ETV Bharat / city

Bitcoin ಪ್ರಕರಣ.. ರಾಜ್ಯ ಬಿಜೆಪಿ ಸರ್ಕಾರಕ್ಕೆ ಕೈ ಶಾಸಕ ಪ್ರಿಯಾಂಕ್ ಖರ್ಗೆ ಪಂಚ ಪ್ರಶ್ನೆ

ಬಿಟ್ ಕಾಯಿನ್ ಪ್ರಕರಣದಲ್ಲಿ (Bitcoin) ರಾಜ್ಯ ಸರ್ಕಾರದಿಂದ ಪಾರದರ್ಶಕ ತನಿಖೆ ಅಸಾಧ್ಯ. ಆದ್ದರಿಂದ ಸುಪ್ರೀಂ ಕೋರ್ಟ್ ನ್ಯಾಯಾಧೀಶರ ನಿಗಾದಲ್ಲಿ ತನಿಖೆ ಆಗಬೇಕು. ಸತ್ಯಾಂಶ ಹೊರ ಬರಬೇಕು ಎಂದು ಪ್ರಿಯಾಂಕ್ ಖರ್ಗೆ (Priyank Kharge) ಒತ್ತಾಯಿಸಿದ್ದಾರೆ..

bitcoin
bitcoin
author img

By

Published : Nov 12, 2021, 4:25 PM IST

Updated : Nov 12, 2021, 10:42 PM IST

ಬೆಂಗಳೂರು: ಬಿಟ್ ಕಾಯಿನ್ ಪ್ರಕರಣ (Bitcoin Issue) ಸಂಬಂಧ ದಾಖಲೆ ಸಮೇತವಾಗಿ ಸರ್ಕಾರದ ವಿರುದ್ಧ ಗಂಭೀರ ಆರೋಪ ಮಾಡಿರುವ ಪ್ರಿಯಾಂಕ್ ಖರ್ಗೆ (Priyank Kharge), ಸರ್ಕಾರಕ್ಕೆ ಪಂಚ ಪ್ರಶ್ನೆಗಳನ್ನು ಕೇಳಿದ್ದಾರೆ.

ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗೋಷ್ಟಿ ನಡೆಸಿದ ಅವರು, ಪೊಲೀಸ್ ಅಧಿಕಾರಿಗಳ ತನಿಖಾ ವೈಖರಿ ಬಗ್ಗೆ ಅನುಮಾನ ವ್ಯಕ್ತಪಡಿಸುವುದರ ಜೊತೆಗೆ ಸರ್ಕಾರದ ಶಾಮೀಲಿನ ಬಗ್ಗೆಯೂ ಆರೋಪ ಮಾಡಿದ್ದಾರೆ. ಈ ಬಿಟ್ ಕಾಯಿನ್ (Bitcoin Scam) ಹಗರಣರ ತನಿಖೆಯನ್ನು ಸುಪ್ರೀಂ ಕೋರ್ಟ್ ನ್ಯಾಯಾಧೀಶರ ನಿಗಾದಲ್ಲಿ ನಡೆಸಬೇಕು ಎಂದು ಆಗ್ರಹಿಸಿದ್ದಾರೆ.

ರಾಜ್ಯ ಸರ್ಕಾರದಿಂದ ಪಾರದರ್ಶಕ ತನಿಖೆ ಅಸಾಧ್ಯ, ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಆಡಿಯೋ ಕ್ಲಿಪ್​​ನಲ್ಲಿ ಹಲವು ವಿಚಾರವೂ ಇದೆ. ಈ ನಿಟ್ಟಿನಲ್ಲಿ ಸುಪ್ರೀಂ ಕೋರ್ಟ್ ನ್ಯಾಯಾಧೀಶರ ನಿಗಾದಲ್ಲಿ ತನಿಖೆ ಆಗಲಿ ಹಾಗೂ ಸತ್ಯಾಂಶ ಹೊರಬರಲಿ. ಹಾಗಾದಲ್ಲಿ ಮಾತ್ರ ಕರ್ನಾಟಕದ ಜನರಿಗೆ ಸತ್ಯ ಗೊತ್ತಾಗಲಿದೆ. ಬಿಟ್ ಕಾಯಿನ್ ಪ್ರಕರಣವನ್ನು ಸರ್ಕಾರ ಇಡಿ ಹಾಗೂ ಸಿಬಿಐಗೆ ಕೊಟ್ಟಿರುವುದು ಅನುಮಾನ, ಹಾಗಿದ್ದಲ್ಲಿ ದಾಖಲೆ ಬಿಡುಗಡೆ ಮಾಡಲಿ ಎಂದು ಸವಾಲು ಹಾಕಿದರು.

