ETV Bharat / city

ಬಿಟ್ ಕಾಯಿನ್ ಪ್ರಕರಣ: ಸಿಎಂ ಬೊಮ್ಮಾಯಿ ಬೆನ್ನಿಗೆ ನಿಂತರಾ ಪ್ರಧಾನಿ ಮೋದಿ..?

author img

By

Published : Nov 11, 2021, 1:54 PM IST

Updated : Nov 11, 2021, 6:22 PM IST

ಬಿಟ್ ಕಾಯಿನ್ ಪ್ರಕರಣದಲ್ಲಿ ಹೆಚ್ಚು ತಲೆಕೆಡಿಸಿಕೊಳ್ಳಬೇಡಿ ಎಂದು ಪ್ರಧಾನಿ ನರೇಂದ್ರ ಮೋದಿ ಸಲಹೆ ನೀಡಿರುವುದಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ದೆಹಲಿಯಲ್ಲಿ ತಿಳಿಸಿದ್ದಾರೆ. ಪ್ರಧಾನಿ ಭೇಟಿ ಬಳಿಕ ಮಾಹಿತಿ ನೀಡಿದ ಅವರು, ಡಿಸೆಂಬರ್‌ನಲ್ಲಿ ಎರಡು ಕಾರ್ಯಕ್ರಮ ಮಾಡಿ ಬೆಂಗಳೂರಿಗೆ ಬರುತ್ತೇನೆ ಎಂದು ಪ್ರಧಾನಿ ಹೇಳಿರುವುದಾಗಿಯೂ ಸಿಎಂ ವಿವರಿಸಿದ್ದಾರೆ.

bitcoin scam; Pm modi support for cm basavaraj bommai?
ಬಿಟ್ ಕಾಯಿನ್ ಹಗರಣ ಪ್ರಕರಣ: ಸಿಎಂ ಬೊಮ್ಮಾಯಿ ಬೆನ್ನಿಗೆ ನಿಂತ್ರಾ ಪ್ರಧಾನಿ ಮೋದಿ..?

ಬೆಂಗಳೂರು: ರಾಜ್ಯದಲ್ಲಿ ಭಾರಿ ಸದ್ದು ಮಾಡುತ್ತಿರುವ ಬಿಟ್ ಕಾಯಿನ್ ಪ್ರಕರಣದಲ್ಲಿ ಹೆಚ್ಚು ತಲೆಕೆಡಿಸಿಕೊಳ್ಳಬೇಡಿ ಎಂದು ಪ್ರಧಾನಿ ನರೇಂದ್ರ ಮೋದಿ ಸಲಹೆ ನೀಡಿರುವುದಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸ್ಪಷ್ಟಪಡಿಸಿದ್ದಾರೆ.

ಬಿಟ್ ಕಾಯಿನ್ ಹಗರಣ ಪ್ರಕರಣ: ಸಿಎಂ ಬೊಮ್ಮಾಯಿ ಬೆನ್ನಿಗೆ ನಿಂತರಾ ಪ್ರಧಾನಿ ಮೋದಿ..?

ನವದೆಹಲಿಯಲ್ಲಿ ಪ್ರಧಾನಿ ಮೋದಿ ಭೇಟಿ ನಂತರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಸಿಎಂ, ಪ್ರಧಾನಿಗಳ ಭೇಟಿ ವೇಳೆ ಬಿಟ್ ಕಾಯಿನ್ ವಿಚಾರದ ಕುರಿತು ಚರ್ಚೆ ನಡೆದಿಲ್ಲ. ನನ್ನಿಂದ ವಿವರಣೆಯನ್ನೂ ಕೇಳಲಿಲ್ಲ. ಆದರೂ ನಾನೇ ಅದರ ಬಗ್ಗೆ ಹೇಳಲು ಮುಂದಾದಾಗ ಅದಕ್ಕೆ ತಲೆಕೆಡಿಸಿಕೊಳ್ಳಬೇಡಿ, ನೀವು ನಿಷ್ಠೆಯಿಂದ ದಿಟ್ಟತನದಿಂದ ಜನರ ಪರ ಕೆಲಸ ಮಾಡಿ ಎಂದು ಹೇಳಿರುವುದಾಗಿ ಸಿಎಂ ತಿಳಿಸಿದ್ದಾರೆ.

