ETV Bharat / city

ಎರಡೂ ಪಕ್ಷಗಳ ಕಾರ್ಯಕರ್ತರು ನನ್ನ ಜತೆ ಇದ್ದಾರೆ.. ಎಸ್ ಟಿ‌ ಸೋಮಶೇಖರ್ - by elelction candidate ST Somashekhar campaign

ಸ್ಥಳೀಯ ಮಟ್ಟದಲ್ಲಿ ದೊಡ್ಡ ಮಟ್ಟಿಗಿನ ಅಸಮಾಧಾನ ಇಲ್ಲ. ಕೊಂಚ ಭಿನ್ನಾಭಿಪ್ರಾಯ ಮಾತ್ರ ಇದ್ದು, ಸದಾನಂದಗೌಡರ ಜೊತೆ ಎಲ್ಲಾ ತೀರ್ಮಾನ ಮಾಡುತ್ತೇವೆ ಎಂದು ಯಶವಂತಪುರ ಬಿಜೆಪಿ ಅಭ್ಯರ್ಥಿ ಎಸ್ ಟಿ ಸೋಮಶೇಖರ್ ಸ್ಪಷ್ಟಪಡಿಸಿದರು.

ಎಸ್.ಟಿ‌.ಸೋಮಶೇಖರ್
author img

By

Published : Nov 24, 2019, 4:43 PM IST

ಬೆಂಗಳೂರು:ಸ್ಥಳೀಯ ಮಟ್ಟದಲ್ಲಿ ದೊಡ್ಡ ಮಟ್ಟಿನ ಅಸಮಾಧಾನ ಇಲ್ಲ. ಕೊಂಚ ಭಿನ್ನಾಭಿಪ್ರಾಯ ಮಾತ್ರ ಇದ್ದು, ಸದಾನಂದಗೌಡರ ಜೊತೆ ಎಲ್ಲಾ ತೀರ್ಮಾನ ಮಾಡುತ್ತೇವೆ ಎಂದು ಯಶವಂತಪುರ ಬಿಜೆಪಿ ಅಭ್ಯರ್ಥಿ ಎಸ್.ಟಿ ಸೋಮಶೇಖರ್ ಸ್ಪಷ್ಟಪಡಿಸಿದರು.

ಎಸ್ ಟಿ‌ ಸೋಮಶೇಖರ್ ಯಶವಂತಪುರ ಕ್ಷೇತ್ರಾದ್ಯಂತ ಬಿರುಸಿನ ಪ್ರಚಾರ..

ಇಂದು ಯಶವಂತಪುರ ಕ್ಷೇತ್ರಾದ್ಯಂತ ಬಿರುಸಿನ ಪ್ರಚಾರ ನಡೆಸಿದ ವೇಳೆ ಮಾತನಾಡಿದ ಅವರು, ನವೆಂಬರ್ 26 ಮತ್ತು 30 ರಂದು ಸಿಎಂ ಯಡಿಯೂರಪ್ಪ ಕ್ಷೇತ್ರದಲ್ಲಿ ಪ್ರಚಾರಕ್ಕೆ ಬರುತ್ತಾರೆ. 2 ಪಕ್ಷಗಳ ಕಾರ್ಯಕರ್ತರು ನನ್ನ ಜತೆ ಇದ್ದಾರೆ. ಹಳೆ ಪಕ್ಷದ ಶೇ. 70%ರಷ್ಟು ಜನ ನನ್ನ ಜತೆ ಇದ್ದಾರೆ. ಬಿಜೆಪಿಯ ಶೇ.100%ರಷ್ಟು ಕಾರ್ಯಕರ್ತರು ನನ್ನ ಜತೆ ಇದ್ದಾರೆ. ಚುನಾವಣೆ ಭಯ ನನಗಿಲ್ಲ. ಐದು ವರ್ಷಕ್ಕೊಮ್ಮೆ ಬರುವ ಅಭ್ಯರ್ಥಿಗಳಿಗೆ ಮಾತ್ರ ಭಯ ಇರುತ್ತದೆ. ಜವರಾಯಿಗೌಡ ಅವರು ಹೋದ ಕಡೆಯೆಲ್ಲಾ ಫ್ಯಾಮಿಲಿ, ಫ್ಯಾಮಿಲಿ ಅಂತಾ ಅಳುತ್ತಾ ಇದ್ದಾರೆ. ಮಗನ ಮದುವೆ ಮಾಡಿಲ್ಲ, ಮನೆ ಕಟ್ಟಿಲ್ಲ ಅಂತಾ 169 ಕೋಟಿ ರೂ. ಆಸ್ತಿ ಘೋಷಣೆ ಮಾಡಿದ್ದಾರೆ. ಹೀಗಿದ್ದೂ ಅಳುವುದ್ಯಾವುದಕ್ಕೆ ಎಂದು ಟಾಂಗ್ ನೀಡಿದರು.

