ETV Bharat / city

ಕಾಂಗ್ರೆಸ್​​,ಜೆಡಿಎಸ್​​ನಿಂದ ಅಸಂಸದೀಯ ಪದ ಬಳಕೆ: ಚುನಾವಣಾ ಆಯೋಗಕ್ಕೆ ಬಿಜೆಪಿ ದೂರು!

ಉಪ ಚುನಾವಣಾ ಪ್ರಚಾರದಲ್ಲಿ ಅಸಂಸದೀಯ ಪದ ಬಳಕೆ ಮಾಡುತ್ತಿರುವ ಕಾಂಗ್ರೆಸ್ ಮತ್ತು ‌ಜೆಡಿಎಸ್ ನಾಯಕರ ವಿರುದ್ಧ ಕ್ರಮ ಕೈಗೊಳ್ಳುವಂತೆ ಚುನಾವಣಾ ಆಯೋಗಕ್ಕೆ ಬಿಜೆಪಿ ದೂರು ಸಲ್ಲಿಕೆ ಮಾಡಿದೆ.

KN_BNG_03_BJP_COMPLAINT_AGAINST_RAMESHKUMAR_SCRIPT_9031933
ಅಸಂಸದೀಯ ಪದ ಬಳಕೆ: ಚುನಾವಣಾ ಆಯೋಗಕ್ಕೆ ದೂರು ನೀಡಿದ ಬಿಜೆಪಿ
author img

By

Published : Nov 29, 2019, 8:54 PM IST

ಬೆಂಗಳೂರು: ಉಪ ಚುನಾವಣಾ ಪ್ರಚಾರದಲ್ಲಿ ಅಸಂಸದೀಯ ಪದ ಬಳಕೆ ಮಾಡುತ್ತಿರುವ ಕಾಂಗ್ರೆಸ್ ಮತ್ತು ‌ಜೆಡಿಎಸ್ ನಾಯಕರ ವಿರುದ್ಧ ಕ್ರಮ ಕೈಗೊಳ್ಳುವಂತೆ ಚುನಾವಣಾ ಆಯೋಗಕ್ಕೆ ಬಿಜೆಪಿ ದೂರು ಸಲ್ಲಿಕೆ ಮಾಡಿದೆ.

ಅಸಂಸದೀಯ ಪದ ಬಳಕೆ: ಚುನಾವಣಾ ಆಯೋಗಕ್ಕೆ ದೂರು ನೀಡಿದ ಬಿಜೆಪಿ

ವಿಧಾನ ಪರಿಷತ್ ಮಾಜಿ ಸದಸ್ಯ ಅಶ್ವತ್ಥನಾರಾಯಣ್ ನೇತೃತ್ವದ ಬಿಜೆಪಿ ನಿಯೋಗ ಮುಖ್ಯ ಚುನಾವಣಾಧಿಕಾರಿ ಸಂಜೀವ್ ಕುಮಾರ್ ಅವರನ್ನು ಭೇಟಿಯಾಗಿ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ, ಮಾಜಿ ಸ್ಪೀಕರ್ ರಮೇಶ್ ಕುಮಾರ್ ಮತ್ತು ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ವಿರುದ್ದ ಕ್ರಮ ಕೈಗೊಳ್ಳುವಂತೆ ದೂರು ಸಲ್ಲಿಕೆ ಮಾಡಿತು.

ಶಾಸಕರು ಅನರ್ಹ ಆಗಿಲ್ಲ, ರಮೇಶ್ ಕುಮಾರ್ ತೀರ್ಪು ಅನರ್ಹ ಆಗಿದೆ. ಅಭ್ಯರ್ಥಿಗಳನ್ನು ಚಪ್ಪಲಿಗೆ ಹೋಲಿಸಿ ರಾಜಕೀಯ ಅಧಃಪತನಕ್ಕೆ ಇಳಿದಿದ್ದಾರೆ. ಮಾಜಿ ಸಿಎಂ ಕುಮಾರಸ್ವಾಮಿ, ಸಚಿವ ಸೋಮಣ್ಣ ಬಚ್ಚಾ ಎನ್ನುವ ಮೂಲಕ ಅಸಂಸದೀಯ ಪದ, ಕೆಳಮಟ್ಟದ ಭಾಷೆ ಬಳಕೆ ಮಾಡಿದ್ದಾರೆ. ಈ ವಿಚಾರವಾಗಿ ಚುನಾವಣಾ ಆಯೋಗಕ್ಕೆ ದೂರು ನೀಡಿದ್ದೇವೆ ಎಂದರು.