ಪ್ರಿಯಾಂಕ್ ಖರ್ಗೆ ಕೇಳಿದ ಪಂಚೆ ಪ್ರಶ್ನೆಗಳೇನು?:

- ಶ್ರೀಕಿ ಪೊಲೀಸ್ ಕಸ್ಟಡಿಯಲ್ಲಿ ಇದ್ದಾಗ ಡ್ರಗ್ ಸೇವನೆ ಮಾಡಿಸಲಾಗಿದೆಯಾ? ಪೊಲೀಸರು ಡ್ರಗ್ ನೀಡಿ ಬಿಟ್ ಕಾಯಿನ್ ಹ್ಯಾಕ್ ಮಾಡಿಸಿದ್ದಾರಾ? ಈ ಬಗ್ಗೆ ತನಿಖೆ ಆಗಬೇಕು.

- ಪಂಚನಾಮೆಯಲ್ಲಿ ವಶಕ್ಕೆ ಪಡೆದುಕೊಳ್ಳಲಾಗಿದೆ ಎಂದು ತೋರಿಸಿದ್ದ 31.8 ಬಿಟ್ ಕಾಯಿನ್ ಹಾಗೂ 186 ಬಿಟ್ ಕಾಯಿನ್ ಕಾಣೆಯಾಗಿದೆ. ಇದು ಎಲ್ಲಿ ಹೋಯಿತು? ಪೊಲೀಸ್ ವ್ಯಾಲೆಟ್​​ಗೆ ಬಿಟ್ ಕಾಯಿನ್ ವರ್ಗಾವಣೆ ಮಾಡಿರುವ ಟ್ರ್ಯಾನ್ಸೇಕ್ಷನ್ ಐಡಿ ನಕಲಿ ಎಂದು ಬಂದಿತ್ತು. ಹೀಗಾಗಿ ಆ ಬಿಟ್ ಕಾಯಿನ್ ಎಲ್ಲಿ ಹೋಯಿತು?

- ಆರೋಪಿ ಶ್ರೀಕಿ ಲಿಖಿತ ಹೇಳಿಕೆಯ ಪ್ರಕಾರ ನಾನು ಐದು ಸಾವಿರ ಬಿಟ್ ಕಾಯಿನ್ ಹ್ಯಾಕ್ (Bitcoin Hack) ಮಾಡಿದ್ದೇನೆ ಎಂದಿದ್ದಾನೆ. ಇದರ ಮೌಲ್ಯ 2,500 ಕೋಟಿ ಆಗಿದೆ. ಈ ಬಿಟ್ ಕಾಯಿನ್ ಎಲ್ಲಿ ಹೋಗಿದೆ? ಇಷ್ಟು ಗಂಭೀರವಾದ ಪ್ರಕರಣವಾಗಿದ್ದರೂ ಅದನ್ನು ಇಡಿಗೆ,‌ ಸಿಬಿಐಗೆ ಏಕೆ ಕೊಟ್ಟಿಲ್ಲ?

- ಆರ್ಥಿಕ ಅಪರಾಧ ಮಾಡಿರುವ ಬಗ್ಗೆ ಶ್ರೀಕಿ ಒಪ್ಪಿಕೊಂಡಿದ್ದಾನೆ. ಡ್ರಗ್ ದಂಧೆಯ ಬಗ್ಗೆಯೂ ಹೇಳಿಕೆ ನೀಡಿದ್ದಾನೆ. ಇದನ್ನು ಗಮನಿಸಿದರೆ ಪೊಲೀಸರು, ಸರ್ಕಾರ ಹಾಗೂ ಪೊಲೀಸರ ದಕ್ಷತೆಯ ಕೊರತೆ ಎದ್ದು ಕಾಣುತ್ತಿದೆ.

