ETV Bharat / city

ST ಮೀಸಲು ಹೆಚ್ಚಳ, ನ್ಯಾ.ನಾಗಮೋಹನ್ ದಾಸ್ ವರದಿ ಜಾರಿಗೊಳಿಸಿ: CMಗೆ ಎಸ್​​​ಟಿ ಮೋರ್ಚಾ ಮನವಿ - Bangalore

ನ್ಯಾಯಮೂರ್ತಿ ನಾಗಮೋಹನ್​​ ದಾಸ್ ಅವರ ವರದಿಯನ್ನು ಯಥಾವತ್ತಾಗಿ ಜಾರಿಗೊಳಿಸುವ ಮೂಲಕ ಎಸ್​​ಟಿ ಸಮುದಾಯಕ್ಕೆ ನ್ಯಾಯ ಒದಗಿಸಿಕೊಡಬೇಕು ಎಂದು ತಿಪ್ಪರಾಜು ಹವಾಲ್ದಾರ್ ಮನವಿ ಮಾಡಿದರು.

BJP ST Morcha appeal to CM
ಸಿಎಂಗೆ ಮನವಿ ಸಲ್ಲಿಸುತ್ತಿರುವ ಬಿಜೆಪಿ ಎಸ್​​ಟಿ ಮೋರ್ಚಾ
author img

By

Published : Aug 13, 2021, 10:47 PM IST

ಬೆಂಗಳೂರು: ಎಸ್​​ಟಿ ಸಮುದಾಯಕ್ಕೆ ಸದ್ಯ ಇರುವ ಮೀಸಲಾತಿಯ ಪ್ರಮಾಣವನ್ನು ಶೇ.3 ರಿಂದ ಶೇ.7.5ಕ್ಕೆ ಹೆಚ್ಚಳ ಮಾಡುವ ಕುರಿತು ನ್ಯಾಯಮೂರ್ತಿ ನಾಗಮೋಹನ್​​ ದಾಸ್ ವರದಿಯನ್ನು ಯಥಾವತ್ತಾಗಿ ಜಾರಿಗೊಳಿಸಬೇಕು ಎಂದು ಬಿಜೆಪಿ ಎಸ್​​ಟಿ ಮೋರ್ಚಾ ರಾಜ್ಯ ಘಟಕ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರಿಗೆ ಮನವಿ ಸಲ್ಲಿಸಿದೆ.

ಮೋರ್ಚಾದ ರಾಜ್ಯಾಧ್ಯಕ್ಷ ತಿಪ್ಪರಾಜು ಹವಾಲ್ದಾರ್ ನೇತೃತ್ವದ ನಿಯೋಗ ಸಿಎಂ ಗೃಹ ಕಚೇರಿ ಕೃಷ್ಣಾಗೆ ಭೇಟಿ ನೀಡಿ, ಮುಖ್ಯಮಂತ್ರಿಗಳನ್ನು ಭೇಟಿಯಾಗಿ ಎಸ್​​ಟಿ ಮೀಸಲಾತಿ ಹೆಚ್ಚಿಸುವಂತೆ ಮನವಿ ಸಲ್ಲಿಸಿತು. ರಾಜ್ಯದಲ್ಲಿ ಎಸ್​​ಟಿ ಸಮುದಾಯಗಳ ಜನಸಂಖ್ಯೆ ಸುಮಾರು 75 ಲಕ್ಷಕ್ಕೂ ಅಧಿಕವಿದ್ದು, ನಮ್ಮ ಸಮುದಾಯಕ್ಕೆ ಶೇ.3 ಮೀಸಲಾತಿ ನಿಗದಿಯಾಗಿದೆ.

ಸಂವಿಧಾನದ ಪ್ರಕಾರ ಜನಸಂಖ್ಯೆಗೆ ಅನುಗುಣವಾಗಿ ನೀಡಬೇಕಾದ ಪ್ರಮಾಣಕ್ಕಿಂತ ಇದು ಕಡಿಮೆ ಇದೆ. ಮೀಸಲಾತಿ ಪ್ರಮಾಣವನ್ನು ಶೇ 7.5ಕ್ಕೆ ಹೆಚ್ಚಿಸುವ ಕುರಿತು ಸಮುದಾಯದಿಂದ ರಾಜ್ಯಾದ್ಯಂತ ಬೇಡಿಕೆ ಹಾಗೂ ಹೋರಾಟ ಮಾಡಿದ್ದರಿಂದ ಅಂದು ಮುಖ್ಯಮಂತ್ರಿಗಳಾಗಿದ್ದ ಬಿ.ಎಸ್. ಯಡಿಯೂರಪ್ಪ ನ್ಯಾಯಮೂರ್ತಿ ನಾಗಮೋಹನ್​​ ದಾಸ್ ಅವರ ನೇತೃತ್ವದಲ್ಲಿ ಆಯೋಗ ರಚನೆ ಮಾಡಿದ್ದರು.

