ಬೆಂಗಳೂರು: ಕ್ರಿಸ್ಮಸ್ ಹಿನ್ನೆಲೆ ಶೀ ಫಾರ್ ಸೊಸೈಟಿಯಿಂದ ರಂಗುರಂಗಿನ ಸಾಂತಾ ಕ್ಲಾಸ್ ಬಟ್ಟೆ ಧರಿಸಿ 100 ಮಂದಿ ಮಹಿಳಾ ಬೈಕರ್ಸ್ ಇಂದು ಬೆಳ್ಳಂಬೆಳಗ್ಗೆ ಸೇನಾ ಯೋಧರ ಮಕ್ಕಳ ಶಿಕ್ಷಣಕ್ಕೆ ನಿಧಿ ಸಂಗ್ರಹಿಸಲು ರ‍್ಯಾಲಿ ನಡೆಸಿದರು.
She for Society bike riders: ಶೀ ಫಾರ್ ಸೊಸೈಟಿ ಜೊತೆ ಟಸ್ಕರ್ ಹರ್ಲಿ ವೋನರ್ಸ್ ಗ್ರೂಪ್ ಕೂಡಾ ಬೃಹತ್ ಬೈಕ್ ಜಾಥಾದಲ್ಲಿ ಪಾಲ್ಗೊಂಡಿದ್ದು, ಚಾನ್ಸರಿ ಪೆವಿಲಿಯನ್ ಹೋಟೆಲ್ ಬಳಿ ಶಾಸಕಿ ಸೌಮ್ಯಾ ರೆಡ್ಡಿ ಚಾಲನೆ ನೀಡಿದರು. ಬಳಿಕ ಬೈಕರ್ಸ್ ಚಾನ್ಸರಿ ಪೆವಲಿಯನ್ ಹೋಟೆಲ್ ಮುಂಭಾಗದಿಂದ ರೆಸಿಡೆನ್ಸಿ ರಸ್ತೆ, ಮೆಯೋ ಹಾಲ್, ಎಂ.ಜಿ. ರಸ್ತೆ, ವಿಧಾನಸೌಧ, ನೃಪತುಂಗ ರಸ್ತೆ, ಹಡ್ಸನ್ ಸರ್ಕಲ್, ಕಂಠೀರವ ಸ್ಟೇಡಿಯಂ, ಮಲ್ಯ ಆಸ್ಪತ್ರೆ ಮೂಲಕ ಹೋಗಿ ಮತ್ತೆ ಚಾನ್ಸರಿ ಪೆವಿಲಿಯನ್ ಹೋಟೆಲ್ ಬಳಿ ಬೈಕ್ ರ‍್ಯಾಲಿ ಮುಕ್ತಾಯಗೊಳಿಸಿದರು.
ಮಹಿಳಾ ಬೈಕರ್ಸ್ನ ಸಂಘಟನೆಯಾದ ಶೀ ಫಾರ್ ಸೊಸೈಟಿ ಸೇನಾ ಯೋಧರ ಮಕ್ಕಳಿಗೆ ಶಿಕ್ಷಣ ಒದಗಿಸುವ ಗುರಿಯೊಂದಿಗೆ ಕಾರ್ಯ ನಿರ್ವಹಿಸುತ್ತಿದೆ. ಕೋಲಾರ ಜಿಲ್ಲೆಯ ಎರಡು ಗ್ರಾಮಗಳ ವಿದ್ಯಾರ್ಥಿಗಳಿಗೆ ಕಂಪ್ಯೂಟರ್ ಸಾಕ್ಷರತೆ ಬಗ್ಗೆ ಅರಿವು ಮೂಡಿಸುವ ಜೊತೆಗೆ ವಿದ್ಯಾರ್ಥಿಗಳಿಗೆ ಕಂಪ್ಯೂಟರ್ಗಳನ್ನು ಒದಗಿಸುತ್ತಿದೆ. ಈ ಗ್ರಾಮಗಳ 200 ಕುಟುಂಬಗಳಿಗೆ ಶೀ ಫಾರ್ ಸೊಸೈಟಿಯಿಂದ ಸೋಲಾರ್ ಪೆನಲ್ಗಳನ್ನು ಒದಗಿಸಿದೆ.
ಇದನ್ನೂ ಓದಿ: Omicron ಎದುರಿಸಲು ನಮ್ಮ ದೇಹದ ಪ್ರತಿರೋಧಕ ಶಕ್ತಿ ಸಾಕಾಗುತ್ತಾ? ಸೋಂಕಿನ ವರ್ತನೆ ತಿಳಿಯಲು ಸಮಿತಿ ಸಲಹೆ
ಸ್ಪರ್ಶ ಫೌಂಡೇಷನ್ ಮತ್ತು ಇನ್ನರ್ ವ್ಹೀಲ್ ಕ್ಲಬ್ ಆಫ್ ಬೆಂಗಳೂರು, ಇಕೆಬಾನ ಅಂತಾರಾಷ್ಟೀಯ ವಿಜಯಲಕ್ಷ್ಮೀ ಟೂರಿಸ್ಟ್ ಆ್ಯಂಡ್ ಟೈಟಾನ್ ಸಂಸ್ಥೆ ವೈಸ್ ಮಾರ್ಷಲ್ ಬಿ.ಕೆ. ಮುರುಳಿ ಪಾಲ್ಗೊಂಡಿದ್ದರು.