ಬೆಂಗಳೂರು: ಬಿಎಂಟಿಸಿಯಲ್ಲಿ ಕೆಲಸ ನಿರ್ವಹಿಸುವ ಡ್ರೈವರ್ಗಳು ವಾಹನ ಸ್ಟೇರಿಂಗ್ ಅಷ್ಟೇ ಹಿಡಿಯೋಲ್ಲ, ಬದಲಿಗೆ ಕೈನಲ್ಲಿ ಪೊರಕೆ ಹಿಡಿದು ಸ್ವಚ್ಛತಾ ಕೆಲಸವನ್ನೂ ಮಾಡುತ್ತಿದ್ದಾರೆ.
ಹೌದು, ಸ್ವಚ್ಛತಾ ಕಾರ್ಯಕ್ಕೆ ಲಕ್ಷ ಲಕ್ಷ ಹಣ ಪಡೆದಿರುವ ಗುತ್ತಿಗೆದಾರರು ಕೆಲಸ ಮಾಡೋದನ್ನು ಮರೆತಿದ್ದಾರೆ. ಹೀಗಾಗಿ ಅಂತಹ ಟೆಂಡರ್ಗಳನ್ನು ಬಿಎಂಟಿಸಿ ವಜಾ ಮಾಡಿದೆ. ಇಂಥದ್ದೊಂದು ಮಾಹಿತಿ ಮಾಹಿತಿ ಹಕ್ಕು ಕಾಯಿದೆ(ಆರ್ಟಿಐ) ಮೂಲಕ ಬಹಿರಂಗವಾಗಿದೆ.
ಬಸ್ಗಳ ಸ್ವಚ್ಛತೆಗೆ ಪ್ರತಿ ತಿಂಗಳು 4 ಲಕ್ಷ ರೂ.ಗೂ ಅಧಿಕ ಹಣವನ್ನು ಬಿಎಂಟಿಸಿ ಪಾವತಿ ಮಾಡುತ್ತದೆ. ಆದ್ರೂ ಡ್ರೈವರ್, ಕಂಡಕ್ಟರ್ಗಳು ಪೊರಕೆ ಹಿಡಿದು ಬಸ್ ಕ್ಲೀನ್ ಮಾಡೋದು ತಪ್ಪಿಲ್ಲ. ಟೆಂಡರ್ ಪಡೆದ ಗುತ್ತಿಗೆದಾರರು ಬಸ್ಸುಗಳನ್ನು ಸ್ವಚ್ಚ ಮಾಡದೇ ಇರುವುದರಿಂದ, ಆ ಕೆಲಸವನ್ನು ಅನಿರ್ವಾಯವಾಗಿ ಸಿಬ್ಬಂದಿ ಮಾಡುವಂತಾಗಿದೆ.
ಟೆಂಡರ್ ರದ್ದು:
ಬಿಎಂಟಿಸಿ ದಕ್ಷಿಣ ವಲಯದ ವ್ಯಾಪ್ತಿಗೆ ಒಟ್ಟು 7 ಘಟಕಗಳು ಒಳಪಡಲಿದ್ದು, ಸ್ವಚ್ಛತಾ ಕಾರ್ಯದ ಗುತ್ತಿಗೆಯನ್ನ ಹೆಚ್.ಟಿ.ಜಗದೀಶ್ ಎಂಬುವವರಿಗೆ ನೀಡಲಾಗಿತ್ತು. ಆದರೆ 2021ರ ಜನವರಿ ತಿಂಗಳಲ್ಲಿ ಸ್ವಚ್ಛತಾ ನಿರ್ವಹಣೆಯನ್ನೇ ಮಾಡಿಲ್ಲ. ನಿಗಮ ಫೆಬ್ರವರಿಯಲ್ಲಿ 6,07,398 ರೂ ಪಾವತಿಸಿದೆ. ಆದರೆ ನಂತರ ಮಾರ್ಚ್ನಲ್ಲಿ ಗುತ್ತಿಗೆದಾರ ಬಿಲ್ಗಳನ್ನು ಸಲ್ಲಿಸಿಲ್ಲ.
