ETV Bharat / city

ಬಿಜೆಪಿ ಅಭ್ಯರ್ಥಿಗಳ ಮೊದಲ ಪಟ್ಟಿ ಪ್ರಕಟ: ರಾಜ್ಯದ ಹಾಲಿ ಸಂಸದರು ಖುಷ್​ - ಬಿಜೆಪಿ

ಲೋಕಸಭೆ ಚುನಾವಣೆಗೆ ಬಿಜೆಪಿ ತನ್ನ ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಇಂದು ಬಿಡುಗಡೆ ಮಾಡಿದೆ.

ಬಿಜೆಪಿ ಅಭ್ಯರ್ಥಿಗಳ ಮೊದಲ ಪಟ್ಟಿ ಪ್ರಕಟ
author img

By

Published : Mar 21, 2019, 10:00 PM IST

Updated : Mar 21, 2019, 10:26 PM IST

ಬೆಂಗಳೂರು: ಲೋಕಸಭಾ ಚುನಾವಣೆಗೆ ಬಿಜೆಪಿ ಅಭ್ಯರ್ಥಿಗಳ ಮೊದಲ ಪಟ್ಟಿ ಪ್ರಕಟಗೊಂಡಿದೆ. ಲೋಕಸಮರ ಗೆಲ್ಲಲು ಕೇಸರಿ ಪಾಳೆಯ ಘಟಾನುಘಟಿ ನಾಯಕರನ್ನೇ ಕಣಕ್ಕಿಳಿಸಿದೆ.

28 ಕ್ಷೇತ್ರಗಳ ಪೈಕಿ 21 ಕ್ಷೇತ್ರಗಳ ಮೊದಲ ಪಟ್ಟಿಯನ್ನು ಬಿಡುಗಡೆಗೊಳಿಸಲಾಗಿದೆ. ತೀವ್ರ ಕುತೂಹಲ ಕೆರಳಿಸಿರುವ ಬೆಂಗಳೂರು ದಕ್ಷಿಣ, ಮಂಡ್ಯ ಸೇರಿ 7 ಕ್ಷೇತ್ರಗಳ ಎರಡನೇ ಪಟ್ಟಿ ಸದ್ಯದಲ್ಲೇ ಬಿಡುಗಡೆಯಾಗಲಿದೆ.

ಅಭ್ಯರ್ಥಿಗಳನ್ನು ಅಳೆದು ತೂಗಿ, ಎಲ್ಲಾ ಹಾಲಿ ಸಂಸದರಿಗೂ ಟಿಕೆಟ್ ನೀಡಿದ್ದಾರೆ. ದೆಹಲಿಯಲ್ಲಿ ಸುದ್ದಿಗೋಷ್ಟಿ ನಡೆಸಿದ ಸಚಿವ ಜೆ.ಪಿ ನಡ್ಡಾ ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆಗೊಳಿಸಿದರು.

