ ನಿರ್ವಹಿಸಲು ಒಪ್ಪಿದ್ದಾರೆ. ಇದು ರಾಜ್ಯದ ಸಾವಿರಾರು ಮಧುಮೇಹಿಗಳಿಗೆ ರೋಗ ನಿರ್ವಹಣೆ ಜೊತೆಗೆ ಕಡಿಮೆ ದರದಲ್ಲಿ ಔಷಧಿ ವಿತರಿಸುವಲ್ಲಿ ಸಹಾಯವಾಗಲಿದೆ.ನಾನು ಮತ್ತು ಕೈಗಾರಿಕಾ ಮಂತ್ರಿ ಜಗದೀಶ್ ಶೆಟ್ಟರ್ ಮತ್ತು ನಮ್ಮ
ಅಧಿಕಾರಿಗಳು ರಾಜ್ಯದಲ್ಲಿ ಇರುವ ಔದ್ಯೋಗಿಕ ಸ್ನೇಹಿ ವಾತಾವರಣ ಬಗ್ಗೆ.ಉದ್ಯಮಿಗಳಿಗೆ ಮತ್ತು ಹೂಡಿಕೆದಾರರಿಗೆ ತಿಳಿಸಿ ಹೇಳಿದ್ದೇವೆ ಎಂದರು.

ಕರ್ನಾಟಕದಲ್ಲಿ ಕೈಗಾರಿಕಾ ಅಭಿವೃದ್ಧಿಗೆ ಇರುವ ಅವಕಾಶಗಳು ಕುರಿತು ಮನವರಿಕೆ ಮಾಡಿಕೊಟ್ಟಿದ್ದೇನೆ. ರಾಜ್ಯದಲ್ಲಿ ಹೆಚ್ಚು ಉದ್ಯೋಗ ಸೃಷ್ಟಿ ಮಾಡುವ ಮೂಲಕ ಆರ್ಥಿಕ ಬೆಳವಣಿಗೆಗೆ ನಮ್ಮ ಸರ್ಕಾರ ಬದ್ಧವಾಗಿದೆ ಎಂಬುದನ್ನು ಒತ್ತಿ ಹೇಳಿದ್ದೇನೆ.
ಮ ಈಸ್ ಆಫ್ ಡೂಯಿಂಗ್ ಬಿಸಿನೆಸ್‌ ಸುಧಾರಣೆಗೆ ಕರ್ನಾಟಕ ಸರ್ಕಾರ. ಕೈಗೊಂಡಿರುವ ಕ್ರಮಗಳ ಕುರಿತು ವಿವರಿಸಿದ್ದಾನೆ. ಈ ಕೈಗಾರಿಕಾ ಸಚಿವ ಜಗದೀಶ್ ಶೆಟ್ಟರ್ ಅವರು ಯುನೈಟೆಡ್ ಅರಬ್ ಎಮಿರೇಟ್ಸ್‌ನ ಪ್ರಧಾನ ಮಂತ್ರಿ ಹಾಗೂ ಎಮಿರೇಟ್ಸ್ ಆಫ್ ದುಬೈನ ದೊರೆ
ಶೇಕ್ ಮಹಮ್ಮದ್ ಬಿನ್ ರಶಿದ್ ಅಲ್ ಮಕ್ರೋಮ್ ಅವರನ್ನು
ಭೇಟಿಯಾಗಿ ರಾಜ್ಯದ ಏಕರೂಪದ ಬೆಳವಣಿಗೆಗೆ ಸಹಕಾರಿ ಕೋರಿದರು. ಇದರ ಜೊತೆಗೆ ನಾವು ಉದ್ಯಮಿಗಳ ಅಹವಾಲುಗಳನ್ನು ಕೇಳುವುದರಲ್ಲಿ ಹಿಂಜರಿಯಲಿಲ್ಲ ಎಂದರು.

