ETV Bharat / city

ಹವಾ ನಿಯಂತ್ರಿತ ಬಸ್​ ಸೇವೆ ಪುನರಾರಂಭಿಸಿದ ಬಿಎಂಟಿಸಿ

author img

By

Published : Aug 20, 2021, 2:22 PM IST

ಇಂದಿನಿಂದ ಬಿಎಂಟಿಸಿಯ ಹವಾ ನಿಯಂತ್ರಿತ ಬಸ್​ ಸೇವೆ ಪುನರಾರಂಭಗೊಂಡಿದ್ದು, ಪ್ರಯಾಣಿಕರು ಆರಾಮದಾಯಕವಾಗಿ ಸಂಚರಿಸಬಹುದಾಗಿದೆ.

BMTC resumes AC bus services from today
ಹವಾ ನಿಯಂತ್ರಿತ ಬಸ್​ ಸೇವೆ ಪುನರಾರಂಭಿಸಿದ ಬಿಎಂಟಿಸಿ

ಬೆಂಗಳೂರು: ಪ್ರಯಾಣಿಕರ ಆರಾಮದಾಯಕವಾಗುವ ಹಾಗೂ ಮಿತವ್ಯಯ ದರದಲ್ಲಿ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (ಬಿಎಂಟಿಸಿ) ಹವಾ ನಿಯಂತ್ರಿತ ಬಸ್​ ಸೇವೆಯನ್ನು ಇಂದಿನಿಂದ ಪುನರಾರಂಭಿಸಿದೆ.

ಶುಕ್ರವಾರ, ಶನಿವಾರ ಹಾಗೂ ಭಾನುವಾರದಂದು ಕೆಂಪೇಗೌಡ ಬಸ್ ನಿಲ್ದಾಣದಿಂದ ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವರೆಗೆ ಹಾಗೂ ಕೆಂಪೇಗೌಡ ಬಸ್ ನಿಲ್ದಾಣದಿಂದ ವಿವಿಧ ಸ್ಥಳಗಳಿಗೆ ಇಸ್ಕಾನ್, ವಿಧಾನಸೌಧ, ಟಿಪ್ಪು ಪ್ಯಾಲೇಸ್, ಗವಿಗಂಗಾಧರೇಶ್ವರ ದೇಗುಲ, ಎಂ.ಜಿ. ರಸ್ತೆ, ಹಲಸೂರು ಕೆರೆ, ಕಬ್ಬನ್ ಪಾರ್ಕ್ ಹಾಗೂ ಚಿತ್ರಕಲಾ ಪರಿಷತ್ ಮಾರ್ಗದಲ್ಲಿ 'ಬೆಂಗಳೂರು ದರ್ಶಿನಿ ಬಸ್​' ಕಾರ್ಯಾಚರಣೆ ನಡೆಸಲಿದೆ.

ಇದನ್ನೂ ಓದಿ: ಏಷ್ಯನ್​​​ ಅಭಿವೃದ್ಧಿ ಬ್ಯಾಂಕ್​​ನೊಂದಿಗೆ 500 ಮಿಲಿಯನ್ ಡಾಲರ್ ಸಾಲದ ಒಪ್ಪಂದಕ್ಕೆ ಬಿಎಂಆರ್​ಸಿಎಲ್ ಸಹಿ

ಗುರುವಾರದಿಂದ ಭಾನುವಾರದ ವರೆಗೆ ಹೆಚ್ಎಸ್ಆರ್ ಬಿಡಿಎ ಕಾಂಪ್ಲೆಕ್ಸ್​ನಿಂದ ವಂಡರ್ ಲಾ ವರೆಗೆ ಹವಾ ನಿಯಂತ್ರಿತ ಬಸ್​​ಗಳು ಸಂಚಾರ ನಡೆಸಲಿವೆ ಎಂದು ಬಿಎಂಟಿಸಿ ತಿಳಿಸಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.