ETV Bharat / city

ರಾಜ್ಯದಲ್ಲಿ ಬಿಎಂಟಿಸಿ, ಕೆಎಸ್​ಆರ್​ಟಿಸಿ ಬಸ್​ ಸಂಚಾರ ಆರಂಭ - Bus service starts from today

ರಾಜ್ಯದಲ್ಲಿ ಅನ್​ಲಾಕ್​​ 2.O ಜಾರಿಯಾಗಿದ್ದು, ಬಸ್​ ಸಂಚಾರಕ್ಕೆ ರಾಜ್ಯಸರ್ಕಾರ ಅನುಮತಿ ನೀಡಿದೆ. ಹೀಗಾಗಿ, ಇಂದು ಬೆಳಗ್ಗೆ 6 ಗಂಟೆಯಿಂದಲೇ ಬಿಎಂಟಿಸಿ ಹಾಗೂ ಕೆಎಸ್​ಆರ್​ಟಿಸಿ ಬಸ್​ಗಳು ಸಂಚಾರ ಆರಂಭಿಸಿವೆ.

Bangalore
ರಾಜ್ಯದಲ್ಲಿ ಬಿಎಂಟಿಸಿ, ಕೆಎಸ್​ಆರ್​ಟಿಸಿ ಬಸ್​ ಸಂಚಾರ ಆರಂಭ
author img

By

Published : Jun 21, 2021, 9:45 AM IST

ಬೆಂಗಳೂರು: ರಾಜ್ಯದಲ್ಲಿ ಕೊರೊನಾ ಸಾಂಕ್ರಾಮಿಕ ವ್ಯಾಪಕವಾಗಿ ಹರಡುತ್ತಿದ್ದು ಲಾಕ್​ಡೌನ್​ ಘೋಷಿಸಲಾಗಿತ್ತು. ಬರೋಬ್ಬರಿ ಒಂದೂವರೆ ತಿಂಗಳು ಎಲ್ಲೂ ಅಲ್ಲಾಡದೆ, ಬಸ್​ಗಳು ಡಿಪೋದಲ್ಲಿ ಬಂಧಿಯಾಗಿದ್ದವು. ಇದೀಗ ಕೊರೊನಾ ಸೋಂಕಿತರ ಸಂಖ್ಯೆ ಕ್ರಮೇಣ ಇಳಿಕೆಯಾಗುತ್ತಿದ್ದು, ಸರ್ಕಾರ ಬೆಂಗಳೂರು ಸೇರಿದಂತೆ 17 ಜಿಲ್ಲೆಗಳಲ್ಲಿ ಅನ್​ಲಾಕ್ ಘೋಷಣೆ ಮಾಡಿದೆ.

ರಾಜ್ಯದಲ್ಲಿ ಬಿಎಂಟಿಸಿ, ಕೆಎಸ್​ಆರ್​ಟಿಸಿ ಬಸ್​ ಸಂಚಾರ ಆರಂಭ

ಹೀಗಾಗಿ, ಡಿಪೋ ಸೇರಿದ್ದ ಬಸ್​ಗಳು ರಸ್ತೆಗಿಳಿಯುತ್ತಿವೆ.‌ ಬಸ್​​​ಗಳ ಸಂಚಾರ ಆರಂಭವಾಗಿದ್ದೇ ತಡ ಮೆಜೆಸ್ಟಿಕ್​ನ‌ ಬಿಎಂಟಿಸಿ ನಿಲ್ದಾಣಕ್ಕೆ ಪ್ರಯಾಣಿಕರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುತ್ತಿದ್ದಾರೆ. ಬೆಳಗ್ಗೆ 6 ಗಂಟೆಯಿಂದ ಬಸ್​ಗಳ ಸಂಚಾರ ಶುರುವಾಗಿದ್ದರೂ ಬೆರಳೆಣಿಕೆಯಷ್ಟು ಬಸ್​ಗಳು ಮಾತ್ರ ಓಡಾಡ್ತಿವೆ. ಇದರಿಂದಾಗಿ ಪ್ರಯಾಣಿಕರಿದ್ದರೂ ಬಸ್​ಗಳಿಲ್ಲದ ಪರಿಸ್ಥಿತಿ ನಿರ್ಮಾಣವಾಗಿದೆ. ಸರಿಯಾದ ಸಮಯಕ್ಕೆ ಬಸ್ ಬಾರದಿರುವುದರಿಂದ ಹಲವರು ಆಟೋ, ಟ್ಯಾಕ್ಸಿ ಮೊರೆ ಹೋಗುತ್ತಿದ್ದಾರೆ.

