ETV Bharat / city

ಸಚಿವ ಕೆ. ಎಸ್‌. ಈಶ್ವರಪ್ಪ ಅವರನ್ನು ಹುಚ್ಚಾಸ್ಪತ್ರೆಗೆ ಸೇರಿಸಬೇಕು: ಬಿ ಕೆ ಹರಿಪ್ರಸಾದ್ ವಾಗ್ದಾಳಿ - ಸಚಿವ ಕೆ.ಎಸ್. ಈಶ್ವರಪ್ಪ ವಿವಾದಾತ್ಮಕ ಹೇಳಿಕೆ

ಸಚಿವ ಕೆ ಎಸ್‌ ಈಶ್ವರಪ್ಪ ತಮ್ಮ ಹೆಸರನ್ನು ಮೇರಾ ನಾಮ್ ಜೋಕರ್ ಎಂದು ಬದಲಾಯಿಸಿಕೊಳ್ಳಲಿ, ಅವರು ದ್ವೇಷದ ಭಾಷಣ ಮಾಡಿದ್ದಾರೆ. ಈಶ್ವರಪ್ಪ ತಪ್ಪಲ್ಲ ಅದು, ಅವರು ಕಲಿತ ನಾಗಪುರ ಯುನಿವರ್ಸಿಟಿ ಹೇಳಿಕೊಟ್ಟ ಪಾಠ..

ಬಿ.ಕೆ. ಹರಿಪ್ರಸಾದ್
ಬಿ.ಕೆ. ಹರಿಪ್ರಸಾದ್
author img

By

Published : Aug 10, 2021, 3:48 PM IST

Updated : Aug 10, 2021, 5:20 PM IST

ಬೆಂಗಳೂರು : ಸಚಿವ ಕೆ ಎಸ್ ಈಶ್ವರಪ್ಪ ಅವರು ಕಾಂಗ್ರೆಸ್ ನಾಯಕರ ಬಗ್ಗೆ ಅವಾಚ್ಯ ಶಬ್ದ ಬಳಕೆ ವಿಚಾರಕ್ಕೆ ಪ್ರತಿಕ್ರಿಯಿಸಿದ ವಿಧಾನಪರಿಷತ್ ಸದಸ್ಯ ಬಿ ಕೆ ಹರಿಪ್ರಸಾದ್, ತಾವು ಡಿಸಿಎಂ ಆಗಬೇಕೆಂದು ಈಶ್ವರಪ್ಪ ಎಷ್ಟೆಲ್ಲ ಕಾರ್ಯಾಚರಣೆ ಮಾಡಿದ್ರು. ಅವರಿಗೆ ಡಿಸಿಎಂ ಆಗೋಕೂ ಸಾಧ್ಯವಾಗಲಿಲ್ಲ. ಹೀಗಾಗಿ, ಈಶ್ವರಪ್ಪಗೆ ಹುಚ್ಚು ಹಿಡಿದಿದೆ. ಆದಷ್ಟು ಬೇಗ ಅವರನ್ನು ನಿಮ್ಹಾನ್ಸ್​ಗೆ ಸೇರಿಸಬೇಕು ಎಂದು ಕಿಡಿಕಾರಿದ್ದಾರೆ.

ವಿಧಾನಸೌಧದಲ್ಲಿ ಇಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಆರೋಗ್ಯ ಸಚಿವ ಸುಧಾಕರ್ ಅವರು ಈಶ್ವರಪ್ಪ ಅವರನ್ನು ನಿಮ್ಹಾನ್ಸ್​ಗೆ ಕರೆದೊಯ್ದು ಚಿಕಿತ್ಸೆ ಕೊಡಿಸಬೇಕು ಎಂದು ವ್ಯಂಗ್ಯವಾಡಿದರು. ಸಚಿವ ಕೆ ಎಸ್‌ ಈಶ್ವರಪ್ಪ ಮನೆಯಲ್ಲೇ ನೋಟ್ ಕೌಂಟಿಂಗ್ ಮಷಿನ್ ಇಟ್ಟುಕೊಂಡಿದ್ದಾರೆ.

