ETV Bharat / city

ಬ್ಲ್ಯಾಕ್​​​ ಫಂಗಸ್​ ಚಿಕಿತ್ಸೆಗೆ ಚಚ್ಚುಮದ್ದು ಹಂಚಿಕೆ ಮಾಡಿದ ಕೇಂದ್ರ, ರಾಜ್ಯಕ್ಕೆ ಸಿಕ್ಕಿದ್ದೆಷ್ಟು? - ಬ್ಲ್ಯಾಕ್ ಫಂಗಸ್ ಲಸಿಕೆ

19,420 ವಯಲ್ಸ್ ಲಿಪೋಸೊಮಾಲ್ ಎಂಫೋಟೆರಿಸೊನ್ ಬಿ ಚುಚ್ಚುಮದ್ದನ್ನು ರಾಜ್ಯಗಳಿಗೆ ಕೇಂದ್ರ ಸರ್ಕಾರ ಹಂಚಿಕೆ ಮಾಡಿದ್ದು, ಕರ್ನಾಟಕಕ್ಕೆ 1030 ವಯಲ್ಸ್ ಹಂಚಿಕೆಯಾಗಿದೆ.

AMPHPTERICINB
AMPHPTERICINB
author img

By

Published : May 24, 2021, 7:21 PM IST

ಬೆಂಗಳೂರು: ಕೋವಿಡ್ ಎರಡನೇ ಅಲೆ ಬೆನ್ನಲ್ಲೇ ರಾಜ್ಯದಲ್ಲಿ ಬ್ಲಾಕ್ ಫಂಗಸ್ ಭೀತಿ ಹೆಚ್ಚಾಗಿದೆ. ಅಗತ್ಯ ಔಷಧಕ್ಕೆ ಕೇಂದ್ರದ ಕಡೆ ಮುಖ ಮಾಡಿದ್ದ ರಾಜ್ಯಕ್ಕೆ ಇಂದು 1030 ವಯಲ್ಸ್ ಔಷಧ ಲಭ್ಯವಾಗಿದೆ.

ಕಪ್ಪು ಶಿಲೀಂಧ್ರ ರೋಗದ ಚಿಕಿತ್ಸೆಗಾಗಿ ವಿವಿಧ ರಾಜ್ಯಗಳಿಗೆ ಇಂದು ಮತ್ತೆ 19,420 ವಯಲ್ಸ್ ಲಿಪೋಸೊಮಾಲ್ ಎಂಫೋಟೆರಿಸೊನ್ ಬಿ ಚುಚ್ಚುಮದ್ದನ್ನು ಹಂಚಿಕೆ ಮಾಡಿದ್ದು, ಕರ್ನಾಟಕಕ್ಕೆ 1030 ವಯಲ್ಸ್ ಒದಗಿಸಲಾಗಿದೆ. ಆಮದಿನ ಜೊತೆಗೇ ಸ್ವದೇಶಿ ಉತ್ಪಾದನೆಯೂ ಹೆಚ್ಚಾಗುತ್ತಿದ್ದು, ಇದರ ಹಂಚಿಕೆ ನಿರಂತರವಾಗಿ ನಡೆಯಲಿದೆ ಎಂದು ಕೇಂದ್ರ ಸಚಿವ ಡಿ.ವಿ ಸದಾನಂದಗೌಡ ಟ್ವೀಟ್ ಮಾಡಿ ಔಷಧ ಹಂಚಿಕೆ ಮಾಹಿತಿಯನ್ನು ತಿಳಿಸಿದ್ದಾರೆ.

ವಯಲ್ಸ್ ಔಷಧ ಹಂಚಿಕೆ
ವಯಲ್ಸ್ ಔಷಧ ಹಂಚಿಕೆ
ಈಗಾಗಲೇ ರಾಜ್ಯದ ಎಲ್ಲ ಜಿಲ್ಲಾಸ್ಪತ್ರೆಗಳು ಮತ್ತು ಜಿಲ್ಲಾ ವೈದ್ಯಕೀಯ ವಿಜ್ಞಾನಗಳ ಮಹಾಸಂಸ್ಥೆಗಳಲ್ಲಿ ಬ್ಲ್ಯಾಕ್ ಫಂಗಸ್​ಗೆ ಚಿಕಿತ್ಸೆ ನೀಡುವಂತೆ ಆರೋಗ್ಯ ಇಲಾಖೆ ಸೂಚನೆ ನೀಡಿದ್ದು, ಇರುವ ಔಷಧ ಸರಬರಾಜು ಮಾಡಿ ಹೆಚ್ಚುವರಿ ಔಷಧಕ್ಕಾಗಿ ಕೇಂದ್ರದ ಕಡೆ ರಾಜ್ಯ ಮುಖ ಮಾಡಿತ್ತು. ಇದೀಗ ಅಲ್ಪ ಪ್ರಮಾಣದ ಔಷಧ ಲಭ್ಯವಾಗಿದ್ದು, ಮತ್ತಷ್ಟ ಪ್ರಮಾಣದ ಔಷಧಕ್ಕೆ ಸದಾನಂದಗೌಡರ ಜೊತೆ ಮಾತುಕತೆ ನಡೆಸಲು ರಾಜ್ಯದ ಕೋವಿಡ್ ಉಸ್ತುವಾರಿ ಸಚಿವರು ನಿರ್ಧರಿಸಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.