- ಬಿಟ್ ಕಾಯಿನ್ ಪ್ರಕರಣದ ಕುರಿತಾಗಿ ಉದ್ದೇಶಪೂರ್ವಕವಾಗಿ ಇಡಿ,‌ ಸಿಬಿಐ, ಇಂಟರ್ ಪೋಲ್​​ಗೆ ತಿಳಿಸಲು ವಿಳಂಬ ಮಾಡಲಾಗಿದೆಯಾ?

ಬಿಟ್‌ ಕಾಯಿನ್‌ ಪ್ರಕರಣಕ್ಕೆ ಸಂಬಂಧಿಸಿದಂತೆ ಶಾಸಕ ಪ್ರಿಯಾಂಕ್ ಖರ್ಗೆ ಪಂಚ ಪ್ರಶ್ನೆಗಳು..

ದಾಖಲೆಗಳೊಂದಿಗೆ ಸರ್ಕಾರದ ವಿರುದ್ಧ ಪ್ರಿಯಾಂಕ್ ಖರ್ಗೆ ಗಂಭೀರ ಆರೋಪ : ಕಾಂಗ್ರೆಸ್ ಶಾಸಕ ಪ್ರಿಯಾಂಕ್ ಖರ್ಗೆ ದಾಖಲೆಗಳೊಂದಿಗೆ ಬಿಟ್ ಕಾಯಿನ್ ಪ್ರಕರಣದ ಬಗ್ಗೆ ಕೆಲ ಗಂಭೀರ ಆರೋಪಗಳನ್ನು ಮಾಡಿದರು.

ಕೆಪಿಸಿಸಿ ಕಚೇರಿಯಲ್ಲಿ ಕಾಂಗ್ರೆಸ್ ಕಾನೂನು ಘಟಕದ ಅಧ್ಯಕ್ಷ ಎ.ಎಸ್.ಪೊನ್ನಣ್ಣ ಜೊತೆ ಜಂಟಿ ಸುದ್ದಿಗೋಷ್ಠಿ‌ ನಡೆಸಿದ ಅವರು, ಬಿಟ್ ಕಾಯಿನ್ ಪ್ರಕರಣದಲ್ಲಿ ಪ್ರಿಯಾಂಕ್ ಖರ್ಗೆಗೆ ಮಾಹಿತಿ ಇಲ್ಲ ಎಂದು ಸಿಎಂ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.

ಅಲ್ಲದೆ ಪ್ರಕರಣದಲ್ಲಿ ಕಾಂಗ್ರೆಸ್‌ನವರು ಕೂಡ ಇದ್ದಾರೆ ಎಂದು ಆರೋಪಿಸಿದ್ದಾರೆ. ಇದನ್ನು ಗಮನಿಸಿದೆ. ಈ ವಿಚಾರವನ್ನು ಬಗೆಹರಿಸುವ ದಾಟಿ ಅವರ ಮಾತಿನಲ್ಲಿ ಇತ್ತು. ಎಲ್ಲ ತನಿಖಾ ಸಂಸ್ಥೆಗಳು ನಿಮ್ಮಲ್ಲಿ ಇದೆ.

ಕಾಂಗ್ರೆಸ್‌ನವರು ಇದ್ದರೆ ಬಹಿರಂಗಪಡಿಸಿ. ಬಿಟ್ ಕಾಯಿನ್ ಪ್ರಕರಣ ಮುಖ್ಯ ಅಲ್ಲದೇ ಇದ್ದಲ್ಲಿ ಪ್ರಧಾನಿಯನ್ನು ಯಾಕೆ ಸಿಎಂ ಭೇಟಿ ಮಾಡಿದರು? ಬಿಟ್ ಕಾಯಿನ್ ವಿಚಾರವಾಗಿ ಸತ್ಯ ಮುಚ್ಚಿ ಹಾಕಲು ತನಿಖೆ ನಡೆಸುತ್ತಿದ್ದಾರೆ ಎಂದು ಆರೋಪಿಸಿದರು.