Intro:KN_BNG_03_BJP_COMPLAINT_AGAINST_RAMESHKUMAR_SCRIPT_9031933

ಕಾಂಗ್ರೆಸ್ ನ ಪಾದರಕ್ಷೆ,ಜೆಡಿಎಸ್ ನ ಬಚ್ಚಾ ಟೀಕಾಸ್ತ್ರದ ವಿರುದ್ಧ ಬಿಜೆಪಿ ದೂರು

ಬೆಂಗಳೂರು: ಉಪ ಚುನಾವಣಾ ಪ್ರಚಾರದಲ್ಲಿ ಬಿಜೆಪಿ ನಾಯಕರು ಮತ್ತು ಅಭ್ಯರ್ಥಿಗಳ ವಿರುದ್ಧ ಅಸಂಸದೀಯ ಪದ ಬಳಕೆ ಮಾಡುತ್ತಿರುವ ಕಾಂಗ್ರೆಸ್ ಮತ್ತು ‌ಜೆಡಿಎಸ್ ನಾಯಕರ ವಿರುದ್ಧ ಕ್ರಮ ಕೈಗೊಳ್ಳುವಂತೆ ಚುನಾವಣಾ ಆಯೋಗಕ್ಕೆ ಬಿಜೆಪಿ ದೂರು ಸಲ್ಲಿಕೆ ಮಾಡಿದೆ.

ಶೇಷಾದ್ರಿ ರಸ್ತೆಯಲ್ಲಿರುವ ಚುನಾವಣಾ ಆಯೋಗದ ಕಚೇರಿಗೆ ವಿಧಾನ ಪರಿಷತ್ ಮಾಜಿ ಸದಸ್ಯ ಅಶ್ವತ್ಥನಾರಾಯಣ್ ನೇತೃತ್ವದ ಬಿಜೆಪಿ ನಿಯೋಗ ಭೇಟಿ ನೀಡಿತು.ಮುಖ್ಯ ಚುನಾವಣಾಧಿಕಾರಿ ಸಂಜೀವ್ ಕುಮಾರ್ ಅವರನ್ನು ಭೇಟಿಯಾಗಿ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ, ಮಾಜಿ ಸ್ಪೀಕರ್ ರಮೇಶ್ ಕುಮಾರ್ ಮತ್ತು ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ವಿರುದ್ದ ಕ್ರಮ ಕೈಗೊಳ್ಳುವಂತೆ ದೂರು ಸಲ್ಲಿಕೆ ಮಾಡಿತು.

ದೂರು ನೀಡಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅಶ್ವತ್ಥನಾರಾಯಣ್, ರಾಮಕೃಷ್ಣ ಹೆಗಡೆ ಬೆನ್ನಿಗೆ ಚೂರಿ ಹಾಕಿ ಕಾಂಗ್ರೆಸ್ ಗೆ ಸೇರಿ, ಸಿದ್ದಾ ಕಾಲದಲ್ಲಿ ಮಂತ್ರಿ ಸ್ಥಾನ ಸಿಗಲಿಲ್ಲ‌ ಎಂದು ಪಕ್ಷವನ್ನು ತೆಗಳಿ ನಂತರ ಅದೇ ಸಿದ್ದರಾಮಯ್ಯ ಕೈಕಾಲು ಹಿಡಿದು ಮಂತ್ರಿಯಾಗಿ ಬಳಿಕ ಸ್ಪೀಕರ್ ಆದಾಗ ಶಾಸಕರ ರಾಜೀನಾಮೆ ಅಂಗೀಕರಿಸಿವ ವಿಷಯದಲ್ಲಿ ನೈತಿಕತೆ ಬಗ್ಗೆ ಮಾತನಾಡಿದ್ದರು, ಹಿಂದೆ ರಾಜ್ಯಸಭಾ ಚುನಾವಣೆಯಲ್ಲಿ ಅಡ್ಡ ಮತದಾನದ ವೇಳೆ ಶಾಸಕರನ್ನು ಅನರ್ಹಗೊಳಿಸಲು ಕುಮಾರಸ್ವಾಮಿ ಸ್ಪೀಕರ್ ಗೆ ದೂರು ಕೊಟ್ಟಾಗ ಸಚಿವರಾಗಿದ್ದ ರಮೇಶ್ ಕುಮಾರ್ ಅಂದಿನ‌ ಸ್ಪೀಕರ್‌ ತಟಸ್ಥವಾಗಿದ್ದಾಗ ಯಾಕೆ ಸುಮ್ಮನಿದ್ದರು ಎಂದು ಪ್ರಶ್ನಿಸಿದರು.

