ಬೆಂಗಳೂರು: ಒಂದು ಕಡೆ ಪೊಲೀಸ್ ಅಧಿಕಾರಿಗಳಿಗೆ ಶಾಂತಿ ಸ್ಥಾಪಿಸಲು ಮನವಿ ಮಾಡುವುದು. ಇನ್ನೊಂದು ಕಡೆ, ಲೋಡುಗಟ್ಟಲೆ ಕಲ್ಲು ಸಂಗ್ರಹಿಸಿ ಕಲ್ಲು ತೂರಾಟ ಮಾಡಿದವರನ್ನು ಅಮಾಯಕರು ಎನ್ನುವುದು ಇದು ಕಾಂಗ್ರೆಸ್ ನಾಯಕರ ವರಸೆ. ಆರಕ್ಷಕರ ಮೇಲೆಯೇ ದಾಳಿ ಮಾಡಿದ ಅಲ್ಪಮತೀಯರನ್ನು ಅಮಾಯಕರು ಎಂದು ಹೇಳಲು ನೀವು ಯಾರು? ಎಂದು ಬಿಜೆಪಿ ಪ್ರಶ್ನಿಸಿದೆ.
ಹುಬ್ಬಳ್ಳಿ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಅಲ್ತಾಫ್ ಹಳ್ಳೂರ ಭಾಗಿಯಾಗಿದ್ದ ಹಿಜಾಬ್ ಪರ ಪ್ರತಿಭಟನೆಯಲ್ಲಿ ಶಿಕ್ಷಕಿಯೋರ್ವರು ರಕ್ತಪಾತದ ಬೆದರಿಕೆ ಹಾಕಿದ್ದರು. ಕಾಂಗ್ರೆಸ್ ಆಯೋಜಿಸಿದ್ದ ಈ ಪ್ರತಿಭಟನೆಗೂ ಹುಬ್ಬಳ್ಳಿ ಗಲಭೆಗೂ ಸಾಮ್ಯತೆ ಇದೆ. ಪ್ರತಿಭಟನೆಯಲ್ಲಿ ಹೇಳಿದ್ದನ್ನೇ ಮಾಡಿದ್ದಾರೆ. ವ್ಯವಸ್ಥಿತ ಪಿತೂರಿಯಿದು ಎಂದು ಟ್ವೀಟ್ ಮಾಡಿದೆ.
-
ಈ ಹಿಂದೆ #ಮೀರ್‌ಸಾದಿಕ್ ಸಿಎಂ ಆಗಿದ್ದ ಅವಧಿಯಲ್ಲಿ ತರಬೇತಿ ಕೊಟ್ಟು ಹೊರಬಿಟ್ಟ ಪಿಎಫ್‌ಐ ಅಲ್ಪಮತೀಯವಾದಿಗಳೇ ಹುಬ್ಬಳ್ಳಿ ಗಲಭೆಗೆ ನೇರ ಕಾರಣ.
— BJP Karnataka (@BJP4Karnataka) April 19, 2022 " class="align-text-top noRightClick twitterSection" data="
ಪೊಲೀಸ್ ಬಂಧನದಲ್ಲಿದ್ದವರನ್ನು ನನ್ನ ಕೈಗೊಪ್ಪಿಸಿ ಎಂದು ಅಬ್ಬರಿಸುವ ಇವರಿಗೆ ಕಾನೂನು ಕೈಗೆತ್ತಿಕೊಳ್ಳುವುದು ಹುಟ್ಟು ಚಾಳಿಯೇ?#CONgressSupportsJihadis pic.twitter.com/MxcCAzWBtN
">ಈ ಹಿಂದೆ #ಮೀರ್‌ಸಾದಿಕ್ ಸಿಎಂ ಆಗಿದ್ದ ಅವಧಿಯಲ್ಲಿ ತರಬೇತಿ ಕೊಟ್ಟು ಹೊರಬಿಟ್ಟ ಪಿಎಫ್‌ಐ ಅಲ್ಪಮತೀಯವಾದಿಗಳೇ ಹುಬ್ಬಳ್ಳಿ ಗಲಭೆಗೆ ನೇರ ಕಾರಣ.
