ETV Bharat / city

ಕಾಂಗ್ರೆಸ್​ ವಿರುದ್ಧ ರಾಜ್ಯಾದ್ಯಂತ ಫೆ.27, 28 ರಂದು ಬಿಜೆಪಿ ಪ್ರತಿಭಟನೆ - ರಾಜ್ಯದಲ್ಲಿ ಬಿಜೆಪಿ ಪ್ರತಿಭಟನೆ

ಕಾಂಗ್ರೆಸ್​ ವಿರುದ್ಧ ಫೆಬ್ರವರಿ 27-28 ರಂದು ರಾಜ್ಯಾದ್ಯಂತ ಬಿಜೆಪಿ ದೊಡ್ಡ ಮಟ್ಟದಲ್ಲಿ ಪ್ರತಿಭಟನೆ ನಡೆಸಲಿದೆ ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ರವಿಕುಮಾರ್ ತಿಳಿಸಿದ್ದಾರೆ.

BJP protest against Congress
ಕಾಂಗ್ರೆಸ್ ವಿರುದ್ಧ ಬಿಜೆಪಿ ಪ್ರತಿಭಟನೆ
author img

By

Published : Feb 24, 2022, 6:48 PM IST

ಬೆಂಗಳೂರು: ಸದನದಲ್ಲಿ ಕಲಾಪ ಹಾಳು ಮಾಡಿದ್ದು ಸೇರಿದಂತೆ ಕಾಂಗ್ರೆಸ್​​​ನ ಜನವಿರೋಧಿ ನೀತಿ, ಕ್ಷುಲ್ಲಕ ರಾಜಕಾರಣ ಮಾಡುತ್ತಿರುವುದನ್ನು ಖಂಡಿಸಿ ಫೆಬ್ರವರಿ 27-28 ರಂದು ರಾಜ್ಯಾದ್ಯಂತ ಬಿಜೆಪಿ ದೊಡ್ಡ ಮಟ್ಟದಲ್ಲಿ ಪ್ರತಿಭಟನೆ ನಡೆಸಲಿದೆ ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ರವಿಕುಮಾರ್ ತಿಳಿಸಿದ್ದಾರೆ. ಮಲ್ಲೇಶ್ವರಂನಲ್ಲಿರುವ ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಜನ ವಿರೋಧಿ, ನಗರ ನಕ್ಸಲ್ ಪರ, ಭಯೋತ್ಪಾದಕರ ಪರ, ಉಗ್ರವಾದಿಗಳ ಪರ ಇರುವ ಕಾಂಗ್ರೆಸ್ ವಿರುದ್ಧ ರಾಜ್ಯಾದ್ಯಂತ ದೊಡ್ಡ ಹೋರಾಟ ಮಾಡಲಿದ್ದೇವೆ ಎಂದರು.

ಕಾಂಗ್ರೆಸ್ ವಿರುದ್ಧ ಪ್ರತಿಭಟನೆ: ಸದನದಲ್ಲಿ ರಾಜ್ಯದ ಸಮಸ್ಯೆಗಳ ಚರ್ಚೆಗೆ ಅವಕಾಶ ಸಿಗಲಿಲ್ಲ. ಹಗಲು ರಾತ್ರಿ ಧರಣಿ ಮಾಡಿ, ಊಟ ಮಾಡಿ, ಹರಟೆ ಹೊಡೆದು ಮಲಗಿದರು. ಶಿಮೊಗ್ಗದಲ್ಲಿ ಮೃತಪಟ್ಟ ಬಜರಂಗದಳದ ಹರ್ಷನ ಮನೆಗೆ ಹೋಗಲು ಇವರಿಗೆ ಸಮಯ ಇಲ್ಲ. ಆದ್ರೆ 15 ಜನರು ದೆಹಲಿಗೆ ಹೋಗಿದ್ದಾರೆ‌. ಹಾಗಾಗಿ ಹಿಂದೂ ವಿರೋಧಿ ಕಾಂಗ್ರೆಸ್ ವಿರುದ್ಧ ಧರಣಿ ನಡೆಸಲಿದ್ದೇವೆ. ಇವರು ಟಿಪ್ಪು ಜಯಂತಿ ಮಾಡಿದ್ದರು. ಆದರೆ ಸಾವರ್ಕರ್, ಅಂಬೇಡ್ಕರ್ ಅವರನ್ನು ವಿರೋಧಿಸಿದರು. ಮತಾಂಧತೆ ಪೋಷಿಸಿ ಬೆಳೆಸುತ್ತಿರುವ ಸಂಘಟನೆಗಳ ಕೇಸ್ ಕೈ ಬಿಟ್ಟು ದಾದಾಗಿರಿ ಮಾಡುವವರನ್ನು ರಾಜಾ ರೋಷವಾಗಿ ಓಡಾಡಲು ಬಿಟ್ಟಿದ್ದರು. ಇವೆಲ್ಲವನ್ನೂ ವಿರೋಧಿಸಿ ರಾಜ್ಯಾದ್ಯಂತ ಫೆಬ್ರವರಿ 27-28 ರಂದು ಪ್ರತಿಭಟನೆ ನಡೆಸಲಿದ್ದೇವೆ ಎಂದರು.

