ಬೆಂಗಳೂರು: ಆಡಳಿತಾರೂಢ ಬಿಜೆಪಿ ಮತ್ತು ಕಾಂಗ್ರೆಸ್ ನಡುವಿನ ಟ್ವೀಟ್ ವಾರ್ ಮುಂದುವರೆದಿದೆ. ಸುಳ್ಳು ಮತ್ತು ಕಾಂಗ್ರೆಸ್ ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ, ಅಧಿಕಾರದಲ್ಲಿದ್ದಾಗ ಕೆಲಸ ಮಾಡಿದ್ದರೆ ಕಾಂಗ್ರೆಸ್ ಪಕ್ಷವನ್ನು ಜನತೆ ಮನೆಗೇಕೆ ಕಳುಹಿಸುತ್ತಿದ್ದರು? ಎಂದು ಬಿಜೆಪಿ ಟೀಕಿಸಿದೆ.
ಕಾಂಗ್ರೆಸ್ ಮತ್ತು ಸುಳ್ಳುಗಳು ಹೆಸರಿನ ಹ್ಯಾಷ್ಟ್ಯಾಗ್ನೊಂದಿಗೆ ಕಾಂಗ್ರೆಸ್ ವಿರುದ್ಧ ಸರಣಿ ಟ್ವೀಟ್ ಮಾಡಿ ಟೀಕಿಸಿರುವ ಬಿಜೆಪಿ, ಕಾಂಗ್ರೆಸ್ ಅಧಿಕಾರದಲ್ಲಿದ್ದಾಗ ಮಾಡಿದ ಕೆಲಸಕ್ಕೆ ಕೂಲಿ ರೂಪದಲ್ಲಿ ಮತ ಕೊಡಿ ಎಂದು ಸಿದ್ದರಾಮಯ್ಯ ಪ್ರಸ್ತಾಪಿಸಿದ್ದಾರೆ. ಸಿದ್ದರಾಮಯ್ಯನವರೇ, ಉತ್ತರ ಕರ್ನಾಟಕದ ಜನತೆಯ ಮುಂದೆ ಎಷ್ಟು ಬಾರಿ ಸುಳ್ಳು ಹೇಳುತ್ತೀರಿ? ಕೆಲಸ ಮಾಡಿದ್ದರೆ ಕಾಂಗ್ರೆಸ್ ಪಕ್ಷವನ್ನು ಜನತೆ ಮನೆಗೇಕೆ ಕಳುಹಿಸುತ್ತಿದ್ದರು? ಎಂದು ಪ್ರಶ್ನಿಸಿದೆ.
ನುಡಿದಂತೆ ನಡೆದಿದ್ದೇವೆ ಎನ್ನುವ ಕಾಂಗ್ರೆಸಿಗರೇ ಈ ಪ್ರಶ್ನೆಗಳಿಗೆ ಉತ್ತರಿಸಿ...
ಕೃಷ್ಣಾ ಮೇಲ್ದಂಡೆ ಯೋಜನೆಗೆ ನಿಮ್ಮ ಕಾಲದಲ್ಲಿ ಎಷ್ಟು ಹಣ ನೀಡಿದ್ದೀರಿ? ಕೃಷ್ಣೆಗೆ ವಾರ್ಷಿಕ 10 ಸಾವಿರ ಕೋಟಿ ಅನುದಾನ ಕೊಡುತ್ತೇವೆ ಎಂಬ ಮಾತನ್ನು ಈಡೇರಿಸಿದ್ದೀರಾ? ನಿಮ್ಮ ಆಡಳಿತದಲ್ಲಿ ಪ್ರಾದೇಶಿಕ ಅಸಮಾನತೆ ನಿವಾರಣೆ ಏಕಾಗಲಿಲ್ಲ? ಉತ್ತರ ಕರ್ನಾಟಕಕ್ಕೆ ಸರ್ಕಾರಿ ಕಚೇರಿ ವರ್ಗಾವಣೆ ಪ್ರಸ್ತಾಪ ಈಡೇರಲಿಲ್ಲವೇಕೆ? ಎಂದು ತರಾಟೆ ತೆಗೆದುಕೊಂಡಿದೆ.
-
ಸುಳ್ಳು, ಸುಳ್ಳು, ಸುಳ್ಳು
— BJP Karnataka (@BJP4Karnataka) October 28, 2021 " class="align-text-top noRightClick twitterSection" data="
ರಾಜ್ಯಸಭೆಯ ವಿಪಕ್ಷ ನಾಯಕರಾಗಿ ಮಲ್ಲಿಕಾರ್ಜುನ ಖರ್ಗೆ ಅವರು ದಾಖಲೆ ಸಮೇತ ಮಾತನಾಡುವುದನ್ನು ಮೊದಲು ಅಭ್ಯಾಸ ಮಾಡಿಕೊಳ್ಳಬೇಕು.
ರಸಗೊಬ್ಬರ ಕೊರತೆಯಾಗಿದೆ ಎಂದು ಸುಳ್ಳು ಸುದ್ದಿ ಹಬ್ಬಿಸಿ ರೈತರಲ್ಲಿ ಗೊಂದಲ ಮೂಡಿಸಬೇಡಿ.
ಸುಳ್ಳು ಮತ್ತು ಕಾಂಗ್ರೆಸ್ ಒಂದೇ ನಾಣ್ಯದ ಎರಡು ಮುಖ.#ಕಾಂಗ್ರೆಸ್‌ಮತ್ತುಸುಳ್ಳುಗಳು
">ಸುಳ್ಳು, ಸುಳ್ಳು, ಸುಳ್ಳು
— BJP Karnataka (@BJP4Karnataka) October 28, 2021
ರಾಜ್ಯಸಭೆಯ ವಿಪಕ್ಷ ನಾಯಕರಾಗಿ ಮಲ್ಲಿಕಾರ್ಜುನ ಖರ್ಗೆ ಅವರು ದಾಖಲೆ ಸಮೇತ ಮಾತನಾಡುವುದನ್ನು ಮೊದಲು ಅಭ್ಯಾಸ ಮಾಡಿಕೊಳ್ಳಬೇಕು.
