ಬೆಂಗಳೂರು: ಇಲ್ಲಿನ 'ಬ್ರಾಹ್ಮಿನ್ ಕಾಫಿ ಬಾರ್' ಹೋಟೆಲ್ಗೆ ಅಂಚೆ ಚೀಟಿಯ ಗೌರವ ದೊರಕಿದೆ. ಒಂದು ಉಪಹಾರ ಗೃಹಕ್ಕೆ ಈ ಗೌರವ ದೊರೆಯುತ್ತಿರುವುದು ದೇಶದ ಇತಿಹಾಸದಲ್ಲಿಯೇ ಇದೇ ಮೊದಲು ಎಂಬ ಹೆಗ್ಗಳಿಕೆ ಪಾತ್ರವಾಗಿದೆ.
55 ವರ್ಷಗಳಿಂದ ಬೆಂಗಳೂರಿನ ಜನರಿಗೆ ಉಪಹಾರ ಉಣಬಡಿಸುತ್ತಿರುವ ಚಾಮರಾಜಪೇಟೆಯಲ್ಲಿರುವ ಶಂಕರಪುರಂನ 'ಬ್ರಾಹ್ಮಿನ್ ಕಾಫಿ ಬಾರ್' ಹೋಟೆಲ್ ಹೆಸರಿನಲ್ಲಿ ಅಂಚೆ ಇಲಾಖೆಯು ವಿಶೇಷ ಅಂಚೆ ಚೀಟಿಯನ್ನು ಹೊರ ತರುತ್ತಿದೆ.
1965 ಜನವರಿ 27ರಂದು ಕೆ.ವಿ.ನಾಗೇಶ್ ಅಡಿಗರು ಈ ಉಪಹಾರ ಗೃಹ ಅನ್ನು ಆರಂಭಿಸಿದರು. ಕಾಫಿ-ಟೀ, ಇಡ್ಲಿ-ವಡೆ-ಚಟ್ನಿ, ಉಪ್ಪಿಟ್ಟು, ಕೇಸರಿ ಬಾತ್ ಸೇರಿದಂತೆ ದಕ್ಷಿಣ ಭಾರತದ ವಿವಿಧ ಉಪಹಾರಗಳಿಗೆ ಇದು ಸುಪ್ರಸಿದ್ಧವಾಗಿದೆ.
ಇದೇ 27 ರಂದು (ಜನವರಿ 27) ಸೋಮವಾರ ಸಂಜೆ 5.30ಕ್ಕೆ ನಗರದ ಚಾಮರಾಜಪೇಟೆಯ ಮರಾಠ ಹಾಸ್ಟೆಲ್ ಮೈದಾನದಲ್ಲಿ ಈ ಹೋಟೆಲ್ ಹೆಸರಿನಲ್ಲಿ ಅಂಚೆ ಚೀಟಿ ಮಾಡಲಾಗುತ್ತದೆ.