ಕಾಂಗ್ರೆಸ್ ಕೂಸಾಗಿ ಇಂದು ಹೆಮ್ಮರವಾಗಿ ಬೆಳೆದಿರುವ ಸಿಎಫ್ಐ, ಎಸ್​ಡಿಪಿಐ ತರಹದ ಸಂಘಟನೆಗಳು ಇಂದು ಕೋವಿಡ್ ರೂಪಾಂತರಿಗಳಂತೆ ಬೆಳೆದಿವೆ. ವಿಪಕ್ಷ ನಾಯಕ ಸಿದ್ದರಾಮಯ್ಯ ಇವರ ಬೆಳವಣಿಗೆಗೆ ಕಾರಣ. ಭಯೋತ್ಪಾದಕರಿಗೆ, ಉಗ್ರವಾದಿ ಚಟುವಟಿಕೆಗಳಿಗೆ ಆಶ್ರಯತಾಣವಾಗಿದ್ದವರ ವಿರುದ್ಧ ಇದ್ದ ಕೇಸ್ ವಾಪಸ್ ಪಡೆದರು. ಅದರ ಫಲವಾಗಿ ಈಗ ಆ ಸಂಘಟನೆಗಳು ಹೆಮ್ಮರವಾಗಿ ಬೆಳೆದಿವೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಡಿಕೆಶಿ ಸುಳ್ಳಿನ ಕುಮಾರ: ಆರು ವಿದ್ಯಾರ್ಥಿನಿಯರು ರಾಜ್ಯದ ಶೈಕ್ಷಣಿಕ ವ್ಯವಸ್ಥೆ ಹಾಳು ಮಾಡಿದರು. ಒಂದು ಕೋಟಿ ವಿದ್ಯಾರ್ಥಿಗಳು ಅದಕ್ಕಾಗಿ ಶಾಪ ಹಾಕುತ್ತಿದ್ದಾರೆ. ಇನ್ನೂ ಹರ್ಷನ ಕೊಲೆ ಅತ್ಯಂತ ವ್ಯವಸ್ಥಿತ ಕೊಲೆಯಾಗಿದೆ. ಇದನ್ನೆಲ್ಲಾ ಖಂಡಿಸಿ ಸುಳ್ಳು ಹೇಳಿರುವ ಡಿಕೆ ಶಿವಕುಮಾರ್ ಸುಳ್ಳಿನ ಕುಮಾರ. ರಾಷ್ಟ್ರಧ್ವಜ ಇರಲೇ ಇಲ್ಲ, ಆದರೂ ರಾಷ್ಟ್ರಧ್ವಜ ಇಳಿಸಿ ಕೇಸರಿ ಧ್ವಜ ಹಾರಿಸಿದ್ದಾರೆಂದು ಹಸಿ ಸುಳ್ಳು ಹೇಳಿದರು. ಯುವ ಘಟಕಕ್ಕೂ ದಾದಾಗಿರಿಯವರನ್ನೇ ಅಧ್ಯಕ್ಷರನ್ನಾಗಿ ಮಾಡಿದ್ದಾರೆ. ಅಶ್ವತ್ಥನಾರಾಯಣ ವಿರುದ್ಧವೂ ದೈಹಿಕ ಹಲ್ಲೆಗೆ ಯತ್ನಿಸಿದ್ದರು. ಸದನದಲ್ಲಿ ಈಶ್ವರಪ್ಪ ವಿರುದ್ಧ ಹಲ್ಲೆಗೆ ಯತ್ನಿಸಿದ್ದಾರೆ. ಇವರ ದಾಟಿ ಏನು? ಎಂದು ಪ್ರಶ್ನಿಸಿದರು.