ಶಾಸಕರು ಅನರ್ಹ ಆಗಿಲ್ಲ, ರಮೇಶ್ ಕುಮಾರ್ ತೀರ್ಪು ಅನರ್ಹ ಆಗಿದೆ. ಅಭ್ಯರ್ಥಿಗಳನ್ನು ಚಪ್ಪಲಿಗೆ ಹೋಲಿಸಿ ರಾಜಕೀಯ ಅಧಃಪತನಕ್ಕೆ ಇಳಿದಿದ್ದಾರೆ ಹಾಗಾಗಿ ಅವರ ವಿರುದ್ಧ ನೇರವಾಗಿ ಕ್ಕೆಮ ಕೈಗೊಳ್ಳಬೇಕು ಮತ್ತು ಎಚ್ಚರಿಕೆ ನೀಡಬೇಕು ಎಂದು ಆಯೋಗಕ್ಕೆ ದೂರು ನೀಡಿದ್ದೇವೆ ಎಂದರು.

ಹೆಚ್ಡಿಕೆ ರಾಜಕೀಯದಲ್ಲಿ ಎಳಸು:

ಮಾಜಿ ಸಿಎಂ ಕುಮಾರಸ್ವಾಮಿ ಸಚಿವ ಸೋಮಣ್ಣ ಬಗ್ಗೆ ಅಸಂಸದೀಯ ಪದ, ಕೆಳಮಟ್ಟದ ಭಾಷೆ ಬಳಕೆ ಮಾಡಿದ್ದಾರೆ, ದೇವೇಗೌಡರ ಮುಂದೆ ಸೋಮಣ್ಣ ಬಚ್ಚ ಎಂದಿದ್ದಾರೆ ,ಸೋಮಣ್ಣ ಶಾಸಕರಾದಾಗ,ಸಚಿವರಾದಾಗ ಕುಮಾರಸ್ವಾಮಿ ರಾಜಕೀಯದಲ್ಲಿ ಬಚ್ಚಾ ಆಗಿದ್ದರು, ಬೆಂಗಳೂರು ದಕ್ಷಿಣ ಲೋಕಸಭೆಗೆ ದೇವೇಗೌಡರೇ ಸೋಮಣ್ಣಗೆ ಟಿಕೆಟ್ ಕೊಟ್ಟಿದ್ದರು ಆಗ ಹಿರಿಯರಾಗಿದ್ದರು ಈಗ ಬಿಜೆಪಿಗೆ ಬಂದಾಗ ಬಚ್ಚಾ ಆಗಿದ್ದಾರಾ ಎಂದು ವಾಗ್ದಾಳಿ ನಡೆಸಿದರು.

ಕುಮಾರಸ್ವಾಮಿ ಜನರುಂದ ಮುಖ್ಯಮಂತ್ರಿ ಆಗಲಿಲ್ಲ, ಆಕಸ್ಮಿಕವಾಗಿ ಮುಖ್ಯಮಂತ್ರಿ ಆದವರು.ಅವರು ಮತ್ತೊಬ್ಬ ರಾಜಕಾರಣಿ ಬಗ್ಗೆ ಮಾತನಾಡುವಾಗ ಎಚ್ಚರಿಕೆ ವಹಿಸಬೇಕು, ಅವರು ಇನ್ನೂ ರಾಜಕೀಯದಲ್ಲಿ ಎಳಸಿದ್ದಾರೆ ಎಂದು ಟೀಕಿಸಿದರು.Body:.Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.