ಇದೇ ವೇಳೆ ಖರ್ಗೆ, ಸರ್ಕಾರದ ವಿರುದ್ಧ ಗಂಭೀರ ಆರೋಪ ಮಾಡಿದರು. ಪ್ರಕರಣ ಸಂಬಂಧ ಪಂಚನಾಮೆ, ಸಾಕ್ಷಿಗಳು, ಆರೋಪು ಶ್ರೀಕಿ ಹೇಳಿಕೆ ಸಂಬಂಧ ದಾಖಲೆಗಳನ್ನು ಬಿಡುಗಡೆ ಮಾಡಿದರು.

ಪ್ರಿಯಾಂಕ್ ಖರ್ಗೆ ಮಾಡಿದ ಆರೋಪ ಏನು?:

ಶ್ರೀಕಿ ವಿರುದ್ಧದ ಕ್ರೈಂ ನಂಬರ್ 45/2020 ಪ್ರಕರಣ ಸಂಬಂಧ ಜ.8ರಂದು ಮೊದಲ ಪಂಚನಾಮೆ ಮಾಡಿದ್ದಾರೆ. ಸೈಬರ್ ಕ್ರೈಂ ಪೊಲೀಸರು ಶ್ರೀಕಿ ವ್ಯಾಲೆಟ್​​ನಿಂದ 31.8 ಬಿಟ್ ಕಾಯಿನ್ ಕರೆನ್ಸಿಯನ್ನು ಸುರಕ್ಷಿತ ಕಸ್ಟಡಿಗೆ ವಶಪಡಿಸಿಕೊಳ್ಳುವ ನಿಟ್ಟಿನಲ್ಲಿ ಪಂಚನಾಮೆ ಮಾಡಿರುತ್ತಾರೆ. ಈ ಪಂಚನಾಮದಲ್ಲಿ ಸಾಕ್ಷಿಯಾಗಿ ಜ್ಯೂನಿಯರ್ ಲೈನ್ ಮ್ಯಾನ್ ಹಾಗೂ ಪವರ್ ಮ್ಯಾನ್​​ನ್ನು ಪರಿಗಣಿಸಲಾಗಿದೆ.

- ತಜ್ಞರಿಗೆ ಬಿಟ್ ಕಾಯಿನ್ ಅರ್ಥ ಮಾಡಿಕೊಳ್ಳುವುದೇ ಕಷ್ಟ, ಅಂತಹ ಸಂದರ್ಭದಲ್ಲಿ ಲೈನ್ ಮ್ಯಾನ್ ಸಾಕ್ಷಿಯಾಗಿ ಪರಿಗಣಿಸಿರುವುದು ಅನುಮಾನ ಮೂಡಿಸುತ್ತದೆ

- ಬಿಟ್ ಕಾಯಿನ್ ವಶಪಡಿಸಿಕೊಳ್ಳಲು ಶ್ರೀಕಿ ವ್ಯಾಲೆಟ್ ಪಾಸ್ ವರ್ಡ್ ಬದಲಾವಣೆಗಾಗಿ ಪೊಲೀಸರು ಖಾಸಗಿ ಸೈಬರ್ ಸಂಸ್ಥೆಯ ತಜ್ಞರ ನೆರವು ಪಡೆದುಕೊಳ್ಳುತ್ತಾರೆ. ಅವರು ಸೀಲ್ಡ್ ಕವರ್​ನಲ್ಲಿ ಪೊಲೀಸರಿಗೆ ಹೊಸ ಪಾಸ್ ವರ್ಡ್ ನೀಡುತ್ತಾರೆ. ಈ ಬಗ್ಗೆ ಎರಡನೇ ಪಂಚನಾಮೆಯಲ್ಲಿ ಉಲ್ಲೇಖ ಮಾಡಲಾಗಿದೆ.‌

