ETV Bharat / city

ಕ್ಷುಲ್ಲಕ ಕಾರಣಕ್ಕೆ ಬೈಕ್​​ ಸವಾರನಿಗೆ ನಡುರಸ್ತೆಯಲ್ಲೇ ಥಳಿಸಿದ ಬಿಎಂಟಿಸಿ ಚಾಲಕ - ಬೈಕ್​ ಸವಾರನನ್ನು ಥಳಿಸಿದ ಬಿಎಂಟಿಸಿ ಬಸ್​ ಚಾಲಕ

ಮಹದೇವಪುರ ಪೊಲೀಸ್ ಠಾಣಾ ವ್ಯಾಪ್ತಿಯ ಗಂಗಮ್ಮ ಕೆರೆ ಬಳಿಯ‌ ರಸ್ತೆಯಲ್ಲಿ‌ ಕ್ಷುಲ್ಲಕ ಕಾರಣಕ್ಕಾಗಿ ನಡುರಸ್ತೆಯಲ್ಲಿಯೇ ಬಿಎಂಟಿಸಿ ಚಾಲಕನೊಬ್ಬ ಬೈಕ್ ಸವಾರನಿಗೆ ಥಳಿಸಿರುವ ಘಟನೆ ರಾಜಧಾನಿಯಲ್ಲಿ‌ ನಡೆದಿದೆ.

bmtc-bus-driver-beaten-a-bike-rider-in-middle-road-at-bangalore
ಬೈಕ್ ಸವಾರಿಗೆ‌‌ ನಡುರಸ್ತೆಯಲ್ಲೇ ಥಳಿಸಿದ ಬಿಎಂಟಿಸಿ ಡ್ರೈವರ್
author img

By

Published : Jan 31, 2020, 2:13 PM IST

Updated : Jan 31, 2020, 2:25 PM IST

ಬೆಂಗಳೂರು: ಕ್ಷುಲ್ಲಕ ಕಾರಣಕ್ಕಾಗಿ ನಡುರಸ್ತೆಯಲ್ಲಿಯೇ ಬಿಎಂಟಿಸಿ ಚಾಲಕನೊಬ್ಬ ಬೈಕ್ ಸವಾರನಿಗೆ ಥಳಿಸಿರುವ ಘಟನೆ ರಾಜಧಾನಿಯಲ್ಲಿ‌ ನಡೆದಿದೆ.

ಮಹದೇವಪುರ ಪೊಲೀಸ್ ಠಾಣಾ ವ್ಯಾಪ್ತಿಯ ಗಂಗಮ್ಮ ಕೆರೆ ಬಳಿಯ‌ ರಸ್ತೆಯಲ್ಲಿ‌ ಈ ಘಟನೆ ನಡೆದಿದೆ. ಹೆಬ್ಬಾಳ-ಸಿಲ್ಕ್​ ಬೋರ್ಡ್​​ ಕಡೆ ತೆರಳುವ ಬಸ್​ಗೆ ಬೈಕ್ ಸವಾರ ಅಡ್ಡ ಬಂದಿದ್ದು, ಇದರಿಂದ ಮಾತಿನ ಚಕಮಕಿ ನಡೆದು ಬಸ್ ಚಾಲಕ ಕೋಪಗೊಂಡು ಕೈ ಮಾಡಿದ್ದಾನೆ ಎಂದು ಹೇಳಲಾಗುತ್ತಿದೆ.

ದೃಶ್ಯವನ್ನು ಪ್ರಯಾಣಿಕರೊಬ್ಬರು ಚಿತ್ರೀಕರಿಸಿಕೊಂಡಿದ್ದಾರೆ. ಅಲ್ಲದೆ ಬಸ್​ ಚಾಲಕನನ್ನು ಪ್ರಶ್ನಿಸಿದ್ದಕ್ಕೆ ಪ್ರಯಾಣಿಕನನ್ನೇ ನಿಂದಿಸಿದ್ದಾನೆ ಎಂದು ಆರೋಪಿಸಲಾಗಿದ್ದು, ಪ್ರಯಾಣಿಕ ತನ್ನ ಟ್ವಿಟರ್​ ಖಾತೆಯಲ್ಲಿ ವಿಡಿಯೋ ಪೋಸ್ಟ್​ ಮಾಡಿ ಆಕ್ರೋಶ ವ್ಯಕ್ತಪಡಿಸಿದ್ದಾನೆ.

ಬೈಕ್ ಸವಾರನಿಗೆ ನಡುರಸ್ತೆಯಲ್ಲೇ ಥಳಿಸಿದ ಬಿಎಂಟಿಸಿ ಡ್ರೈವರ್

ಘಟನೆ ಸಂಬಂಧ ವಿಷಾದ ವ್ಯಕ್ತಪಡಿಸಿರುವ ಬಿಎಂಟಿಸಿ, ಈ‌ ಕುರಿತು ಆಂತರಿಕ ತನಿಖೆ ನಡೆಸಿ‌ ಚಾಲಕನ‌ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ರೀ ಟ್ವೀಟ್ ಮಾಡಿದೆ.‌ ಅಲ್ಲದೆ ಈ ಬಗ್ಗೆ ಟ್ವಿಟರ್​ನಲ್ಲಿ ಪ್ರತಿಕ್ರಿಯಿಸಿರುವ ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್, ಚಾಲಕನ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದಿದ್ದಾರೆ. ಘಟನೆ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶ ವ್ಯಕ್ತವಾಗಿದೆ.

Last Updated : Jan 31, 2020, 2:25 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.