BJP ST Morcha appeal to CM
ಸಿಎಂಗೆ ಮನವಿ ಸಲ್ಲಿಸುತ್ತಿರುವ ಬಿಜೆಪಿ ಎಸ್​​ಟಿ ಮೋರ್ಚಾ

ನ್ಯಾಯಮೂರ್ತಿಗಳು ಸಲ್ಲಿಸಿರುವ ವರದಿಯು ಸರ್ಕಾರದ ಪರಿಶೀಲನೆ ಹಂತದಲ್ಲಿದೆ. ತಾವು ಈ ಸಮುದಾಯದ ಬಹುದಿನಗಳ ಬೇಡಿಕೆಯನ್ನು ನ್ಯಾಯಮೂರ್ತಿ ನಾಗಮೋಹನ್​​ ದಾಸ್ ಅವರ ವರದಿಯನ್ನು ಯಥಾವತ್ತಾಗಿ ಜಾರಿಗೊಳಿಸುವ ಮೂಲಕ ಈ ಸಮುದಾಯಕ್ಕೆ ನ್ಯಾಯ ಒದಗಿಸಿಕೊಡಬೇಕು ಎಂದು ತಿಪ್ಪರಾಜು ಹವಾಲ್ದಾರ್ ಮನವಿ ಮಾಡಿದರು.

ಮುಖ್ಯಮಂತ್ರಿಗಳಾಗಿ ಪ್ರಮಾಣ ವಚನ ಸ್ವೀಕರಿಸಿದ ತಕ್ಷಣ ಪರಿಶಿಷ್ಟ ಪಂಗಡಗಳ ಸಮುದಾಯಕ್ಕೆ ಪ್ರತ್ಯೇಕವಾಗಿ ಸಚಿವಾಲಯವನ್ನು ಘೋಷಣೆ ಮಾಡಿದ್ದು, ಇದರಿಂದ ಬಹುದಿನಗಳ ಈ ಸಮುದಾಯದ ಬೇಡಿಕೆ ಈಡೇರಿಸಿದಂತಾಗಿದೆ. ಇದರಿಂದ ಪರಿಶಿಷ್ಟ ಪಂಗಡಗಳ ಅಭಿವೃದ್ಧಿಗೆ ಸಹಾಯ ಮಾಡಿದಂತಾಗಿದೆ. ಅದಕ್ಕಾಗಿ ಈ ನಾಡಿನ ಸಮಗ್ರ ಎಸ್​​ಟಿ ಸಮುದಾಯಗಳ ಪರವಾಗಿ ಹಾಗೂ ರಾಜ್ಯ ಎಸ್​​ಟಿ ಮೋರ್ಚಾದ ಪರವಾಗಿ ತುಂಬು ಹೃದಯದ ಕೃತಜ್ಞತೆಗಳನ್ನು ಸಲ್ಲಿಸುವುದಾಗಿ ತಿಪ್ಪರಾಜು ಹವಾಲ್ದಾರ್ ಹೇಳಿದರು.

ತಮ್ಮ ಅಧಿಕಾರಾವಧಿಯಲ್ಲಿ ಈ ಸಮುದಾಯದ ಇನ್ನೊಂದು ಪ್ರಮುಖ ಬೇಡಿಕೆಯಾದ ಧಾರವಾಡದ ಕರ್ನಾಟಕ ವಿಶ್ವವಿದ್ಯಾನಿಲಯದಲ್ಲಿ ಆದಿ ಕವಿ ವಾಲ್ಮೀಕಿ ಅಧ್ಯಯನ ಪೀಠವನ್ನು ಪ್ರಾರಂಭಿಸಿದ್ದೀರಿ. ಇದರಿಂದ ಆದಿಕವಿ ಮಹರ್ಷಿ ವಾಲ್ಮೀಕಿ ಅವರ ಜೀವನ ಮತ್ತು ಬದುಕಿನ ಅಧ್ಯಯನಕ್ಕೆ ಚಾಲನೆ ಲಭಿಸಿದೆ. ಜಗತ್ತಿನ ಮೊದಲ ಬೃಹತ್ ಆದಿ ಕಾವ್ಯವನ್ನು ರಚಿಸಿದ ಮಹಾನ್ ಮಹರ್ಷಿಗೆ ಗೌರವ ತೋರಿದ್ದೀರಿ. ಅದಕ್ಕಾಗಿ ಈ ನಾಡಿನ ಸಮಗ್ರ ವಾಲ್ಮೀಕಿ ಸಮುದಾಯಗಳ ಪರವಾಗಿ ಹಾಗೂ ರಾಜ್ಯ ಎಸ್.ಟಿ. ಮೋರ್ಚಾದ ಪರವಾಗಿ ಧನ್ಯವಾದ ಅರ್ಪಿಸುವುದಾಗಿ ಹೇಳಿದರು.

ಇದನ್ನೂ ಓದಿ: ಎಸ್​ಟಿ ಮೀಸಲಾತಿ ಹೆಚ್ಚಳ ಮಾಡಲು ಕ್ರಮ: ಸಿಎಂ ಬಿಎಸ್​​ವೈ ಭರವಸೆ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.