- ಶ್ರೀಕಿ ತಂದೆ ಗೋಪಾಲ್ ರಮೇಶ್ ಮ್ಯಾಜಿಸ್ಟ್ರೇಟ್​​ಗೆ ಅರ್ಜಿ ಸಲ್ಲಿಸಿ, ತನ್ನ ಮಗನಿಗೆ ಡ್ರಗ್ ನೀಡಲಾಗುತ್ತಿದೆ ಎಂದು ಅಧಿಕಾರಿಗಳ ವಿರುದ್ಧ ಆರೋಪ ಮಾಡುತ್ತಾರೆ.‌ ಅಲ್ಲದೆ‌ ಅವರ‌ ವಿರುದ್ಧ ಕ್ರಮಕ್ಕೆ ಮನವಿ ಮಾಡುತ್ತಾರೆ. ಮ್ಯಾಜಿಸ್ಟ್ರೇಟ್ ಈ ಸಂಬಂಧಿಸಿದಂತೆ ಪ್ರಶ್ನೆ ಮಾಡಿದಾಗ ಡ್ರಗ್‌ ನೀಡಿರುವ ಬಗ್ಗೆ ಆರೋಪಿ ಶ್ರೀಕಿ ಒಪ್ಪಿಕೊಂಡಿದ್ದಾನೆ. ಈ ಹೇಳಿಕೆ ಆಧಾರದ ಮೇಲೆ ನ್ಯಾಯಾಧೀಶರು ರಕ್ತ, ಮೂತ್ರ ಪರೀಕ್ಷೆಗೆ ಜನವರಿ 11 ರಂದು ಸೂಚನೆ ನೀಡುತ್ತಾರೆ.

- ಪೊಲೀಸರು ಶ್ರೀಕಿಯನ್ನು ಬೆಂಗಳೂರು ಮೆಡಿಕಲ್ ಕಾಲೇಜಿಗೆ ಕರೆದೊಯ್ಯುತ್ತಾರೆ. ಆದರೆ ಅಲ್ಲಿ ಪೊಲೀಸರು, ವಿಷಪ್ರಾಷಣ ಹಿನ್ನೆಲೆಯಲ್ಲಿ ಶ್ರೀಕಿಗೆ ಹೊಟ್ಟೆ ಶುಚಿಗೊಳಿಸುವ ಅಗತ್ಯ ಇದೆ ಎಂದು ವೈದ್ಯರಲ್ಲಿ ಹೇಳುತ್ತಾರೆ. ಶ್ರೀಕಿಗೆ ಹೊಟ್ಟೆ ಶುಚಿಗೊಳಿಸುವ ಅಗತ್ಯ ಏನಿತ್ತು? ಹಾಗಾದರೆ ಕಸ್ಟಡಿಯಲ್ಲಿ ವಿಷ ಪ್ರಾಷಣ ಆಗಿತ್ತೇ? ಎಂದು ಪ್ರಿಯಾಂಕ್ ಖರ್ಗೆ ಪ್ರಶ್ನೆ.

- ಆಸ್ಪತ್ರೆಯವರು ನಮ್ಮಲ್ಲಿ ಇಂತಹ ರಕ್ತ ಪರೀಕ್ಷೆಗಳು ಮಾಡುವುದಿಲ್ಲ. ಹಾಗಾಗಿ ವಿಧಿವಿಜ್ಞಾನ ಲ್ಯಾಬ್​ಗೆ ಕರೆದೊಯ್ಯುವಂತೆ ಸೂಚಿಸುತ್ತಾರೆ. ಸಿಸಿಬಿ, ಸಿಐಡಿ, ಪೊಲೀಸರಿಗೆ ಆರೋಪಿ ಮೂತ್ರ ಪರೀಕ್ಷೆ ಎಲ್ಲಿ ಮಾಡಬೇಕು ಎಂಬ ಜ್ಞಾನ ಇಲ್ಲವೇ?

