ಬೆಂಗಳೂರು: ರಾಜ್ಯದಲ್ಲಿ ಬ್ಲ್ಯಾಕ್ ಫಂಗಸ್ ಸದ್ದು ಮಾಡುತ್ತಿದ್ದು, ಹಿರಿಯರಲ್ಲಿ ಕಾಣಿಸುತ್ತಿದ್ದ ಈ ಸೋಂಕು ಇದೀಗ ಪುಟ್ಟ ಮಕ್ಕಳನ್ನೂ ಕಾಡುತ್ತಿದೆ. ಬೌರಿಂಗ್ ಆಸ್ಪತ್ರೆಯಲ್ಲಿ ಬ್ಲ್ಯಾಕ್ ಫಂಗಸ್ಗೆ ತುತ್ತಾದ ಮಕ್ಕಳು ದಾಖಲಾಗಿದ್ದಾರೆ.
ಓದಿ: ಕೇಂದ್ರ ಸಚಿವರ ಭೇಟಿ ಸಂದರ್ಭದಲ್ಲಿ ಕೈ- ಕಮಲ ಕಾರ್ಯಕರ್ತರ ನಡುವೆ ಗಲಾಟೆ
ಬಳ್ಳಾರಿಯ 13 ವರ್ಷದ ಬಾಲಕಿಗೆ ಬ್ಲ್ಯಾಕ್ ಫಂಗಸ್ ಅಟ್ಯಾಕ್ ಆಗಿದ್ದು, ಬಳ್ಳಾರಿಯಿಂದ ಬಂದು ಬೌರಿಂಗ್ ಆಸ್ಪತ್ರೆಯಲ್ಲಿ ದಾಖಲು ಮಾಡಲಾಗಿದೆ. ಬಾಲಕಿಗೆ ಟೈಪ್ 1 ಡಯಾಬಿಟಿಸ್ ಇತ್ತು. ಜೊತೆಗೆ ಕೋವಿಡ್ ಸೋಂಕು ದೃಢಪಟ್ಟಿತ್ತು.
ಇನ್ನು ಚಿತ್ರದುರ್ಗದ 11 ವರ್ಷ ವಯಸ್ಸಿನ ಹುಡುಗನಿಗೂ ಬ್ಲ್ಯಾಕ್ ಫಂಗಸ್ ಬಾಧಿಸಿದ್ದು, ಆತನ ದೃಷ್ಟಿ ಹೋಗಿದೆ. ಈಗ ಕಣ್ಣು ಗುಡ್ಡೆ ತೆಗೆಯಬೇಕಾದ ಪರಿಸ್ಥಿತಿ ಬರಬಹುದೆಂದು ವೈದ್ಯರು ತಿಳಿಸಿದ್ದಾರೆ. 11 ವರ್ಷದ ಬಾಲಕನಿಗೆ ಕೊರೊನಾ ಬಂದು ಹೋಗಿರುವುದು ಗೊತ್ತೇ ಆಗಿಲ್ಲ. ಆಂಟಿಬಾಡಿ ಟೆಸ್ಟ್ ಮಾಡಿದಾಗಲೇ ಕೋವಿಡ್ ಬಂದು ಹೋಗಿರುವುದು ತಿಳಿದಿದೆ. ಚಿತ್ರದುರ್ಗದಿಂದ ಮೈಸೂರಿಗೆ ಹೋಗಿ ಅಲ್ಲಿಂದ ಬೌರಿಂಗ್ ಆಸ್ಪತ್ರೆಗೆ ಬಂದು ದಾಖಲಾಗಿರುವುದಾಗಿ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.