ಬೆಂಗಳೂರು: ಬಿಜೆಪಿ ನಾಯಕರಿಗೆ ಅಮಿತ್ ಶಾ ಮುಂದೆ ಮಾತನಾಡುವ ಧೈರ್ಯವಿಲ್ಲ ಎಂದು ಮಾಜಿ ಸಚಿವ ಬಂಡೆಪ್ಪ ಕಾಶೆಂಪೂರ ಟೀಕಿಸಿದ್ದಾರೆ.
ಭದ್ರಾವತಿ ಕಾರ್ಯಕ್ರಮದಲ್ಲಿ ಕನ್ನಡ ಕಡೆಗಣನೆ ವಿಚಾರವಾಗಿ ವಿಧಾನಸೌಧದಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಕನ್ನಡವೇ ಆಡಳಿತ ಭಾಷೆ. ತಮಿಳುನಾಡಿಗೆ ಹೋದರೆ ಬೇರೆ ಭಾಷೆ ಇರುತ್ತೆ. ಅಲ್ಲಿ ತಮಿಳು ಬಿಟ್ಟರೆ ಬೇರೆ ಹಾಕಲ್ಲ. ಇಲ್ಲೂ ಹಾಗೆಯೇ ಇರಬೇಕಲ್ವಾ?. ಪ್ರೊಟೋಕಾಲ್ ಇರಬಹುದು. ಆದರೆ, ಕನ್ನಡ ಹಾಕಬಾರದು ಅಂತ ಎಲ್ಲಾದ್ರೂ ಹೇಳಿದ್ಯಾ?. ನಮ್ಮ ಸರ್ಕಾರ ಇಚ್ಛಾಶಕ್ತಿಯನ್ನು ತೋರಬೇಕು. ಇದನ್ನ ನಾನು ಬಲವಾಗಿ ಖಂಡಿಸುತ್ತೇನೆ. ಬಿಜೆಪಿ ನಾಯಕರಿಗೆ ಅಮಿತ್ ಶಾ ಮುಂದೆ ಮಾತನಾಡುವ ಧೈರ್ಯವಿಲ್ಲ ಎಂದರು.
ಮಹಾ ಸಿಎಂ ಉದ್ಧವ್ ಠಾಕ್ರೆ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಅವರದ್ದು ಉದ್ಧಟತನದ ಹೇಳಿಕೆ. ನೆಲ, ಜಲ, ಭಾಷೆ ವಿಚಾರದಲ್ಲಿ ನಾವೆಲ್ಲ ಒಂದೇ. ಧಕ್ಕೆ ಬಂದರೆ ನಾವೆಲ್ಲರೂ ಹೋರಾಟ ಮಾಡುತ್ತೇವೆ ಎಂದರು.
ವೀಕ್ಷಕರ ತಂಡದಲ್ಲಿ ಜಿಟಿಡಿ, ಮಧು ಬಂಗಾರಪ್ಪ ಹೆಸರನ್ನು ಕೈಬಿಟ್ಟಿರುವ ವಿಚಾರವಾಗಿ ಪ್ರತಿಕ್ರಿಯಿಸಿ, ಪಕ್ಷ ಸಂಘಟನೆಗಾಗಿ ಅಷ್ಟೇ ವೀಕ್ಷಕರ ತಂಡಗಳನ್ನು ರಚನೆ ಮಾಡಲಾಗಿದೆ. ಹಾಗಾಗಿ ಆ ತಂಡದಲ್ಲಿ ಜಿಟಿಡಿ, ಮಧು ಬಂಗಾರಪ್ಪ ಹೆಸರಿಲ್ಲ. ಹಾಗೆಂದ ಮಾತ್ರಕ್ಕೆ ಅವರು ಪಕ್ಷದಲ್ಲಿ ಇಲ್ಲ ಅಂತ ಅರ್ಥವಲ್ಲ. ಅವರೆಲ್ಲರೂ ಪಕ್ಷದಲ್ಲೇ ಇದ್ದಾರೆ.
ಓದಿ: ಶ್ವೇತಭವನಕ್ಕೆ ಕಾಲಿಡಲಿವೆ ಬೈಡನ್ ಸಾಕಿರುವ ಪೆಟ್ಸ್
ಗುಬ್ಬಿ ಶ್ರೀನಿವಾಸ್ ಪಕ್ಷದಲ್ಲಿ ಇಲ್ಲ ಅಂತಾ ಹೇಳ್ತಿದ್ರು, ಅವರೂ ಜೆಡಿಎಸ್ ಸಭೆಗೆ ಬರಲಿಲ್ಲವೇ?. ಯಾರೂ ಪಕ್ಷ ಬಿಟ್ಟು ಹೋಗುತ್ತಿಲ್ಲ. ಎಲ್ಲರೂ ನಮ್ಮ ಜೊತೆಯೇ ಇದ್ದಾರೆ. ಕೆಲವು ಅಸಮಾಧಾನ ಇವೆ. ಕುಮಾರಣ್ಣ ಅದನ್ನೆಲ್ಲಾ ಬಗೆಹರಿಸುತ್ತಾರೆ ಎಂದು ಕಾಶೆಂಪೂರ ಸ್ಪಷ್ಟಪಡಿಸಿದರು.