- ಜನವರಿ 12 ರಂದು ನ್ಯಾಯಾಧೀಶರ ಮುಂದೆ ಶ್ರೀಕಿ ಪೊಲೀಸ್ ಕಸ್ಟಡಿಯಲ್ಲಿ ಇದ್ದಾನೆ ಎಂದು ಹೇಳುತ್ತಾರೆ. ರಕ್ತ ಹಾಗೂ ಮೂತ್ರ ಸ್ಯಾಂಪನ್ ವರದಿಯನ್ನು ನ್ಯಾಯಾಧೀಶರಿಗೆ ಸಲ್ಲಿಸುವುದಿಲ್ಲ. ಅಷ್ಟೇ ಅಲ್ಲದೆ ಶ್ರೀಕಿ ವಿರುದ್ಧ ಮತ್ತೊಂದು ಪ್ರಕರಣ ದಾಖಲಿಸಿ ಸಿಐಡಿಗೆ ವರ್ಗಾವಣೆ ಮಾಡುತ್ತಾರೆ.

- ಪೊಲೀಸರು ಶ್ರೀಕಿ ವ್ಯಾಲೆಟ್​​ನಲ್ಲಿ ಇರುವ ಬಿಟ್ ಕಾಯಿನ್​ನ್ನು ಪೊಲೀಸರ ವ್ಯಾಲೆಟ್​ಗೆ ವರ್ಗಾವಣೆ ಮಾಡಲು ನಿರ್ಧಾರ ಮಾಡುತ್ತಾರೆ. ಇದನ್ನು ಊನೋ ಕಾಯಿನ್ ಮುಖಾಂತರ ಪೊಲೀಸರ ವ್ಯಾಲೆಟ್​​ಗೆ ವರ್ಗಾವಣೆ ಮಾಡುವ ಬಗ್ಗೆ ಪಂಚನಾಮೆ ಮಾಡಲಾಗುತ್ತದೆ.

- ರಾಬಿನ್ ಕಂಡೇವಾಲ ಜ.18 ಏಳು ಪುಟಗಳ ಹೇಳಿಕೆ ನೀಡುತ್ತಾರೆ. ಈ ಹೇಳಿಕೆಯಲ್ಲಿ ನಲಪಾಡ್ ನನಗೆ ಪರಿಚಯ ಇದ್ದಾನೆ ಎಂದು ಉಲ್ಲೇಖಿಸುತ್ತಾನೆ. ನಲಪಾಡ್ ಜೊತೆ ಕೆಲ ಪಾರ್ಟಿ ಮಾಡಿದ್ದೇನೆ ಹೊರತು ಬೇರೆ ವಹಿವಾಟು ನಡೆಸಿಲ್ಲ ಎಂದು ಉಲ್ಲೇಖ ಮಾಡಿದ್ದಾರೆ. ಈ ಏಳು ಪುಟಗಳ ಹೇಳಿಕೆ ಬಿಜೆಪಿ ಬಳಿ ಇದ್ದರೂ ಅವರು ನಾಟಕವಾಡುತ್ತಿದ್ದಾರೆ.

- 31.8 ಬಿಟ್ ಕಾಯಿನ್ ಪೊಲೀಸರ ವ್ಯಾಲೆಟ್ ವರ್ಗಾವಣೆ ಮಾಡಲು ಊನೋ ಕಾಯಿನ್ ಹಾಗೂ ಸೈಬರ್ ಟೆಕ್ ಸಂಸ್ಥೆಯನ್ನು ಕರೆಯಲಾಗುತ್ತದೆ. ಈ ಮುಂದೆ ಸೀಲ್ಡ್ ಕವರ್ ನಲ್ಲಿ ಇಟ್ಟಿರುವ ಪಾಸ್ ವರ್ಡ್ ಬಳಸಿ ಶ್ರೀಕಿ ಖಾತೆಯಿಂದ ಬಿಟ್ ಕಾಯಿನ್ ವರ್ಗಾವಣೆ ಸಂಬಂಧ ಮೂರನೇ ಪಂಚನಾಮೆಯನ್ನು ಮಾಡಲಾಗುತ್ತದೆ. ಈ ವ್ಯಾಲೆಟ್ ತೆಗೆದು ನೋಡಿದಾಗ ಶ್ರೀಕಿ‌ ಖಾತೆಯಲ್ಲಿ 186 ಬಿಟ್ ಕಾಯಿನ್ ಪತ್ತೆಯಾಗುತ್ತದೆ.

