ETV Bharat / city

ಕರ್ನಾಟಕದಲ್ಲಿ ಅವಧಿಪೂರ್ವ ವಿಧಾನಸಭೆ ಚುನಾವಣೆಯತ್ತ ಬಿಜೆಪಿ ಹೈಕಮಾಂಡ್ ಚಿತ್ತ - ಬಿಜೆಪಿ ಚಿಂತನ ಮಂಥನ ಸಭೆ

ಈ ವರ್ಷದ ಅಂತ್ಯದಲ್ಲಿ ಗುಜರಾತ್ ವಿಧಾನಸಭೆ ಚುನಾವಣೆ ನಡೆಯಲಿದ್ದು, ಆ ಸಂದರ್ಭದಲ್ಲಿಯೇ ಕರ್ನಾಟಕ ವಿಧಾನಸಭೆಗೂ ಚುನಾವಣೆ ನಡೆಸುವ ಇಂಗಿತವನ್ನು ಬಿಜೆಪಿ ಹೈಕಮಾಂಡ್ ವ್ಯಕ್ತಪಡಿಸುತ್ತಿದೆ ಎಂದು ಹೇಳಲಾಗಿದೆ.

Karnataka Pre Term Elections Discussion in BJP
ಕರ್ನಾಟಕದಲ್ಲಿ ಅವಧಿಪೂರ್ವ ಚುನಾವಣೆ ಕುರಿತು ಬಿಜೆಪಿ ಹೈಕಮಾಂಡ್ ಚರ್ಚೆ
author img

By

Published : Jul 15, 2022, 7:08 AM IST

Updated : Jul 15, 2022, 7:19 AM IST

ಬೆಂಗಳೂರು: ರಾಜ್ಯದಲ್ಲಿ ವಿಧಾನಸಭೆಗೆ ಅವಧಿಪೂರ್ವ ಚುನಾವಣೆ ನಡೆಸಿದರೆ ಹೇಗೆ?, ಆರು ತಿಂಗಳು ಮೊದಲೇ ಚುನಾವಣೆಯಾದರೆ ಬಿಜೆಪಿಗೆ ಲಾಭವಾಗಲಿದೆಯಾ? ಎಂಬ ಬಗ್ಗೆ ಬಿಜೆಪಿ ಹೈಕಮಾಂಡ್ ಗಂಭೀರ ಚಿಂತನೆ ನಡೆಸುತ್ತಿದೆ. ಅವಧಿಗೂ ಮುನ್ನವೇ ಚುನಾವಣೆ ನಡೆಸುವ ಬಗ್ಗೆ ರಾಜ್ಯದ ಕೆಲವು ಬಿಜೆಪಿ ಮುಖಂಡರ ಅಭಿಪ್ರಾಯವನ್ನೂ ಹೈಕಮಾಂಡ್ ಕೇಳಿದೆಯಂತೆ.

ರಾಜ್ಯ ವಿಧಾನಸಭೆಗೆ ಮಧ್ಯಂತರ ಚುನಾವಣೆ ನಡೆಸಲು ಹೈಕಮಾಂಡ್ ಈ ಮೊದಲು ಬಹಳ ಗಂಭೀರವಾಗಿ ಯೋಚಿಸಿತ್ತು. ಆದರೆ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸೇರಿದಂತೆ ಹಲವಾರು ಮುಖಂಡರು, ಪಕ್ಷದ ಶಾಸಕರು ಒಲವು ತೋರದೇ ಇರುವುದರಿಂದ ಮಧ್ಯಂತರಕ್ಕೇ ಕೈಬಿಟ್ಟಿತು.