ಅಮಿತ್​ ಶಾ ಭೇಟಿ ಮಾಡಿದ ಸಿಎಂ

ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ಕೂಡ ಭೇಟಿಯಾಗಿದ್ದೇನೆ. ರಾಜಕೀಯವಾಗಿ ಏನು ಮಾತುಕತೆ ನಡೆಸಿಲ್ಲ. ಬಿಟ್ ಕಾಯಿನ್ ಬಗ್ಗೆ ಯಾವುದೇ ಮಾಹಿತಿಯನ್ನು ನೀಡಲಿಲ್ಲ. ಕೇಂದ್ರ ಗೃಹ ಸಚಿವರಾಗಿರುವ ಕಾರಣ ನನಗಿಂತ ಹೆಚ್ಚಿನ ಮಾಹಿತಿ ಅವರಿಗೆ ಇರುತ್ತದೆ. ಅವರ ಬಳಿಯೇ ಕೇಂದ್ರದ ಏಜೆನ್ಸಿ ಇರುವುದರಿಂದ ನಮಗಿಂತ ಹೆಚ್ಚಿನ ಮಾಹಿತಿ ಅವರ ಬಳಿ ಇರಲಿದೆ. ಹಾಗಾಗಿ ಅದರ ಬಗ್ಗೆ ನಾವು ಏನು ಮಾತನಾಡಲಿಲ್ಲ ಎಂದರು.

ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಜೊತೆ ಮುಂಬರುವ ಚುನಾವಣೆಗಳ ಬಗ್ಗೆ ಮತ್ತು ಪಕ್ಷದ ಕೋರ್ ಕಮಿಟಿ ಸಭೆ, ಪರಿಷತ್ ಚುನಾವಣೆ ತಯಾರಿ ಇತ್ಯಾದಿಗಳ ಬಗ್ಗೆ ಮಾತುಕತೆ ನಡೆಸಲಾಗಿದೆ. ಉತ್ತರಪ್ರದೇಶ ಚುನಾವಣೆಯಲ್ಲಿ ನಾವು ತೊಡಗಿದ್ದರೂ ಕರ್ನಾಟಕದ ಬಗ್ಗೆ ಆದ್ಯತೆ ಕೊಡುತ್ತೇವೆ. ಒಂದು ದಿನ ಸಮಯ ಕೊಡುತ್ತೇನೆ ಎಲ್ಲರೂ ಸೇರಿ ಪಕ್ಷದ ಸಂಘಟನೆ, ವಿಧಾನಪರಿಷತ್ ಚುನಾವಣೆ ಕುರಿತು ಚರ್ಚಿಸೋಣ ಎಂದಿದ್ದಾರೆ ಎಂದು ಸಿಎಂ ತಿಳಿಸಿದರು.

ನೂರು ದಿನದ ಅಭಿವೃದ್ಧಿಗೆ ಶ್ಲಾಘನೆ:
ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದೇನೆ. ಈ ಭೇಟಿ ಬಹಳ ಸೌಹಾರ್ದಯುತವಾಗಿ ನಡೆದಿದೆ. ಬಹಳಷ್ಟು ವಿಷಯಗಳ ಬಗ್ಗೆ ಚರ್ಚೆ ನಡೆಸಲಾಗಿದೆ. ಆಡಳಿತಾತ್ಮಕ ವಿಷಯಗಳ ಬಗ್ಗೆ ಬಹಳ ಆಸಕ್ತಿಯಿಂದ ಮಾತುಕತೆ ನಡೆಸಿದರು. ಕಳೆದ ನೂರು ದಿನಗಳಲ್ಲಿ ನಾವು ತೆಗೆದುಕೊಂಡ ತೀರ್ಮಾನಗಳು ಹಾಗೂ ಸುಧಾರಣೆ ತರುವ ಕುರಿತು ಪ್ರತಿಯೊಂದು ವಿಷಯದ ಬಗ್ಗೆಯೂ ಚರ್ಚೆ ನಡೆಸಿದ್ದೇವೆ. 100 ದಿನಗಳಲ್ಲಿ ನಾವು ತೆಗೆದುಕೊಂಡಿರುವ ಹಲವಾರು ತೀರ್ಮಾನಗಳ ಬಗ್ಗೆ ಮೋದಿ ಸಂತೋಷಪಟ್ಟು, ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ ಎಂದು ಸಿಎಂ ವಿವರಿಸಿದರು.

