ಬೆಂಗಳೂರು: ನಗರದಲ್ಲಿ ಸಂಚಾರಿ ಪೊಲೀಸರು ನಿಯಮ ಪಾಲನೆ ಮಾಡದೆ ಇರುವ ವಾಹನ ಸವಾರರಿಗೆ ದಂಡ ಹಾಕಿ ಬುದ್ಧಿ ಕಲಿಸಲು ಮುಂದಾಗ್ತಿದ್ದಾರೆ. ಆದರೆ ದಂಡ ಹಾಕಿದರೂ ಕೂಡ ವಾಹನ ಸವಾರರು ಕ್ಯಾರೆ ಎನ್ನದೆ ದಂಡ ಪಾವತಿ ಮಾಡದೆ ಓಡಾಡ್ತಿದ್ದಾರೆ. ಸದ್ಯ ಟ್ರಾಫಿಕ್ ಇಲಾಖೆಗೆ 253 ಕೋಟಿ ರೂ. ದಂಡದ ಹಣ ಬರುವುದು ಬಾಕಿ ಉಳಿದಿದೆ.
ಕಾಂಟ್ಯಾಕ್ಟ್ಲೆಸ್ ಮೂಲಕ ದಂಡ ವಸೂಲಿ ಮಾಡುವ ಪ್ಲ್ಯಾನ್ಗೆ ಪೊಲೀಸ್ ಇಲಾಕೆ ಮುಂದಾಗಿತ್ತು. ಆದರೆ 2018ರಿಂದ ಇಲ್ಲಿಯವರೆಗೆ 253 ಕೋಟಿ ರೂ. ಬಾಕಿ ಉಳಿದಿದೆ. ಕಾಂಟ್ಯಾಕ್ಟ್ಲೆಸ್ ಅಂದ್ರೆ ಸಿಸಿಟಿವಿ, ಕ್ಯಾಮರಾ, ಪಬ್ಲಿಕ್ ಐ ಮೂಲಕ ಅಪ್ಲೋಡ್, ಫೇಸ್ಬುಕ್, ಟ್ವಿಟರ್ ಮೂಲಕ ಪರಿಶೀಲನೆ ನಡೆಸಿ ಕಾಂಟ್ಯಾಕ್ಟ್ಲೆಸ್ ಮೂಲಕ ಕೇಸ್ ಹಾಕಲಾಗ್ತಿತ್ತು.
2018ರಿಂದ ಆಗಸ್ಟ್ವರೆಗೆ 1.1 ಕೋಟಿ ಕೇಸ್ಗಳನ್ನ ಹಾಕಲಾಗಿದೆ. ಈ ಕೇಸ್ಗಳಲ್ಲಿ 294 ಕೋಟಿ ದಂಡ ಬಾಕಿ ಇತ್ತು. ಆದರೆ ಈವರೆಗೆ ಇದರ ಪೈಕಿ 41 ಕೋಟಿ ರೂ. ವಸೂಲಿಯಾಗಿದೆ. ಉಳಿದ 253 ಕೋಟಿ ಪೆಂಡಿಂಗ್ ಇದ್ದು, ಸದ್ಯ ಉಳಿದ ಹಣ ರಿಕವರಿಗಾಗಿ ಟ್ರಾಫಿಕ್ ಇಲಾಖೆ ಪ್ಲ್ಯಾನ್ ಮಾಡಿದೆ.
ಈ ಬಗ್ಗೆ ಟ್ರಾಫಿಕ್ ಕಮಿಷನರ್ ರವಿಕಾಂತೇಗೌಡ ಮಾತನಾಡಿ, ಈ ಬಗ್ಗೆ ಸರ್ಕಾರಕ್ಕೆ ಒಂದು ಪ್ರಸ್ತಾವನೆ ಸಲ್ಲಿಸಲಿದ್ದೇವೆ. ಯಾವ ವಾಹನ ಫೈನ್ ಕಟ್ಟಿಲ್ಲ ಅಂತವರ ಇನ್ಷೂರೆನ್ಸ್ ಹಾಗೂ ಫಿಟ್ನೆಸ್ ಸರ್ಟಿಫಿಕೇಟ್ ರಿನ್ಯೂವಲ್ ಮಾಡದಂತೆ ಮನವಿ ಮಾಡುತ್ತೇವೆ. ಈ ಮೂಲಕ ಫೈನ್ ಕಟ್ಟಿ ರಿನ್ಯೂವಲ್ ಮಾಡಿಕೊಳ್ಳಬೇಕು ಎಂದಿದ್ದಾರೆ.
ಕಾಂಟ್ಯಾಕ್ಟ್ಲೆಸ್ ಯಾವ ರೀತಿ ವರ್ಕ್ ಮಾಡುತ್ತೆ..?
ರೂಲ್ಸ್ ಬ್ರೇಕ್ ಮಾಡಿರುವ ವಾಹನದ ಫೋಟೋವನ್ನ ಟ್ರಾಫಿಕ್ ಮ್ಯಾನೇಜ್ಮೆಂಟ್ ಸೆಂಟರ್ನಲ್ಲಿ ಕೊಡಲಾಗುತ್ತೆ. ಈ ಮೂಲಕ ಅಲ್ಲಿರುವ ಸಿಬ್ಬಂದಿ ವಾಹನದ ಮಾಹಿತಿ, ನಿಯಮ ಉಲ್ಲಂಘನೆ, ಅದರ ಫೋಟೋ ಅಟ್ಯಾಚ್ ಮಾಡುತ್ತಾರೆ. ಇದನ್ನ ವಾಹನದ ರಿಜಿಸ್ಟರ್ ಅಡ್ರೆಸ್ಗೆ ದಂಡ ಕಟ್ಟುವ ಹಣದ ಬಗ್ಗೆ ಕಳುಹಿಸಲಾಗುತ್ತೆ. ಸಿಕ್ಕ ಮಾಹಿತಿಯ ಪ್ರಕಾರ ದಿನಕ್ಕೆ 110 ಕಾಂಟ್ಯಾಕ್ಟ್ಲೆಸ್ ಕೇಸ್ಗಳು ರಿಜಿಸ್ಟರ್ ಆಗುತ್ತಿವೆ.