ಯಾರಿಗೆಲ್ಲ ಟಿಕೆಟ್

  • ಬೀದರ್- ಭಗವಂತ ಖೂಬ
  • ಬಳ್ಳಾರಿ- ದೇವೇಂದ್ರಪ್ಪ
  • ಹಾವೇರಿ- ಶಿವಕುಮಾರ ಉದಾಸಿ
  • ಧಾರವಾಡ- ಪ್ರಹ್ಲಾದ್ ಜೋಶಿ
  • ಉತ್ತರ ಕನ್ನಡ- ಅನಂತ್ ಕುಮಾರ್ ಹೆಗಡೆ
  • ದಾವಣಗೆರೆ- ಜಿ.ಎಂ ಸಿದ್ದೇಶ್ವರ
  • ಶಿವಮೊಗ್ಗ-ಬಿ.ವೈ ರಾಘವೇಂದ್ರ
  • ಉಡುಪಿ-ಚಿಕ್ಕಮಗಳೂರು- ಶೋಭಾ ಕರಂದ್ಲಾಜೆ
  • ಹಾಸನ- ಎ.ಮಂಜು
  • ದಕ್ಷಿಣ ಕನ್ನಡ- ನಳೀನ್ ಕುಮಾರ್ ಕಟೀಲು
  • ಚಿತ್ರದುರ್ಗ-ಎ.ನಾರಾಯಣ ಸ್ವಾಮಿ
  • ತುಮಕೂರು- ಜಿ.ಎಸ್ ಬಸವರಾಜು
  • ಮೈಸೂರು- ಪ್ರತಾಪ್ ಸಿಂಹ
  • ಚಾಮರಾಜನಗರ- ಶ್ರೀನಿವಾಸ ಪ್ರಸಾದ್
  • ಬೆಂಗಳೂರು ಉತ್ತರ- ಡಿ.ವಿ ಸದಾನಂದಗೌಡ
  • ಬೆಂಗಳೂರು ಕೇಂದ್ರ- ಪಿ.ಸಿ ಮೋಹನ್
  • ಚಿಕ್ಕಬಳ್ಳಾಪುರ- ಬಿ.ಎನ್ ಬಚ್ಚೇಗೌಡ
  • ಬೆಳಗಾವಿ- ಸುರೇಶ್ ಅಂಗಡಿ
  • ಬಾಗಲಕೋಟೆ- ಪಿ.ಸಿ ಗದ್ದೀಗೌಡರ್
  • ವಿಜಯಪುರ- ರಮೇಶ್ ಜಿಗಜಿಣಗಿ
  • ಕಲಬುರಗಿ- ಡಾ.ಉಮೇಶ್ ಜಾದವ್

ಮೊದಲ ಪಟ್ಟಿಯಲ್ಲಿ ಟಿಕೆಟ್ ಪಡೆದ ಹೊಸ ಮುಖಗಳು

  • ದೇವೇಂದ್ರಪ್ಪ-ಬಳ್ಳಾರಿ
  • ಹಾಸನ - ಎ.ಮಂಜು
  • ಚಿತ್ರದುರ್ಗ- ಎ. ನಾರಾಯಣಸ್ವಾಮಿ
  • ಗುಲಬರ್ಗಾ- ಡಾ. ಉಮೇಶ್ ಜಾಧವ್

ಮೊದಲ ಪಟ್ಟಿಯಲ್ಲಿ ಘೋಷಣೆಯಾಗದ ಕ್ಷೇತ್ರಗಳು

ಬೆಂಗಳೂರು ದಕ್ಷಿಣ,ಕೋಲಾರ,ಮಂಡ್ಯ,ರಾಯಚೂರು, ಬೆಂಗಳೂರು ಗ್ರಾಮಾಂತರ, ಚಿಕ್ಕೋಡಿ, ಕೊಪ್ಪಳ

ಈ ಏಳೂ ಕ್ಷೇತ್ರಗಳ ಎರಡನೇ ಪಟ್ಟಿ ಸದ್ಯದಲ್ಲೇ ಬಿಡುಗಡೆಯಾಗಲಿದೆ. ಅಭ್ಯರ್ಥಿಗಳ ಆಯ್ಕೆಯಲ್ಲಿ ಯಾವುದೇ ಗೊಂದಲ ಇಲ್ಲ, ಹೆಸರು ಫೈನಲ್ ಆಗಿವೆ. ಸದ್ಯದಲ್ಲೇ ಪ್ರಕಟಗೊಳ್ಳಲಿದೆ ಎಂದು ರಾಜ್ಯ ಬಿಜೆಪಿ ನಾಯಕರು ತಿಳಿಸಿದ್ದಾರೆ.

Intro:Body:

1 KN_BNG_04_21_BJP_LIST_SCRIPT_PRASHANTH_9021933.docx  

close

Conclusion:
Last Updated : Mar 21, 2019, 10:26 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.