ಆದರೂ ಅವರ ಕೈಯಲ್ಲಿ ಸಿಎಂ ಅಥವಾ ಡಿಸಿಎಂ ಆಗಲು ಸಾಧ್ಯವಾಗಲಿಲ್ಲ. ಹೀಗಾಗಿ, ಅವರು ಫ್ರಸ್ಟ್ರೇಷನ್​ನಿಂದ ಮಾತನಾಡಿದ್ದಾರೆ. ಅವರನ್ನು ಸಚಿವ ಸಂಪುಟದಿಂದ ಉಚ್ಛಾಟನೆ ಮಾಡಬೇಕು ಎಂದು ಒತ್ತಾಯಿಸಿದರು.

ಬಿ ಕೆ ಹರಿಪ್ರಸಾದ್ ವಾಗ್ದಾಳಿ

ಹೆಸರು ಬದಲಿಸಿಕೊಳ್ಳಲಿ: ಕೆ ಎಸ್‌ ಈಶ್ವರಪ್ಪ ತಮ್ಮ ಹೆಸರನ್ನು ಮೇರಾ ನಾಮ್ ಜೋಕರ್ ಎಂದು ಬದಲಾಯಿಸಿಕೊಳ್ಳಲಿ. ಅವರು ದ್ವೇಷದ ಭಾಷಣ ಮಾಡಿದ್ದಾರೆ. ಈಶ್ವರಪ್ಪ ತಪ್ಪಲ್ಲ ಅದು, ಅವರು ಕಲಿತ ನಾಗಪುರ ಯುನಿವರ್ಸಿಟಿ ಹೇಳಿಕೊಟ್ಟ ಪಾಠ ಎಂದು ಟೀಕಿಸಿದರು.

ಈಶ್ವರಪ್ಪ ವಿರುದ್ಧ ಕ್ರಮಕ್ಕೆ ಆಗ್ರಹ: ಪ್ರಚೋದನಕಾರಿ ಭಾಷಣ ಮಾಡಿದ ಸಚಿವ ಈಶ್ವರಪ್ಪ ವಿರುದ್ಧ ತಕ್ಷಣ ಪೊಲೀಸರು ಎಫ್ಐಆರ್ ದಾಖಲಿಸಬೇಕು. ಕರ್ನಾಟಕ ಪೊಲೀಸ್ ನಿಷ್ಕ್ರಿಯ ಆಗಿದ್ದಾರೆ. ಸ್ವಯಂ ಪ್ರೇರಿತ ಕೇಸ್ ದಾಖಲಿಸಬೇಕು ಎಂದು ಆಗ್ರಹಿಸಿದರು.

ಸಿಎಂ ಬಸವರಾಜ ಬೊಮ್ಮಾಯಿ ಅವರು ಕೆ.ಎಸ್‌.ಈಶ್ವರಪ್ಪ ಅವರ ಹೇಳಿಕೆ ಸಮರ್ಥಿಸಿಕೊಳ್ತಾರೆ ಎಂದು ಅಂದುಕೊಂಡಿರಲಿಲ್ಲ ಎಂದರು. ಇಂದಿರಾ ಕ್ಯಾಂಟೀನ್ ಹೆಸರು ಬದಲಾಯಿಸುವುದು ಹೀನ ಕುತಂತ್ರ, ಕೆಟ್ಟ ರಾಜಕಾರಣ ಮಾಡ್ತಿದ್ದಾರೆ. ಇಂದಿರಾಗಾಂಧಿ ಹೆಸರು ಬದಲಿಸಿದರೆ ಸರಿಯಲ್ಲ.