ಡಿಸೆಂಬರ್‌ನಲ್ಲಿ ರಾಜ್ಯಕ್ಕೆ ಪ್ರಧಾನಿ ಮೋದಿ ಭೇಟಿ..
ಡಿಸೆಂಬರ್ ತಿಂಗಳಲ್ಲಿ ಬೆಂಗಳೂರಿಗೆ ಬರುವಂತೆ ಆಹ್ವಾನ ನೀಡಲಾಗಿದೆ. ನಾಲ್ಕು ಕಾರ್ಯಕ್ರಮಗಳಿಗೆ ಆಹ್ವಾನಿಸಿದೆ. ಆದರೆ, ಅವರು ಎರಡು ಕಾರ್ಯಕ್ರಮ ಮಾಡಿ ಬರುತ್ತೇನೆ ಎಂದಿದ್ದಾರೆ. ಡಿಸೆಂಬರ್ ತಿಂಗಳಲ್ಲಿ ಎರಡು ಬಾರಿ ಬೆಂಗಳೂರಿಗೆ ಪ್ರಧಾನಿ ಮೋದಿ ಆಗಮಿಸಲಿದ್ದಾರೆ. ಬೆಂಗಳೂರು ಉಪನಗರ ರೈಲ್ವೆ ಅಡಿಗಲ್ಲು ಸಮಾರಂಭ ಮತ್ತು ಅಂಬೇಡ್ಕರ್ ಸ್ಕೂಲ್ ಆಫ್ ಟೆಕ್ನಾಲಜಿ ಉದ್ಘಾಟನೆಗೆ ಆಗಮಿಸಲಿದ್ದಾರೆ.

ಅದೇ ವೇಳೆ, 180 ಕ್ಕಿಂತ ಹೆಚ್ಚು ಐಟಿಐಗಳನ್ನು ಉನ್ನತೀಕರಿಸಿದ್ದನ್ನು ಉದ್ಘಾಟಿಸಲಿದ್ದಾರೆ. ಜೊತೆಗೆ ಬೆಂಗಳೂರಿನ ಅಭಿವೃದ್ಧಿ ಕಾರ್ಯಕ್ರಮಗಳನ್ನು ಉದ್ಘಾಟನೆ ಮಾಡಲಿದ್ದಾರೆ ಎಂದು ಸಿಎಂ ಬೊಮ್ಮಾಯಿ ಹೇಳಿದರು.

ರೈತರ ಮಕ್ಕಳಿಗೆ ವಿದ್ಯಾದಾನ ಮಾಡುವ ವಿದ್ಯಾಸಿರಿ ಯೋಜನೆ ಯಶಸ್ವಿಯಾದರೆ ಬೇರೆ ರಾಜ್ಯದಲ್ಲಿಯೂ ಅನುಕರಣೆ ಮಾಡೋಣ ಎಂದಿದ್ದಾರೆ. ಗುತ್ತಿಗೆ ಪರಿಶೀಲನೆಗೆ ಪಾರದರ್ಶಕ ವ್ಯವಸ್ಥೆ ಮಾಡಿದ್ದೇವೆ ಇದರ ಬಗ್ಗೆ ಪ್ರಶಂಸೆ ಮಾಡಿದ್ದಾರೆ.