Karnataka Pre Term Elections Discussion in BJP

ರಾಜ್ಯ ವಿಧಾನಸಭೆಯ ಅವಧಿ 2023ರ ಮೇ ತಿಂಗಳಿನಲ್ಲಿ ಕೊನೆಗೊಳ್ಳಲಿದೆ. ಆರು ತಿಂಗಳು ಮೊದಲೇ ಅಂದರೆ ನವೆಂಬರ್-ಡಿಸೆಂಬರ್​​ನಲ್ಲಿ ಚುನಾವಣೆ ನಡೆಸಿದರೆ ಪಕ್ಷಕ್ಕೆ ಹೆಚ್ಚು ಅನುಕೂಲವಾಗಬಹುದು. ಇದೇ ಸಮಯದಲ್ಲಿ ಗುಜರಾತ್ ವಿಧಾನಸಭೆ ಚುನಾವಣೆ ಸಹ ನಡೆಯಲಿದ್ದು, ಕರ್ನಾಟಕ ಮತ್ತು ಗುಜರಾತ್ ರಾಜ್ಯಗಳ ಚುನಾವಣೆ ಏಕಕಾಲಕ್ಕೆ ನಡೆಸಿದರೆ ಬಿಜೆಪಿಗೆ ಹೆಚ್ಚಿನ ಮತಗಳನ್ನು ಪಡೆಯಬಹುದು ಎನ್ನುವ ಅಭಿಪ್ರಾಯ ಬಿಜೆಪಿ ಹೈಕಮಾಂಡ್‌ ನಾಯಕರದ್ದು ಎನ್ನಲಾಗಿದೆ.

CM Basavaraj Bommai

ಬಿಜೆಪಿ ಹೈಕಮಾಂಡ್ ಲೆಕ್ಕಾಚಾರವೇನು?: ಕರ್ನಾಟಕ ವಿಧಾನಸಭೆಗೆ ಅವಧಿಗೆ ಮೊದಲೇ ಚುನಾವಣೆ ನಡೆಸುವ ಉದ್ದೇಶದ ಬಿಜೆಪಿ ವರಿಷ್ಠರು ವಿಭಿನ್ನವಾದ ರಾಜಕೀಯ ಲೆಕ್ಕಾಚಾರಗಳನ್ನು ಹೊಂದಿದ್ದಾರೆ ಎಂದು ಹೇಳಲಾಗುತ್ತಿದೆ. ಅವುಗಳೇನು?