ಪೊಲೀಸ್ ಅಧಿಕಾರಿ ಬಿಜೆಪಿ ಅಭ್ಯರ್ಥಿ ಪರ ಪ್ರಚಾರ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಯಾವ ಅಧಿಕಾರಿಗೂ ನಮ್ಮ ಪರ ಪ್ರಚಾರ ಮಾಡಿ ಅಂತಾ ಹೇಳಿಲ್ಲ ಎಂದರು.

ಅಂಬರೀಶ್ ಸಮಾಧಿಗೆ ಭೇಟಿ: ಇದೇ ವೇಳೆ ಎಸ್ ಟಿ ಸೋಮಶೇಖರ್ ಕಂಠೀರವ ಸ್ಟುಡಿಯೋದಲ್ಲಿನ ರೆಬೆಲ್ ಸ್ಟಾರ್ ಅಂಬರೀಶ್ ಅವರ ಸಮಾಧಿಗೆ ಭೇಟಿ ನೀಡಿ ಪುಷ್ಪಾರ್ಚನೆ ಸಲ್ಲಿಸಿದರು. ಇಂದು ದಿ. ಅಂಬರೀಶ್ ಅವರ ಮೊದಲ ಪುಣ್ಯ ದಿನವಾದ ಹಿನ್ನೆಲೆ ಪುಣ್ಯ ಸ್ಥಳಕ್ಕೆ ಆಗಮಿಸಿ, ಪುಷ್ಪಾರ್ಚನೆ ಹಾಗೂ ಮಾಲಾರ್ಪಣೆ ಮೂಲಕ ಗೌರವ ಸಲ್ಲಿಸಿದರು. ಈ ವೇಳೆ ಸಂಸದೆ ಸುಮಲತಾ ಅಂಬಿ, ಅನರ್ಹ ಶಾಸಕ ಮುನಿರತ್ನ ಉಪಸ್ಥಿತರಿದ್ದರು.

ಅಂಬರೀಶ್ ರವರ ಸಮಾಜ ಸೇವೆ ಹಾಗೂ ಚಿತ್ರರಂಗದಲ್ಲಿ ಸಲ್ಲಿಸಿರುವ ಅಪಾರವಾದ ಸೇವೆಗೆ ಅವರಿಗೆ ಕರ್ನಾಟಕ ಸರ್ಕಾರದಿಂದ ಕರ್ನಾಟಕ ರತ್ನ ಪ್ರಶಸ್ತಿಯನ್ನು ಮರಣೋತ್ತರವಾಗಿ ನೀಡಬೇಕು. ಅಂಬರೀಶ್​ ಅವರು ವಸತಿ ಸಚಿವರಾಗಿದ್ದಾಗ ಯಶವಂತಪುರ ಕ್ಷೇತ್ರದಲ್ಲಿ ಸಾವಿರಾರು ವಸತಿಗಳನ್ನು ಬಡ ಜನತೆಗೆ ನೀಡಿರುವುದನ್ನು ಎಸ್ ಟಿ ಸೋಮಶೇಖರ್ ಸ್ಮರಿಸಿದರು.

Intro:Body:KN_BNG_02_STSOMASHEKAR_PRACHARA_SCRIPT_7201951

ಎರಡೂ ಪಕ್ಷಗಳ ಕಾರ್ಯಕರ್ತರು ನನ್ನ ಜತೆ ಇದ್ದಾರೆ: ಎಸ್.ಟಿ‌.ಸೋಮಶೇಖರ್

ಬೆಂಗಳೂರು: ಸ್ಥಳೀಯ ಮಟ್ಟದಲ್ಲಿ ದೊಡ್ಡ ಮಟ್ಟಿನ ಅಸಮಾಧಾನ ಇಲ್ಲ, ಕೊಂಚ ಭಿನ್ನಾಭಿಪ್ರಾಯ ಮಾತ್ರ ಇದ್ದು, ಸದಾನಂದಗೌಡರು ಕೂತು ಎಲ್ಲ ತೀರ್ಮಾನ ಮಾಡಿ ಹೇಳುತ್ತಾರೆ ಮಾಡುತ್ತೇವೆ ಎಂದು ಯಶವಂತಪುರ ಬಿಜೆಪಿ ಅಭ್ಯರ್ಥಿ ಎಸ್.ಟಿ.ಸೋಮಶೇಖರ್ ಸ್ಪಷ್ಟಪಡಿಸಿದರು.

ಇಂದು ಯಶವಂತಪುರ ಕ್ಷೇತ್ರಾದ್ಯಂತ ಬಿರುಸಿನ ಪ್ರಚಾರ ನಡೆಸಿದ ವೇಳೆ ಮಾತನಾಡಿದ ಅವರು, 26, 30 ತಾರೀಖಿನಂದು ಸಿಎಂ ಯಡಿಯೂರಪ್ಪ ಕ್ಷೇತ್ರದಲ್ಲಿ ಪ್ರಚಾರಕ್ಕೆ ಬರುತ್ತಾರೆ. 2 ಪಕ್ಷಗಳ ಕಾರ್ಯಕರ್ತರು ನನ್ನ ಜತೆ ಇದ್ದಾರೆ. ಹಳೆ ಪಕ್ಷದ 70 ಶೇ. ರಷ್ಟು ಜನ ನನ್ನ ಜತೆ ಇದ್ದಾರೆ. ಬಿಜೆಪಿಯ100 ಶೇ. ರಷ್ಟು ಕಾರ್ಯಕರ್ತರು ನನ್ನ ಜತೆ ಇದ್ದಾರೆ ಎಂದು ಸ್ಪಷ್ಟಪಡಿಸಿದರು.