ಇದೊಂದು ಕ್ರಾಂತಿಕಾರಕ ಹೆಜ್ಜೆ. ಗುತ್ತಿಗೆಯಲ್ಲಿ ಹೆಚ್ಚು ನಮೂದು ಮಾಡುವುದು ಅಥವಾ ಯಾರೋ ಒಬ್ಬರಿಗೆ ಸಿಗುವುದು ಇಂತಹ ವ್ಯವಸ್ಥೆಯನ್ನು ತಪ್ಪಿಸಲು ಪಾರದರ್ಶಕ ವ್ಯವಸ್ಥೆ ಅನುಕೂಲವಾಗಲಿದೆ. ಇದನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಿ ಎಲ್ಲ ಇಲಾಖೆಗೂ ಇದನ್ನ ಅಗತ್ಯತೆಗೆ ಅನುಗುಣವಾಗಿ ತನ್ನಿ ಎಂದಿದ್ದಾರೆ ಎಂದು ತಿಳಿಸಿದರು.

'ಸೂರು, ನಿವೇಶನ ರಹಿತ ಜನರಿಗೆ ಸಂಪೂರ್ಣವಾಗಿ ನಿವೇಶನ ಕೊಡಿ'

ಹೊಸ ಶಿಕ್ಷಣ ನೀತಿ ಯಾವ ರೀತಿ ಅನುಷ್ಠಾನ ಮಾಡುತ್ತಿದ್ದೇವೆ ಎಂದು ಸುದೀರ್ಘವಾಗಿ ಚರ್ಚೆ ನಡೆಸಿದ್ದೇವೆ. ಎಲ್ಲ ವಿಶ್ವವಿದ್ಯಾಲಯಗಳ ಕುಲಪತಿಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು ಅನುಷ್ಠಾನ ಮಾಡುವಂತೆ ಹೇಳಿದ್ದಾರೆ. ಅಮೃತ ಯೋಜನೆ ಬಗ್ಗೆಯೂ ಮಾತುಕತೆ ನಡೆಸಿದ್ದೇವೆ, ಈ ಯೋಜನೆಗಳಲ್ಲಿ ಇನ್ನಷ್ಟು ಸುಧಾರಣೆ ತರುವಂತೆ ಸಲಹೆ ನೀಡಿದ್ದಾರೆ.

ಗ್ರಾಮ ಪಂಚಾಯಿತಿಗಳಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರದ ಕಾರ್ಯಕ್ರಮ ಜೋಡಿಸಿ ಹಿರಿಯ ಅಧಿಕಾರಿಗಳನ್ನು ನೇಮಿಸಿ ಪ್ರತಿಯೊಂದು ಗ್ರಾಮ ಪಂಚಾಯಿತಿಗಳ ಜವಾಬ್ದಾರಿ ಕೊಡುವಂತೆ ಸಲಹೆ ನೀಡಿದ್ದಾರೆ. ಸೂರು, ನಿವೇಶನ ರಹಿತ ಜನರಿಗೆ ಸಂಪೂರ್ಣವಾಗಿ ನಿವೇಶನ ಕೊಡುವ ಯೋಜನೆ ಒಳ್ಳೆಯ ಕೆಲಸವಾಗಿದ್ದು, ಹಂತಹಂತವಾಗಿ ಎಲ್ಲ ಗ್ರಾಮ ಪಂಚಾಯಿತಿಗಳಲ್ಲಿ ಇದನ್ನು ಮಾಡಬೇಕು. ಪ್ರಧಾನಮಂತ್ರಿಗಳ ಆವಾಸ್ ಯೋಜನೆಯಡಿ ಜೋಡಿಸಿ ಮಾಡುವಂತೆಯೂ ಪ್ರಧಾನಿಗಳು ಸಲಹೆ ನೀಡಿದ್ದಾರೆ ಎಂದು ಸಿಎಂ ಹೇಳಿದರು.

ಕೌಶಲ್ಯ ಅಭಿವೃದ್ಧಿ ಮತ್ತು ಸ್ತ್ರೀಶಕ್ತಿ ಸಬಲೀಕರಣ ಸೇರಿದಂತೆ ಹಲವಾರು ವಿಷಯಗಳ ಬಗ್ಗೆ ಸುದೀರ್ಘವಾಗಿ ಚರ್ಚೆ ಮಾಡಿದ್ದೇವೆ. ಎಸ್ಸಿ, ಎಸ್ಟಿ ಮತ್ತು ಒಬಿಸಿ ಮಹಿಳೆಯರಿಗೆ ವಿಶೇಷ ಕಾರ್ಯಕ್ರಮ ರೂಪಿಸಬೇಕು. ಬ್ಯಾಂಕ್​​​​ಗಳಿಂದ ಲಾಭ ತೆಗೆದುಕೊಳ್ಳಬೇಕು ಎಂದು ಸೂಚಿಸಿದ್ದಾರೆ. ಇದರೊಂದಿಗೆ ನಾವು ಹೊಸ ಪಾಲಿಸಿ ತರಲು ಪ್ರಯತ್ನ ಮಾಡುತ್ತಿದ್ದೇವೆ.