- ಈ ಬಿಟ್ ಕಾಯಿನ್​ಅನ್ನು ಪೊಲೀಸ್ ವ್ಯಾಲೆಟ್​ಗೆ ವರ್ಗಾವಣೆ ಮಾಡುವ ಪ್ರಕ್ರಿಯೆ ವೇಳೆ ವರ್ಗಾವಣೆ ಯಶಸ್ವಿ ಆಗಿದೆ ಎಂಬ ಮೆಸೇಜ್ ಬರುತ್ತದೆ. ಆದರೆ ‌ವರ್ಗಾವಣೆ ಐಡಿ ಪರಿಶೀಲನೆ ನಡೆಸಿದಾಗ ಈ ವರ್ಗಾವಣೆ ಐಡಿ ಇದ್ದೇ ಇಲ್ಲ ಎಂಬ ಮೆಸೇಜ್ ಬರುತ್ತದೆ. ಹೀಗಾಗಿ ಬಿಟ್ ಕಾಯಿನ್​ಅನ್ನು ಪೊಲೀಸ್ ವ್ಯಾಲೆಟ್​ಗೆ ವರ್ಗಾವಣೆ ಮಾಡುವ ಪ್ರಕ್ರಿಯೆ ವಿಫಲವಾಗಿದೆ.

- 21 ಫೆಬ್ರವರಿಗೆ ಇಡಿ ಸಿಸಿಬಿಗೆ ಪತ್ರ ಬರೆದು ಮಾಧ್ಯಮಗಳಲ್ಲಿ ವರದಿ ಆಗುತ್ತಿರುವ ಬಿಟ್ ಕಾಯಿನ್ ಪ್ರಕರಣದ ಬಗ್ಗೆ ಮಾಹಿತಿ ನೀಡುವಂತೆ ಕೋರುತ್ತಾರೆ. ಸಿಸಿಬಿ ಮಾರ್ಚ್ 3 ಕ್ಕೆ 31.8 ಬಿಟ್ ಕಾಯಿನ್ ಬಗ್ಗೆ ಮಾಹಿತಿ ನೀಡುತ್ತದೆ. ‌ಉತ್ತರ‌ ನೀಡಲು 20 ದಿನಗಳ ವಿಳಂಬ ಯಾಕೆ? ಇಂತಹ ಪ್ರಕರಣಗಳಲ್ಲಿ ತಕ್ಷಣ ಮಾಹಿತಿಯನ್ನು ನೀಡಬೇಕು ಎಂಬ ನಿಯಮ ಇದೆ. ಆದರೂ ವಿಳಂಬ ಮಾಡಿದ್ದೇಕೆ?

- ಇಂಟರ್ ಪೋಲ್ ಅಧಿಕಾರಿಗೆ ಏ. 24ಕ್ಕೆ ಬೆಂಗಳೂರು ನಗರ ಪೊಲೀಸ್ ಆಯುಕ್ತ ಕಮಲ್ ಪಂತ್ ಪತ್ರ ಬರೆದು, 03/2020 ಪ್ರಕರಣ ಸಂಬಂಧಿಸಿದಂತೆ ಶ್ರೀಕಿ ಅಂತರಾಷ್ಟ್ರೀಯ ಮಟ್ಟದಲ್ಲಿ ಹ್ಯಾಕ್ ಮಾಡಿರುವುದು ಕಂಡು‌ಬಂದಿದೆ. ಈ ನಿಟ್ಟಿನಲ್ಲಿ ಅಗತ್ಯ ಕ್ರಮ ಕೈಗೊಳ್ಳಲು ಮನವಿ ಮಾಡುತ್ತಾರೆ. ಅಂತಾರಾಷ್ಟ್ರೀಯ ಮಟ್ಟದ ಇಷ್ಟು ದೊಡ್ಡ ಪ್ರಮಾಣದ ಪ್ರಕರಣವೆಂದು ಗೊತ್ತಿದ್ದರೂ, ಸರ್ಕಾರ ವಿಳಂಬ, ನಿರ್ಲಕ್ಷ್ಯ ತೋರಿದ್ದು ಏಕೆ ಎಂದು ಪ್ರಶ್ನೆ.

Last Updated : Nov 12, 2021, 10:42 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.