— BJP Karnataka (@BJP4Karnataka) April 19, 2022
ಪೊಲೀಸ್ ಬಂಧನದಲ್ಲಿದ್ದವರನ್ನು ನನ್ನ ಕೈಗೊಪ್ಪಿಸಿ ಎಂದು ಅಬ್ಬರಿಸುವ ಇವರಿಗೆ ಕಾನೂನು ಕೈಗೆತ್ತಿಕೊಳ್ಳುವುದು ಹುಟ್ಟು ಚಾಳಿಯೇ?#CONgressSupportsJihadis pic.twitter.com/MxcCAzWBtNಈ ಹಿಂದೆ #ಮೀರ್‌ಸಾದಿಕ್ ಸಿಎಂ ಆಗಿದ್ದ ಅವಧಿಯಲ್ಲಿ ತರಬೇತಿ ಕೊಟ್ಟು ಹೊರಬಿಟ್ಟ ಪಿಎಫ್‌ಐ ಅಲ್ಪಮತೀಯವಾದಿಗಳೇ ಹುಬ್ಬಳ್ಳಿ ಗಲಭೆಗೆ ನೇರ ಕಾರಣ.
— BJP Karnataka (@BJP4Karnataka) April 19, 2022
ಪೊಲೀಸ್ ಬಂಧನದಲ್ಲಿದ್ದವರನ್ನು ನನ್ನ ಕೈಗೊಪ್ಪಿಸಿ ಎಂದು ಅಬ್ಬರಿಸುವ ಇವರಿಗೆ ಕಾನೂನು ಕೈಗೆತ್ತಿಕೊಳ್ಳುವುದು ಹುಟ್ಟು ಚಾಳಿಯೇ?#CONgressSupportsJihadis pic.twitter.com/MxcCAzWBtN
ಪರಿಷತ್ ಚುನಾವಣೆಗೆ ಕಾಂಗ್ರೆಸ್ ಪಕ್ಷ ಸಲೀಮ್ ಅಹಮದ್ ಅವರಿಗೆ ಟಿಕೆಟ್ ನೀಡಿದಾಗ ಹುಬ್ಬಳ್ಳಿ ಕಾಂಗ್ರೆಸ್ ಅಧ್ಯಕ್ಷ ಅಲ್ತಾಫ್ ಅವರಿಗೆ ಅಸಮಾಧಾನವಾಗಿತ್ತು. ಹುಬ್ಬಳ್ಳಿ ಗಲಭೆ ಈ ಅಸಮಾಧಾನದ ಮುಂದುವರೆದ ಭಾಗವೇ? ಹುಬ್ಬಳ್ಳಿ ಗಲಭೆ ಕಾಂಗ್ರೆಸ್ ಪ್ರಾಯೋಜಕತ್ವದಲ್ಲೇ ನಡೆದಿದ್ದೇ? ಈ ಹಿಂದೆ ಮೀರ್‌ಸಾದಿಕ್ ಸಿಎಂ ಆಗಿದ್ದ ಅವಧಿಯಲ್ಲಿ ತರಬೇತಿ ಕೊಟ್ಟು ಹೊರಬಿಟ್ಟ ಪಿಎಫ್‌ಐ ಅಲ್ಪಮತೀಯವಾದಿಗಳೇ ಹುಬ್ಬಳ್ಳಿ ಗಲಭೆಗೆ ನೇರ ಕಾರಣ ಎಂದು ಬಿಜೆಪಿ ಆರೋಪಿಸಿದೆ.
ಇದನ್ನೂ ಓದಿ: ಬಿಜೆಪಿ ಪಕ್ಷವನ್ನು ಬೈದ್ರೆ ಮತ ಪಡೀಬಹುದು ಎಂಬ ಭ್ರಮೆ ಕಾಂಗ್ರೆಸ್‌ನವರದ್ದು: ಬಿ.ಸಿ.ಪಾಟೀಲ್