ರಸಗೊಬ್ಬರ ಕೊರತೆಯಾಗಿದೆ ಎಂದು ಸುಳ್ಳು ಸುದ್ದಿ ಹಬ್ಬಿಸಿ ರೈತರಲ್ಲಿ ಗೊಂದಲ ಮೂಡಿಸಬೇಡಿ.
ಸುಳ್ಳು ಮತ್ತು ಕಾಂಗ್ರೆಸ್ ಒಂದೇ ನಾಣ್ಯದ ಎರಡು ಮುಖ.#ಕಾಂಗ್ರೆಸ್ಮತ್ತುಸುಳ್ಳುಗಳುಸುಳ್ಳು, ಸುಳ್ಳು, ಸುಳ್ಳು
— BJP Karnataka (@BJP4Karnataka) October 28, 2021
ರಾಜ್ಯಸಭೆಯ ವಿಪಕ್ಷ ನಾಯಕರಾಗಿ ಮಲ್ಲಿಕಾರ್ಜುನ ಖರ್ಗೆ ಅವರು ದಾಖಲೆ ಸಮೇತ ಮಾತನಾಡುವುದನ್ನು ಮೊದಲು ಅಭ್ಯಾಸ ಮಾಡಿಕೊಳ್ಳಬೇಕು.
ರಸಗೊಬ್ಬರ ಕೊರತೆಯಾಗಿದೆ ಎಂದು ಸುಳ್ಳು ಸುದ್ದಿ ಹಬ್ಬಿಸಿ ರೈತರಲ್ಲಿ ಗೊಂದಲ ಮೂಡಿಸಬೇಡಿ.
ಸುಳ್ಳು ಮತ್ತು ಕಾಂಗ್ರೆಸ್ ಒಂದೇ ನಾಣ್ಯದ ಎರಡು ಮುಖ.#ಕಾಂಗ್ರೆಸ್‌ಮತ್ತುಸುಳ್ಳುಗಳು
ಕಳೆದ ವಿಧಾನಸಭಾ ಚುನಾವಣೆಗೂ ಮುನ್ನ ಕಾಂಗ್ರೆಸ್ ನೀಡಿದ ಆಶ್ವಾಸನೆಗಳೆಷ್ಟು, ಈಡೇರಿದ್ದೆಷ್ಟು? ನುಡಿದಂತೆ ನಡೆದಿದ್ದೇವೆ ಎಂಬುದೇ ಕಾಂಗ್ರೆಸ್ ಸೃಷ್ಟಿಸಿದ ದೊಡ್ಡ ಸುಳ್ಳು.
ಇಟಲಿ ಮೂಲ ನಿರ್ದೇಶಿತ ಕಾಂಗ್ರೆಸ್ ಆಡಳಿತ ನೋಡಿದ್ದ ಖರ್ಗೆಗೆ ಹಿಟ್ಲರ್ ಆಡಳಿತದ ನೆನಪಾಗಿದೆ. ದೇಶದಲ್ಲಿ ಉದ್ಯೋಗ ಕಡಿತವಾಗಿದೆ ಎಂಬುದು ಕಲ್ಪಿತ ಆರೋಪ. ನಿಜವಾಗಿಯೂ ಉದ್ಯೋಗ ಕಳೆದುಕೊಂಡಿದ್ದು ಕಾಂಗ್ರೆಸಿಗರು. ಅಮೇಥಿ ಹಾಗೂ ಕಲಬುರಗಿಯಲ್ಲಿ ಸೋತವರು ನಿರುದ್ಯೋಗಿಗಳಿಗೆ ಅತ್ಯುತ್ತಮ ಉದಾಹರಣೆಯಾಗಿದ್ದಾರೆ ಎಂದು ಟಾಂಗ್ ನೀಡಿದೆ.
ಸುಳ್ಳು, ಸುಳ್ಳು, ಸುಳ್ಳು:
ರಾಜ್ಯಸಭೆಯ ವಿಪಕ್ಷ ನಾಯಕರಾಗಿ ಮಲ್ಲಿಕಾರ್ಜುನ ಖರ್ಗೆ ಅವರು ದಾಖಲೆ ಸಮೇತ ಮಾತನಾಡುವುದನ್ನು ಮೊದಲು ಅಭ್ಯಾಸ ಮಾಡಿಕೊಳ್ಳಬೇಕು. ರಸಗೊಬ್ಬರ ಕೊರತೆಯಾಗಿದೆ ಎಂದು ಸುಳ್ಳು ಸುದ್ದಿ ಹಬ್ಬಿಸಿ ರೈತರಲ್ಲಿ ಗೊಂದಲ ಮೂಡಿಸಬೇಡಿ. ಸುಳ್ಳು ಮತ್ತು ಕಾಂಗ್ರೆಸ್ ಒಂದೇ ನಾಣ್ಯದ ಎರಡು ಮುಖ ಎಂದು ಬಿಜೆಪಿ ಆರೋಪಿಸಿದೆ.
(ಕಾಂಗ್ರೆಸ್ ಕಾರ್ಯಕರ್ತರಲ್ಲಿ ಭಯ ಸೃಷ್ಟಿಸಲು ಐಟಿ,ಇಡಿ ದಾಳಿ ನಡೆಸುತ್ತಿದ್ದಾರೆ: ಲಕ್ಷ್ಮಿ ಹೆಬ್ಬಾಳ್ಕರ್)