ಬಹಳಷ್ಟು ಉದ್ಯಮಿಗಳ ಒಂದು ಸಾಮಾನ್ಯ ಅಹವಾಲು ಎಂದರೆ ಭೂಮಿ ಖರೀದಿ ಬಗ್ಗೆ ಇರುವ ಅಡಚಣೆಗಳು. ನಾವು ಕೂಡ ಅವರಿಗೆ ಈ ನಿಟ್ಟಿನಲ್ಲಿ ಕಾನೂನು ಬದಲಾವಣೆ ತರುವುದಕ್ಕೆ ಸಹಮತ ವ್ಯಕ್ತಪಡಿಸಿದ ದೇವಿ. ನಮ್ಮ ಪ್ರಕಾರ ಅವರ ಅಹವಾಲಿನಲ್ಲಿ ಸತ್ಯ ಇದೆ. ಉದಾಹರಣೆ 109 ಭೂ
ಖರೀದಿ ಕಾಯಿದೆ ಉದ್ಯಮಿಗಳಿಗೆ ಭೂಮಿ ಖರೀದಿಯಲ್ಲಿ
ವಿಳಂಬವಾಗುತ್ತಿದೆ. ಅದನ್ನು ಬದಲಾವಣೆ ಮಾಡಲು ನಿರ್ಧರಿಸಿದ್ದೇವೆ. ಯಾವುದನ್ನು ಆಡಳಿತಾತ್ಮಕವಾಗಿ ಮಾಡಬೇಕೋ ಅದು ಆದಷ್ಟು ಬೇಗ ಕಾನೂನಾತ್ಮಕ ಬದಲಾವಣೆಗಳನ್ನು ಮುಂದಿನ
ಅಧಿವೇಶನದಲ್ಲಿ ತರುತ್ತೇವೆ.ಉದ್ಯಮಿಗಳಿಗೆ ವ್ಯವಹಾರ ಮಾಡಲು ಅನುಕೂಲವಾಗುವಂತೆ ಮತ್ತು
ಔದ್ಯೋಗಿಕ ನೀತಿಯಲ್ಲಿ ಸಮಗ್ರ ಬದಲಾವಣೆ ತರುವಂತಹ ನೀತಿ ನಿರೂಪಿಸಲು ಚಿಂತನೆ ಮಾಡುತ್ತಿದ್ದೇವೆ ಮತ್ತು ತರುತ್ತೇವೆ,
ಮುಂದಿನ ಮೂರು ವರ್ಷದಲ್ಲಿ ರಾಜ್ಯವು ಔದ್ಯೋಗಿಕ ಬೆಳವಣಿಗೆಯಲ್ಲಿ ದೇಶದಲ್ಲಿಯೇ ಅಗ್ರ ಸ್ಥಾನದಲ್ಲಿರುವಂತೆ ಮಾಡುತ್ತೇನೆ. ರಾಜ್ಯ ಔದ್ಯೋಗಿಕ ವಾಗಿ ಬೆಳದು ಸಾವಿರಾರು ಯುವಕರಿಗೆ ಉದ್ಯೋಗ ನೀಡವುದರ ಜೊತೆಗೆ ಔದ್ಯೋಗಿಕರಣ ಮುಖಾಂತರ ರೈತರಿಗೆ ಕೂಡ ಲಾಭವಾಗಬೇಕೆಂಬುದು ನಮ್ಮ ಉದ್ದೇಶ ಎಂದರು.

ಉದಾಹರಣೆಗೆ ಲೂಲೂ ಕಂಪನಿ 2000 ಕೋಟಿ ಬಂಡವಾಳ ಹೂಡಿಕೆಗೆ ಒಪ್ಪಿದೆ. ಇದರಿಂದ ತರಕಾರಿ, ಹಣ್ಣು, ಹೂ ಮತ್ತು ಇತರೆ ಬೆಳೆಗಳು ನಗರಗಳಿಗೆ ಸಾಗಾಣಿಕೆ ಮಾಡಲು ನೆಟ್ ವರ್ಕ್ (ಜಾಲ) ನಿರ್ಮಾಣ ಮಾಡುತ್ತದೆ. ಇದರಿಂದ ರೈತರು ಬೆಳೆದ ಬೆಳೆಗಳು ಹಾಳಾಗದೇ ಬೇಗನೇ
ಮಾರುಕಟ್ಟೆ ತಲುಪಿ, ಅವರಿಗೆ ಒಳ್ಳೆಯ ಬೆಲೆ ಸಿಗುವಲ್ಲಿ
ಸಹಕಾರಿಯಾಗುತ್ತದೆ. ನವೆಂಬರ್‌ನಲ್ಲಿ ನಡೆಯುವ ಬಂಡವಾಳ ಹೂಡಿಕೆದಾರರ ಸಮಾವೇಶಕ್ಕೆ ಉದ್ಯಮಿಗಳನ್ನು ಆಹ್ವಾನಿಸಲು ಡಬ್ಲೂ.ಇ.ಎಫ್. ವೇದಿಕೆ ನಮ್ಮ ಸಹಕಾರಿಯಾಯಿತು ಮತ್ತು ಪೀಯೂಷ್ ಗೋಯಲ್ ಅವರು ಕೂಡ ಇದರಲ್ಲಿ ಭಾಗವಹಿಸಿ ಉದ್ಯಮಿಗಳಿಗೆ ಬಂಡವಾಳ ನೀಡಲು ಭಾರತ
ಅದರಲ್ಲೂ ಕರ್ನಾಟಕ ವಿಪುಲ ಅವಕಾಶಗಳನ್ನು ಹೊಂದಿದೆ ಎಂದು ಮನವರಿಕೆ ಮಾಡಿದರು. ಅವರ ಸಹಕಾರಕ್ಕೆ ನನ್ನ ಧನ್ಯವಾದಗಳು. ನಾನು ಈ ಸಮಯದಲ್ಲಿ ಡಬ್ಲೂ.ಇ.ಎಫ್.ಎ ನಮ್ಮನ್ನು ಆಹ್ವಾನಿಸಿ ಭಾಗವಹಿಸಲು ಅವಕಾಶ ಕೊಟ್ಟಿದ್ದಕ್ಕೆ ರಾಜ್ಯದ ಜನತೆಯ ಪರವಾಗಿ ಅಭಿನಂದಿಸುತ್ತೇನೆ ಎಂದರು.Body:.Conclusion:

For All Latest Updates

ETV Bharat Logo

Copyright © 2024 Ushodaya Enterprises Pvt. Ltd., All Rights Reserved.