ಬಹುಶಃ ಜೆಡಿಎಸ್ ಕಾರ್ಯಕ್ರಮಕ್ಕೆ ಜನ ಬರುತ್ತಿಲ್ಲ ಎಂಬಂತೆ ಇದೆ. ಚುನಾವಣೆ ಭಯ ನನಗಿಲ್ಲ. ಐದು ವರ್ಷಕ್ಕೊಮ್ಮೆ ಬರುವ ಅಭ್ಯರ್ಥಿಗಳಿಗೆ ಮಾತ್ರ ಭಯ ಇರುತ್ತದೆ. ಜವರಾಯಿಗೌಡ ಅವರು ಹೋದ ಕಡೆಯೆಲ್ಲ ಫ್ಯಾಮಿಲಿ ಫ್ಯಾಮಿಲಿ ಅಂತ ಅಳುತ್ತಾ ಇದ್ದಾರೆ. ಮಗನ ಮದುವೆ ಮಾಡಿಲ್ಲ ,ಮನೆ ಕಟ್ಟಿಲ್ಲ ಅಂತಾ. 169 ಕೋಟಿ ರೂ. ಆಸ್ತಿ ಘೋಷಣೆ ಮಾಡಿದ್ದಾರೆ, ಹೀಗಿದ್ದೂ ಅಳುವುದ್ಯಾವುದಕ್ಕೆ
ಎಂದು ಟಾಂಗ್ ನೀಡಿದರು.

ಪೊಲೀಸ್ ಅಧಿಕಾರಿ ಬಿಜೆಪಿ ಅಭ್ಯರ್ಥಿ ಪರ ಪ್ರಚಾರ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಯಾವ ಅಧಿಕಾರಿಗೂ ನಮ್ಮ ಪರ ಪ್ರಚಾರ ಮಾಡಿ ಅಂತ ಹೇಳಿಲ್ಲ. ಅಂತಹ ದುದೈವ ನನಗೆ ಬಂದಿಲ್ಲ ಎಂದು ಸ್ಪಷ್ಟಪಡಿಸಿದರು.

ಅಂಬರೀಶ್ ಸಮಾಧಿಗೆ ಭೇಟಿ:

ಇದೇ ವೇಳೆ ಎಸ್.ಟಿ.ಸೋಮಶೇಖರ್ ಕಂಠೀರವ ಸ್ಟುಡಿಯೋದಲ್ಲಿನ ರೆಬಲ್ ಸ್ಟಾರ್ ಅಂಬರೀಶ್ ಅವರ ಸಮಾಧಿಗೆ ಭೇಟಿ ನೀಡಿ ಪುಷ್ಪಾರ್ಚನೆ ಸಲ್ಲಿಸಿದರು.

ಇಂದು ದಿವಂಗತ ಅಂಬರೀಶ್ ಅವರ ಮೊದಲ ಪುಣ್ಯದಿನದ ಹಿನ್ನೆಲೆ ಪುಣ್ಯ ಸ್ಥಳಕ್ಕೆ ಆಗಮಿಸಿ ಪುಷ್ಪಾರ್ಚನೆ ಹಾಗೂ ಮಾಲಾರ್ಪಣೆ ಮೂಲಕ ಗೌರವ ಸಲ್ಲಿಸಿದರು. ಈ ವೇಳೆ ಸಾಂಸದೆ ಸುಮಲತಾ, ಮುನಿರತ್ನ ಇದ್ದರು.

ಇದೇ ಸಂದರ್ಭದಲ್ಲಿ ಮಾತನಾಡಿದ ಎಸ್. ಟಿ. ಸೋಮಶೇಖರ್, ಅಂಬರೀಶ್ ರವರ ಸಮಾಜ ಸೇವೆ ಹಾಗೂ ಚಿತ್ರರಂಗದಲ್ಲಿ ಸಲ್ಲಿಸಿರುವ ಅಪಾರವಾದ ಸೇವೆಗೆ ಅವರಿಗೆ ಕರ್ನಾಟಕ ಸರ್ಕಾರದಿಂದ ಕರ್ನಾಟಕ ರತ್ನ ಪ್ರಶಸ್ತಿಯನ್ನು ಮರಣೋತ್ತರವಾಗಿ ನೀಡಬೇಕೆಂದು ವಿನಂತಿಸಿದರು. ಅಂಬರೀಷ್ ಅವರು ವಸತಿ ಸಚಿವರಾಗಿದ್ದಾಗ ಯಶವಂತಪುರ ಕ್ಷೇತ್ರದಲ್ಲಿ ಸಾವಿರಾರು ವಸತಿಗಳನ್ನು ಬಡ ಜನತೆಗೆ ನೀಡಿರುವುದನ್ನು ಸ್ಮರಿಸಿದರು.Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.