ಬೆಂಗಳೂರು : ರಾಷ್ಟ್ರೀಯ ಪಲ್ಸ್ ಪೋಲಿಯೋ ಲಸಿಕಾ ಕಾರ್ಯಕ್ರಮದ ಹಿನ್ನೆಲೆ ನಾಲ್ಕು ದಿನಗಳ ಕಾಲ ಕೋವಿಡ್ ಲಸಿಕಾ ಕೆಲಸಕ್ಕೆ ಬ್ರೇಕ್ ಹಾಕಲಾಗಿದೆ. ಜನವರಿ 31 ರಿಂದ ಫೆಬ್ರವರಿ 3ರವರೆಗೆ ಪೋಲಿಯೋ ಲಸಿಕೆ ಅಭಿಯಾನ ನಡೆಯಲಿದೆ.
ಪೋಲಿಯೋ ಲಸಿಕೆಯನ್ನು ಮುಂಜಾಗೃತ ಕ್ರಮವಹಿಸಿ ನಡೆಸಬೇಕು. ಹೀಗಾಗಿ, ಹೆಚ್ಚು ಸಮಯಾವಕಾಶ ಹಾಗೂ ಕಾರ್ಯಕರ್ತರು ಬೇಕಾದ ಹಿನ್ನೆಲೆ 4 ದಿನ ಕೋವಿಡ್ ಲಸಿಕೆ ಕಾರ್ಯಕ್ರಮ ನಡೆಸದಂತೆ ಆರೋಗ್ಯ ಇಲಾಖೆ ಆಯುಕ್ತ ಪಂಕಜ್ ಕುಮಾರ್ ಪಾಂಡೆ ಆದೇಶಿಸಿದ್ದಾರೆ.