ಸಂಶೋಧನೆ ಮತ್ತು ಅಭಿವೃದ್ಧಿ ನೀತಿ ತರುತ್ತಿದ್ದೇವೆ. ವಿದ್ಯುತ್ ವಾಹನ, ನವೀಕರಿಸುವ ವಿದ್ಯುತ್, ವೈಮಾನಿಕ ಕ್ಷೇತ್ರದ ಪಾಲಿಸಿ ಬಗ್ಗೆ ಮಾತುಕತೆ ನಡೆಸಿದ್ದೇವೆ. ಎಲ್ಲ ಕ್ಷೇತ್ರದಲ್ಲಿ ಕರ್ನಾಟಕ ಮುಂದಿರಬೇಕು ಮತ್ತು ಯುವಕರನ್ನು ಇದಕ್ಕೆ ಜೋಡಿಸಿ ಎಂದು ಸಲಹೆ, ಸೂಚನೆ ನೀಡಿದ್ದಾರೆ. ಸುದೀರ್ಘವಾಗಿ ಎಲ್ಲ ಚರ್ಚೆ ಮಾಡಿದ್ದೇವೆ. ನೂರು ದಿನಗಳ ಕಾಲ ನಾವು ನಡೆಸಿರುವ ಕೆಲಸಕ್ಕೆ ಸಂತೋಷ ವ್ಯಕ್ತಪಡಿಸಿದ್ದಾರೆ. ಒಳ್ಳೆಯ ಕೆಲಸವನ್ನು ಮಾಡುವಂತೆ ಸಲಹೆ ನೀಡಿದ್ದಾರೆ ಎಂದರು.

ಟಾರ್ಗೆಟ್ 2023 ಕಡೆ ಗಮನ ಹರಿಸಿ:
ರಾಜಕೀಯವಾಗಿ ಪ್ರಧಾ‌ನಿಗಳ ಬಳಿ ಯಾವುದೇ ಚರ್ಚೆ ನಡೆದಿಲ್ಲ. ಆದರೂ ನಾನೇ ಉಪಚುನಾವಣೆ ಬಗ್ಗೆ ಮಾಹಿತಿ ನೀಡಿದ್ದೇನೆ. ಒಂದು ಸೋತಿದ್ದು ಒಂದು ಕ್ಷೇತ್ರ ಗೆದ್ದಿದ್ದೇವೆ. ಸೋತ ಕಡೆ ತಪ್ಪು ಸರಿಪಡಿಸಿಕೊಳ್ಳುತ್ತೇವೆ ಎಂದಿದ್ದೇನೆ. ಆದರೆ, ಫಲಿತಾಂಶ ಸಮಾನವಾಗಿ ಸ್ವೀಕರಿಸಿ ಮುಂಬರುವ ಸಾರ್ವತ್ರಿಕ ಚುನಾವಣೆಯ ಕಡೆ ಗಮನಹರಿಸಿ. ಅದಕ್ಕೆ ಏನು ಬೇಕೋ ಅದನ್ನು ಮಾಡಿ, ಟಾರ್ಗೆಟ್ 2023ಕ್ಕೆ ಬೇಕಿರುವ ಕೆಲಸ ಮಾಡಿ ಜನತೆಯನ್ನು ವಿಶ್ವಾಸಕ್ಕೆ ಪಡೆಯಿರಿ ಎಂದಿದ್ದಾರೆ ಎಂದು ಸಿಎಂ ತಿಳಿಸಿದರು.

Last Updated : Nov 11, 2021, 6:22 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.