  • ಮೊದಲನೆಯದಾಗಿ ಕರ್ನಾಟಕ ಮತ್ತು ಗುಜರಾತ್ ಎರಡೂ ರಾಜ್ಯಗಳಲ್ಲಿ ಆಡಳಿತ ನಡೆಸುತ್ತಿರುವ ಬಿಜೆಪಿ ಪ್ರಮುಖ ಪ್ರತಿಸ್ಪರ್ಧಿ ಕಾಂಗ್ರೆಸ್ ಪಕ್ಷವೇ ಆಗಿದೆ. ಎರಡೂ ರಾಜ್ಯಗಳಲ್ಲಿ ಒಂದೇ ಅವಧಿಗೆ ಚುನಾವಣೆ ನಡೆಸುವುದರಿಂದ ಕಾಂಗ್ರೆಸ್ ಪಕ್ಷವನ್ನು ಕಟ್ಟಿ ಹಾಕಬಹುದು. ಕಾಂಗ್ರೆಸ್ ಹೈಕಮಾಂಡ್ ಎರಡೂ ರಾಜ್ಯಗಳಲ್ಲಿ ಏಕಕಾಲದಲ್ಲಿ ನಡೆಯುವ ಚುನಾವಣೆಯಲ್ಲಿ ಅಬ್ಬರದ ಪ್ರಚಾರ, ಮತದಾರರನ್ನು ಆಕರ್ಷಿಸುವಂತಹ ಹೆಚ್ಚಿನ ರ‍್ಯಾಲಿ ನಡೆಸುವುದು ಕಷ್ಟವಾಗುತ್ತದೆ. ಪ್ರತ್ಯೇಕವಾಗಿ ಗುಜರಾತ್ ಮತ್ತು ಕರ್ನಾಟಕ್ಕೆ ನಿಗದಿತ ಅವಧಿಯಲ್ಲಿ ಚುನಾವಣೆ ನಡೆಸಿದಾಗ ಕಾಂಗ್ರೆಸ್ ಹೈಕಮಾಂಡ್ ಎರಡೂ ರಾಜ್ಯಕ್ಕೆ ಹೆಚ್ವಿನ ಗಮನ ನೀಡಲು ಅವಕಾಶ ನೀಡಿದಂತಾಗುತ್ತದೆ.
  • ಗುಜರಾತ್ ಜತೆ ಚುನಾವಣೆಗೆ ಹೋಗುವುದರಿಂದ ಗುಜರಾತ್​​ನಲ್ಲಿನ ಬಿಜೆಪಿ ಉತ್ತಮ ಆಡಳಿತದ ಪ್ರಭಾವ ಕರ್ನಾಟಕದ ಮತದಾರರ ಮೇಲೂ ಆಗಲಿದ್ದು, ಹೆಚ್ಚಿನ ಸೀಟು ಗೆಲ್ಲಲು ಸಹಾಯಕವಾಗಲಿದೆ.
  • ರಾಜ್ಯದಲ್ಲಿ ಮುಖ್ಯಮಂತ್ರಿ ಬೊಮ್ಮಾಯಿ ಸರ್ಕಾರದ ಆಡಳಿತ ಮುಂದುವರಿದರೆ ಆಡಳಿತ ವಿರೋಧಿ ಅಲೆ ಹೆಚ್ಚಾಗಿ ಪ್ರತಿ ಪಕ್ಷಗಳಾದ ಕಾಂಗ್ರೆಸ್ ಮತ್ತು ಜೆಡಿಎಸ್​​ಗೆ ಅನುಕೂಲವಾಗಬಹುದು.
  • ರಾಜ್ಯದಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ಇನ್ನೂ ಚುನಾವಣೆಗೆ ಸಂಪೂರ್ಣವಾಗಿ ಸಿದ್ಧವಾಗಿಲ್ಲ. ಈ ಸಂದರ್ಭದಲ್ಲಿ ಅವಧಿ ಪೂರ್ವ ಚುನಾವಣೆಗೆ ಹೋದರೆ ಬಿಜೆಪಿಗೆ ಹೆಚ್ಚಿನ ಪ್ರಯೋಜನವಾಗಬಹುದು.
  • ಅವಧಿ ಪೂರ್ವ ಚುನಾವಣೆಯಾದರೆ ಸಚಿವ ಸಂಪುಟ ವಿಸ್ತರಣೆ ಒತ್ತಡ ಮತ್ತು ನಾಯಕತ್ವ ಬದಲಾವಣೆ ಗೊಂದಲಗಳು ಇರುವುದಿಲ್ಲ.
  • ಪಕ್ಷದ ಆಂತರಿಕ ಸಮೀಕ್ಷೆಗಳು ಯಾವ ಪಕ್ಷಕ್ಕೂ ಸ್ಪಷ್ಟ ಬಹುಮತ ಸಿಗುವುದು ಕಷ್ಟ. ತ್ರಿಶಂಕು ಸ್ಥಿತಿ ನಿರ್ಮಾಣವಾಗುವ ಸಾಧ್ಯತೆಗಳ ಮುನ್ಸೂಚನೆ ನೀಡಿರುವುದರಿಂದ ಲೋಪ ದೋಷ ಸರಿಪಡಿಸಿ, ಆಪರೇಷನ್ ಕಮಲ ಮಾಡಿ ಅಧಿಕಾರಕ್ಕೆ ಬರುವ ಸಾಧ್ಯತೆ ಹೆಚ್ಚಾಗಿವೆ.
  • ಅವಧಿ ಪೂರ್ವ ಚುನಾವಣೆಯಲ್ಲಿ ಗೆದ್ದು ಬಂದರೆ ನಿಜವಾದ ಬಿಜೆಪಿಗರಿಗೆ ಅಧಿಕಾರ ಸಿಗುತ್ತದೆ. ವಲಸಿಗರಿಗೆ ಪ್ರಸ್ತುತ ಸರ್ಕಾರದಲ್ಲಿ ನೀಡಿದಷ್ಟು ಸಚಿವ ಸ್ಥಾನಗಳನ್ನು ನೀಡುವ ಅವಶ್ಯಕತೆ ಇರುವುದಿಲ್ಲ.
  • ಚುನಾವಣೆಯಲ್ಲಿ ಪಕ್ಷ ಅಧಿಕಾರಕ್ಕೆ ಬಂದರೆ ಹೈಕಮಾಂಡ್​​ಗೆ ಇಷ್ಟವಾಗುವಂತಹ ಅಭ್ಯರ್ಥಿಯನ್ನೇ ಮುಖ್ಯಮಂತ್ರಿಯಾಗಿ ನೇಮಕ ಮಾಡಬಹುದಾಗಿದೆ. ಈಗಿರುವಂತೆ ಯಡಿಯೂರಪ್ಪನವರ ಬೆಂಬಲಿಗರಿಗೆ ಅವಕಾಶ ನೀಡುವ ಪರಿಸ್ಥಿತಿ ನಿರ್ಮಾಣವಾಗುವುದಿಲ್ಲ.

