ETV Bharat / city

ವಿಧಾನ ಪರಿಷತ್ ನೌಕರರಿಗೂ ಬಯೋಮೆಟ್ರಿಕ್ ಕಡ್ಡಾಯ: ಸಭಾಪತಿ - ವಿಧಾನ ಪರಿಷತ್ ನೌಕರಿಗೆ ಸಮವಸ್ತ್ರ ಕಡ್ಡಾಯ

ವಿಧಾನಪರಿಷತ್ ಸಿಬ್ಬಂದಿಗೆ ಸಮವಸ್ತ್ರ ಮತ್ತು ಬಯೋಮೆಟ್ರಿಕ್ ಹಾಜರಿ ಕಡ್ಡಾಯ ಮಾಡಲಾಗಿದೆ. ಅಲ್ಲದೆ, ವಿಧಾನಪರಿಷತ್‌ನ ಕಚೇರಿಗಳಲ್ಲಿ ಅಳವಡಿಸಿದ್ದ ಸಿಸಿ ಕ್ಯಾಮರಾಗಳು ಕೆಲಸ ಮಾಡುತ್ತಿಲ್ಲ. ಈ ಬಗ್ಗೆಯೂ ವರದಿ ಕೇಳಿದ್ದೇನೆ ಎಂದು ಸಭಾಪತಿ ಬಸವರಾಜ ಹೊರಟ್ಟಿ ಹೇಳಿದರು.

biometric-and-uniform-mandatory-for-vidhan-parishad-employees
ಸಭಾಪತಿ ಬಸವರಾಜ ಹೊರಟ್ಟಿ
author img

By

Published : Mar 2, 2021, 7:21 PM IST

ಬೆಂಗಳೂರು : ವಿಧಾನ ಪರಿಷತ್‌ನ ನೌಕರರು ವಿಧಾನಸೌಧದ ಕಾರಿಡಾರ್‌ನಲ್ಲಿ ಅನಾವಶ್ಯಕವಾಗಿ ಓಡಾಡುವುದನ್ನು ತಡೆಯಲು ಹಲವು ಸುಧಾರಣಾ ಕ್ರಮಗಳನ್ನು ಜಾರಿಗೊಳಿಸಿದ್ದೇನೆ ಎಂದು ಸಭಾಪತಿ ಬಸವರಾಜ ಹೊರಟ್ಟಿ ತಿಳಿಸಿದರು.

ವಿಧಾನಸೌಧದಲ್ಲಿ ಇಂದು ಮಾಧ್ಯಮಗೋಷ್ಟಿಯಲ್ಲಿ ಮಾತನಾಡಿದ ಅವರು, ಸಿಬ್ಬಂದಿಗೆ ಸಮವಸ್ತ್ರ ಮತ್ತು ಬಯೋಮೆಟ್ರಿಕ್ ಹಾಜರಿ ಕಡ್ಡಾಯ ಮಾಡಲಾಗಿದೆ. ವಿಧಾನಪರಿಷತ್‌ನ ಕಚೇರಿಗಳಲ್ಲಿ ಅಳವಡಿಸಿದ್ದ ಸಿಸಿ ಕ್ಯಾಮರಾಗಳು ಕೆಲಸ ಮಾಡುತ್ತಿಲ್ಲ. ಈ ಬಗ್ಗೆಯೂ ವರದಿ ಕೇಳಿದ್ದೇನೆ ಎಂದರು.

ವಿಧಾನ ಪರಿಷತ್ ನೌಕರರಿಗೂ ಬಯೋಮೆಟ್ರಿಕ್ ಕಡ್ಡಾಯ, ಅನಾವಶ್ಯಕ ಓಡಾಟ ಬಂದ್

ವಿಧಾನಪರಿಷತ್‌ನ ಸಭಾಪತಿ ಕಚೇರಿ ಹೊರತುಪಡಿಸಿ ಉಳಿದ ಯಾವುದೇ ಕಚೇರಿಗಳಲ್ಲೂ ಸಿಸಿ ಕ್ಯಾಮರಾ ಕೆಲಸ ಮಾಡುತ್ತಿಲ್ಲ. ಈ ಸಿಸಿಟಿವಿ ಹಾಕಿಸಿದ್ದರ ಉದ್ದೇಶ ಮತ್ತು ಅದನ್ನು ಸರಿಯಾಗಿ ನಿರ್ವಹಣೆ ಮಾಡದ ಬಗ್ಗೆ ವರದಿ ನೀಡುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿರುವುದಾಗಿ ಸಭಾಪತಿ ಹೇಳಿದರು.

ಪರಿಷತ್ ಆವರಣ ಮತ್ತು ಪರಿಷತ್ ಸಚಿವಾಯಲದಲ್ಲಿ ಇರುವ ಸಿಸಿ ಕ್ಯಾಮರಾ ಕಾರ್ಯನಿರ್ವಹಿಸುತ್ತಿಲ್ಲ‌. ಇನ್ಮುಂದೆ ಸಿಸಿ ಕ್ಯಾಮರಾಗಳ ಕಣ್ಗಾವಲು ಮುಂದುವರಿಯಲಿದೆ. ವಿಧಾನಪರಿಷತ್‌ನ ಆಡಳಿತ ವ್ಯವಸ್ಥೆಯಲ್ಲಿ ಲೋಪವಾಗಿದ್ದರೆ ಎಲ್ಲವನ್ನು ಸರಿಪಡಿಸುವುದಾಗಿಯೂ ಹೊರಟ್ಟಿ ತಿಳಿಸಿದರು.

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.