ಮೈಸೂರು, ದಕ್ಷಿಣಕನ್ನಡ ಜಿಲ್ಲೆಗಳಿಗೆ ಬಸ್ ಸಂಚಾರವಿಲ್ಲ

ಕೊರೊನಾ‌ ಸೋಂಕು ಉಲ್ಬಣಗೊಂಡಿರುವ ಕಾರಣ ಮೈಸೂರಿನಲ್ಲಿ ಲಾಕ್​ಡೌನ್ ಮುಂದುವರೆಸಲಾಗಿದೆ. ಹೀಗಾಗಿ, ಮೈಸೂರು ಮಾರ್ಗಕ್ಕೆ ಯಾವುದೇ ಬಸ್​​​​​​​ಗಳನ್ನು ನಿಯೋಜನೆ ಮಾಡಿಲ್ಲ. ಆ ಮುಖೇನ ಹೊರಡುವ ಬಸ್​ಗಳು ಯಾವುದೇ ಪ್ರಯಾಣಿಕರನ್ನ ಹತ್ತಿಸುವ, ಇಳಿಸುವ ಕೆಲಸ ಮಾಡುವಂತಿಲ್ಲ. ಹಾಗೆಯೇ, ದಕ್ಷಿಣಕನ್ನಡ ಜಿಲ್ಲಾಡಳಿತವು ಬಸ್ ಸಂಚಾರ ಇರುವುದಿಲ್ಲ ಎಂದು ಆದೇಶ ಹೊರಡಿಸಿದೆ. ಹೀಗಾಗಿ, ಮುಂದಿನ ಆದೇಶದವರೆಗೂ ದಕ್ಷಿಣಕನ್ನಡ ಜಿಲ್ಲೆಗೂ ಬಸ್​ ಸಂಚಾರ ಇರೋದಿಲ್ಲ.

ಲಸಿಗೆ ಪಡೆದ ಸಿಬ್ಬಂದಿಗಷ್ಟೇ ಪ್ರವೇಶ

ಚಾಲಕರು ಮತ್ತು ನಿರ್ವಾಹಕರಿಗೆ 2 ಡೋಸ್ ಕೋವಿಡ್ ವ್ಯಾಕ್ಸಿನ್ ಕಡ್ಡಾಯ ಮಾಡಲಾಗಿದೆ. ಹೆಚ್ಚಿನನವರು ಎರಡನೇ ಡೋಸ್ ಲಸಿಕೆ ಪಡೆದಿಲ್ಲ. ಅಂತವರಿಗೆ ಮೊದಲ ಡೋಸ್​​​​ನ ಸರ್ಟಿಫಿಕೇಟ್ ಹಾಗೂ ಆರ್‌ಟಿಪಿಸಿ‌ಆರ್ ನೆಗಟಿವ್ ವರದಿ ಕಡ್ಡಾಯವಾಗಿದೆ. ಈ ಎರಡು ವರದಿ ಇಲ್ಲದ ಸಿಬ್ಬಂದಿಗೆ ಡಿಪೋ ಒಳಗೆ ಪ್ರವೇಶವಿಲ್ಲ ಎಂದು ಬಿಎಂಟಿಸಿ ಆದೇಶಿಸಿತ್ತು. ಆದರೆ, ಬೆಂಗಳೂರಿನಲ್ಲಿ ಹಲವು ಸಿಬ್ಬಂದಿ 15 ದಿನಗಳ ಹಿಂದಿನ ಟೆಸ್ಟ್ ರಿಪೋರ್ಟ್ ತೋರಿಸುತ್ತಿದ್ದು, ಅವರಿಗೆ ಮತ್ತೊಮ್ಮೆ ಕೋವಿಡ್ ರಿಪೋರ್ಟ್ ತರುವಂತೆ ಸೂಚಿಸಲಾಗುತ್ತಿದೆ.

ಇದನ್ನೂ ಓದಿ: Covid-19 Vaccination: ಇಂದಿನಿಂದ 18 ವರ್ಷ ಮೇಲ್ಪಟ್ಟವರಿಗೆ 'ಉಚಿತ' ಕೋವಿಡ್​ ಲಸಿಕೆ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.