ಸಿದ್ದು ಸರ್ಕಾರ ವಾಪಸ್ ಪಡೆದಿದ್ದ ಕೇಸ್ ರೀ ಓಪನ್: ಸಿದ್ದರಾಮಯ್ಯ ಸರ್ಕಾರದ ಅವಧಿಯಲ್ಲಿ ಎಸ್​ಡಿಪಿಐ, ಪಿಎಫ್ಐ ಸೇರಿ ಹಲವು ಸಂಘಟನೆಗಳ ವಿರುದ್ಧದ ಕೇಸ್​ಗಳನ್ನು ವಾಪಸ್ ಪಡೆದಿದ್ದು, ಈಗ ಆ ಪ್ರಕರಣಗಳ ಮರು ವಿಚಾರಣೆ ಆರಂಭ ಕುರಿತು ಚಿಂತನೆ ನಡೆಸುವಂತೆ ಸರ್ಕಾರಕ್ಕೆ ಮನವಿ ಮಾಡುತ್ತೇವೆ ಎಂದರು.

ತಡವಾದರೂ ಕ್ರಮ ಖಚಿತ: ಪ್ರತಾಪ್ ಸಿಂಹ ಭಾವಾವೇಶದಲ್ಲಿ ಮಾತನಾಡುವಾಗ ನಮ್ಮ ಸರ್ಕಾರ ಇದ್ದಾಗಲೇ ಹರ್ಷ ಕೊಲೆಯಾಗಿದ್ದು ನಮಗೆ ನಾಚಿಕೆಗೇಡು ಎನ್ನುವ ಹೇಳಿಕೆ ನೀಡಿದ್ದಾರೆ. ಸರ್ಕಾರ ಈ ಹತ್ಯೆ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದೆ. ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಲಿದೆ, ಉಪ್ಪು ತಿಂದವರು ನೀರು ಕುಡಿಯಲೇಬೇಕು, ತಡವಾಗಬಹುದು ಆದರೆ, ಕ್ರಮ ಖಚಿತ ಎಂದರು.

ಶಿವಮೊಗ್ಗ ಘಟನೆ ಪೂರ್ವ ನಿಯೋಜಿತ: ಎಸ್​ಡಿಪಿಐ, ಪಿಎಫ್ಐ ನಂತಹ ಸಂಘಟನೆಗಳನ್ನು ನಿಷೇಧ ಮಾಡಬೇಕು ಎಂದು ಎಲ್ಲ ಕ್ಷೇತ್ರದಿಂದ ಜನಾಭಿಪ್ರಾಯ ಬರುತ್ತಿದೆ, ಕೋವಿಡ್ ರೀತಿ ಈ ಸಂಘಟನೆಗಳು ರೂಪಾಂತರಿಯಾಗುತ್ತಿದೆ. ಶಿವಮೊಗ್ಗ ಘಟನೆ ಪೂರ್ವ ನಿಯೋಜಿತ. ದೊಡ್ಡ ಪ್ರಮಾಣದಲ್ಲಿ ಆಗುತ್ತಿತ್ತು, ಆದರೆ ಪೊಲೀಸರು ಇದನ್ನು ತಡೆದಿದ್ದಾರೆ ಎಂದರು.