ಬಿಜೆಪಿಯಿಂದ ವಾಜಪೇಯಿ, ಸಾವರ್ಕರ್, ದೀನ್ ದಯಾಳ್ ಉಪಾಧ್ಯಾಯ ಹೆಸರಿಡಲಾಗಿದೆ. ಹೆಸರು ಬದಲಿಸಿದ್ದೇ ಆದಲ್ಲಿ ಆ ಹೆಸರಿಗೆ ಮಸಿ ಬಳಿಯುತ್ತೇವೆ. ಅವರ ಬೋರ್ಡ್ ಎಲ್ಲೆಲ್ಲಿ ಇರತ್ತೋ, ಅಲ್ಲೆಲ್ಲ ನಾವು ಮಸಿ ಬಳಿದು ಹೋರಾಟ ಮಾಡಬೇಕಾಗುತ್ತದೆ ಎಂದು ಎಚ್ಚರಿಸಿದರು.

ಬಿಜೆಪಿಯವರು ನೇಮ್ ಚೇಂಜರ್ ಆಗಿದ್ದಾರೆ : ಮೊದಲು ಬಿಜೆಪಿಯವರು ಗೇಮ್ ಚೇಂಜರ್ ಅಂತಾ ಬಂದರು. ಈಗ ಗೇಮ್ ಚೇಂಜ್ ಅಲ್ಲ, ನೇಮ್ ಚೇಂಜರ್ ಆಗಿದ್ದಾರೆ. ಇಂದಿರಾ ಗಾಂಧಿ, ರಾಜೀವ್ ಗಾಂಧಿ ಹೆಸರು ಬಿಜೆಪಿಯವರು ಬದಲಾಯಿಸಬಹುದು. ಆದರೆ, ಈ ನೆಲದ ಮೇಲೆ ಬಿದ್ದ ಹೋರಾಟಗಾರರ ರಕ್ತ ಅಳಿಸೋಕೆ ಯಾರಿಗೂ ಸಾಧ್ಯವಿಲ್ಲ.

ಅವರು ಎಷ್ಟು ದೂರ ಹೋಗ್ತಾರೋ ಹೋಗಲಿ ನೋಡೋಣ. ಇವರೇನಾದರೂ ಇಂದಿರಾ ಕ್ಯಾಂಟೀನ್ ಹೆಸರು ಬದಲಾಯಿಸಿದರೆ ನಾವು ಇವರ ಬೋರ್ಡ್​ಗೆ ಮಸಿ ಬಳಿಯುತ್ತೇವೆ. ಗಾಂಧಿ ಕೊಂದ ದೇಶದ್ರೋಹದ ಆಪಾದನೆ ಹೊತ್ತಿರುವ ಸಾರ್ವಕರ್ ಬೋರ್ಡ್​ಗೆ ನಾವು ಮಸಿ ಬಳಿಯುತ್ತೇವೆ ಎಂದು ಹೇಳಿದರು.

ಇಂದಿರಾ ಕ್ಯಾಂಟೀನ್ ಮುಚ್ಚಿಸಲು ಬಿಜೆಪಿ ಮೊದಲಿನಿಂದಲೂ ತಂತ್ರ ಮಾಡುತ್ತಿದ್ದರು. ಹಾಗಾಗಿ, ಹಲ್ಲಿ, ಜಿರಲೆ ಹಾಕುವ ಕೆಲಸ ಮಾಡ್ತಿದ್ರು. ಇಂದಿರಾ ಕ್ಯಾಂಟೀನ್ ಮುಚ್ಚಿಸಲು ಏನು ಬೇಕಾದ್ರೂ ಮಾಡುತ್ತಾರೆ ಎಂದು ಕಿಡಿಕಾರಿದರು.

ಶೌಚಾಲಯಕ್ಕೆ ಪ್ರಧಾನಿ ನರೇಂದ್ರ ಮೋದಿ ಹೆಸರಿಡಬೇಕು. ಅವರೇ ಸುಲಭ ಶೌಚಾಲಯ ತಂದವರು. ಹಾಗಾಗಿ, ನರೇಂದ್ರ ಮೋದಿ ಹೆಸರಿಡುವುದು ಸೂಕ್ತ. ಅವರ ಪೆಟ್ ಕಾರ್ಯಕ್ರಮ ಇದು ಎಂದು ವ್ಯಂಗ್ಯವಾಡಿದರು.

Last Updated : Aug 10, 2021, 5:20 PM IST

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.