ಬಿಎಂಟಿಸಿ ಘಟಕ 44ರಲ್ಲಿ ಜನವರಿಯಿಂದ- ಜೂನ್ ತನಕ ಸ್ವಚ್ಛತಾ ಕಾರ್ಯವನ್ನೇ ಪ್ರಾರಂಭಿಸಿರಲಿಲ್ಲ. ದಕ್ಷಿಣ ವಲಯಗಳ ಘಟಕಗಳ, ಬಸ್ಗಳ ಶುಚಿತ್ವ ಅಸಮರ್ಪಕವಾಗಿರುವ ಕಾರಣಕ್ಕೆ ಆ ಗುತ್ತಿಗೆಯನ್ನು ರದ್ದುಪಡಿಸಲಾಗಿದೆ ಎಂದು ನಿಗಮವೇ ಮಾಹಿತಿ ನೀಡಿದೆ.
ಯಾವ್ಯಾವ ವಲಯಕ್ಕೆ ಎಷ್ಟು ಹಣ ಪಾವತಿ?
- ವಲಯ - ಗುತ್ತಿಗೆ ನೀಡಿದ ಹಣದ ಮೊತ್ತ- ಗುತ್ತಿಗೆ ಪಡೆದ ಗುತ್ತಿಗೆದಾರರು
- ಪೂರ್ವ ವಲಯ- 7,63,169/- ಜೈ ಶ್ರೀ, ಮೆನ್ ಮೆಂಟರ್ ಫೆಸಿಲಿಟೀಸ್ ಪ್ರೈ.ಲಿ.
- ಪಶ್ಚಿಮ ವಲಯ- 7,30,854/-ಎ.ವಿ ಗಿರೀಶ್, ಭುವನೇಶ್ವರಿ ಎಂಟರ್ ಪ್ರೈಸಸ್.
- ಕೇಂದ್ರೀಯ ವಲಯ- 6,10,239/- ಎ.ವಿ ಗಿರೀಶ್, ಭುವನೇಶ್ವರಿ ಎಂಟರ್ ಪ್ರೈಸಸ್.
- ದಕ್ಷಿಣ ವಲಯ- 7,06,031.76/- -ಹೆಚ್.ಟಿ ಜಗದೀಶ್.
- ಈಶಾನ್ಯ ವಲಯ- 5,46,349.44/- -ಹೆಚ್. ಟಿ ಜಗದೀಶ್.
ಶಾಂತಿ ನಗರದಲ್ಲಿರುವ ಬಿಎಂಟಿಸಿಯ ಕೇಂದ್ರ ಕಚೇರಿ ಕಟ್ಟಡದ ಸ್ವಚ್ಛತಾ ಕಾರ್ಯವನ್ನು ಮೂರು ವರ್ಷದ ಅವಧಿಗೆ ಗುತ್ತಿಗೆ ನೀಡಲಾಗಿದೆ. ನಿಗಮವು, ಸುಮಾರು 4,39,810ರೂ (ಪ್ರತಿ ತಿಂಗಳು) ಪಾವತಿ ಮಾಡುತ್ತದೆ. ಹೀಗೆ ಲಕ್ಷ ಲಕ್ಷ ಹಣ ಪಾವತಿ ಮಾಡುವ ನಿಗಮ ಗುತ್ತಿಗೆದಾರರಿಂದ ಸರಿಯಾಗಿ ಕೆಲಸ ಮಾಡಿಸುವಲ್ಲಿ ವಿಫಲವಾಯ್ತಾ?. ಕೆಲಸ ಮಾಡದ ಗುತ್ತಿಗೆದಾರರಿಗೆ ಗುತ್ತಿಗೆ ನೀಡುವ ಮೊದಲು ಪರಿಶೀಲನೆ ಮಾಡೋದಿಲ್ವಾಗಳು ಎಂಬ ಪ್ರಶ್ನೆ ಸಾರ್ವಜನಿಕ ವಲಯದಲ್ಲಿ ಕೇಳಿ ಬಂದಿವೆ.
ಇದನ್ನೂ ಓದಿ: ಅಂಗಡಿಯಲ್ಲಿ ಕುಳಿತಿದ್ದ ಯುವಕರ ಮೇಲೆ ತಲವಾರಿನಿಂದ ದಾಳಿ : ಐದು ಮಂದಿ ಆಸ್ಪತ್ರೆಗೆ ದಾಖಲು