ಕೇಸರಿ ಧ್ವಜ ಹಾರಿಸಿದ್ದು ತಪ್ಪು: ಕೇಸರಿ ಧ್ವಜ ಹಾರಿಸಿದ್ದೂ ಸಹ ತಪ್ಪು, ಕಾಲೇಜಿನಲ್ಲಿ ಯಾಕೆ ಕೇಸರಿ ಧ್ವಜ ಹಾರಿಸಬೇಕು? ಯಾರು ಅಧಿಕಾರ ಕೊಟ್ಟರು, ನಾವು ಇದನ್ನೂ ಖಂಡಿಸುತ್ತೇವೆ. ಹುಬ್ಬಳ್ಳಿಯಲ್ಲಿ ಮೊದಲು ರಾಷ್ಟ್ರಧ್ವಜ ಹಾರಿಸಿದ್ದು ನಾನು, ಗೌರವಪೂರ್ವಕವಾಗಿ ಹಾರಿಸಿದ್ದೇವೆ. ಆದ್ರೆ ಕಾಂಗ್ರೆಸ್ ನವರು ಸದನಕ್ಕೆ ಬರುವಾಗ ಜೇಬಿನಲ್ಲಿ ಇಟ್ಟುಕೊಂಡು ಬಂದ ರೀತಿ ಅಗೌರವವನ್ನು ನಾವು ತೋರಲ್ಲ ಎಂದರು.

ಇದನ್ನೂ ಓದಿ: ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಸಚಿವಾಲಯದ ನೌಕರರ ಸಂಘದದಿಂದ ಪ್ರತಿಭಟನೆ!

ರಾಜಕೀಯ ಪಕ್ಷವಾಗುವ ಅರ್ಹತೆ ರಾಜ್ಯ ಕಾಂಗ್ರೆಸ್​ಗೆ ಇಲ್ಲ. ಇವರಿಗೆ ಸನ್ಮಾನ ಮಾಡಲು ರಾಹುಲ್ ಗಾಂಧಿ ದೆಹಲಿಗೆ ಕರೆಸಿಕೊಂಡಿದ್ದಾರೆ. ಹರ್ಷನ ಮನೆಗೆ ಹೋಗಿ ಸಾಂತ್ವನ ಹೇಳಿ ಎನ್ನುವ ಬದಲು ಇವರನ್ನು ರಾಹುಲ್‌ ಗಾಂಧಿ ಯಾಕೆ ಕರೆಸಿಕೊಂಡರು ಎಂದು ಟೀಕಿಸಿದರು.

ಹೈಕಮಾಂಡ್​ಗೆ ವರದಿ: ಹರ್ಷ ಕೊಲೆ ಪ್ರಕರಣ, ಹಿಜಾಬ್ ಸಂಘರ್ಷ, ಈಶ್ವರಪ್ಪ ಹೇಳಿಕೆ ವಿವಾದ, ಕಾಂಗ್ರೆಸ್ ಧರಣಿ ಸೇರಿದಂತೆ ಪ್ರಸಕ್ತ ರಾಜಕೀಯ ವಿದ್ಯಮಾನಗಳ ಕುರಿತು ಹೈಕಮಾಂಡ್​ಗೆ ಸಮಗ್ರ ವರದಿಯನ್ನು ಪಕ್ಷದ ರಾಜ್ಯ ಘಟಕದಿಂದ ನೀಡಲಾಗುತ್ತದೆ ಎಂದು ತಿಳಿಸಿದರು. ಕಾಂಗ್ರೆಸ್ ಹೇಗೆ ಜನದ್ರೋಹಿ ಕೆಲಸ ಮಾಡುತ್ತಿದೆ ಎಂದು ಹೈಕಮಾಂಡ್​ಗೆ ವರದಿ ಕಳಿಸಲಿದ್ದೇವೆ. ಹಿಜಾಬ್, ರಾಷ್ಟ್ರಧ್ವಜ, ಪಾದಯಾತ್ರೆ ಹೆಸರಿನಲ್ಲಿ ಕಾಂಗ್ರೆಸ್​ನಿಂದ ಕೊರೊನಾ ಹರಡುವಿಕೆ ಕುರಿತು ಸಮಗ್ರ ವರದಿ ಕಳಿಸಲಿದ್ದೇವೆ. ಹೈಕಮಾಂಡ್ ವರದಿ ಕೇಳದೇ ಇದ್ದರೂ ನಾವೇ ವರದಿ ಕಳಿಹಿಸಲಿದ್ದೇವೆ ಎಂದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.