ಹೀಗೆ ಹತ್ತು ಹಲವು ಆಯಾಮಗಳಿಂದ ಅವಧಿ ಪೂರ್ವ ಚುನಾವಣೆ ಬಗ್ಗೆ ಸಮಾಲೋಚನೆ ನಡೆಸುತ್ತಿರುವ ಹೈಕಮಾಂಡ್ ರಾಜ್ಯ ಬಿಜೆಪಿ ನಾಯಕರು, ಆರ್​​ಎಸ್​​ಎಸ್ ಮುಖಂಡರು, ಸಚಿವರು ಹಾಗೂ ಶಾಸಕರ ಜತೆ ಚರ್ಚಿಸಿ ಅಭಿಪ್ರಾಯ ಸಂಗ್ರಹ ಮಾಡಲೂ ಸೂಚನೆ ನೀಡಿದೆ ಎಂದು ಹೇಳಲಾಗಿದೆ. ಬೆಂಗಳೂರು ಹೊರವಲಯದ ನಂದಿಬೆಟ್ಟ ಬಳಿ ಶುಕ್ರವಾರ ದಿನವಿಡೀ ನಡೆಯುತ್ತಿರುವ ಬಿಜೆಪಿಯ 'ಚಿಂತನ ಮಂಥನ' ಸಭೆಯಲ್ಲಿ ಹೈಕಮಾಂಡ್ ನಿರ್ದೇಶನದಂತೆ ಅವಧಿ ಪೂರ್ವ ಚುನಾವಣೆ ಬಗ್ಗೆ ಸುದೀರ್ಘ ಸಮಾಲೋಚನೆ ನಡೆಸಲಾಗುತ್ತಿದೆ ಎಂದು ತಿಳಿದು ಬಂದಿದೆ.

ಚುನಾವಣೆ ತಂತ್ರಗಾರಿಕೆ ರೂಪಿಸುವಲ್ಲಿ ಬಹಳ ಪ್ರಮುಖವಾದ ಈ ಸಭೆಯಲ್ಲಿ ಪಾಲ್ಗೊಳ್ಳಲು ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್ ಈಗಾಗಲೇ ರಾಜ್ಯಕ್ಕೆ ಆಗಮಿಸಿದ್ದಾರೆ. ಬಿಜೆಪಿಯ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲ್.ಸಂತೋಷ ಸಹ ಈ ಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ರಾಜ್ಯಾಧ್ಯಕ್ಷ ಕಟೀಲ್, ಮಾಜಿ ಸಿಎಂ ಯಡಿಯೂರಪ್ಪ, ಸಂಘ ಪರಿವಾರದ ಪ್ರಮುಖರು ಸಹ ಚಿಂತನ ಮಂಥನ ಸಭೆಯಲ್ಲಿ ಭಾಗವಹಿಸಲಿದ್ದಾರೆ.

ಇದನ್ನೂ ಓದಿ: ವಿಧಾನಸಭೆ ಚುನಾವಣೆಗೆ ಸಿದ್ಧತೆ: ಇಂದಿನಿಂದ ಬಿಜೆಪಿ ನಾಯಕರ ಚಿಂತನ ಮಂಥನ ಸಭೆ

Last Updated : Jul 15, 2022, 7:19 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.