ಬೆಂಗಳೂರು: ಉಪಚುನಾವಣೆಯ ಬಿಜೆಪಿ ಅಭ್ಯರ್ಥಿ ಕೆ.ಸಿ ರಾಮಮೂರ್ತಿ 27.43 ಕೋಟಿ ರೂ. ಆಸ್ತಿಯ ಒಡೆಯರಾಗಿದ್ದು, ಪತಿಗಿಂತ ಪತ್ನಿಯೇ ಶ್ರೀಮಂತರಾಗಿದ್ದಾರೆ.
ಪತ್ನಿ ಸಬಿತಾ ರಾಮಮೂರ್ತಿ ಒಟ್ಟು 124.52 ಕೋಟಿ ರೂ. ಆಸ್ತಿಯ ಒಡತಿಯಾಗಿದ್ದಾರೆ. ಕಾಂಗ್ರೆಸ್ ತೊರೆದು ಬಿಜೆಪಿ ಸೇರ್ಪಡೆಗೊಂಡಿದ್ದ ಕೆ.ಸಿ.ರಾಮಮೂರ್ತಿ ಇಂದು ರಾಜ್ಯಸಭೆ ಬಿಜೆಪಿ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದರು. ಚುನಾವಣಾ ಆಯೋಗಕ್ಕೆ ತಮ್ಮ ಆಸ್ತಿ ವಿವರ ಸಲ್ಲಿಸಿದ್ದು, ಅದರಲ್ಲಿ ಕೆ.ಸಿ.ರಾಮಮೂರ್ತಿ ಒಟ್ಟು 10.52 ಕೋಟಿ ರೂ. ಚರಾಸ್ತಿ ಘೋಷಿಸಿದ್ದಾರೆ. ಇನ್ನು ಸುಮಾರು 16.91ಕೋಟಿ ರೂ. ಸ್ಥಿರಾಸ್ತಿ ಘೋಷಣೆ ಮಾಡಿದ್ದಾರೆ.
ಪತ್ನಿ ಸಬಿತಾ ರಾಮಮೂರ್ತಿ ಬಳಿ 22.97 ಕೋಟಿ ಚರಾಸ್ತಿ ಇದ್ದರೆ, ಬರೋಬ್ಬರಿ 101.55 ಕೋಟಿ ರೂ. ಸ್ಥಿರಾಸ್ತಿ ಹೊಂದಿದ್ದಾರೆ. ಆ ಮೂಲಕ ಒಟ್ಟು 124.52 ಕೋಟಿ ರೂ. ಆಸ್ತಿ ಹೊಂದಿದ್ದು, ಪತಿಗಿಂತ ಶ್ರೀಮಂತರಾಗಿದ್ದಾರೆ.
ಇನ್ನು ಕೆ.ಸಿ.ರಾಮಮೂರ್ತಿ 3.61 ಕೋಟಿ ರೂ. ಸಾಲ ಹೊಂದಿದ್ದರೆ, ಪತ್ನಿ ಹೆಸರಲ್ಲಿ 23.23 ಕೋಟಿ ರೂ. ಸಾಲ ಇದೆ ಎಂದು ಘೋಷಿಸಿಕೊಂಡಿದ್ದಾರೆ.